ಚಮಚ ಕೊಕ್ಕಿನ ಕೊಕ್ಕರೆ
Team Udayavani, Mar 9, 2019, 12:30 AM IST
ಚಮಚ ಕೊಕ್ಕಿನ ಕೊಕ್ಕರೆಗಳಲ್ಲಿ ಕಪ್ಪು ಕೊಕ್ಕಿನವು, ಹಳದಿ ಬಣ್ಣದವು, ಅಷ್ಟೇ ಯಾಕೆ ಗುಲಾಬಿ ಬಣ್ಣದ ಚಮಚ ಕೊಕ್ಕರೆಗಳೂ ಇವೆ. ಗುಲಾಬಿ ಚಮಚ ಕೊಕ್ಕರೆ ಹೆಚ್ಚಾಗಿ ಕೆಂಪು ಬಣ್ಣದ ಷಟಿÛ- ತಿನ್ನುವುದರಿಂದ ಗುಲಾಬಿ ಬಣ್ಣ ಅದರ ದೇಹದಲ್ಲಿ ತೋರುವುದು ಎಂಬ ಅಭಿಪ್ರಾಯ ಸಹ ಇದೆ.
Eurasain Spoonbill (Platalea leucorodia)RM Duck ಈ ಪಕ್ಷಿಗೆ ಚಮಚ ಕೊಕ್ಕಿನ ಕೊಕ್ಕರೆ ಎಂಬ ಹೆಸರು ಇದೆ. ಇದು “ತ್ರೆಸ್ಕಿಯೊರ್ನಿತಿಡಿಯಾ’ ಕುಟುಂಬಕ್ಕೆ ಸೇರಿದೆ. ಬಿಳಿ ಬಣ್ಣದ ಗರಿ, ಉದ್ದದ ಬೂದುಗಪ್ಪು ಕಾಲು, ತುದಿಯಲ್ಲಿ ದೋಸೆ ಸೊಟ್ಟುಗದಂತೆ ಅಗಲವಾಗಿರುವ ಚುಂಚು ಇದನ್ನು ದೂರದಿಂದಲೇ ಸುಲಭವಾಗಿ ಗುರುತಿಸಲು ಸಹಾಯಕವಾಗಿದೆ. ಇದು ಸುಮಾರು 60 ಸೆಂ.ಮೀ ಎತ್ತರ ಬೆಳೆಯಬಲ್ಲುದು. ಇದರ ವೈಜ್ಞಾನಿಕ ಹೆಸರಿನಲ್ಲಿರುವ “ಪ್ಲೇಟಲಿಯ’ ಪದ ಲ್ಯಾಟಿನ್‌ನಿಂದ ಬಂದಿದೆ. ಪ್ಲೇಟಲಿಯಾ ಅಂದರೆ ಅಗಲವಾಗಿರುವ- ಪ್ರತ್ಯೇಕ ಚುಂಚನ್ನು ಹೊಂದಿರುವ ಕೊಕ್ಕರೆ ಎಂದರ್ಥ.
ಗ್ರೀಕ್ ಪುರಾಣಗಳಲ್ಲೂ ಈ ಹಕ್ಕಿಯ ಉಲ್ಲೇಖವಿದೆ. ಅಲ್ಲದೆ ಇಂಗ್ಲೆಂಡಿನಲ್ಲಿ ಇದನ್ನು “ಶೋವೆಲಾರ್ಡ’ ಎಂದು ಕರೆಯುತ್ತಾರೆ. ಅದರರ್ಥ “ಚಂದದ ಕೊಕ್ಕರೆ’ ಎಂದು. ರಾಜನ ಕಿರೀಟದ ತುದಿಯಲ್ಲಿರುವ ಗರಿಯಂತೆ ಚಮಚ ಕೊಕ್ಕಿನ ಕೊಕ್ಕರೆಯ ತಲೆಯಲ್ಲಿ ಸುಂದರ ಬಿಳಿಬಣ್ಣದ ಗರಿಯ ಗುಚ್ಚ ಮೂಡುತ್ತದೆ. ಜೊತೆಗೆ ಅದರ ಗಾಂಭಿರ್ಯ ನಡಿಗೆಯೂ ಸೇರಿ ರಾಜನಡಿಗೆಯನ್ನು ನೆನಪಿಸುವುದು.
ಇದು ತನ್ನ ಚುಂಚನ್ನು ನೀರಲ್ಲಿ ಆಚೆ, ಈಚೆ ತಿರುಗಿಸಿ- ಜಾಲರಿ ಆಡಿಸಿದಂತೆ ಮಾಡಿ ನೀರಿನಲ್ಲಿರುವ ಚಿಕ್ಕ ಕ್ರಿಮಿ, ನುಸಿ, ಚಿಕ್ಕ ಮೀನು ಇಲ್ಲವೇ ಇತರ ಜಲಚರಗಳ ಮೊಟ್ಟೆಯನ್ನು ಹಿಡಿದು ತಿನ್ನುವುದು.
ಚಮಚ ಕೊಕ್ಕಿನ ಕೊಕ್ಕರೆಗಳಲ್ಲಿ ಕಪ್ಪು ಕೊಕ್ಕಿನವು, ಹಳದಿ ಬಣ್ಣದವು, ಅಷ್ಟೇ ಯಾಕೆ ಗುಲಾಬಿ ಬಣ್ಣದ ಚಮಚ ಕೊಕ್ಕರೆಗಳೂ ಇವೆ. ಗುಲಾಬಿ ಚಮಚ ಕೊಕ್ಕರೆ ಹೆಚ್ಚಾಗಿ ಕೆಂಪು ಬಣ್ಣದ ಷಟಿÛ- ತಿನ್ನುವುದರಿಂದ ಗುಲಾಬಿ ಬಣ್ಣ ಅದರ ದೇಹದಲ್ಲಿ ತೋರುವುದು ಎಂಬ ಅಭಿಪ್ರಾಯ ಸಹ ಇದೆ. ಅದರ ಮೈಬಣ್ಣಕ್ಕೆ ಆಹಾರ ಕಾರಣವೋ ಅಥವಾ ದೇಹದಲ್ಲಿರುವ ಹಾರ್ಮೋನ್ ಕಾರಣವೋ ಎಂಬುದು ಇದುವರೆಗೂ ಗೊತ್ತಾಗಿಲ್ಲ.
ಸಾಮಾನ್ಯವಾಗಿ ಈ ಪಕ್ಷಿ ನೀರು ನಿಂತ ಗದ್ದೆ, ಕೃಷಿ ನೀರಾವರಿಗಾಗಿ ನಿರ್ಮಿಸಿದ ಕಟ್ಟೆ, ಆಣೆಕಟ್ಟಿನ ಹಿನ್ನೀರ ಪ್ರದೇಶ, ಜೌಗು ಪ್ರದೇಶ- ನದಿ ತೀರದ ಕೆಸರಿನ ಪ್ರದೇಶಗಳಲ್ಲಿ ಆಹಾರವನ್ನು ಹುಡುಕಿಕೊಳ್ಳುತ್ತವೆ.
ಕಪ್ಪೆ ಚಿಪ್ಪು, ಗೊದ್ದ, ಕಟ್ಟಿರುವೆ, ಅವುಗಳ ಮೊಟ್ಟೆ, ಕಪ್ಪೆ, ಶಂಖದ ಹುಳು, ಚಿಕ್ಕ ಏಡಿ, ಮೀನು, ಶಟಿÛಗಳು ಇದರ ಪ್ರಮುಖ ಆಹಾರ. ಅಲ್ಲದೆ ಕೆಸರಿನಲ್ಲಿರುವ ಮಣ್ಣು ಹುಳು, ಎರೆಹುಳದ ಮೊಟ್ಟೆಗಳನ್ನೂ ತಿನ್ನುವವು. ಇವುಗಳು ಸಂತಾನೋತ್ಪತ್ತಿ ಮಾಡುವ ಸಮಯ ಜುಲೈನಿಂದ ನವೆಂಬರ್. ಈ ಸಂದರ್ಭದಲ್ಲಿ ಕೆರೆ ದಂಡೆಯಲ್ಲಿರುವ ಮರಗಳ ಮೇಲೆ ಸಾಮಾನ್ಯ ಎತ್ತರದಲ್ಲಿ ಕೋಲುಗಳನ್ನು ಸಂಗ್ರಹಿಸಿ ಅಟ್ಟಣಿಗೆ ನಿರ್ಮಿಸಿ, ಮಧ್ಯ ಜಲಸಸ್ಯ ಮುಂತಾದ ಮೆತ್ತನೆ ಹಾಸು- ಹಾಕಿ ಮೊಟ್ಟೆ ಇಡುವುದು.
ಸಂಜೆ ಮತ್ತು ಬೆಳಗ್ಗೆ ಆಹಾರ ಸಂಗ್ರಹಿಸುವ ಚಟುವಟಿಕೆಯಲ್ಲಿ ತೊಡಗುವುದು. ತನ್ನ ಗೂಡಿನ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ತನ್ನ ಮರಿಗಳಿಗೆ ಆಹಾರ ಹುಡುಕುತ್ತವೆ. ಇದೊಂದು ಸುಂದರ ಚುಂಚಿನ ಹಕ್ಕಿ. ಏಷಿಯನ್ ಬಿಲ್ ಸ್ಟೋರ್ಕ್, ಐಬಿಸ್, ಪೆಲಿಕನ್‌ನ ಸಹಚರಿಯಾಗಿರುವ ಈ ಸುಂದರ ಹಕ್ಕಿ ಪರಿಸರದ ಚೆಲುವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.