ಹೊಸ ಮೈಲುಗಲ್ಲು ನೆಟ್ಟ ಜೂಲನ್
Team Udayavani, Feb 24, 2018, 10:18 AM IST
ವಯಸ್ಸು 35. ಈ ವಯಸ್ಸಿನಲ್ಲೂ ಫಿಟ್ನೆಸ್ ಕಾಯ್ದುಕೊಂಡಿರುವ ಆಟಗಾರ್ತಿ. ಈಗಲೂ ಕಿರಿಯ ಆಟಗಾರ್ತಿಯರು ನಾಚುವಂತೆ ವೇಗವಾಗಿ ಬೌಲಿಂಗ್ ಮಾಡುವ ಸಮರ್ಥ ಬೌಲರ್. ಈಗ ಆಕೆ ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಒಡತಿ.
ಯಾವುದೇ ಕ್ರೀಡಾ ಕ್ಷೇತ್ರ ಇರಬಹುದು ಒಂದು ನಿವೃತ್ತಿಗೆ ವಯಸ್ಸು ಇರುತ್ತದೆ. ಅಬ್ಟಾಬ್ಬ! ಅಂದರೆ ಸುಮಾರು 30ರಿಂದ 35 ವರ್ಷದೊಳಗೆ ಯಾವುದೇ ಆಟಗಾರ ತನ್ನ ಆಟಕ್ಕೆ ದೇಹ ಸ್ಪಂದಿಸುತ್ತಿಲ್ಲ. ತನ್ನ ಪ್ರದರ್ಶನ ಕಳಪೆಯಾಗುತ್ತಿದೆ ಎಂದು ನಿವೃತ್ತಿ ಘೋಷಿಸುತ್ತಾರೆ. ಆದರೆ, ಭಾರತ ಮಹಿಳಾ ಕ್ರಿಕೆಟ್ ತಂಡ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಅದಕ್ಕೆ ವಿರುದ್ಧವಾಗಿದ್ದಾರೆ ಎಂದರೆ ತಪ್ಪಲ್ಲ. ವಯಸ್ಸು 35 ಆದರೂ ಆಟ ಮುಪ್ಪಾಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸುವ ಮೂಲಕ ವಿಶ್ವ ದಾಖಲೆ ಮಾಡಿ ಮೆರೆದಿದ್ದಾರೆ. ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಪಶ್ಚಿಮ ಬಂಗಾಳದ ಮೂಲದ ಜೂಲನ್ ಗೋಸ್ವಾಮಿ ಸಾಧನೆ ಸಾಮಾನ್ಯವಾದುದ್ದಲ್ಲ.
2002ರಲ್ಲಿ ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿ ಸುಮಾರು 16 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. 166 ಏಕದಿನ ಪಂದ್ಯಗಳನ್ನು ಆಡಿರುವ “ಬಂಗಾಳ ಎಕ್ಸ್‌ಪ್ರೆಸ್’ ಗೋಸ್ವಾಮಿ 200 ವಿಕೆಟ್‌ಗಳನ್ನು ತನ್ನ ತೆಕ್ಕೆ ಹಾಕಿಕೊಳ್ಳುವ ಮೂಲಕ 11 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಕ್ಯಾಥರಿನ್ ಫಿಟ್ ಪ್ಯಾಟ್ರಿಕ್(180 ವಿಕೆಟ್) ಹೆಸರಲಿದ್ದ ಅತಿ ಹೆಚ್ಚು ವಿಕೆಟ್ ಗಳಿಸಿದ್ದ ದಾಖಲೆ ಅಳಿಸಿ ಬಹು ದೂರ ಸಾಗಿದ್ದಾರೆ. 10 ಟೆಸ್ಟ್‌ನಲ್ಲಿ 40 ಹಾಗೂ 60 ಟಿ-20 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಪತನಗೊಳಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ 5 ವಿಕೆಟ್ ಗೊಂಚಲು ಪಡೆದು ಸಾಧನೆ ಮಾಡಿದ್ದಾರೆ.
ವಿಶ್ವದ 2ನೇ ವೇಗದ ಮಹಿಳಾ ಬೌಲರ್
ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಕ್ಯಾಥರಿನ್ ಫಿಟ್ ಪ್ಯಾಟ್ರಿಕ್ ವಿಶ್ವದ ಅತಿ ವೇಗದ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ನಿವೃತ್ತಿಯಾದ ನಂತರ ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಅವರ ಜಾಗವನ್ನು ತುಂಬಿದ್ದವರೇ ಭಾರತದ ಬಂಗಾಳ ಎಕ್ಸ್‌ಪ್ರೆಸ್ ಜೂಲನ್. ಎದುರಾಳಿ ಆಟಗಾರ್ತಿಯರ ಎದೆಯಲ್ಲಿ ನಡುಕು ಹುಟ್ಟಿಸಿದ್ದಾರೆ. ಪುರುಷ ಬೌಲರ್‌ಗಳೇ ಇವರ ವೇಗವನ್ನು ನೋಡಿ ದಂಗಾಗಿದ್ದಾರೆ. ಸುಮಾರು 120 ಸರಾಸರಿ ವೇಗದಲ್ಲಿ ಬಾಲ್ ಎಸೆಯುವ ಗೋಸ್ವಾಮಿ ಮಹಿಳಾ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ವಿಶ್ವ ಮಹಿಳಾ ಬೌಲಿಂಗ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದ ಛಲಗಾತಿ
ಭಾರತ ಮಹಿಳಾ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಪಶ್ಚಿಮ ಬಂಗಾಳ ನಾಡಿಯಾ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ 1982ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಕಡೆ ಆಕರ್ಷಿತರಾದ ಜೂಲನ್ ಮನೆಯ ಸಮೀಪದಲ್ಲಿ ಗಂಡು ಮಕ್ಕಳೊಂದಿಗೆ ಕ್ರಿಕೆಟ್ ಆಡಲು ಆರಂಭಿಸಿದ್ದರು. ಪ್ರಾರಂಭದಲ್ಲಿ ಮುಜುಗರ ಅನುಭವಿಸಿದರು. ಆದರೆ, ಕ್ರಿಕೆಟ್ ಮೇಲಿನ ಪ್ರೀತಿ ಮಾತ್ರ ಕಡಿಮೆ ಆಗಲಿಲ್ಲ. ತಾನು ಕ್ರಿಕೆಟ್‌ನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬೆಳೆಯಿತು. ಎಷ್ಟೇ ಆದರೂ ಪುರುಷರು ಆಡುವ ಆಟ ಎಂದೇ ಅನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಆದ್ಯತೆ ಕಡಿಮೆ. ಅದನ್ನು ಲೆಕ್ಕಿಸದೇ ತನ್ನ ಜೀವನವನ್ನು ಕ್ರಿಕೆಟ್‌ನಲ್ಲಿ ಕಂಡುಕೊಳ್ಳಬೇಕೆಂಬ ಹಟಕ್ಕೆ ಬಿದ್ದ ಜೂಲನ್ ಕೊನೆಗೂ ಕ್ರಿಕೆಟ್ ಅಭ್ಯಾಸ ಮಾಡಲು ತನ್ನ ತಂದೆ-ತಾಯಿಯ ಪ್ರೋತ್ಸಾಹದಿಂದ ಕೋಲ್ಕತ್ತಕ್ಕೆ ಹೊರಟು ನಿಂತರು.
ಪ್ರತಿ ದಿನ ಕೋಲ್ಕತ್ತದಿಂದ ರೈಲಿನಲ್ಲಿ ಪ್ರಯಾಣ ಮಾಡಿ ತರಬೇತಿ ಪಡೆಯುತ್ತಿದ್ದರು. ಕೊನೆಗೂ ಶ್ರಮಕ್ಕೆ ಫಲ ಫಲಿಸಿ 2002ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲದೆ, ತಂಡದಲ್ಲಿ ಇದ್ದ ವೇಗದ ಬೌಲರ್ ಕೊರತೆ ನೀಗಿಸಿದರು. ಬ್ಯಾಟಿಂಗ್‌ನಲ್ಲಿ ಇತರೆ ಆಟಗಾರ್ತಿಯರು ಕೈಕೊಟ್ಟರೂ ತಾನೊಬ್ಬ ಆಲ್‌ರೌಂಡರ್ ಎನ್ನುವುದನ್ನು ಕೆಲವು ಸಲ ಸಾಬೀತು ಮಾಡಿ ತೋರಿಸಿದ್ದಾರೆ. ತಂಡದ ಆಧಾರ ಸ್ತಂಭವಾಗಿ, ವೇಗದ ಬೌಲಿಂಗ್ ಸಾರಥಿಯಾಗಿ, ತಂಡವನ್ನು ಮುನ್ನಡಿಸಿದ ಓರ್ವ ಸಮರ್ಥ ನಾಯಕಿಯಾಗಿ, ಕಿರಿಯರ ಆಟಗಾರ್ತಿಯರ ಪಾಲಿಗೆ ಮಾರ್ಗದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಹಲವು ಪ್ರಶಸ್ತಿಗೆ ಕೊರಳೊಡ್ಡಿರುವ ಜೂಲನ್ ಗೋಸ್ವಾಮಿ 2007ರಲ್ಲಿ ಐಸಿಸಿ ವರ್ಷದ ಆಟಗಾರ್ತಿ, ಭಾರತದ ನಾಲ್ಕನೇ ಪುರಸ್ಕಾರ ಪದ್ಮಶ್ರೀ ಹಾಗೂ ಅರ್ಜುನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಪಾತ್ರರಾಗಿರುವ ಜೂಲನ್ ಗೋಸ್ವಾಮಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸೋಣ.
ದೇವಲಾಪುರ ಮಹದೇವಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.