ಮರಣಭಯ ಯಾವಾಗ ಸಾಧ್ಯ?
Team Udayavani, Oct 21, 2017, 12:35 PM IST
ಜನ್ಮ ಕುಂಡಲಿಯಲ್ಲಿ ಓಡಾಡಿಕೊಂಡಿರುವ ಗ್ರಹಗಳು ಯಾವಾಗಲೂ ಚದುರಂಗದ ಆಟದಲ್ಲಿ ಆಟಗಾರರು ನಡೆಸುವ ತಂತಮ್ಮ ಕಾಗಳಂತೆ ಯಾವುದೋ ನಮಗರಿಯದ ವಿಧಾತನ ಅಣತಿಯಂತೆ ತಮ್ಮ ಓಡಾಟದ ಕಾರಣದಿಂದಾಗುವ ಪರಿಣಾಮದ ಫಲವಾಗಿ ಗೆಲುವನ್ನು ಸೋಲನ್ನು ತರುತ್ತಿರುತ್ತದೆ. ಈ ಗೆಲುವು ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೆ ಏರಿಸುವುದೋ, ಮಾತಿನ ಚಾತುರ್ಯದ ಮೂಲಕ ಮಹತ್ವವನ್ನು ಸಾಧಿಸುವುದೋ ಧೈರ್ಯದಿಂದ ಮುನ್ನುಗ್ಗಿ ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ರೂಪಿಸಿ ಕೊಡುವುದೋ, ಸುಖವನ್ನು ಮನೆಯನ್ನು, ಮಾತೃ ಪ್ರೀತಿಯನ್ನು, ಓದು ಮತ್ತು ಜಾnನವನ್ನು ಒದಗಿಸುವುದೋ ಮಾಡುತ್ತಿರುತ್ತದೆ. ಹಾಗೆಯೇ ಇದು ನಮ್ಮ ಹಿಂದಿನ ಜನ್ಮ ಜನ್ಮದ, ಪಾಪಪುಣ್ಯದ ಗಂಟುಗಳನ್ನು ನಮಗೆ ತೆರೆದು ತೋರಿಸುತ್ತದೆ. ಇಲ್ಲವೇ ಕೆಟ್ಟ ದರಿದ್ರಗಳ ಅವಸ್ಥೆ ಕಾಯಿಲೆ ಎರೆಮನೆ ವ್ಯಾಜ್ಯ ಸಕಲ ಯಾತನೆಯ ರೋಗ ರುಜಿನ ಅಪರಾಧ ಭಯ, ಅಂಗಾಂಗ ಛೇದನಗಳನ್ನು ತಪ್ಪಿಸುತ್ತಿರುತ್ತದೆ. ಬಾಳಸಂಗಾತಿಯನ್ನು ಮನಸೊÕಪ್ಪುವ ರೀತಿಯಲ್ಲಿ ಒದಗಿಸಿ ಆನಂದಕ್ಕೆ ಸಾರ್ಥಕತೆಗೆ ದೂಡುತ್ತದೆ. ಅನಾಯಾಸವಾದ ಮರಣವನ್ನು ಬದುಕಿನ ವಿದಾಯದ ಸಂದರ್ಭದಲ್ಲಿ ಯಾತನೆಯಾಗದಂತೆ ನೀಡುತ್ತದೆ. ಭಾಗ್ಯ ಭೋಗಾದಿ ಸಕಲ ವೈಭವಗಳನ್ನು ಕೊಡುತ್ತದೆ. ಒಳ್ಳೆಯ ಕೆಲಸ ಅಥವಾ ಕಾಯಕ ನೀಡಿ ಸಾರ್ಥಕ ಸಾಧನೆಗೆ ಕೀರ್ತಿ ಸಂಗ್ರಹದಿಂದ ಧನ್ಯತೆಗೆ ದಾರಿ ಮಾಡಿಕೊಡುತ್ತದೆ. ಅನೇಕ ರೀತಿಯ ಆಸ್ತಿ ಒಡವೆ ಮತ್ತು ರತ್ನಗಳ ಪ್ರಾಪ್ತಿಯ ಲಾಭ ಸಂಚಯಿಸಿ ಕೊಡಬಹುದು. ಕೆಟ್ಟ ರೀತಿಯ ನಷ್ಟವನ್ನು ತಪ್ಪಿಸಿ ಸ್ವಲ್ಪದರಲ್ಲಿ ದೊಡ್ಡ ಅನಾಹುತವನ್ನು ತಪ್ಪಿಸುವ ರಕ್ಷಣೆಯನ್ನು ಒದಗಿಸಬಹುದು.
ಎಲ್ಲವೂ ತಲೆಕೆಳಗಾಗುವ ಸಾಧ್ಯತೆ ಹೇಗೆ?
ಚದುರಂಗದಾಟದಲ್ಲಿ ನಿರತ ವಿಧಾತನ ತಪ್ಪಗಳು ಮೇಲೆ ವಿವರಿಸಿದ ವಿಚಾರಗಳನ್ನು ಬುಡಮೇಲಾಗುವ ಸ್ಥಿತಿ ತರಬಹುದು. ಇಲ್ಲಾ ಹಲವು ಒಳ್ಳೆಯದು ಕೆಲವು ಕೆಟ್ಟದ್ದು ಆಗಬಹುದು. ಇದನ್ನು ಮೀರಿ ಕೆಲವು ಅಲ್ಪಪ್ರಮಾಣದ ಒಳಿತುಗಳಿಗೆ ಕಾರಣವಾಗಬಹುದು. ಧಮಾಥ್ ಕಾಮ ಮೋಕ್ಷಗಳನ್ನು ನಮ್ಮ ಸಾರ್ಥಕ ಬದುಕಿನ ಚಲನವಲನಗಳಿಗೆ ಸುಂದರವಾದ ಗಟ್ಟಿಮುಟ್ಟಾದ ಹಳಿಯನ್ನು ಹಾಕಿಕೊಡುತ್ತವೆ. ಈ ಹಳಿಗಳು ಸೂಕ್ತವಾಗಿದ್ದರೆ ಎಲ್ಲವೂ ಚೆನ್ನ. ತಪ್ಪಿದರೆ ಅದು ಅರ್ಥವಿಲ್ಲದ ರಾಕ್ಷಸಿ ಪ್ರವೃತ್ತಿ, ಲಂಗುಲಗಾುರದ ಕಾಮುಕ ಸ್ವೇಚ್ಛೆಯ ನಡೆ, ಗೊತ್ತುಗುರಿಗಳಿಲ್ಲದ ಸಾವು ನಮ್ಮ ತೆಕ್ಕೆಗೆ ಒದಗುವ ದಾರುಣತೆಗಳಾಗಿ ಪರಿಣಮಿಸಬಹುದು. ಈಗ ಜಗತ್ತಿನಲ್ಲಿ ಈ ರೀತಿಯ ದಾರುಣತೆಗಳೇ ಜಾಸ್ತಿಯಾಗುವ, ಆಗುತ್ತಿರುವ ಸ್ಥಿತಿಗತಿ ಇದೆ. ನಮ್ಮ ಧರ್ಮದ ಹೆಜ್ಜೆಯ ನಡೆ ತಪ್ಪಿದೆ. ಭಾÅಂತಿ ತುಂಬಿಸುವ ಮದ್ಯದ ಅಮಲಿನಲ್ಲಿ ಹೊಯ್ದಾಡಿಸುವ ಪ್ರಾರಬ್ಧವನ್ನು ನೇಯ್ದ ಗತಿಯಲ್ಲಿದೆ. ಮರಣ ಭಯವಂತೂ ಧರ್ಮ ಜಾತಿ ರಾಷ್ಟ್ರ ಗಳ ನಡುನ ವೈರತ್ವಗಳ ಕಾರಣದಿಂದಾಗಿ ಒಬ್ಬನ ಇಬ್ಬರ ಮರಣಕ್ಕೆ ದಾರಿಯಾಗದೆ ಇಡೀ ಧಾರಿಣಿಯ ಮರಣದ ಮೃದಂಗ ಹೊಡೆದುಕೊಳ್ಳುತ್ತದೆ.
ಜಾತಕದಲ್ಲಿ ಮರಣಭಯ ಯಾವಾಗ ಸಾಧ್ಯ
ಸಂಫೂರ್ಣ ನಾಶದ ವಿಚಾರವಾಗಿ ಅಂದರೆ ಪ್ರತಿ ವ್ಯಕ್ತಿ ಮರಣವನ್ನು ಯಾವಾಗ ಎದುರಿಸಬೇಕು ಬದುಕಿನ ಕಾಯಕಕ್ಕೆ ರಾಮ ಘೋಷಿಸಿ ಭೂಮಿಯ ಋಣವನ್ನು ಮುಗಿಸಲೇ ಬೇಕಾಗುತ್ತದೆ ಎಂದರೆ ಅದನ್ನು ಜಾತಕ ಕುಂಡಲಿಯ ಗ್ರಹಗಳ ಸಂಬಂಧವಾದ ಓಡಾಟದ ಹಲವಾರು ವಿಚಾರಗಳನ್ನು ಒರೆಗಲ್ಲಿಗಿರಿಸಿ, ಕ್ಷಣಕ್ಷಣದ ಲೆಕ್ಕಾಚಾರಗಳನ್ನು ಗಮನಿಸಿಯೇ ಇದು ಹೀಗೆ, ಇಷ್ಟು, ಇಲ್ಲಿ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಯಾವುದೋ ಒಂದು ಘಟಕವನ್ನು ಅಥವಾ ಗ್ರಹದ ವಿಚಾರವನ್ನು ಹಿಗ್ಗಿಸಿ ಅಥವಾ ಕುಗ್ಗಿಸಿ ನಿರ್ಣಯಕ್ಕೆ ಬರಲಾಗದು. ಮರಣಾಧಿಪತಿ, ಲಗ್ನಾಧಿಪತಿ, ಅನಿಷ್ಠಾಧಿಪತಿ, ನಷ್ಟದ ಅಧಿಪತಿ ಹಾಗೂ ಇತರ ಘಾತಕ ಶಕ್ತಿಗಳು ಒಂದು ಇನ್ನೊಂದನ್ನು ಹೇಗೆ ಸಂವೇದಿಸುತ್ತದೆ ಎಂಬುದನ್ನು ಗ್ರಹಿಸುವುದು ಮುಖ್ಯ. ಈ ಕೆಲ ದಿನಗಳನ್ನು ಪ್ರಧಾನಿ ಮೋದಿಯವರಿಗೆ ಮರಣ ಭಯವಿದೆ ಎಂದು ಕೆಲವು ವಿಚಾರಗಳನ್ನು ಜೋತಿಷಿಗಳು ಮಾಧ್ಯಮದಲ್ಲಿ ಸಾದರಪಡಿಸಿದರು. ಬೇರೊಬ್ಬ ಜೋತಿಷಿ ಇದನ್ನು ನಿರಾಕರಿಸಿದರು. ಈ ರೀತಿಯಾದ ಭಿನ್ನ ವಿಚಾರಗಳು ಹೇಗೆ ಹುಟ್ಟಿಕೊಳ್ಳುತ್ತವೆ? ಜಾತಕ ಒಬ್ಬನೇ ವ್ಯಕ್ತಿಯದು, ವ್ಯತಿರಿಕ್ತ ಅಭಿಪ್ರಾಯಗಳು. ಹಾಗಾದರೆ ಯಾವುದು ಆಖೈರಿನ ಸತ್ಯ? ನಿಜವಾದ ವಸ್ತು ಮರಣವನ್ನು ಗುರುತಿಸುವಲ್ಲಿ ಹೇಗೆ, ಯಾವಾಗ, ಏಕೆ ಎಂಬುದನ್ನು ನಿಖರವಾಗಿ ಗುರುತಿಸುವುದು ನಿಜಕ್ಕೂ ಸಾಧ್ಯವೇ? ಎಂಬುದು ಆಸಕ್ತರ ಮನಸ್ಸಿನಲ್ಲಿ ಎದ್ದೇಳುವ ಪ್ರಶ್ನೆ. ಜೋತಿಷ್ಯವೇ ಹಾಗೆ, ಗಟ್ಟಿಯಾದ ತೊಗಟೆಯ ಒಳಗೆ ಸತ್ಯವನ್ನು ಅಡಗಿಸಿಡುತ್ತದೆ. ಗೋಡಂಬಿಯ ಗಟ್ಟಿ ಹಾಗೂ ಸುಡುವ ರಸ ತುಂಬಿದ ಸಿಪ್ಪೆಯನ್ನು ಬಿಚ್ಚಿದಾಗ, ಒಳಗಿನ ಮೃದು ಗೋಡಂಬಿ ಪ್ರತ್ಯಕ್ಷವಾಗುತ್ತದೆ. ಜೋತಿಷ್ಯ ಗಟ್ಟಿಯಾದ ಕವಚ ಮತ್ತು ಸುಡು ರಸವನ್ನು ಭೇದಿಸಿದಾಗ ಸತ್ಯದ ದರ್ಶನ ಸ್ಪಷ್ಟಗೊಳ್ಳುತ್ತದೆ. ಇದಕ್ಕೇ ಆದ ದಾರಿ, ವಿಧಾನ ಮಾರ್ಗಸೂತ್ರ ಸರಿಯಾಗಿರಬೇಕು.
ದುಷ್ಟತನ ಕೂಡಿದಾಗ ಮರಣ
ಒಂದು ಚಾಕುವಿನಿಂದ ಕೊಲೆಗಾರ ಒಬ್ಬನನ್ನು ಸಾಯಿಸಬೇಕೆಂದಾಗ ತಾನೊಬ್ಬನೇ ಸಾಯಿಸಬಹುದು. ಹಲವು ದುಷ್ಟರ ನೆರವು ಒಗ್ಗೂಡಿಸಿಕೊಂಡು ಕೊಲೆಗೆ ಮುಂದಾಗಬಹುದು. ಆದರೆ ವಿಧಿಯ ಸಂಕಲ್ಪದಂತೆ ಸಾವು ಎಂಬುದು ಒಂದೇ ಗ್ರಹದ ಪರಮೋತ್ಛ ಶಕ್ತಿಯಿಂದ ಸಂಭವಿಸುವುದಿಲ್ಲ. ವೇಗವಾಗಿ ಓಡುವ ಚಿರತೆಯನ್ನೂ ಮೀರಿದ ವೇಗದಲ್ಲಿ ಜಿಂಕೆಯೊಂದು, ಹಂತಕನ ಸ್ವರೂಪದಲ್ಲಿ ಬಂದ ಮೃಗವನ್ನು ಮೀರಿದ ವೇಗದಿಂದ ಓಡುತ್ತದೆ. ಯಾವಾಗಲೂ ಅಪಾಯದಲ್ಲಿರುವ ಜೀವಿಗೆ ತನಗೇ ಆಶ್ಚರ್ಯವಾಗುವ ರೀತಿಯಲ್ಲಿ ಪ್ರಕೃತಿ ಓಡುವುದಕ್ಕೆ, ರಕ್ಷಣೆ ಪಡೆಯುವುದಕ್ಕೆ ಅವಕಾಶ ನಿರ್ಮಿಸಿಕೊಡುತ್ತದೆ. ಆ ಪರಮೋತ್ಛ ಶಕ್ತಿ ಪ್ರಕೃತಿಯೇ ಚಿರತೆಯ ಹುಟ್ಟಿಗೂ, ಜಿಂಕೆಯ ಹುಟ್ಟಿಗೂ, ಜಿಂಕೆಯನ್ನು ಬೇಟೆಯಾಡುವ ಚಾತುರ್ಯವನ್ನು ಚಿರತೆಯ ಚಾತುರ್ಯವನ್ನು ಮೀರಿದ ಜಾಗೃತಾವಸ್ಥೆಯೊಂದನ್ನು ನೀಡಿರುತ್ತದೆ. ಈ ಮೂಲಕ ತಪ್ಪಿಸಿಕೊಳ್ಳುವ ವಿಧಾನವನ್ನು ಜಿಂಕೆಗ ಒದಗಿಸಿರುತ್ತದೆ. ಚಿರತೆಯ ಆಹಾರವೇ ಜಿಂಕೆ ಎಂಬುದನ್ನು ಅದು ನಿರ್ಧರಿಸುತ್ತದೆ. ಅಪರೂಪಕ್ಕೆ ಜಿಂಕೆಯೇ ತನ್ನ ಕೊಂಬುಗಳಿಂದ ಚಿರತೆಯನ್ನೆತ್ತಿ ಒಗೆದು, ಕೊಲ್ಲುವುದೂ ಇದೆ. ಸಾವು ಖಚಿತವೆಂದಾಗ ಬದುಕು ಗೆಲ್ಲುವುದಿದೆ. ಬದುಕು ಬಾಕಿ ಇದೆ ಎಂದುಕೊಂಡಾಗ ಸರ್ರನೆ ಮುಕ್ತಾಯಕ್ಕೆ ಹೆಜ್ಜೆ ಇಡುವ ಪರಮ ವೈಚಿತ್ರ್ಯಗಳನ್ನು ನಾವು ಗಮನಿಸುತ್ತಲೇ ಇರುತ್ತೇವೆ.
ಒಂದು ಕೊಲ್ಲುವ ಗ್ರಹ ತನ್ನ ಉದ್ದೇಶವನ್ನು ಪೂರೈಸುವಾಗ ಆ ಗ್ರಹ ತನ್ನೆದುರಿಗೆ ಚೂರಿ ಇದ್ದರೂ ತಾನೇ ಅದನ್ನು ಎತ್ತದು. ಮತ್ತೂಂದು ಗ್ರಹ ಚೂರಿಯನ್ನು ತೋರಿಸಬೇಕು. ತೋರಿಸಿದರೂ ಚೂರಿಯನ್ನು ಮತ್ತೂಂದು ಗ್ರಹ ಚೂರಿಯನ್ನೆತ್ತಿ ಕೊಲ್ಲುವ ಗ್ರಹದ ಕೈಲಿಡಬೇಕು. ಕೈಗಿಟ್ಟರೂ ಎದ್ದು ಬಂದು ಸಂಬಂಧಿಸಿದ ವ್ಯಕ್ತಿಯನ್ನು ಇರಿಯದು. ಸಂಬಂಧಿಸಿದ ವ್ಯಕ್ತಿಯನ್ನು ಚಾಕುನಿಂದ ಇರಿಯಬೇಕಾದ, ಗ್ರಹದ ಸನಿಹಕ್ಕೇ ವ್ಯಕ್ತಿಯನ್ನು ತಂದು ನಿಲ್ಲಿಸಬೇಕು. ಇದು ಇನ್ನೊಂದು ಗ್ರಹದ ಕೆಲಸ. ಆಗ ಕ್ಷಣ ಹೊತ್ತೂ ಯೋಚಿಸದೆ ಸಾಯಿಸುವ ಕೆಲಸವನ್ನು ಈ ಗ್ರಹ ಮಾಡಿ ಮುಗಿಸುತ್ತದೆ. ಕೊಲ್ಲುವ ಚಾಕುವಿನ ಕುರಿತು ತಿಳಿಸುವ, ಚಾಕುವನ್ನು ಕೈಗಿಡುವ ಸಾಯಿಸಬೇಕಾದ ವ್ಯಕ್ತಿಯನ್ನು ಸನಿಹಕ್ಕೆ ತರುವ ಹೀಗೆ ದುಷ್ಟ ಚತುಷ್ಟಯ ಗ್ರಹಗಳು ಕಾರ್ಯ ನಿರ್ವಸಿದಾಗ ಮಾತ್ರ ವ್ಯಕ್ತಿ ಸಾವನ್ನು ಮುಂದೂಡಲಾರ.
ಈ ಮೇಲಿನ ಕಾರಣದಿಂದ ಈ ದುಷ್ಟ ಚತುಷ್ಟಯರು ಒಬ್ಬ ವ್ಯಕ್ತಿಯ ಜಾತಕದಲ್ಲಿ ಹೇಗೆ ಒಗ್ಗೂಡಬಹುದೆಂಬುದನ್ನು ಸಮರ್ಥ ಜೀವಿ ಗುರುತಿಸುತ್ತಾನೆ. ನರಳಿ ಸಾಯುವ, ಅಲ್ಪಾವಧಿಅನಾರೋಗ್ಯದಿಂದ ಸಾಯುವ ಅವಘಡ, ಕೊಲೆ ಆತ್ಮಹತ್ಯೆ ಆಕಸ್ಮಿಕ ಕಾರಣಗಳಿಂದ ಸಾಯುವ ಘಳಿಗೆ ನಿರ್ಮಾಣವಾಗುತ್ತದೆ. ಒಮ್ಮೊಮ್ಮೆ ಇದು ತಿಳಿದು ಸಂಭವಿಸಿದರೆ ಹಲವು ಸಲ ಕಣ್ಣು ಮುಚ್ಚಿ ತೆರೆಯುವುದರೊಳೆಗೆ ಸಾವು ಮುಗಿದೇ ಹೋಗುತ್ತದೆ.
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ
Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ
Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!
Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿನ್, ವಿಜಯನ್‌ಗೆ ಪದ್ಮಶ್ರೀ
IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ