ಸಂತ್ರಸ್ತರ ದುಃಖಕ್ಕೆ ದನಿಯಾಗಿ…
ಮೇಷ್ಟ್ರು: ವೀರಣ್ಣ ಮಡಿವಾಳರ; ಸೇವೆ: ಪ್ರವಾಹ ಸಂತ್ರಸ್ತರಿಗೆ ನೆರವು
Team Udayavani, Aug 31, 2019, 5:11 AM IST
ಕಳೆದ ಒಂದು ವರುಷದಲ್ಲಿ, ಬೆಳಗಾವಿ ಜಿಲ್ಲೆಯ ಅಂಬೇಡ್ಕರ್ ನಗರದ ನಿಡಗುಂದಿ ಶಾಲೆ, ತಾನೇ ನಂಬದಷ್ಟು ಹೊಸತನಗಳಿಗೆ ಮುಖವೊಡ್ಡಿತು. ಶಾಲೆಯ ತುಂಬೆಲ್ಲ, ಕಾಮನಬಿಲ್ಲು ಮೂಡಿತು. ಗೋಡೆಗಳು ಬಣ್ಣಬಣ್ಣದ ಚಿತ್ತಾರ ಹೊತ್ತು, ಮಕ್ಕಳ ಮನೋಲೋಕವನ್ನು ಕದ್ದವು. ಶಾಲೆಯಂಗಳ, ಹೂ ಹಸಿರ ಸೌಂದರ್ಯದಿಂದ ತೂಗಾಡಿತು. “ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಎಂಬ ಅಭಿಯಾನವನ್ನು ಮನ್ನಡೆಸುವಲ್ಲೂ ಈ ಶಾಲೆ ಮುಂಚೂಣಿ. ಈಗ ಈ ಶಾಲೆ ಮತ್ತಷ್ಟು ಅಪ್‌ಡೇಟ್ ಆಗಿ, “ಸ್ಮಾರ್ಟ್ ಪ್ಲಸ್’ ಆಗಿದೆ. ಆಧುನಿಕ ಕಲಿಕೋಪಕರಣಗಳ ಮೂಲಕ ಮಕ್ಕಳು ಡಿಜಿಟಲ್ ಶಿಕ್ಷಣ ಪಡೆಯುತ್ತಿದ್ದಾರೆ.
ಈ ಎಲ್ಲ ಕ್ರಾಂತಿಯ ಹಿಂದೆ ಇರುವ ಮೇಷ್ಟ್ರು, ವೀರಣ್ಣ ಮಡಿವಾಳರ. ಕನ್ನಡ ಸಾಹಿತ್ಯದಲ್ಲೂ ಇವರ ಕೊಡುಗೆ ಕಾಣಬಹುದು. ಮೊನ್ನೆ ಇದೇ ಮೇಷ್ಟ್ರು, ಪ್ರವಾಹದ ಹೊತ್ತಿನಲ್ಲಿ ಕೈಕಟ್ಟಿ ಕೂರಲಿಲ್ಲ. ಶಾಲೆಯನ್ನು ಚೆಂದಗಾಣಿಸಲು ಯಾವ ಫೇಸ್‌ಬುಕ್ ಗೋಡೆ ನೆರವಾಗಿತ್ತೋ, ಅದೇ ಗೋಡೆಯ ಮೇಲೆ ತಮ್ಮ ನೆಲದ ಸಂಕಟ ಹಂಚಿಕೊಂಡರು. ಪ್ರವಾಹ ಪೀಡಿತ ಹಳ್ಳಿಗಳಿಗೆ ಹೋಗಿ, ಒಬ್ಬ ಸುದ್ದಿಗಾರನಂತೆ ಲೈವ್ ವಿಡಿಯೋಗಳ ಮೂಲಕ ಜನರ ಸಂತ್ರಸ್ತ ಬದುಕನ್ನು ಎಲ್ಲರ ಮುಂದಿಟ್ಟರು. ನೆರವು, ಪ್ರವಾಹದಂತೆ ಬಂತು. ಹಾಗೆ ಬಂದ ನೆರವನ್ನು, ಕಷ್ಟದಲ್ಲಿದ್ದ ಜನರಿಗೆ ಮುಟ್ಟಿಸಿದರು. ಆಹಾರ ಧಾನ್ಯ, ಉಡುಪು, ಪುಸ್ತಕ, ಬ್ಯಾಗುಗಳನ್ನು ಸಲ್ಲ ಬೇಕಾದವರಿಗೆ ಸಲ್ಲಿಸಿ, ಪುಣ್ಯ ಕಟ್ಟಿಕೊಂಡರು.
– ಸೋಮು ಕುದರಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.