ಇಸ್ತ್ರಿ ಕವಿ ನಾಗೇಂದ್ರಪ್ಪ


Team Udayavani, Dec 9, 2017, 1:59 PM IST

99.jpg

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ವಿಠಲನಗರದ ಮೊದಲ ತಿರುವಿನಲ್ಲಿ ಒಳ ನಡೆದರೆ, ಸ್ಪೂರ್ತಿ ಐಟಿಐ ಕಾಲೇಜ್‌ ಕಾಣುತ್ತದೆ. ಸ್ವಲ್ಪ ಹಿಂದಕ್ಕೆ  ಚಲಿಸಿದರೆ, ಬೇವಿನ ಮರದಡಿ ಒಂದು ಪೆಟ್ಟಿಗೆ ಡಬ್ಬಿ, ಅದರೊಳಗಿಂದ ಹಾಡಿನ ಸದ್ದು ಕೇಳುತ್ತದೆ. ಪೆಟ್ಟಿಗೆ  ಅಂಗಡಿಯಲ್ಲಿ ಕುಳಿತು ಹಾಡುವವರು ಯಾರಿರಬಹುದು ಎಂಬ ಕುತೂಹಲದಿಂದಲೇ ಹತ್ತಿರ ಹೋದರೆ, ತೆಳ್ಳಗೆ ಸಪೂರವಾಗಿರುವ ಕಪ್ಪಗಿನ ವ್ಯಕ್ತಿಯೊಬ್ಬ ಬೆವರ ಸ್ನಾನದೊಂದಿಗೆ ಇಸ್ತ್ರಿ ಮಾಡುತ್ತಿರುವುದು ಕಾಣುತ್ತದೆ. ಇನ್ನಷ್ಟು ಕಣ್ಣರಳಿಸಿ ಪೆಟ್ಟಿಗೆ ಅಂಗಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಲಾಗಿ ಒತ್ತರಿಸಿಟ್ಟ ಪುಸ್ತಕಗಳು ಎದುರಾಗುತ್ತವೆ. ಇದೇನು ಪುಟ್ಟ ಗ್ರಂಥಾಲಯವೋ, ಇಸ್ತ್ರಿ ಅಂಗಡಿಯೋ ಎನ್ನುವ ಪ್ರಶ್ನೆ ಜೊತೆಯಾಗುತ್ತದೆ.  ಹಾಗೆಯೇ ಕುತೂಹಲಕ್ಕೆ ಆತನನ್ನು ಮಾತಿಗೆಳೆದರೆ ಹಾಡುಪಾಡಿನ ಮಾತುಕತೆ ಆರಂಭವಾಗುತ್ತದೆ.

ಈತ ಜನಪದ ಕವಿ ಪಗಡಲಬಂಡೆ ಹೆಚ್‌. ನಾಗೇಂದ್ರಪ್ಪ.  ಆಶುಕವಿ ಸ್ವರಚಿತ ಕತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್‌ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಮಾಡುವ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್‌ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ, ಸಣ್ಣಾಟ…ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು. ಕೊನೆಗೆ ಅವರನ್ನು ಕೈಹಿಡಿದದ್ದು ಸ್ವರಚಿತ ಕವಿತಾ ವಾಚನ ಮತ್ತು ಹಾಡಿಕೆ. 

ನಾಗೇಂದ್ರಪ್ಪ ಇದೀಗ ಕವನ ಸಂಕಲನ ಪ್ರಕಟಿಸುವ ತಯಾರಿಯಲ್ಲಿದ್ದಾರೆ. ಹೀಗೆ ಪ್ರಕಟಿತ ಸಂಕಲನ ತರುವ ಮುಂಚೆಯೇ ಜನರ ಹಾಡಿಕೆಗಳಲ್ಲಿ ಇವರ ಕೆಲವು ಕತೆಗಳು ಬೆರೆತಿವೆ. ಈ ಅರ್ಥದಲ್ಲಿ ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕಗಳ ಜತೆ ಹೋಲಿಸಲಾಗದು. ಅವರ ಕತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ.

 ಬದಲಾಗಿ ತನ್ನ ಸುತ್ತಮುತ್ತಣ ಯಕಃಶ್ಚಿತ್‌ ಎನ್ನುವಂತಹ ಸಂಗತಿಗಳನ್ನು  ಆಯ್ದು ಅವುಗಳಲ್ಲಿ ಜನಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವ ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ.  ಈತನಕ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವಿತೆಗಳನ್ನು ಹಾಡಿದ್ದಾರೆ. ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.

ಡಾ.ರಾಜ್‌, ವಿಷ್ಣುವರ್ಧನ್‌, ತೆಲುಗು ನಟ ಚಿರಂಜೀವಿ, ಕನ್ನಡ ನಾಡುನುಡಿ ಮುಂತಾದ ಜನಪ್ರಿಯ ಸಂಗತಿಗಳ ಬಗ್ಗೆಯೂ ಹಾಡು ಕಟ್ಟಿದ್ದಾರೆ. ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ. 

ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸುತ್ತಲೇ ಕತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಈತನಕ  ಐದುನೂರಕ್ಕೂ ಹೆಚ್ಚು ಹಾಡು ಕಟ್ಟಿರುವ ಇವರು ನಿಂತಲ್ಲಿಯೇ ಹತ್ತಾರು ಪದ್ಯ ಗಳನ್ನು ನೆನಪಿನಿಂದ ಹಾಡುತ್ತಾರೆ. ಸದ್ಯಕ್ಕೆ 63 ವರ್ಷದ ನಾಗೇಂದ್ರಪ್ಪ ಮಡದಿ ಜಯಮ್ಮ, ಮಕ್ಕಳಾದ ಶಿವಕುಮಾರ್‌ ಚಿರಂಜೀವಿ ಮತ್ತು ನಾಲ್ಕು ಮೊಮ್ಮಕ್ಕಳ ಜತೆ ಬದುಕಿನ ಬಂಡಿ “ಇಸ್ತ್ರಿ  ಅಂಗಡಿ’ಯೊಂದಿಗೆ ಜೀವನ ನಡೆಸುತ್ತಿದ್ದಾರೆ.

ಅರುಣ್‌ ಜೋಳದ ಕೂಡ್ಲಿಗಿ

 

ಟಾಪ್ ನ್ಯೂಸ್

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.