ಕೆಂಪು ಎದೆ ಹೂ ಗುಬ್ಬಿ
Team Udayavani, Oct 21, 2017, 1:12 PM IST
ಅತ್ಯಂತ ಚಿಕ್ಕ ಹಕ್ಕಿ ಎಂಬ ಹೆಗ್ಗಳಿಕೆ ಕೆಂಪು ಎದೆ ಹೂ ಗುಬ್ಬಿ ಪಕ್ಷಿಯದ್ದು. ಗಿಡದಿಂದ ಗಿಡಕ್ಕೆ ಹಾರುತ್ತಾ ಹೂವಿನೊಳಗೆ ತನ್ನ ಮುಕ್ಕಾಲು ಭಾಗ ದೇಹವನ್ನು ಮುಳುಗಿಸಿ ಮಕರಂದ ಹೀರುವ ಈ ಹಕ್ಕಿ ಪರಾಗಸ್ಪರ್ಶಕ್ಕೂ ಕಾರಣವಾಗುತ್ತದೆ.
ಕೆಂಪು ಎದೆಯ ಮಕರಂದ ಅಂತಲೂ ಈ ಹಕ್ಕಿಯನ್ನು ಕರೆಯುತ್ತಾರೆ.Fire-brested Flowerpecker (Dicaeum Ignipectus) R -Sparrow ಭಾರತದ ಹಕ್ಕಿಗಳಲ್ಲಿ ಅತಿ ಚಿಕ್ಕದು ಎಂಬ ಹೆಗ್ಗಳಿಕೆ ದಕ್ಕಿದೆ. ಗುಬ್ಬಚ್ಚಿಗಿಂತ ಚಿಕ್ಕದಾದ ಹೊಳೆವ ನೀಲಿಗಪ್ಪು, ಬೆಂಕಿವರ್ಣದ ಎದೆ ಇರುವ ಸುಂದರ ಹಕ್ಕಿ. ಚಿಕ್ ಚಿಕ್ ಚಿಕ್, ಚಿಕ್ ಚಿಕ್ ಚಿಕ್ ಎಂದು ನಿರಂತರವಾಗಿ ಕೂಗುತ್ತಾ, ಹಾರುತ್ತಾ, ಹೂವಿನ ಒಳಗೆ ತನ್ನ ಚುಂಚನ್ನು, ಇಲ್ಲವೇ ತನ್ನ ದೇಹದ ಮುಕ್ಕಾಲು ಭಾಗವನ್ನು ಇಳಿಬಿಟ್ಟು ಮಕರಂದ ಹೀರುತ್ತದೆ. ಅದಕ್ಕಾಗಿ ಇದಕ್ಕೆ ಹೂ ಗುಬ್ಬಿ ಎಂಬ ಹೆಸರು ಬಂದಿದೆ.
ಈ ಹಕ್ಕಿಯ ತೂಕ ಕೇವಲ 7-9 ಗ್ರಾಂ. ಕೆಂಪು ಎದೆ ಹೂ ಕುಟುಕ ಅಂತಲೂ ಇದನ್ನು ಕರೆಯುವುದಿದೆ. ಗಂಡು-ಹೆಣ್ಣಿಗೆ ಬಣ್ಣದಲ್ಲಿ ವ್ಯತ್ಯಾಸ ಇದೆ. ಗಂಡು ಹಕ್ಕಿಗೆ ಎದೆಯಲ್ಲಿ ಕೆಂಪು ಮಚ್ಚೆ ಇದೆ. ಕುತ್ತಿಗೆ, ಹೊಟ್ಟೆ ಹಳದಿ ಮಿಶ್ರಿತ, ಮಸಕು ಬಿಳಿ ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆಯಲ್ಲಿ ಮೇಲಿನಿಂದ ಕೆಳಗೆ ಕಪ್ಪು ಗರಿಗಳ ಗೆರೆ ಇದೆ. ಹೆಣ್ಣು ಹಕ್ಕಿ ಒಣ ಹುಲ್ಲಿನ ಬಣ್ಣ ಇದ್ದು, ಹಳದಿ ಮತ್ತು ಮಾಸಲು ಬಿಳಿಬಣ್ಣದ ಹೊಟ್ಟೆಯಂತೆ ಕಾಣುತ್ತದೆ.
ಪರ್ವತ ಪ್ರದೇಶ ಮತ್ತು ಎತ್ತರದ ಮರಗಳಲ್ಲಿ ಬೆಳೆಯುವ ಬಂದಳಕ ಮುಂತಾದ ಹೂಬಿಡುವ ಸಸ್ಯಗಳಿರುವ ಪಶ್ಚಿಮಘಟ್ಟದ ಕಾಡಿನಲ್ಲೂ ಈ ಹಕ್ಕಿ ಇರುತ್ತದೆ. ದೊಡ್ಡ ಕಾಡು, ತೋಟ ಕಿರು ತೋಪು -ನೆಡು ತೋಪಿನಲ್ಲಿರುವ ಹೂ ಬಿಡುವ, ಬಳ್ಳಿ ಇಲ್ಲವೇ ಕಡ್ಡಿಯಂತೆ ಹೂವು ಇರುವ ಕಾಡಿನ ಬಳ್ಳಿಗಳಲ್ಲಿ ಇವುಗಳ ಖಚಿತ ವಾಸಸ್ಥಾನ. ಸ್ವಲ್ಪ ಮನುಷ್ಯರ ಸುಳಿವು ಸಿಕ್ಕರೂ ಗಿಡಗಳ ಮರೆಯಲ್ಲಿ ಹಾರಿಹೋಗಿಬಿಡುತ್ತದೆ.
ಇದು ದೊಡ್ಡ ಮರಗಳ ಎಲೆಯ ನಡುವೆ ಇಲ್ಲವೇ ಎತ್ತರದ ಟೊಂಗೆಗಳ ಮೇಲಿರುವುದೇ ಹೆಚ್ಚು. ಇವು ಬಂದಳಕದ ಬೀಜ, ತಿನ್ನುವುದರಿಂದ ಇದರ ಕಾಲಿಗೆ ಅಂಟಿದ ಬೀಜ ಮರದ ಟೊಂಗೆಗಳಲ್ಲಿ ಅಂಟಿ ಬೀಜ ಪ್ರಸರಣವಾಗುತ್ತದೆ. ಇದು ಹೂವಿನ ಒಳಕ್ಕೆ ತನ್ನ ಚುಂಚನ್ನು ಇಳಿಸುವುದರಿಂದ ಹೂನ ಪರಾಗಸ್ಪರ್ಶದಲ್ಲೂ ಇದರ ಪಾತ್ರ ಹಿರಿದು. ಇದನ್ನು ಗಮನಿಸಿದರೆ ಈ ಹಕ್ಕಿಯಿಂದ ಉಪದ್ರವಕ್ಕಿಂತ -ಉಪಕಾರವೇ ಹೆಚ್ಚು.
ದಪ್ಪ ಚುಂಚಿನ ಹೂ ಗುಬ್ಬಿ, ಚಿಕ್ಕ ಹೂ ಗುಬ್ಬಿ, ಕೆಂಪು ಬೆನ್ನಿನ ಹೂಗುಬ್ಬಿ, ಕಪ್ಪು ಎದೆಯ ಹೂಗುಬ್ಬಿ, ಎಂದುಬಣ್ಣ ವ್ಯತ್ಯಾಸದಿಂದ ಉಪ ಜಾತಿಗಳನ್ನು ಗುರುತಿಸಲಾಗಿದೆ.
ಸಾಮಾನ್ಯವಾಗಿ 18 ರಿಂದ 20 ದಿನ ಕಾವು ಕೊಡುವುದು. ಮರಿಯಾಗಿ 12-18 ದಿನ ತಂದೆ ತಾಯಿಯ ಆರೈಕೆಯಲ್ಲಿ ಉಳಿಯುವುದು. ಅನಂತರ ಇವು ಪ್ರತ್ಯೆಕವಾಗಿ ಉಳಿಯುವುವೋ, ಇಲ್ಲವೇ ತಂದೆ ತಾುಯರ ಜೊತೆ ಸಕುಟುಂಬಿಯಾಗಿ ಇರುವುದೋ? ಈಕುರಿತು ಅಧ್ಯಯನ ನಡೆಯಬೇಕಿದೆ. ಮರಿಯಾದ ನಂತರ ಯಾವವಿಧದ ಆಹಾರ ನೀಡುವುದು? ಆರಂಭದ ದಿನಗಳಲ್ಲಿ ಎಂತಹ ಆಹಾರ ಕೊಡುವುದು, ಮರಿಗಳಿಗೆ ಚಿಕ್ಕ ಕೀಟ ನೀಡುವುದೋ?ಇಲ್ಲವೇ ಹೂನ ಮಕರಂದ, ಅಥವಾ ಪರಾಗವನ್ನು ತಿನ್ನಿಸುವುದೋ? ತಿಳಿದಿಲ್ಲ. ಮಕರಂದವನ್ನು ಹೇಗೆ ತನ್ನ ಚುಂಚಿನಲ್ಲಿ ತರುವುದು? ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಅದರ ಸೂಕ್ಷ್ಮ ಅಧ್ಯಯನದ ನಂತರವೇ ಉತ್ತರಿಸಬೇಕಿದೆ. ಕಾಡಿನ ಮರ, ಹೂಬಿಡುವ ಬಳ್ಳಿ, ಹಣ್ಣಿನ ಮರಗಳ ಉಳಿವು, ಇದನ್ನು ಆದರಿಸಿ -ಈ ಪುಟ್ಟ ಹಕ್ಕಿಯ ಉಳಿವು. ಹಾಗಾಗಿ ಪುಟ್ಟ ಸುಂದರ ಹಕ್ಕಿಯ ಉಳಿವಿಗಾಗಿ ಹೂ ಗಿಡ, ಮರ, ಬಳ್ಳಿ ಉಳಿಸೋಣ . ಪರಾಗ ಸ್ಪರ್ಶ ಮಾಡಿ ಒಳ್ಳೆಯ ಹಣ್ಣು ಸಿಗುವಂತೆ ಸಹಾಯ ಮಾಡುವ -ಈ ಹಕ್ಕಿ ಯು ಉಪಕಾರ ಸ್ಮರಿಸಿ ಅದನ್ನೂ ಉಳಿಸಲು ಮುಂದಾಗೋಣ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.