ನಮ್ಮನಿಮ್ಮ ಗ್ರಾಮಕ್ಕುಂಟೇ ಪಾರ್ಟಿಭಾಗ್ಯ?


Team Udayavani, Jan 7, 2017, 2:17 PM IST

65454.jpg

2016 ಮುಗಿಯಿತು, 2017 ಬಂತು. ಡಿಮಾನಟೈಸೇಶನ್‌ ಸಮಸ್ಯೆಯೋ ಪರಿಹಾರವೋ ಅನ್ನುವ ಬಗ್ಗೆಯೂ ಚರ್ಚೆ ಆಯಿತು. ಧಾರಾವಾಹಿ, ನ್ಯೂಸ್‌, ಜಾಹೀರಾತುಗಳ ಬಣ್ಣದ ಮನರಂಜನಾ ಭರಾಟೆ, ಗ್ರಾಹಕವಾದ ಈ ಕಾಲಘಟ್ಟದಲ್ಲಿ ನಮ್ಮ ನಿಮ್ಮ ಗ್ರಾಮಗಳು ಏನಾಗಿವೆ, ಅವುಗಳ ಮುಂದಿನ ಸವಾಲೇನು, ಅವು ಏನು ಮಾಡಬೇಕು ಎಂಬೆಲ್ಲಾ ಪ್ರಶ್ನೆಗಳು ಮುಂದೆ ನಿಂತಿವೆ. ನಟ ಯಶ್‌ ಹೋದ ವರ್ಷ ರೈತರ ಸಮಸ್ಯೆಗಳ ಚರ್ಚೆ ಎಷ್ಟರ ಮಟ್ಟಿಗೆ ಆಗಿದೆ ಅನ್ನುವ ಪ್ರಶ್ನೆ ಎತ್ತಿದರು, ರಾಜ್ಯ ಸರ್ಕಾರ “ಭಾಗ್ಯ’ಗಳನ್ನು ಕರುಣಿಸಿತು, ಕೇಂದ್ರ ಸರ್ಕಾರ “ಸ್ಕಿಲ್‌ ಇಂಡಿಯಾ’ ಕನಸನ್ನು ತೋರಿಸುತ್ತಿದೆ. ಒಂದು ಕಡೆ ಕನ್ಸೂಮರಿಸಂನ ರೊಮ್ಯಾಂಟಿಕ್‌ ಕಲ್ಪನೆ, ಇನ್ನೊಂದು ಕಡೆ ಗ್ರಾಮೀಣಾಭಿವೃದ್ಧಿ ನಿಜಕ್ಕೂ ಕಾಣದ ಕಟು ವಾಸ್ತವ. ಹಾಗಿದ್ದರೆ ಏನು ಮಾಡಬೇಕು, ನೀನೇ ಹೇಳು 2017!

ಭಾವದಿಂದ ಮೊದಲು ಪ್ರಾರಂಭಿಸೋಣ: ಅಜ್ಜ ಹುಡುಕಾಡುತ್ತಿದ್ದಾನೆ. ಅಜ್ಜಿ ಮಂಚದ ಮೇಲೆ ಕುಳಿತುಕೊಂಡಿ¨ªಾಳೆ. ಅಜ್ಜ ಒಂದು ಹಳೆಯ ಫೋಟೋ ತೆಗೆದು ಕೊಡುತ್ತಾ ಸಂಭ್ರಮದಿಂದ ಹೇಳುತ್ತಾನೆ-“ಇಲ್ನೋಡು ಇದ್ಯಾವ ಫೋಟೋ ಅಂತ, ನಾವು ಕಾಲೇಜಲ್ಲಿ¨ªಾಗ ತೆಗೆಸಿಕೊಂಡ ಫೋಟೋ..’ ಅಜ್ಜಿ ಅಷ್ಟೇ ನಿರುತ್ಸಾಹದಿಂದ ಹೇಳುತ್ತಾಳೆ-“ಆದ್ರೆ ನಮ್ಮ ಚಾಲೆಂಜ… ಇದ್ದಿದ್ದು ಸೊಳ್ಳೆ ಹುಡ್ಕೊಡಬೇಕು ಅಂತ.. ಅದು ಸಿಕ್ತಾ?’ಅಜ್ಜ ಹ್ಯಾಪು ಮೋರೆ ಹಾಕಿಕೊಂಡು ಮತ್ತೆ ಸೊಳ್ಳೆ ಹುಡುಕುವುದಕ್ಕೆ ಪ್ರಾರಂಭಿಸುತ್ತಾನೆ.

ಯಾವುದೋ ಹುಡುಕಾಟದಲ್ಲಿ ಮತ್ಯಾವುದೋ ಕಾಲೇಜು ಫೋಟೋ ಸಿಗುವುದು ರೋಮಾಂಚಕಾರಿ ಆಗಬಹುದಾಗಿದ್ದದ್ದು ಒಂದು ಸೊಳ್ಳೆ ಹುಡುಕಿ ಕೊಡಲೇಬೇಕೆಂಬ ಕಟ್ಟಳೆ ಬೀಳುವುದರೊಂದಿಗೆ ಶುದ್ಧ ವ್ಯವಹಾರವಾಗಿ ಬದಲಾಗುತ್ತದೆ.

ನಾವು ಕಣ್ಣೇ ಮುಚ್ಚದೇ, ಪಕ್ಕದಲ್ಲಿ ಓಡಾಡಿಕೊಂಡಿರುವ ಮಗುವಿನ ಮುಗ್ಧ ಆಟ ಪಾಠಗಳನ್ನು ಗಣನೆಗೇ ತೆಗೆದುಕೊಳ್ಳದೇ ಟಿವಿಯ ಇಂಥ ಜಾಹೀರಾತನ್ನು ನಮೊ¾ಳಗೆ ಬಿಟ್ಟುಕೊಳ್ಳುತ್ತೇವೆ. ಒಂದು ಸಣ್ಣ ಸೌಂಡ್‌ಗೆ ಆಡುತ್ತಿದ್ದ ಮಗು ಥಟ್ಟನೆ ತಿರುಗಿ ಅದು ಗಿಲಿಗಿಲಿಯಪ್ಪ ಹಾಡು ಅಂತ ಗುರುತಿಸುತ್ತದೆ, ಅದಕ್ಕೆ ಅದ್ಯಾವ ಚಾಕಲೇಟು ಅಂತ ಗೊತ್ತು, ಎಷ್ಟು ಹೊತ್ತಿಗೆ ಕಿಂಡರ್‌ ಜಾಯ… ಜಾಹೀರಾತು ಬರುತ್ತದೆ ಅಂತ ಗೊತ್ತಿದೆ. ಅದನ್ನು ಕೊಡಿಸಬೇಕಾಗಿ ಬರಬಹುದು, ಆ ಜಾಹೀರಾತು ಇವತ್ತೂಂದು ದಿನ ಬರದಿರಲಿ ಅಂತ ಅಪ್ಪಾಮ್ಮ ದೇವರನ್ನು ಬೇಡಿಕೊಳ್ಳುವಾಗಲೇ ಅದು ಬಂದುಬಿಡುತ್ತದೆ, ಮಗು ಅದನ್ನು ನೋಡಿಯೂಬಿಡುತ್ತದೆ. ಅಂಗಡಿ ಮೆಟ್ಟಿಲ ಮೇಲೆ ನಿಂತುಕೊಂಡ ಅಪ್ಪನ ಹೆಗಲ ಮೇಲಿಂದ ಕೊಡಿಸು ಎನ್ನುವ ಆಣತಿ ಬಂದಿರುತ್ತದೆ.ಸೊಳ್ಳೆ ಹುಡುಕುವ ಅಜ್ಜ-ಅಜ್ಜಿ ನಮ್ಮ ಭಾವಕೋಶದಲ್ಲಿ ಅಮರರಾಗುತ್ತಾರೆ.

ಆದರೆ ಇವೆರಡೂ ಹೇಳಿದ್ದು ಸುಳ್ಳನ್ನೇ ತಾನೇ? ನಿಜ ಜೀವನದಲ್ಲಿ ಅಜ್ಜ ಸೊಳ್ಳೆಯನ್ನೂ ಹುಡುಕುವುದಿಲ್ಲ, ಹುಡುಕುವವನಿಗೆ ಕಾಲೇಜು ಫೋಟೋನೂ ಸಿಗುವುದಿಲ್ಲ. ಅಲ್ಲಿಗೆ ಸತ್ಯ ಯಾವುದು, ವ್ಯಾಪಾರವಾ, ಸೃಜನಶೀಲ ಸಾಹಿತ್ಯ ಪ್ರಕಾರವಾ? ಬದುಕನ್ನು ಹೆಚ್ಚು ವ್ಯಾಪಾರವಾಗಿ ಮಾಡಿ, ಒಂದು ಬದುಕನ್ನು ಹೆಚ್ಚು ರೊಮ್ಯಾಂಟಿಕ್ಕೋ, ಅನ್‌ ರೊಮ್ಯಾಂಟಿಕ್ಕೋ ಆಗಿಸಿ ನಮಗೆ ಸುಳ್ಳು ಭರವಸೆ ಅಥವಾ ಭಯವನ್ನು ಮಾರಾಟ ಮಾಡುತ್ತಿರುತ್ತದೆ. ಅಲ್ಲಿಗೆ ನಮ್ಮ ಭಾವಕೋಶವನ್ನು ಇವತ್ತು ಮೀಟುವ ಮಾಧ್ಯಮ ಕಡೆಗೂ ಕನ್ನ ಕೊರೆಯುತ್ತಿರುವುದು ನಮ್ಮ ಐಶಾರಾಮಿ ಬಯಕೆಯ ಕೋಶಕ್ಕೆ ಮಾತ್ರ. ಅದನ್ನು ಒಮ್ಮೆ ಈ ರೊಮ್ಯಾಂಟಿಕ್‌ ಆದ ಚಿನ್ನದ ಸಲಿಕೆಯಿಂದ ಕೊರೆಯುತ್ತಲೇ ಒಳಗೆ ಎಂದೂ ಮುಗಿಯದ ಮನುಷ್ಯನ ಕನ್‌ಸ್ಯೂಮರಿಸಂ ಇದೆ.

ಕನ್ಸೂಮರಿಸಂ ಶಿಶುಗೆ ಬುದ್ಧಿ ಬಲಿಶಿಶು
ಆದರೆ ನಮ್ಮ ನಿಮ್ಮ ಬದುಕು ಇದರ ಮಧ್ಯೆ ತನ್ನ ಎಂದಿನ ವೇಗದಲ್ಲಿ, ಎಂದಿನ ಆವೇಗದಲ್ಲಿ, ಯಾವತ್ತಿನ ಉದ್ವೇಗ, ಅಶಾಂತಿ, ಅತೃಪ್ತಿ, ಸಣ್ಣ ಸಂತೋಷ, ಸಣ್ಣ ಅಸಮಾಧಾನಗಳಲ್ಲಿ ಬೀದಿಯಲ್ಲಿ ನಡೆದುಹೋಗುತ್ತಿರುವ ನೀಲಿ ಸೆರಗಿನ, ಸವೆದ ಹಿಮ್ಮಡಿಯ ಹೆಂಗಸಿನ ಥರ ಯಾವುದೋ ಕ್ರಾಸ್‌ನಲ್ಲಿ ಕಣ್ಮರೆಯಾಗುತ್ತದೆ. ಹಾಗೆ ಕಾಣಿಸಿದ್ದು ಮತ್ತು ಕಾಣಿಸದಾಗಿದ್ದು ಮಾತ್ರ ಸಹಜ ಸತ್ಯ.

ಆದರೆ ನಾವು ಬದುಕನ್ನು ಇವತ್ತು ಸಹಜ ಸತ್ಯದಿಂದಾಚೆ ತೆಗೆದುಕೊಂಡು ಹೋಗಿದ್ದಕ್ಕೇ ಸಾವು, ನೋವು, ನಿರಾಶೆ, ಹತಾಶೆ ಸಹಜವಾಗಿರುವ ಜೀವನ ಹೇಗಿರುತ್ತದೆ?ಗಂಡ ಬೆಳಿಗ್ಗೆ ಏಳುತ್ತಾನೆ, ಪೇಪರ್‌ ಬಂದಿದೆಯಾ ಎಂದು ನೋಡುತ್ತಾನೆ, “ಏ ಇವಳೇ ಕಾಫಿ ಆಯ್ತಾ’ ಅಂತ ಕೇಳುತ್ತಾನೆ. ಕೊಟ್ಟ ಕಾಫಿಯನ್ನು ಹೀರಿ ಪತ್ರಿಕೆ ಓದಿ ಮುಗಿಸುತ್ತಾನೆ, ಸ್ನಾನಕ್ಕೆ ನೀರು ಕಾಸಿಕೊಳ್ಳುತ್ತಾನೆ, ಮಗನ ಪುಸ್ತಕಗಳನ್ನು ಬ್ಯಾಗ್‌ಗೆ ತುಂಬಿಸಬಹುದು, ತುಂಬಿಸದಿರಬಹುದು. ತಿಂಡಿ ತಿಂದು ಆಫೀಸಿಗೆ ಹೊರಡುವುದರೊಂದಿಗೆ ಅವನ ಬೆಳಗಿನ ಸಹಜ ಬದುಕು ತೆರೆದುಕೊಳ್ಳುತ್ತದೆ. ಆದರೆ ಇಷ್ಟೊಂದು ಸಹಜ ವಿಚಾರವನ್ನು ಯಾಕೆ ಯಾರಾದರೂ ಪೋಯಟಿಕ್‌ ಮಾಡಬೇಕು? ಯಾಕೆಂದರೆ ನಮ್ಮ ಬದುಕಿನ ಸುತ್ತ ಹೆಣೆದ ಹಿತವಾದ ಸಂಗೀತದ ವ್ಯೂಹಕ್ಕೆ ಒಂದು ವಹಿವಾಟಿನ ತುರ್ತು ಇದೆ. ಅದರಿಂದ ಯಾರಿಗೋ ದೊಡ್ಡ ಮಟ್ಟದಲ್ಲಿ ಉಪಕಾರ ಆಗಲಿಕ್ಕಿದೆ. ಇಲಿಯ ಬೋನಿನ ಒಳಗೆ ಇಟ್ಟ ಬೆಲ್ಲದ ತುಂಡಿನಂತೆ, ಬೆಲ್ಲ ಕಣ್ಣರಳಿಸುವಂತೆ ಆಕರ್ಷಿಸುತ್ತಿದೆ, ಇನ್ನೇನು ಇಲಿ ಬಲೆಗೆ ಬೀಳಲಿದೆ.
ಹಾಗಾಗಿ ಬದುಕು ದಿನೇದಿನೇ ಎಷ್ಟೊಂದು ದುರ್ಬರವಾಗುತ್ತಿದೆಯೆಂದರೆ ತಾನು ಯಾಕಾದರೂ ಆಕಾಶದಲ್ಲಿ ಹಾರಬಾರದು, ಹನುಮಂತನೇ ಹಾರುವಾಗ ಅಂತ ಮಗು ಭಾವಿಸತೊಡಗುತ್ತದೆ. ಹುಲಿಯ ಜೊತೆಗೆ ಸೆಣೆಸಾಡಿ ಜಯಿಸಬಾರದೇಕೆ ತಾನು ಅಂತ ಚೋಟಾ ಭೀಮನ್ನು ನೋಡಿ ಮಗು ಭಾವಿಸುತ್ತದೆ. ಒಂದು ಅಂಗಡಿಯ ಸಣ್ಣ ಚಾಕೋಲೇಟಿನ ಒಳಗೆ ನಾಳೆಯ ದೊಡ್ಡ ಅನಾಹುತದ ಹೆಣವೊಂದು ಗೊತ್ತಾಗದಂತೆ ಮಲಗಿದೆ.
ಅದರ ವಾಸನೆ ಬರಬೇಕಾದ ನಮಗೆ ವ್ಯಾಪಾರ ಸೃಷ್ಟಿಸಿರುವ ಕನ್ಸೂಮರಿಸಂನ ಏರ್‌ಫ್ರೆಷ್‌ನರ್‌ನ ಘಮಘಮವೇ ಬರುತ್ತಿದೆ. ವಾಟೆನ್‌ ಐಡಿಯಾ ಸರ್‌ಜಿ!

ಬುದ್ಧಿಯ ಸುದ್ದಿ ಭಾವಕ್ಕೆ ತಲುಪುತ್ತದೆ
ಹಾಗಂತ ಇದೇ ಕನ್ಸೂಮರಿಸಂ ಅನ್ನುವುದು ಯಾವ ಕ್ಷಣದಲ್ಲೂ ಅಪ್ಪಟ ಅರಳಿ, ಕಲೆಯಾಗಿ ಬದುಕನ್ನು ಅರಳಿಸುತ್ತಲೂ ಹೋಗುತ್ತದೆ. ಅದನ್ನು ನಾವು ನೋಡುವ ಕಣ್ಣು ಹೊಂದಿರಬೇಕು. ಯಾವುದೋ ಪ್ರಾಡೆಕ್ಟ್ ಅನ್ನು ಪ್ರಮೋಟ್‌ ಮಾಡುವ ಒಂದು ಸಣ್ಣ ಸಿನಿಮಾ ಕೂಡ ನಮ್ಮನ್ನು ಅರಳಿಸಬಲ್ಲದು. ಕೆಲ ತಿಂಗಳ ಹಿಂದೆಯೇ ಇರಬೇಕು, ಸಣ್ಣ ಜಾಹೀರಾತೊಂದು ಯೂಟ್ಯೂಬ್‌ನಲ್ಲಿ ಹರಿದಾಡಿ ಸಿಕ್ಕಾಪಟ್ಟೆ ಜನಪ್ರಿಯವಾಯ್ತು. ಒಬ್ಬ ಮೊಬೈಲ್‌ನಲ್ಲೇನೋ ನೋಡುತ್ತಿದ್ದಾನೆ, ಅವನ ಪಕ್ಕ ಚಿತ್ರ ಬರೆಯುತ್ತಿರುವ ಮಗಳು ಮಾಯವಾಗಿ ಬರೇ ಬ್ರೆಷ್‌ ಚಿತ್ರ ಬಿಡಿಸುತ್ತಿದೆ. ಹುಡುಗ-ಹುಡುಗಿ ಒಟ್ಟಿಗೆ ಹೋಗುತ್ತಿರುವಾಗ ಹುಡುಗ ಮೊಬೈಲ್‌ ನೋಡುತ್ತಾ ನಡೆದಿದ್ದಾನೆ, ಪಕ್ಕದ ಹುಡುಗಿ ಕಾಣೆಯಾಗಿ ಅವಳ ಹೆಜ್ಜೆ ಗುರುತು ಮಾತ್ರ ಸಮುದ್ರ ತೀರದ ಮರಳ ಮೇಲೆ ಮೂಡುತ್ತಿದೆ. ಹೀಗೇ ಇನ್ನಷ್ಟು ಜೋಡಿಗಳ ಕತೆಗಳು. ಮೊಬೈಲ್‌ನಲ್ಲಿ ಸಕ್ರಿಯವಾಗಿರುವವನನ್ನು ಬಿಟ್ಟು ಉಳಿದ ವ್ಯಕ್ತಿಗಳು ಮಾಯವಾಗಿದ್ದಾರೆ. ಅವರೆಲ್ಲಾ ಮೊಬೈಲ್‌ನಿಂದ ಕಣ್ಣು ಕೀಲಿಸಿ ಪಕ್ಕದಲ್ಲಿ ನೋಡುತ್ತಲೇ ಮಾಯವಾದವರೆಲ್ಲಾ ಮತ್ತೆ ಮೂಡುತ್ತಾರೆ.

ನಾವು ಇವತ್ತು ನಮ್ಮ ಗ್ಯಾಡೆYಟ್ಸ್‌ ಜೊತೆ ಮಲಗುವುದಕ್ಕೆ, ತಿನ್ನುವುದಕ್ಕೆ, ವ್ಯವಹರಿಸುವುದಕ್ಕೆ ಶುರು ಮಾಡಿದಮೇಲೆ ನಮ್ಮ ಪಕ್ಕದವರೆಲ್ಲಾ ಮಾಯವಾಗುತ್ತಿದ್ದಾರೆ. ಅವರು ನಮ್ಮ ಜೊತೆಗೇ ಇದ್ದರೂ ನಮ್ಮ ಪಾಲಿಗೆ ಅವರು, ಅವರ ಪಾಲಿಗೆ ನಾವು ಮಾಯವಾದಂತೇ. ಇದಕ್ಕೂ ಮೀರಿ, ಇದಕ್ಕೂ ಮುಂದೆ ಹೋಗಿ ಸೋಶಿಯಲ್‌ ಮೀಡಿಯಾದಲ್ಲೇ ಇದ್ದರೂ ಅವರು ನಮ್ಮಿಂದ ದೂರಾಗುತ್ತಿದ್ದಾರೆ, ನಾನು ಅವರಿಂದ ದೂರ ಉಳಿಯುತ್ತಿದ್ದೇನೆ ಅನ್ನುವ ಭಯ. ಫೇಸ್‌ಬುಕ್‌ ಆನ್‌ ಆಗಿರುತ್ತದೆ, ಚಾಟ್‌ ಬಟನ್‌ ಹಸಿರಾಗಿರುತ್ತದೆ, ಲೈಕುಗಳ ಸಂಖ್ಯೆ ನೂರು, ಸಾವಿರಗಳನ್ನು ದಾಟುತ್ತಿರುತ್ತವೆ, ಶೇರು, ಪೋಕಿಂಗ್‌, ಕಾಮೆಂಟ್‌, ಟ್ಯಾಗ್‌ಗಳೆಂಬ ಫೇಸ್‌ಬುಕ್‌ ಪ್ರಪಂಚದಲ್ಲಿ ನಾವೆಲ್ಲಾ ಕಣ್ಣು, ಬಾಯಿ, ಕಾಲುಗಳಿಲ್ಲದವರಂತೆ, ಬರೇ ಕೈಬೆರಳುಗಳಷ್ಟನ್ನೇ ಕೊಟ್ಟ ಹಾಗೆ ಹಾರಾಡುತ್ತಿರುತ್ತೇವೆ. ಅಂಥ ಹಾರಾಟದ ಪ್ರಪಂಚದಲ್ಲಿ ಹೆಚ್ಚು ಜನ ಸಕ್ರಿಯವಾಗಿರೋರೂ ಹುಡುಗ-ಹುಡುಗೀರೇ.

ಅದು ನಿಮ್ಮೂರ ಸೇರಿದೆಯಾ? ಆದರೂ ನಮ್ಮ ಈ ಜಾಹೀರಾತು ಪ್ರಪಂಚ ಮನುಷ್ಯರಿಗೆ ಹತ್ತಿರವಾಗುತ್ತದೆ, ನಿಜ. ಆದರೆ ಅವು ನಮ್ಮ ಕಾಲವನ್ನು, ಪ್ರದೇಶವನ್ನು, ಪರಿಸರವನ್ನು ಸಂಪೂರ್ಣ ಪ್ರತಿಫ‌ಲಿಸುತ್ತದಾ?
ಈ ಪ್ರಶ್ನೆ ಪ್ರತಿ ಸಲ ಎದುರಾಗುತ್ತದೆ. ಜಾಹೀರಾತಿನಷ್ಟೇ ಆಕರ್ಷಕ ಇನ್ನಷ್ಟು ವಿಚಾರಗಳೆಂದರೆ ನಾವು ನೋಡುವ ಟಿವಿ ಧಾರಾವಾಹಿ, ಸಿನಿಮಾ, ನ್ಯೂಸು. ಚರ್ಚೆ. ಧಾರಾವಾಹಿಗಲಾಗಲೀ,  ಪಾತ್ರಗಳಾಗಲೀ, ನ್ಯೂಸ್‌ ಚಾನಲ್‌ಗ‌ಳ ಚರ್ಚೆಯಾಗಲೀ- ಅವು ಒಂದು ಗ್ರಾಮೀಣ ಪರಿಸರವನ್ನು ಕಟ್ಟಿಕೊಡುತ್ತದಾ? ಮೊನ್ನೆ ಹೊಸ ವರ್ಷ ಮುಗಿಯಿತು, ಟಿವಿ ಚಾನಲ್‌ಗ‌ಳಲ್ಲಿ ಪಾರ್ಟಿ ಮಾಡಿದ್ದನ್ನು ರಾತ್ರಿಯೆಲ್ಲಾ ಪ್ರಸಾರ ಮಾಡಿದರು, ಬ್ರಿಗೇಡ್‌ ರಸ್ತೆಯಲ್ಲಿ ಕುಣಿದಾಡುವ ಉನ್ಮತ್ತರನ್ನು ಕ್ಯಾಮರಾ ಫೋಕಸ್‌ ಮಾಡಿತು, ಅದೆಲ್ಲಕ್ಕೂ ಲೈವ್‌ ಹೆಸರನ್ನು ನೇರವಾಗಿ ರಾಯಚೂರು ಬೀದಿಯ ಮನೆಗೂ ಬಲವಂತವಾಗಿ ಪ್ರಸಾರ ಮಾಡಲಾಯಿತು. ಇದಕ್ಕೆ ವ್ಯತಿರಿಕ್ತವಾಗಿ ನಮ್ಮದೇ ಪ್ರಕೃತಿಯ ಭಾಗವಾದ ಸಂಕ್ರಾಂತಿ ಕಾಲಿಟ್ಟಿದೆ, ಪ್ರಕೃತಿಯ ಬದಲಾವಣೆಗಳ ಜೊತೆ ಬಲವಾದ, ಹತ್ತಿರದ ಸಂಬಂಧ ಉಳ್ಳ ಒಬ್ಬ ರೈತನಿಗೆ ಈ ಕನ್‌ ಸ್ಯೂಮರಿಸಂ ಏನು ಕೊಡುತ್ತದೆ? ಸ್ವಲ್ಪ ಯೋಚನೆ ಮಾಡಿ.

ಇತ್ತೀಚೆಗೆ ಒಂದು ಹಳ್ಳಿಗೆ ಹೋಗಿದ್ದಾಗ ಅವರು ಪತ್ರಿಕೆಗಳ, ಟಿವಿ ಮಾಧ್ಯಮಗಳಲ್ಲಿ ಬರುವ ವರ್ತಮಾನಗಳ, ಧಾರಾವಾಹಿಗಳ ಸರಕಿನ ಬಗ್ಗೆ ಮಾತಾಡುತ್ತಿದ್ದರು. ಅವರಿಗೆ ಆ ಸರಕಿನಲ್ಲಿ ಶೇ. 50ರಷ್ಟೂ ಅರ್ಥವಾಗುವುದಿಲ್ಲ, ಅಲ್ಲಿ ಬಳಕೆಯಾಗುವ ಇಂಗ್ಲಿಷ್‌ ಅರ್ಥವಾಗದೇ ಇರುವುದು ಒಂದಾದರೆ, ಅವರು ಮಾತಾಡುತ್ತಿರುವ ವಿಷಯ ಅರ್ಥವಾಗದೇ ಇರುವುದು ಇನ್ನೊಂದು ವಿಷಯ. ನೀವು ಇದನ್ನು ಯಾರಿಗೋಸ್ಕರ ಸಿದ್ಧಪಡಿಸುತ್ತೀರಿ, ಯಾರು ನಿಮ್ಮ ಗುರಿ, ಯಾರಿಂದ ಇದು ನಿಮಗೆ ಹಣವನ್ನು,ಜಾಹೀರಾತನ್ನು ತಂದುಕೊಡುತ್ತದೆ ಅಂತ ಅವರು ವಿಚಾರಿಸಿಕೊಳ್ಳುತ್ತಿದ್ದರು. ಅವರ ಪ್ರಕಾರ ನಮ್ಮದು ಹಳ್ಳಿಗಳ ರಾಷ್ಟ್ರ. ಹಳ್ಳಿಗಳ ರಾಷ್ಟ್ರ ಆಗಿರುವುದರಿಂದ ಭಾಷೆ ಪ್ರಾದೇಶಿಕವಾಗಿರುವುದಷ್ಟೇ ಅಲ್ಲ, ಅದರಲ್ಲಿ ಬರುವ ಕಂಟೆಂಟ್‌ಗಳೂ ಹಳ್ಳಿಯನ್ನು ಉದ್ದೇಶಿಸಿ ಇರಬೇಕಲ್ಲಾ ? ಒಂದು ರಾಜ್ಯದ  ನಸಂಖ್ಯೆಯಲ್ಲಿ ಶೇಕಡ 70ರಷ್ಟು ಹಳ್ಳಿಗಳೇ ಆವರಿಸಿಕೊಂಡಿರುವಾಗ ನಾವು ನೋಡುವ ಕಾರ್ಯಕ್ರಮಗಳಾಗಲೀ, ನಾವು ಮಾರುವ ಪ್ರಾಡೆಕ್ಟ್ಗಳಾಗಲೀ ಗ್ರಾಮೀಣ ಪ್ರದೇಶಗಳ ಅಗತ್ಯಕ್ಕೆ ತಕ್ಕುದಾಗಿಯೇ ಇರಬೇಕಲ್ಲವೇ? ಹೌದು ಅನ್ನಿಸಿ ಒಂದು ವಾರ ಕುಳಿತು ಕಾರ್ಯಕ್ರಮಗಳನ್ನೆÇÉಾ ಗಮನಿಸುತ್ತಾ ಕುಳಿತರೆ ಅದರಲ್ಲಿ ಶೇಕಡ 50ಕ್ಕಿಂತ ಹೆಚ್ಚು ನಮ್ಮ ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷಿಸಿದ ಕಾರ್ಯಕ್ರಮ, ಮಾಹಿತಿಗಳೇ ಅಂತ ಅನ್ನಿಸಿತು. ಹಳ್ಳಿಗಳನ್ನು ಕಿರುತೆರೆ ಒಂದು ಮಟ್ಟಿಗೆ ಬಳಸಿಕೊಳ್ಳುವಂತೆ ನಾಟಕ ಆಡುತ್ತಿರುವುದು ಕೇವಲ ಹಳ್ಳಿಯ ಕತೆಯ ಟ್ರಾಕ್‌ಗಳನ್ನು ತಮ್ಮ ಧಾರಾವಾಹಿಯಲ್ಲಿ ತುರುಕಿಸುವ ಮೂಲಕ, ಯಾವುದೋ ಒಂದು ಕಲ್ಪಿ$ತ ಹಳ್ಳಿ ಸೊಗಡಿನ ಭಾಷೆಯನ್ನು ಬಳಸಿಕೊಳ್ಳುವ ಮೂಲಕ. ಅದು ಕೂಡ ಹಳ್ಳಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಾಟಕ ಆಡುತ್ತಾ ಅವರನ್ನು ಮನರಂಜಿಸುವುದಷ್ಟೇ ಅವುಗಳ ಉದ್ದೇಶವೇ ಹೊರತೂ ಅವು ಹಳ್ಳಿಯನ್ನು ನಿಜವಾಗಿಯೂ ತನ್ನದನ್ನಾಗಿಸಿಕೊಂಡಿಲ್ಲ.

ಇನ್ನು ದಿನವಿಡೀ ಪ್ರಸಾರ ಕಾಣುವ ಸುದ್ದಿ ಸಾವು, ಹೊಡೆದಾಟ, ಅಕ್ರಮ, ಮನರಂಜನೆಗಳಾಚೆ ಗ್ರಾಮಗಳನ್ನು ತನ್ನ ಜವಾಬ್ದಾರಿಯನ್ನಾಗಿ ಮಾಡಿಕೊಂಡಿಲ್ಲ. ಅಲ್ಲಿ ನಡೆಸಲಾಗುವ ಸುದ್ದಿಯೇತರ ಕಾರ್ಯಕ್ರಮಗಳೂ ಅಷ್ಟೇ, ಅದರಲ್ಲಿ ಮನರಂಜನೆಯ ಹೊರತಾಗಿ ಆರೋಗ್ಯದ ಕೆಲ ಮಾಹಿತಿಗಳ ಹೊರತಾಗಿ ಎಲ್ಲೂ ಗ್ರಾಮವನ್ನು ಉದ್ದೇಶಿಸಿರುವುದಲ್ಲ. ಗ್ರಾಮೀಣ ಆರೋಗ್ಯವನ್ನಾಗಲೀ, ವ್ಯವಸ್ಥೆಯನ್ನಾಗಲೀ, ಶೌಚವನ್ನಾಗಲೀ, ಶಿಕ್ಷಣ, ಕೃಷಿಗಳನ್ನಾಗಲೀ ಚರ್ಚಿಸುವ ಒಂದು ಕಾರ್ಯಕ್ರಮವನ್ನು ನೀವು ಯಾವತ್ತಾದರೂ ಮುಖ್ಯ ಖಾಸಗಿ ಚಾನಲ್‌ಗ‌ಳಲ್ಲಿ ನೋಡಿದ್ದು ನೆನಪಿದೆಯಾ, ನೆನಪಿಸಿಕೊಳ್ಳಿ. ಜಾಹೀರಾತುಗಳೂ ಅಷ್ಟೇ, ಅಲ್ಲಿ ಕಾಣುವುದು ವೈಭವೋಪೇತ ವಿಚಾರಗಳೆಲ್ಲಾ  ಕೇವಲ ಮನರಂಜನೆಗೆ ಮಾತ್ರ ಸೀಮಿತ. ಅದರಲ್ಲಿ ಮಾರಿಬಿಡಿ ಅಂತ ಹೇಳಿದರೆ ಕೊಳ್ಳೆಗಾಲದ ಗಲ್ಲಿಯವನಿಗೆ ಉಪಯೋಗಕ್ಕೆ ಬರುವುದಿಲ್ಲ, ಸೆಟ್‌ವೆಟ್‌ ಅಂತ ಯಾವುದೋ ಹುಡುಗಿ ಮಾದಕವಾಗಿ ಪರ್ಫ್ಯೂಮ್‌ ಹಾಕಿಕೊಂಡರೆ ಶಿಕಾರಿಪುರದ ಒಳಗಿರುವ ಯಾವುದೋ ಹಳ್ಳಿಯ ರೈತನಿಗೆ ಅದರಿಂದೇನೂ ಪ್ರಯೋಜನವಾಗಲೀ, ಮನರಂಜನೆಯಾಗಲೀ ದೊರೆಯುವುದಿಲ್ಲ.
ಒಟ್ಟಾರೆ ವಿಷಯ ಅಷ್ಟೇ, ಮಾಧ್ಯಮ, ಮನರಂಜನೆ, ಮಾರುಕಟ್ಟೆಗಳೆಲ್ಲಾ  ಗ್ರಾಮವನ್ನು ನಿಧನಿಧಾನವಾಗಿ ಕಡೆಗಣಿಸುತ್ತಾ ಹೋಗುತ್ತಿದೆ. ಗ್ರಾಮಗಳ ದೇಶ ಕ್ರಮೇಣ ಗ್ರಾಮನಿರ್ಲಕ್ಷಿತ, ಕೃಷಿ-ರೈತ ಅಪ್ರಸ್ತುತ ದೇಶವಾಗಿ ರೂಪುಗೊಳ್ಳುತ್ತಿದೆ. ಎಲ್ಲೋ  ಆಯಾ ಪ್ರದೇಶದ ಎಂಪಿ, ಎಂಎ ಲ್ಲೆಗಳು ರಸ್ತೆ ಕಾಮಗಾರಿ ಮಾಡುವ ನಾಟಕ ಆಡುವುದರ ಹೊರತಾಗಿ ಸರ್ಕಾರ ಕೂಡ ಗ್ರಾಮವನ್ನು ಮುಂದಿನ ಇಪ್ಪತ್ತು ವರ್ಷಗಳನ್ನು ಅಭಿವೃದ್ಧಿಯ ದೃಷ್ಟಿಯಿಂದ ಕಲ್ಪಿ$ಸಿಕೊಳ್ಳುವ ದೂರದರ್ಶಿತ್ವವನ್ನು ತೋರಿಸುತ್ತಿಲ್ಲ. ಹಾಗಾಗಿ ಯಾವತ್ತೂ ಹಳ್ಳಿಗೆ ಹೋಗುವ ಬಸ್ಸಿನಲ್ಲಿ ದಡದಡ ಅಂತ ಜಂಪ್‌ ಆಗುತ್ತಾ ಹಳ್ಳಿಗೆ ಹೋಗಿ ಬೆಳಗಿನ ಜಾವ ಇಳಿದು ಕಣ್ಣುಜ್ಜದ ಪೇಟೆ ಗಮಾರನಂತೆ, ಸರ್ಕಾರ,ಮಾಧ್ಯಮ, ಮಾರುಕಟ್ಟೆಗಳೂ ಗ್ರಾಮಕ್ಕೆ ಕುರುಡಾಗಿವೆ.

ಇದನ್ನೇ ಯಶ್‌ ಇತ್ತೀಚೆಗೆ ಪ್ರತಿಪಾದಿಸಿದ್ದು. ಸುದ್ದಿಗಳನ್ನು ನಾವು ಭಿತ್ತರಿಸುವ ಭರದಲ್ಲಿ ಅದನ್ನು ಮನರಂಜನೆಯಾಗಿ ನೋಡಿ, ಸಮಸ್ಯೆಗಳನ್ನು ಕಡೆಗಣಿಸಿಬಿಡಲಾಗಿದೆ. ಹಾಗಾಗಿ ತೀರಾ ನಮ್ಮ ಅಸ್ತಿತ್ವಕ್ಕೆ ಪೆಟ್ಟು ಬೀಳುವಂಥ ಒಂದು ಸಮಸ್ಯೆಯೂ ನಮ್ಮ ಈ ಕನ್ಸೂಮರಿಸಂ ಕಾಲದಲ್ಲಿ ಪ್ರಾಡೆಕ್ಟ್ ಆಗಿಬಿಟ್ಟಿದೆ. ಅದನ್ನು ಬದಲಿಸುವ ಕಾಲ ಬಂದಿದೆ ಅಂತಲೇ ಹೋದ 2016ರಲ್ಲಿ ಯಶ್‌ ಪ್ರತಿಪಾದಿಸಿದ್ದು.

ಗ್ರಾಮ ಹೇಗೆ ಪ್ರತಿಕ್ರಿಯಿಸಬೇಕು?

ಭಾವದಿಂದ ಶುರುಮಾಡಿ, ಬುದ್ಧಿಯನ್ನು ಉದ್ದೀಪಿಸುವ ಇಂಥ ಕನ್ಸೂಮರಿಸಂ ಕಾಲಕ್ಕೆ ನಮ್ಮ ಗ್ರಾಮೀಣ ಪರಿಸರ ಹೇಗೆ ಪ್ರತಿಕ್ರಿಯಿಸುತ್ತದೆ, ಹೇಗೆ ಪ್ರತಿಕ್ರಿಯಿಸಬೇಕು? ಈಗ ಹಲವು ಆಶಾಕಿರಣಗಳು ಈ ನಮ್ಮನ್ನು ತಾಕುತ್ತವೆ. ಇಂಥ ಕಾಲದಲ್ಲಿ ಸಾಮಾನ್ಯರ ಉದ್ದಾರದ ಮಾತನ್ನು ಪ್ರದಾನ ಮಂತ್ರಿಗಳು ಹೇಳುತ್ತಿದ್ದಾರೆ, ಡಿಮಾನಟೈಸೇಶನ್‌, ಶ್ರೀಸಾಮಾನ್ಯನ ಆಶಾಕಿರಣವೆಂದು ಬಿಂಬಿಸಲಾಗುತ್ತಿದೆ, ಆದಷ್ಟು ಗ್ರಾಮ ಭಾರತವನ್ನು ಬಿಂಬಿಸುವಂಥ ಕೆಲಸ ಆಗಬಬೇಕೆಂಬ ಕಳಕಳಿಯೂ ಕೇಂದ್ರ ಸರ್ಕಾರದ ಕೆಲವು ಕೆಲಸಗಳಲ್ಲಿ ತೋರುತ್ತಿದೆ. ಅದರಲ್ಲೊಂದು “ಸ್ಕಿಲ್‌ ಇಂಡಿಯಾ’ ಪ್ರಯೋಗ. ಇತ್ತೀಚೆಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸಿ ಮಾತಾಡುತ್ತಾ ಗ್ರಾಮೀಣ ಪ್ರದೇಶಗಳ ಕೆಲ ಸಮಸ್ಯೆಗಳನ್ನೂ ಬಿಚ್ಚಿಡುತ್ತಿದ್ದರು. ಎಲ್ಲ ದೇಶಗಳೂ ಅಭಿವೃದ್ಧಿ ಸಾಧಿಸಿದ್ದು ಗ್ರಾಮಗಳೇ. ಆ ಗ್ರಾಮದಲ್ಲೊಬ್ಬ ಅದ್ಭುತ ಗಾಯಕ ಇದ್ದಾನೆ, ಅದ್ಭುತ ಬಡಗಿ ಇದ್ದಾನೆ, ಅದ್ಭುತ ಕಮ್ಮಾರ, ಚಮ್ಮಾರ, ಹಾವಾಡಿಗ ಇದ್ದಾನೆ. ಆತನ ಸ್ಕಿಲ್‌ ಯಾವ ವಿಶ್ವವಿದ್ಯಾಲಯಗಳಲ್ಲೂ ಹೇಳಿಕೊಡುವಂಥದ್ದಲ್ಲ, ಯಾರೂ ಕಲಿತು ಪರಿಣಿತನಾಗುವಂಥದ್ದಲ್ಲ, ಆ ಕೌಶಲ್ಯವನ್ನು ಬೆಳೆಸಿ, ಅದರಿಂದ ಉದ್ದಾರವಾಗಬೇಕು ಅಂತ ಅವರು ಹೇಳುತ್ತಿದ್ದರು. ಬಡಲರ ಉದ್ದಾರ ಅವರಿಗೆ ಅನ್ನ, ಅಕ್ಕಿ, ಹಾಲುಗಳನ್ನು ಉಚಿತವಾಗಿ ಹಂಚುವುದರಲ್ಲಿಲ್ಲ ಅಂತ ಪ್ರತಿಪಾದಿಸಿದ್ದರು.

ಇಂಥ ಕಾಲದಲ್ಲಿ ನಾವು ನಿಂತಿದ್ದೇವೆ, 2017 ಬಂದಿದೆ, ಡಿಮಾನಿಟೈಸೇಶನ್‌ ಮಳೆ ನಿಂತು, ಸಣ್ಣ ಹನಿ ಹನಿ ರೂಪದಲ್ಲಿ ಅಲ್ಪಸ್ವಲ್ಪ ಸಮಸ್ಯೆಗಳು ತೊಟ್ಟಿಕ್ಕುತ್ತಿವೆ. ಇಂಥ ಹೊತ್ತಿಗೆ ನಾನು ಜಾಹೀರಾತಿನ ಮೋಹಪರವಶ ಬಲೆಗೂ ಬೀಳದೇ, ಧಾರಾವಾಹಿಗಳ ಜಗತ್ತಿನಲ್ಲೂ ಕಳೆದು ಹೋಗದೇ, ನಮ್ಮ ಪ್ರಪಂಚದ್ದೇ ಅಲ್ಲ ಅನ್ನುವಂತೆ ಕಾಣುವ ನ್ಯೂಸ್‌ ಚಾನಲ್‌ಗ‌ಳ ಸುದ್ದಿ ಭರಾಟೆಗೂ ಸಿಕ್ಕಿ ಹಾಕಿಕೊಳ್ಳದೇ ನಮ್ಮ ಗ್ರಾಮೋದ್ಧಾರ, ನಮ್ಮೊàದ್ಧಾರ ನಾವೇ ಆಗುವುದಕ್ಕೆ ಸಾಧ್ಯ.

-ವಿಕಾಸ ನೇಗಿಲೋಣಿ

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.