ಚಮಚ ಕೊಕ್ಕಿನ ಬಿಳಿ ಕೊಕ್ಕರೆ
Team Udayavani, Mar 11, 2017, 10:42 AM IST
ಇದಕ್ಕೆ ಚಮಚ ಕೊಕ್ಕರೆ ಎಂಬ ಹೆಸರು ಒಪ್ಪುತ್ತದೆ. ಇದರ ಕಾರ್ಯ ಕೌಶಲವನ್ನು ಆಧರಿಸಿ ಇದಕ್ಕೆ ಈ ಹೆಸರು ಬಂದಿರಬಹುದು.Eurasian spoonbill (Platalealeucorcodia ) RM Duck + ಇದು 60 ಸೆಂ.ಮೀ ದೊಡ್ಡದಿರುತ್ತದೆ. ಇದರ ಚುಂಚಿನ ತುದಿ 2 ರಿಂದ 4 ಸೆಂ.ಮೀ ಅಗಲ ಇರುತ್ತದೆ. 20.ಸೆಂ.ಮೀ ಗಿಂತ ಹೆಚ್ಚು ಉದ್ದದ ಚುಂಚು ಇದೆ. ಇದು ಸಾಕು ಬಾತುವಿನಷ್ಟು ದಪ್ಪ ಇರುತ್ತದೆ.
ಸಟ್ಟುಗದಂತೆ ತೋರುವ ಕೊಕ್ಕು ಇರುದರಿಂದ ಇದಕ್ಕೆ ಚಮಚ ಕೊಕ್ಕರೆ ಹೆಸರು ಬಂದಿದೆ. ಸಟ್ಟುಗವನ್ನು ಪದಾರ್ಥ ಪಾತ್ರೆಯ ಅಡುಗೆ ಅಂದರೆ ತಳಕ್ಕೆ ಪದಾರ್ಥ ಅಂಟದಂತೆ ತೊಳಸಲು ಉಪಯೋಗಿಸುತ್ತಾರೆ. ಅದರಂತೆ ನೀರಿನ ತಳವನ್ನು ಕೆದಕಲು ಮತ್ತು ತನ್ನ ಚುಂಚವನ್ನು ಅರ್ಧತೆರೆದು ಆಚೆ, ಈಚೆ ಅರ್ಧಚಂದ್ರಾಕಾರದಲ್ಲಿ ತಿರುಗಿಸುತ್ತಾ, ನೀರನ್ನು ಜಾಲಾಡಿ ಅದರಲ್ಲಿರುವ ಕೆಸರಿನ ಹುಳು, ಚಿಕ್ಕಮೊಟ್ಟೆ, ಮೀನು ಹಿಡಿದುತಿನ್ನುವುದು ಇದರ ಸ್ವಭಾವ. ಹಾಗಾಗಿ ಇದಕ್ಕೆ ಚಮಚ ಕೊಕ್ಕರೆ ಎಂಬ ಹೆಸರು ಒಪ್ಪುತ್ತದೆ. ಇದರ ಕಾರ್ಯ ಕೌಶಲವನ್ನು ಆಧರಿಸಿ ಇದಕ್ಕೆ ಈ ಹೆಸರು ಬಂದಿರಬಹುದು. ಇದು 60 ಸೆಂ.ಮೀ ದೊಡ್ಡದಿರುತ್ತದೆ. ಇದರ ಚುಂಚಿನ ತುದಿ 2 ರಿಂದ 4 ಸೆಂ.ಮೀ ಅಗಲ ಇರುತ್ತದೆ.
20.ಸೆಂ.ಮೀ ಗಿಂತ ಹೆಚ್ಚು ಉದ್ದದ ಚುಂಚು ಇದೆ. ಇದು ಸಾಕು ಬಾತುವಿನಷ್ಟು ದಪ್ಪ ಇರುತ್ತದೆ. ಉದ್ದಕುತ್ತಿಗೆ, ಉದ್ದ ಕಾಲು ಇರುವ ಬಿಳಿಯ ಇದರ ಚುಂಚಿನ ತುದಿ 2 ರಿಂದ 4 ಸೆಂ.ಮೀ ಅಗಲವಿರುತ್ತದೆ. ಹಕ್ಕಿಯು ರೋಪು ಮತ್ತು ಏಷಿಯಾ ಖಂಡಗಳಲ್ಲೂ ಇರು ಹರಡಿವೆ. ಕುತ್ತಿಗೆ ಬುಡದಲ್ಲಿ ಕಂದು ಕೆಂಪು ಮಿಶ್ರಿತ ಹಳದಿ ಬಣ್ಣ ಇದೆ. ಚುಂಚಿನ ತುದಿಯಲ್ಲಿ ಹಳದಿ ಬಣ್ಣಇದೆ. ಇದು 1.8 ದಿಂದ 3.1 ಕೆ.ಜಿ ಭಾರ ಇರುವುದು. ಗಂಡು-ಹೆಣ್ಣು ಎರಡೂ ಒಂದೇ ರೀತಿ ಇರುವುದು. ಏಕ ಪತ್ನಿತ್ವ-ಪತಿತ್ವ ಅನುಸರಿಸುವ ಹಕ್ಕಿ ಇದು. ಗಂಡು -ಹೆಣ್ಣು ಜೊತೆಯಾಗಿಯೇ ಇರುತ್ತದೆ. ಕೇವಲ ಒಂದು ವರ್ಷವೋ ಅಥವಾ ಜೀವಮಾನ ಪರ್ಯಂತ ಏಕ ಪತ್ನಿತ್ವ ಅನುಸರಿಸುವದೋ? ಎಂಬುದು ಸಂಶೋಧನೆಯಿಂದ ತಿಳಿಯಬೇಕಾಗಿದೆ. ಸಾಮಾನ್ಯವಾಗಿ ಏಕಾಂಗಿಯಾಗಿ ಮತ್ತು ಜೋಡಿಯಾಗಿ ಇರುವುದು ಹೆಚ್ಚು. ದೊಡ್ಡ ಗುಂಪಿನಲಿÛರುವುದು ಅಪರೂಪ. ಐಬೀಸ್, ಬಿಳಿ ಕೊಕ್ಕರೆ, ಚಿಕ್ಕಕೊಕ್ಕರೆ. ಓಪನ್ ಬಿಲ್ ಸ್ಟೊರ್ಕ್, ಸಹವರ್ತಿಯಾಗಿ ಕಾಣುತ್ತವೆ. ನೀರು ನಿಂತಗದ್ದೆ, ಕೊಳ, ಅಣೆಕಟ್ಟಿನ ಹಿನ್ನೀರ ಪ್ರದೇಶ, ಉಪ್ಪು ನೀರಿನ ಜವಗು ಪ್ರದೇಶ, ನದಿಗಳು ಸಮುದ್ರಕ್ಕೆ ಸೇರುವ ನದಿಯ ಮುಖಜ ಪ್ರದೇಶದಲ್ಲಿ ಕಾಣುತ್ತವೆ. ಅಲ್ಲಿ ಅವುಗಳಿಗೆ ವಿಫುಲ ಆಹಾರ ಸಿಗುವುದರಿಂದ ಅಲ್ಲೇ ಹೆಚ್ಚು ಸಮಯ ಕಳೆಯುತ್ತವೆ. ಬೆಳಗ್ಗೆ ಮತ್ತು ಸಾಯಂಕಾಲ ಇದರ ಆಹಾರ ಅನ್ವೇಷಣೆ ಮತ್ತು ಬೇಟೆಯಾಡಿ ಆಹಾರ ದೊರಕಿಸುವುದು ಇದರ ಪರಿ.
ಇದು ಸಾಮಾನ್ಯವಾಗಿ ಮೊಳಕಾಲು, ಆಳದ ನದಿ, ಕೆಸರಿನ ಪ್ರದೇಶ, ಉಪ್ಪು ನೀರಿನ ನದೀತೀರ, ಅಪರೂಪಕ್ಕೆ ತೆರೆ ಬಂದು ಹೋಗುತ್ತಿರುವ ಸಮುದ್ರತೀರದಲ್ಲೂ ಕಾಣಸಿಗುತ್ತದೆ. ನದಿಗಳ ಕಡಿಮೆ ಆಳದಲ್ಲಿ ತನ್ನ ಚುಂಚನ್ನು ಅರ್ಧ ನೀರಿನಲ್ಲಿ ಮುಗಿಸಿ, ಎಡಕ್ಕೆ ಬಲಕ್ಕೆ ತಿರುಗಿಸುತ್ತಾ, ತನ್ನ ಕೆಳ ಚುಂಚಿನಲ್ಲಿ ನದಿಗಳ ತಳದ ಕೆಸರನ್ನು ಕೆದಕುತ್ತಾ, ಬರುವ ನೀರಿನ ಹುಳ, ಮೀನುಮರಿಗಳನ್ನು ಜಾಳಿಗೆಯಂತೆ ತನ್ನ ಅಗಲ ಚುಂಚಿನಲ್ಲಿ ಸೋಸಿ ಬೇಟೆಯಾಡುವುದೇ ಇದರ ವೈಖರಿ. ಕಪ್ಪೆಚಿಪ್ಪು, ಗೊಂದ ಮೊಟ್ಟೆಗಳು, ಇರುವೆಯ ಮೊಟ್ಟೆ, ಕಪ್ಪೆಗಳು, ಶಂಖದ ಹುಳ, ಚಿಕ್ಕ ಮೀನು, ಜಲಚರಗಳು, ನೀರಿನಲ್ಲಿ ತೇಲುವಚಿಕ್ಕ ಜಲಸಸ್ಯಗಳನ್ನು ತಿನ್ನುತ್ತವೆ. ತನ್ನ ಕಾಲನ್ನು ಹಿಂದಕ್ಕೆ ಚಾಚಿ, ಕುತ್ತಿಗೆಯನ್ನು ಮುಂದೆ ಮಾಡಿ, ಲಯಬದ್ಧವಾಗಿ ನಿಧಾನಕ್ಕೆ ರೆಕ್ಕೆ ಬಡಿಯುತ್ತಾ ಹಾರುತ್ತದೆ. ಹಾರುವಾಗ ಇಂಗ್ಲೀಷಿನ ವ ಆಕಾರದಲ್ಲಿ ಹಾರುವುದು. ಇದರ ಬಣ್ಣ, ಹಣೆಯಲ್ಲಿರುವ ಬಣ್ಣ, ಚುಂಚಿನ ಮೇಲಿರುವಗೆರೆ, ಕಾಲಿನ ಬಣ್ಣ, ಕಾಲು ಬೆರಳಿನ ಬಣ್ಣ, ಆದರಿಸಿ ಜಗತ್ತಿನ ತುಂಬೆಲ್ಲಾ ಇರುವ ಚಮಚ ಕೊಕ್ಕರೆಯನ್ನು 6 ಗುಂಪಾಗಿ ವಿಂಗಡಿಸಲಾಗಿದೆ. ಇವುಗಳೆಲ್ಲಾ ಆಹಾರ ಸಂಗ್ರಹಿಸುವುದು, ಮರಿಗಳ ಪಾಲನೆ ಪೋಷಣೆ, ಗೂಡುಕಟ್ಟುವುದು ಒಂದೇ ರೀತಿ ಇದ್ದರೂಚಿಕ್ಕ ಭಿನ್ನತೆ ಇವುಗಳಲ್ಲಿ ಗುರುತಿಸಲಾಗಿದೆ.
ಜುಲೈ ತಿಂಗಳಿಂದ – ನವೆಂಬರ್ ತಿಂಗಳು ಇದು ಮರಿಮಾಡುವ ಸಮಯ. ನದಿ, ಹಿನ್ನೀರಿನ ಸಮೀಪ ಇರುವ ಮರಗಳ ಮೇಲೆ ಕೋಲು, ಕಡ್ಡಿ ಸೇರಿಸಿ, ಗೂಡನ್ನು ನಿರ್ಮಿಸುವುದು. ಕೆಲವೊಮ್ಮೆ ಮಣ್ಣಿನ ದಿಬ್ಬಗಳ ಮೇಲೆ ಸಹ ನೀರಿನ ಸಮೀಪ ಗೂಡು ಮಾಡುವುದಿದೆ. ಕಾಂಡ್ಲಾ ಮುಂತಾದ ಗಿಡಗಳ ಮೇಲೆ ಸಹ ಗೂಡು ಕಟ್ಟುತ್ತವೆ. ಗೂಡು ಕಟ್ಟಲು ಸ್ಥಳಗಳ ಆಯ್ಕೆ, ಮರಿಮಾಡುವ ಸಮಯದಲ್ಲಿಗಂಡು-ಹೆಣ್ಣಿನ ವರ್ತನೆ, ಪ್ರಣಯ, ಗೂಡು ಕಟ್ಟುವಾಗ ಪರಿಕರ ಹೇಗೆ ಒದಗಿಸುತ್ತದೆ? ಎಲ್ಲವೂ ಅಧ್ಯಯನಮಾಡಬೇಕಿದೆ.
ಸಾಮಾನ್ಯವಾಗಿ ಉತ್ತರ ಮತ್ತು ದಕ್ಷಿಣ ಭಾಗದ ಮಾನ್‌ಸೂನನ್ನು ಆಧರಿಸಿ, ಇವು ಮರಿಮಾಡುತ್ತವೆ. ಇದು ತನ್ನಗೂಡನ್ನು ನಿರ್ಮಿಸಲು ಕಡ್ಡಿಗಳ ಮೇಲೆ ಹುಲ್ಲನ್ನೂ ಹರಡುವುದು ತಿಳಿದಿದೆ. ಇಂತಹ ಹಚ್ಚಡದಂತಹ ಗೂಡಿನಲ್ಲಿ ವರ್ತುಲ ಅಂಡಾಕಾರದ 4-6 ತತ್ತಿ ಇಡುತ್ತವೆ. ತತ್ತಿ ಬಿಳಿಬಣ್ಣ ಇದ್ದು, ಕೆಂಪು ಮಿಶ್ರಿತ ಕಂದುಬಣ್ಣದ ಮಚ್ಚೆ ಇದರ ಮೇಲಿದೆ. ಮರಿಗಳು ಹುಟ್ಟುವಾಗ ಕೊಕ್ಕು ಚೂಪಾಗಿರುವುದು. ಅದು ಬೆಳೆದು ಪ್ರೌಢಾವಸ್ಥೆಗೆ ಬಂದಂತೆ ಚೊಂಚು ಚಮಚದ ಆಕಾರ ಪಡೆಯುತ್ತದೆ. ನಮ್ಮ ದೇಶ ಈ ಹಕ್ಕಿ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಜವಗು ಪ್ರದೇಶಕ್ಕೆ ವಲಸೆ ಹೋಗುವುದು. ಬೆಳ್ಳ ಹಕ್ಕಿ, ಕೊಕ್ಕರೆ, ಐಬೀಸ್, ಹಾವಹಕ್ಕಿ ಜೊತೆಯಲ್ಲೂ ಇದ್ದು ಗೂಡು ನಿರ್ಮಿಸುತ್ತವೆ. ಹಾಗಾಗಿ ಇವು ಪರಿಸರದ ಹಕ್ಕಿಗಳ ಜೊತೆ ಪ್ರೀತಿಯಿಂದ ಸಹಬಾಳ್ವೆ ಮಾಡುತ್ತಿರುವುದು ದಾಖಲಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಸಹ ಕಂಡಿದೆ ಇವುಗಳ ಎಲ್ಲಾ 6 ಪ್ರಬೇಧಗಳು ಭಾರತದ ತುಂಬೆಲ್ಲಾಇರುವುದೋ ಎಂಬ ಬಗ್ಗೆ ಹೆಚ್ಚು ಅಧ್ಯಯನ ನಡೆದರೆ, ಈ ಹಕ್ಕಿಗಳ ಕುರಿತು ಹೆಚ್ಚಿನ ಮಾಹಿತಿ ಸಿಗಬಹುದು.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.