ಇಲ್ಲಿ ಎಲ್ರೂ ನಮ್ಮವರು:ಅವನು ವಿದೇಶಿಗ ಅನ್ನುವ ಭಾವನೆ ಇಲ್ಲ


Team Udayavani, Apr 8, 2017, 10:32 AM IST

29.jpg

ಇತ್ತೀಚೆಗೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿಯ ಸಂದರ್ಭದಲ್ಲಿ ಎರಡೂ ತಂಡಗಳ ಆಟಗಾರರ ನಡುವೆ ನಡೆಯುತ್ತಿದ್ದ ಸ್ಲೆಜಿಂಗ್‌ ಭಾರೀ ಸುದ್ದಿ ಮಾಡುತ್ತಿತ್ತು. ಆಸೀಸ್‌ ಅಭಿಮಾನಿಗಳು ಸ್ಮಿತ್‌ ಪಡೆಗೆ, ಭಾರತೀಯ ಅಭಿಮಾನಿಗಳು ಕೊಹ್ಲಿ ಪಡೆಗೆ ಬೆಂಬಲವಾಗಿ ನಿಂತಿದ್ದರು. ಆದರೆ ಐಪಿಎಲ್‌ನಲ್ಲಿ ಎಲ್ಲಾ ನಮ್ಮವರು! ಇಲ್ಲಿ ನಮ್ಮ ಬೆಂಬಲ ತಂಡಕ್ಕೋ? ಸ್ಟಾರ್‌ಗಳಿಗೋ? ಅದು 2008ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯ. ನಿಯಮದ ಪ್ರಕಾರಹೋದರೆ ಕರ್ನಾಟಕದ ಕ್ರಿಕೆಟ್‌ ಅಭಿಮಾನಿಗಳೆಲ್ಲ ಆರ್‌ಸಿಬಿ ತಂಡಧಿವನ್ನು ಬೆಂಬಲಿಸಬೇಕಾಗಿತ್ತು. ಆದರೆ ಕ್ರೀಡಾಂಗಣದಲ್ಲಿದ್ದ ಎಷ್ಟೋ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ಪರ ಕೂಗುತ್ತಿದ್ದರು. ಕಾರಣ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌. ಹೌದು, ಸಚಿನ್‌ ಮುಂಬೈ ತಂಡದ ನಾಯಕರಾಗಿದ್ದರು. ಹೀಗಾಗಿ ಸಚಿನ್‌ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ಗೆಲ್ಲುವುದನ್ನೇ ಬಯಸುತ್ತಿದ್ದರು.

ತಾರಾ ಆಟಗಾರನ ಹಿಂದೆ ಅಭಿಮಾನಿಗಳು
ಐಪಿಎಲ್‌ನಲ್ಲಿ ಎಲ್ಲಾ ತಂಡದಲ್ಲಿಯೂ ಸ್ಟಾರ್‌ ಆಟಗಾರರಿದ್ದಾರೆ. ಸ್ಟಾರ್‌ಗಳು ಅಬ್ಬರದ ಬ್ಯಾಟಿಂಗ್‌ ಮಾಡುತ್ತಾರೆ, ಪಂದ್ಯದ ದಿಕ್ಕನ್ನೆ ಬದಲಿಸುತ್ತಾರೆ. ಕೊನೆ ಎಸೆತದಲ್ಲಿ ಗೆಲುವನ್ನು ಕಸಿಯುವ ಫಿನಿಷರ್‌ಗಳಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರ ಯಾವ ತಂಡದಲ್ಲಿ ಆಡುತ್ತಾನೋ ಅದೇ ತಂಡಕ್ಕೆ ಜೈ ಕಾರ ಹಾಕುತ್ತಾರೆ ಅಭಿಮಾನಿಗಳು. ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್ ಆರ್‌ಸಿಬಿ ತಂಡದಲ್ಲಿದ್ದಾರೆ. ಈ ಮೂವರು ಆಟಗಾರರಿಗೂ ವಿಶ್ವಾದ್ಯಂತ ದೊಡ್ಡ ಅಭಿಮಾನಿ ವರ್ಗವಿದೆ. ನೋ ಟೌಟ್‌, ಈ ಬಾರಿ ಹೆಚ್ಚಿನ ಅಭಿಮಾನಿಗಳ ಬೆಂಬಲ ಆರ್‌ಸಿಬಿ ತಂಡಕ್ಕಿರುತ್ತದೆ. ಉಳಿದಂತೆ ಪುಣೆಯಲ್ಲಿ ಧೋನಿ, ಸ್ಮಿತ್‌. ಹೈದರಾಬಾದ್‌ನಲ್ಲಿ ಯುವರಾಜ್‌ ಸಿಂಗ್‌, ಡೇವಿಡ್‌ ವಾರ್ನರ್‌. ಮುಂಬೈನಲ್ಲಿ ರೋಹಿತ್‌ ಶರ್ಮಾ, ಕೈರನ್‌ ಪೊಲಾರ್ಡ್‌. ಕೋಲ್ಕತ್ತಾದಲ್ಲಿ ಗಂಭೀರ್‌, ರಾಬಿನ್‌ ಉತ್ತಪ್ಪ. ಪಂಜಾಬ್‌ನಲ್ಲಿ ಡೇವಿಡ್‌ ಮಿಲ್ಲರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌. ಗುಜರಾತ್‌ನಲ್ಲಿ ಸುರೇಶ್‌ ರೈನಾ….ಹೀಗಾ ಎಲ್ಲಾ ಫ್ರಾಂಚೈಸಿಯಲ್ಲಿಯೂ ಸ್ಟಾರ್‌ ಆಟಗಾರರು ಸಿಗುತ್ತಾರೆ. ಒಂದು ಮನೆಯಲ್ಲಿ ಒಬ್ಬ ತಂದೆ ಇಬ್ಬರು ಮಕ್ಕಳನ್ನು ಹೊಂದಿದ್ದರೆ, ಐಪಿಎಲ್‌ ವಿಷಯದಲ್ಲಿ ಮಾತ್ರ ಮನೆಯೊಂದು ಮೂರುಬಾಗಿಲು ಎನ್ನುವಂತೆ ಮೂವರದ್ದು ಒಂದೊಂದು ತಂಡವಾಗಿರುತ್ತದೆ.

ಅಭಿಮಾನಿಗಳಿಗೆ 47 ದಿನದ ಹಬ್ಬ
ಏ.5 ರಿಂದ ಆರಂಭವಾದ ಐಪಿಎಲ್‌ ಅಂತ್ಯವಾಗುವುದು ಮೇ 21ಕ್ಕೆ. ಹೀಗಾಗಿ 47 ದಿನಗಳ ಕಾಲ ಅಭಿಮಾನಿಗಳ ಪಾಲಿಗೆ ಭರ್ಜರಿ ಹಬ್ಬ. ಬಿಸಿಲಿನ ಝಳ ಏರುತ್ತಿರುವಂತೆ ಕ್ರಿಕೆಟ್‌ ಜ್ವರ ಕೂಡ ಏರುತ್ತಿರುತ್ತದೆ. ಪ್ರತಿ ಬಾರಿ ಐಪಿಎಲ್‌ ಆರಂಭವಾದಾಗಲೂ ಈ ಬಾರಿ ಐಪಿಎಲ್‌ ಹವಾ ಅಷ್ಟೇನು ಇಲ್ಲ ಎನ್ನುತ್ತಲೇ ಆರಂಭವಾಗುತ್ತದೆ. ನಿಧಾನಕ್ಕೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಲಾರಂಭಿಸುತ್ತಾರೆ. ಹೀಗಾಗಿ ಕೊನೆಯ ಹಂತದಲ್ಲಿ ಮತ್ತಷ್ಟು ಕೌತುಕ, ಕುತೂಹಲ ಹುಟ್ಟಿಸಿರುತ್ತದೆ.

ಕೊನೆಯ ಎಸೆತದವರೆಗೂ ಕುತೂಹಲ
ಐಪಿಎಲ್‌ ಪಂದ್ಯಗಳು ಅಭಿಮಾನಿಗಳನ್ನು ಕೊನೆಯ ಎಸೆತದವರೆಗೂ ಕ್ರೀಡಾಂಗಣದಲ್ಲಿ ಹಿಡಿದಿಡುತ್ತವೆ. ಯಾವ ಸಮಯದಲ್ಲಿ ಪಂದ್ಯ ತನ್ನ ದಿಕ್ಕನ್ನು ಬದಲಿಸುತ್ತದೆ ಎಂದು ಹೇಳಲಾಗದು. ಎಂದೂ ಕೇಳಿರದ ಆಟಗಾರನೊಬ್ಬ ಕೆಳ ಕ್ರಮಾಂಕದಲ್ಲಿ ಬಂದು ಸ್ಟಾರ್‌ ಬೌಲರ್‌ಗೆ ಸಿಕ್ಸರ್‌ ಬಾರಿಸುತ್ತಾನೆ. ಪಂದ್ಯದ ಗೆಲುವನ್ನೇ ಕಸಿದು ಬಿಡುತ್ತಾನೆ. ಒಂದೇ ದಿನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್‌ ಆಗಿ ಬಿಡುತ್ತಾನೆ. ಹೀಗಾಗಿ ಇಲ್ಲಿ ಯಾವ ಆಟಗಾರರನ್ನು ಕಡೆಗಣಿಸಲಾಗದು.

ಕ್ರಿಸ್‌ಗೆàಲ್‌  ಸಿಕ್ಸ್‌ಗೆ ಎಲ್ಲರೂ ಸಂಭ್ರಮಿಸುತ್ತಾರೆ
ಒಬ್ಬ ಬಲಾಡ್ಯ ಕ್ರಿಕೆಟಿಗನಾಗಿರುವ ಕ್ರಿಸ್‌ ಗೇಲ್‌ಗೆ ಭಾರತದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚು. ಗೇಲ್‌ ಸಿಕ್ಸ್‌ ಹೊಡಿಬೇಕು ಆದರೆ ಆರ್‌ಸಿಬಿ ಗೆಲ್ಲಬಾರದು ಅನ್ನುತ್ತಾರೆ ಇತರೆ ಫ್ರಾಂಚೈಸಿ ತಂಡದ ಅಭಿಮಾನಿಗಳು. ಕ್ರೀಸ್‌ನಲ್ಲಿ ಗೇಲ್‌ ಇದ್ದಾರೆ ಅಂದರೆ ಅಭಿಮಾನಿಗಳಿಗೆ ಹಬ್ಬ, ಎದುರಾಳಿ ತಂಡದ ಬೌಲರ್‌ಗಳಿಗೆ ಬೆವರಿಳಿಯುತ್ತೆ. ಸ್ಕೋರ್‌ ಮಾತ್ರ ಏರುತ್ತಿರುತ್ತದೆ.

ನಮ್ಮವರೇ ವಾಗ್ವಾದ ನಡೆಸುತ್ತಾರೆ
ಐಪಿಎಲ್‌ನಲ್ಲಿ ಇದೊಂದು ದೊಡ್ಡ ಅಪಾಯ. ರಾಷ್ಟ್ರೀಯ ತಂಡದಲ್ಲಿ ಒಟ್ಟಿಗೆ ಆಡಿದವರು ಇಲ್ಲಿ ಬೇರೆ ಬೇರೆ ಫ್ರಾಂಚೈಸಿಗಳ ತಂಡದಲ್ಲಿ ಆಡುತ್ತಾರೆ. ಎಷ್ಟೋ ಸಂದರ್ಭದಲ್ಲಿ ಇವರೇ ವಾಗ್ವಾದ ನಡೆಸುತ್ತಾರೆ. ಈ ವಾಗ್ವಾದ ನಂತರವೂ ಬುದಿಮುಚ್ಚಿದ ಕೆಂಡದಂತಿರುತ್ತದೆ. ಆಮೇಲೆ ಸಮಯ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಟಾಂಗ್‌ ನೀಡುತ್ತಾರೆ. ಈ ಹಿಂದೆ ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌ ಮತ್ತು ಹರ್ಭಜನ್‌ ಸಿಂಗ್‌, ಶ್ರೀಶಾಂತ್‌ ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸಿದ್ದನ್ನು ನೋಡಿದ್ದೇವೆ. ಗಂಭೀರ್‌ ಮತ್ತು ಕೊಹ್ಲಿ ನಡುವಿನ ಸಂಬಂಧ ಇನ್ನೂ ಸರಿಯಾದಂತಿಲ್ಲ. ಆದರೆ ಸಚಿನ್‌, ದ್ರಾವಿಡ್‌, ಗಂಗೂಲಿ 
ಅಂತಹ ಹಿರಿಯ ಆಟಗಾರರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡದಲ್ಲಿ ಆಡಿದರೂ ವಾಗ್ವಾದ ನಡೆಸಿದವರಲ್ಲಿ. ಅವರಲ್ಲಿ ಪ್ರೌಢಿಮೆ ಇತ್ತು. ಇಂದಿನ ಆಟಗಾರರಲ್ಲಿ ಅಂತಹ ಗುಣವನ್ನು ನಿರೀಕ್ಷಿಸಲಾಗದು.

ಇದು ನಮ್ಮ ರಾಷ್ಟ್ರದ ಆಟಗಾರರಲ್ಲಿ ಮಾತ್ರವಲ್ಲ. ಐಪಿಎಲ್‌ನಲ್ಲಿ ಅತೀ ಹೆಚ್ಚಿನ ಆಟಗಾರರಿರುವ ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ ಆಟಗಾರರ ನಡುವೆಯೂ ಇಂತಹ ಘಟನೆಗಳು ಮರುಕಳಿಸುತ್ತವೆ. ಆದರೆ ಇದು ಒಂದೇ ರಾಷ್ಟ್ರದ ಆಟಗಾರರ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗೆಳೆಯಲಾಗದು.
ವಿರಾಟ್‌ ಕೊಹ್ಲಿ ಮತ್ತು ಎಂ.ಎಸ್‌.ಧೋನಿ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವವರು. ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಆರ್‌ಸಿಬಿ ತಂಡದಲ್ಲಿ. ಧೋನಿ ಪುಣೆ ತಂಡದಲ್ಲಿ ಆಡುತ್ತಿದ್ದಾರೆ. ಎರಡೂ ತಂಡಗಳ ನಡುವಿನ ಪಂದ್ಯದಲ್ಲಿ ಪರಸ್ಪರ ಇಬ್ಬರು ಆಟಗಾರರೂ ಮಾತಿನ ಯುದ್ಧ ನಡೆಸಿದರೆ ಅಚ್ಚರಿ ಪಡಬೇಕಾಗಿಲ್ಲ.  

ಮಂಜು ಮಳಗುಳಿ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.