ಕೃಷಿ ಶಾಲೆ
Team Udayavani, Nov 11, 2017, 11:53 AM IST
ಶಾಲೆ ಎಂದರೆ ಕೇವಲ ವಿದ್ಯೆ ಕಲಿಯಲು, ಪದವಿ ಪಡೆಯಲು ಮಾತ್ರ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಇಲ್ಲೊಂದು ಗ್ರಾಮೀಣ ಭಾಗದ ಪ್ರೌಢಶಾಲೆಯೊಂದಿದೆ. ಶಿಕ್ಷಣದ ಕಲಿಕೆಯೊಂದಿಗೆ ಬದುಕುನ್ನು ರೂಪಿಸುತ್ತ ಮುನ್ನೆಡೆದಿದೆ. ಅದುವೇ ಯಲ್ಲಾಪುರ ತಾಲೂಕಿನ ಭರತನು ಆಳಿದ ನಾಡೆಂಬ ಖ್ಯಾತವೆತ್ತಿರುವ ಭರತನಹಳ್ಳಿ ಪ್ರಗತಿ ವಿದ್ಯಾಲಯ.
ತಾಲ್ಲೂಕ್ ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ ಈ ಪ್ರೌಢಶಾಲೆ. ಇದು ಪ್ರಾರಂಭವಾಗಿ ನಾಲ್ಕುವರೆ ದಶಕಗಳೇ ಕಳೆದಿವೆ. ಈ ಪ್ರೌಢಶಾಲೆಯಲ್ಲಿ ಶಿಕ್ಷಣದೊಂದಿಗೆ ಕಲೆ, ಸಂಗೀತ, ಸಾಹಿತ್ಯ, ಪರಿಪೂರ್ಣ ಶಿಕ್ಷಣದೊಂದಿಗೆ ಪಾರಂಪರಿಕ ಕೃಷಿಗೆ ಆಧ್ಯತೆ ನೀಡಲಾಗಿದೆ. ಹೆಸರೇ ಸೂಚಿಸುವಂತೆ “ಪ್ರಗತಿ’ ಶಿಕ್ಷಣ ಸಂಸ್ಥೆ-ಪ್ರಗತಿ ಪ್ರೌಢಶಾಲೆ, ಪ್ರಗತಿ ಸಂಸ್ಕೃತ ಪಾಠಶಾಲೆ, ಪ್ರಗತಿ ಹಿಂದಿಪಾಠಶಾಲೆ,ಪ್ರಗತಿ ವಾಚನಾಲಯ, ಪ್ರಗತಿ ಪ್ರಾಥಮಿಕ ಶಾಲೆ, ಪ್ರಗತಿ ಭಾವೀ ಕೃಷಿಕರ ಸಂಘ, ಅಭಿನವ ಕಲಾಕೂಟ, ಪ್ರಗತಿ ಅನಾಥಧಾಮ ಹೀಗೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೆಜ್ಜೆಗಳನ್ನಿಡುತ್ತ ಸಾಗುತ್ತಿದೆ. ಮೂಲಭೂತವಾಗಿ ಕಲೆ, ಕೃಷಿ ಕ್ರೀಡೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದು ಇಲ್ಲಿನ ವಿಶೇಷ. ಹಾಗಂತ ವಿದ್ಯಾರ್ಥಿಗಳು ಓದಿನಲ್ಲಿ ಹಿಂದಿಲ್ಲ. ಎಲ್ಲಾದರಲ್ಲೂ ಮುಂದು.
ಸಾಕಷ್ಟು ಶಾಲೆಗಳಲ್ಲಿ ಹೂದೋಟ, ಕೈತೋಟ ಇರೋದೇ ಇಲ್ಲ. ಇದ್ದರೂ ಎಲ್ಲೋ ನಾಲ್ಕಾರು ಹಣ್ಣುಹಂಪಲು ಗಿಡಗಳನ್ನು ಕಾಣುತ್ತೇವೆ. ಸ್ಥಳದ ಕೊರತೆ ನೀರಿನಕೊರತೆ ಅಡಳಿತ ವ್ಯವಸ್ಥೆ ಸರಿಯಿಲ್ಲ ಏನೇನೋ ಕಾರಣಗಳು ಇದಕ್ಕೆ. ಆದರೆ ಪ್ರಗತಿಶಾಲೆಯಲ್ಲಿ ಹೀಗಿಲ್ಲ. ಮಕ್ಕಳಿಗೆ ಕೃಷಿಪಾಠವನ್ನು ತಿಳಿಸುತ್ತಾ ಕೃಷಿಚಟುವಟಿಕೆಯಲ್ಲಿ ಉತ್ತಮವಾದ ಪ್ರಗತಿ ಕಾಣುತ್ತಿರುವುದು ವಿಶೇಷ. 1974 ರಲ್ಲಿ ಸ್ಥಾಪಿತವಾದ ಈ ಪ್ರೌಢಶಾಲೆ ಉತ್ತಮ ಪ್ರತಿಶತ ಫಲಿತಾಂಶದಿಂದಲೂ ಹೆಸರು ಮಾಡಿದೆ.
ಅಡಿಕೆ ತೋಟವಿದೆ..
ಈ ಪ್ರಗತಿ ಪ್ರೌಢಶಾಲೆಯಲ್ಲಿ 1987 ರಿಂದ ನಿರಂತರವಾಗಿ ಕೃಷಿ ಚಟುವಟಿಕೆ ನಡೆದುಕೊಂಡು ಬಂದಿದೆ. ಆಕೇಶಿಯಾ, ತೇಗ, ಮೊದಲಾದ ಗಿಡಗಳನ್ನು ಬೆಳೆಸಿ, ಕಟಾವುಮಾಡಿ ಶಾಲೆಗಾಗಿ ಆದಾಯವನ್ನು ಒಂದೆಡೆ ಸೇರಿಸುತ್ತಾರೆ. 400 ಕ್ಕೂ ಅ ಧಿಕ ಸಾಗವಾನಿ ಮತು 2800 ಆಕೇಶಿಯಾ ಹೆಮ್ಮೆರವಾಗಿ ಬೆಳೆದಿವೆ. ಜೊತೆಗೆ 110 ಅಡಿಕೆ ಸಸಿಗಳು, 60 ಕ್ಕೂ ಹೆಚ್ಚಿನ ತೆಂಗಿನ ಗಿಡ, ಚಿಕ್ಕು, ಮಾವು,ಹಲಸು, ದಾಳಿಂಬೆ,ಏಲಕ್ಕಿ, ಕಾಳುಮೆಣಸು,ಹಣ್ಣು ಹಂಪಲಿನ ಗಿಡಗಳೂ ಬೆಳೆದುನಿಂತಿವೆ.
ಕೈತೋಟದ ಸಲುವಾಗಿಯೇ ಇರುವ ಸಮಯವನ್ನು ಇವುಗಳ ಪೋಷಣೆಗೆ ಎಲ್ಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಕಾಯಕ ಸದಾ ನಡೆಯುತ್ತಿದೆ. ಈಗೀಗ ಮೂರರಿಂದ ನಾಲ್ಕು ಕ್ವಿಂಟಾಲ್‌ಗಳಷ್ಟು ಅಡಿಕೆಯನ್ನು ಬೆಳೆದು ಲಕ್ಷಾಂತರ ರೂ. ಆದಾಯವನ್ನು ಶಾಲೆ ಪಡೆಯುತ್ತಿದೆ. ಪ್ರೌಢಶಾಲಾ ಮಕ್ಕಳ ಬಿಸಿಯೂಟಕ್ಕೆ ಸಾಕಾಗುವಷ್ಟು ತೆಂಗಿನಕಾಯಿಗಳನ್ನು ತೋಟದಲ್ಲಿಯೇ ಬೆಳೆದುಕೊಳ್ಳಲಾಗುತ್ತಿದೆ. ದೆ„ಹಿಕ ಶಿಕ್ಷಕ ಎನ್.ವಿ.ಹೆಗಡೆ, ಗಣೇಶ ಭಟ್ಟ, ಹಾಸ್ಟೇಲ್ ಪರಿವೀಕ್ಷಕ ಸಂತೋಷ ಶೇಟ್, ಹಾಲಿ ಮುಖ್ಯಾಧ್ಯಾಪಕ ವಿನಾಯಕ ಹೆಗಡೆ, ಹಿಂದಿನ ನಿವೃತ್ತ ಮುಖ್ಯಾಧ್ಯಾಪಕರು ಸೇರಿದಂತೆ ಶಾಲೆಯ ಎಲ್ಲಾ ವಿಷಯ ಬೋಧಕ, ಶಿಕ್ಷಕ ಶಿಕ್ಷಕಿಯರು
ಬೋಧಕೇತರರು ಎಲ್ಲಾ ಹಂತದಲ್ಲಿ ತಮ್ಮ ನಿಷ್ಠೆಯನ್ನು ತೋರಿದುದರ ಫಲವಾಗಿ ಪ್ರಗತಿ ತನ್ನ ಹೆಸರನ್ನು ಉಳಿಸಿಕೊಂಡು ಹೊರಟಿದೆ. ಪ್ರೌಢಶಾಲೆಗೆ ಸೇರಿದ ಸುಮಾರು ಐದು ಎಕರೆ ಜಾಗವಿದೆ. ಇದನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಂಡಿದ್ದರಿಂದ ಶಾಲೆಯ ಆವರಣ ಪೂರ್ತಿ ಹಸಿರಾಗಿದೆ. ಇಲ್ಲಿ ತಯಾರಿಸಿದ ಸಾವಿರಾರು ಅಡಿಕೆ ಸಸಿಗಳನ್ನು ಮಾರಾಟಮಾಡಿದೆ. ಈ ಮೂಲಕ ಮಕ್ಕಳಲ್ಲಿ ಕೃಷಿ ಕಾಳಜಿಮೂಡಿಸುತ್ತಿದೆ. ಒಂದು ಕಡೆ ಆಕೇಶಿಯ, ಇನ್ನೊಂದೆಡೆ ಸಾಗವಾನಿ, ಮತ್ತೂಂದೆಡೆ ಅಡಿಕೆತೋಟ,ಅದರಲ್ಲಿ ಬಾಳೆ, ಕಾಳಮೆಣಸು, ವೆನಿಲ್ಲಾ ಬƒಹದಾಕರವಾಗಿ ಶಾಲೆಯ ಎದುರು ಕಂಗೊಳಿಸುವ ಕಲ್ಪವೃಕ್ಷಗಳು ನಯನ ಮನೋಹರವಾಗಿದೆ. ಹಾಸ್ಟೇಲ್ ಉಸ್ತುವಾರಿ ವಹಿಸಿಕೊಂಡಿರುವ ಸಂತೋಶ ಶೇಟ್ ಮತ್ತು ವಿದ್ಯಾರ್ಥಿಗಳು ರಜಾ ಅವ ಧಿಯಲ್ಲಿ ಪ್ರಾಣಿಕಾಟಗಳ ಮಧ್ಯೆಯೂ ತೋಟವನ್ನು ರಕ್ಷಿಸುತ್ತಲೇ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಪರಿಸರದ ಮೇಲಿನ ಆಸಕ್ತಿ ಎಷ್ಟಿದೆ ಎಂದರೆ ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.
ನರಸಿಂಹ ಸಾತೊಡ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.