ಟೆಸ್ಟ್‌ ಕ್ರಿಕೆಟ್‌ಗೆ “ನಾಲ್ಕು’ ದಿನಗಳ ತಾಪತ್ರಯ


Team Udayavani, Jan 18, 2020, 6:03 AM IST

test-crivc

ಕ್ರಿಕೆಟ್‌ನ ಮೂಲರೂಪ, ಶುದ್ಧರೂಪ ಎಂದೆಲ್ಲ ಕರೆಸಿಕೊಳ್ಳುವ ಟೆಸ್ಟ್‌ ಕ್ರಿಕೆಟ್‌, ಬದಲಾವಣೆಯ ಪರ್ವಕಾಲದಲ್ಲಿದೆ. ಅದು ತನ್ನ “ಶುದ್ಧ’ರೂಪವನ್ನೇ ಕಳೆದುಕೊಳ್ಳುವ ಅವಸ್ಥಾಂತರದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ)ಐದುದಿನಗಳ ಟೆಸ್ಟ್‌ ಅನ್ನು ನಾಲ್ಕುದಿನಗಳಿಗಿಳಿಸಲು ಚಿಂತಿಸುತ್ತಿದೆ. ಈಗ ವಿಶ್ವಕ್ರಿಕೆಟ್‌ ಬಹಳ ಬಿಗಿ ವೇಳಾಪಟ್ಟಿಯಿಂದ ಕೂಡಿದೆ. ಯಾವಾಗ ನೋಡಿದರೂ ಐದು ದಿನಗಳ ಟೆಸ್ಟ್‌ ಪಂದ್ಯ, ಅದರ ಬೆನ್ನಲ್ಲೇ ಟಿ20, ಏಕದಿನ ಸರಣಿ, ವರ್ಷಕ್ಕೊಂದು ಏನಾದರೊಂದು ಬೃಹತ್‌ ಕೂಟ.

ಇದರ ಜೊತೆಗೆ ದೇಶೀಯ ಕ್ರಿಕೆಟ್‌ ಪಂದ್ಯಗಳು, ಜೊತೆಗೆ ಐಪಿಎಲ್‌ ಮಾದರಿಯ ಪ್ರತಿಷ್ಠಿತ ಕೂಟಗಳು…ಯಾರಿಗೂ ಪುರುಸೊತ್ತಿಲ್ಲ. ಈ ಬಿಗು ವೇಳಾಪಟ್ಟಿಯಿಂದ ಬಹಳ ಒತ್ತಡಕ್ಕೊಳಗಾಗಿರುವುದು ಆಟಗಾರರು. ಅಷ್ಟೇ ಒತ್ತಡ ದೇಶೀಯ ಕ್ರಿಕೆಟ್‌ ಸಂಸ್ಥೆಗಳ ಮೇಲೂ ಇರುತ್ತದೆ. ಆದರೆ ಕ್ರಿಕೆಟ್‌ ಚಿನ್ನದ ಮೊಟ್ಟೆಯಿಡುವ ಕೋಳಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸ್ಥಿತಿಯಲ್ಲಿ ಕೋಳಿಯನ್ನೇ ಕೊಲ್ಲಲು ಯಾರೂ ಸಿದ್ಧರಿಲ್ಲ. ಟಿ20, ಏಕದಿನ ಪಂದ್ಯಗಳೂ ನಡೆಯಬೇಕು, ಟೆಸ್ಟ್‌ಗಳೂ ನಡೆಯಬೇಕು, ಆದರೆ ಇರುವ ದಿನಗಳು 365 ಮಾತ್ರ. ಅದಕ್ಕಾಗಿ ಐಸಿಸಿ ಒಂದು ಮಹತ್ವದ ಪ್ರಸ್ತಾವವಿಟ್ಟಿದೆ.

ಟೆಸ್ಟ್‌ ಕ್ರಿಕೆಟನ್ನು ಐದುದಿನಗಳಿಂದ ನಾಲ್ಕು ದಿನಕ್ಕಿಳಿಸಿಬಿಡುವುದು! ಅದಕ್ಕೆ ಪರಿಹಾರವಾಗಿ ನಾಲ್ಕು ದಿನಗಳಲ್ಲಿ ಹೆಚ್ಚುವರಿಯಾಗಿ 9 ಓವರ್‌ಗಳನ್ನು ಆಡಿಸುವುದು. ಅಲ್ಲಿಗೆ ಓವರ್‌ಗಳ ಲೆಕ್ಕಾಚಾರದಲ್ಲಿ ಬಹುತೇಕ ಐದು ದಿನ ಆಡಿದಂತಾಗುತ್ತದೆ. ಹಾಗಂತ ಅದು ಐದು ದಿನವಾಗುವುದಿಲ್ಲ! ಯಾಕೆ ಗೊತ್ತಾ? ಐದು ದಿನಗಳಲ್ಲಿ ಆಡಬೇಕಾಗಿರುವುದನ್ನು ನಾಲ್ಕುದಿನಗಳಲ್ಲಿ ಆಡಿದರೆ, ಆಟಗಾರರ ಮೇಲೆ ಒತ್ತಡ ಹೆಚ್ಚುತ್ತದೆ. ಬೌಲರ್‌ಗಳು, ಕ್ಷೇತ್ರರಕ್ಷಕರು ದಣಿದುಹೋಗುತ್ತಾರೆ. ಐದು ದಿನಗಳಿದ್ದಾಗ, ಒಂದೆರಡು ದಿನ ಮಳೆಬಂದರೂ ಇನ್ನೂ ಮೂರುದಿನವಿದೆ ಎನ್ನಲು ಅವಕಾಶವಿತ್ತು. ಈ ಹಂತದಲ್ಲೂ ಫ‌ಲಿತಾಂಶ ನಿರೀಕ್ಷಿಸುವುದು ತಪ್ಪಾಗಲಾರದು. ಆದರೆ ನಾಲ್ಕು ದಿನದಲ್ಲಿ?

ಕೆಲವೊಮ್ಮೆ ಯಾವುಯಾವುದೋ ಕಾರಣಕ್ಕೆ ದಿನದಾಟ ತಡವಾಗುವುದು, ಕಡಿಮೆಯಾಗುವುದು ಸಹಜ. ಆಗ ಓವರ್‌ಗಳ ಸಂಖ್ಯೆ ಬಹಳ ಕಡಿಮೆಯಾಗುತ್ತದೆ. ಇಂತಹ ಹಂತದಲ್ಲೇ ದಿನವೊಂದು ಕಡಿಮೆಬಿದ್ದರೆ, ಟೆಸ್ಟ್‌ನಂತಹ ಮಾದರಿಯಲ್ಲಿ ಸರಿತೂಗಿಸುವುದು ಹೇಗೆ? ಅದರ ಜೊತೆಗೆ, ಅಂಕಣ ದಿನ ಹೋದಂತೆ ಬದಲಾಗುತ್ತ ಹೋಗುತ್ತದೆ. ಆಗ ಅದರ ಗುಣಗಳೂ ವ್ಯತ್ಯಾಸವಾಗುತ್ತದೆ. ನಾಲ್ಕನೇ ದಿನಕ್ಕೆ ಒಂದುಹಂತಕ್ಕೆ ಬದಲಾಗಿರುತ್ತದೆ. ಐದನೇ ದಿನಕ್ಕೆ ಪೂರ್ಣ ಬದಲಾಗಿರುತ್ತದೆ. ಈ ಐದನೇ ದಿನದ ಪರಿಣಾಮ ನಾಲ್ಕನೇ ದಿನಕ್ಕೆ ಸಿಗುವುದಿಲ್ಲ. ಇದು ಟೆಸ್ಟ್‌ ಕ್ರಿಕೆಟ್‌ನ ಚೆಲುವನ್ನು ಕುಗ್ಗಿಸಬಹುದು.

ಎಲ್ಲಿಯವರೆಗೆ ತಗ್ಗಿಸುವುದು?: ಟೆಸ್ಟ್‌ ಕ್ರಿಕೆಟ್‌ ಅನಾಕರ್ಷಕ ಮಾದರಿ ಎನ್ನುವುದು ಎಲ್ಲರಿಗೂ ಗೊತ್ತು. ಪ್ರೇಕ್ಷಕರಂತೂ ಅದರಲ್ಲಿ ಪೂರ್ಣ ಆಸಕ್ತಿ ಕಳೆದುಕೊಂಡಿದ್ದಾರೆ. ಆ ಆಸಕ್ತಿಯನ್ನು ಮರಳಿ ಸ್ಥಾಪಿಸುವುದು ಐಸಿಸಿಗೆ ದೊಡ್ಡ ತಲೆಬಿಸಿ. ಇನ್ನೊಂದು ಕಡೆ ಅದು ಸಾಧ್ಯವಿಲ್ಲ ಎನ್ನುವುದೂ ಅದಕ್ಕೆ ಗೊತ್ತಾಗಿದೆ. ಅಷ್ಟು ಮಾತ್ರವಲ್ಲದೇ, ಈ ದೀರ್ಘ‌ ಮಾದರಿ ಉಳಿದೆರಡು ಮಾದರಿಗಳ ಮೇಲೆ ಒತ್ತಡವುಂಟು ಮಾಡುತ್ತಿದೆ. ಅದಕ್ಕೇ ನಾಲ್ಕು ದಿನಕ್ಕೆ ಇಳಿಸಲು ಅದು ಹೊರಟಿದೆ. ಹೀಗೆ ಉಳಿದ ದಿನಗಳನ್ನು ಸೀಮಿತ ಓವರ್‌ಗಳಿಗೆ ಬಳಸುವುದು ಅದರ ಉದ್ದೇಶ. ಆದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಈಗ ನಾಲ್ಕು ದಿನ, ಆಮೇಲೆ ಮೂರು, ಆಮೇಲೆ ಎರಡಕ್ಕೆ ಬಂದು, ಮುಂದೊಮ್ಮೆ ರದ್ದಾಗಬಹುದು! ಹಾಗಾಗಿ ಈ ಇಳಿಸುವ ಆಟದ ಬಗ್ಗೆಯೇ ಅಸಮಾಧಾನವಿದೆ.

1877ರಲ್ಲಿ ಶುರುವಾಯ್ತು ಟೆಸ್ಟ್‌: ಟೆಸ್ಟ್‌ ತನ್ನ ಆರಂಭಿಕ ಘಟ್ಟಗಳಲ್ಲಿ, ಫ‌ಲಿತಾಂಶ ಬರುವವರೆಗೂ ನಡೆಯುತ್ತಿತ್ತು. ಹತ್ತು, ಹನ್ನೊಂದು ದಿನ ನಡೆದಿದ್ದು ಇದೆ. ಈಗ ಅದು ಐದು ದಿನಕ್ಕೆ ಬಂದಿದೆ. ಟೆಸ್ಟ್‌ ಮಾದರಿ ಶುರುವಾಗಿದ್ದು 1877ರಲ್ಲಿ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವೆ ಮೆಲ್ಬರ್ನ್ನಲ್ಲಿ ಪಂದ್ಯ ನಡೆಯಿತು. 1977ರಲ್ಲಿ ಇವೇ ತಂಡಗಳ ನಡುವೆ 100ನೇ ವರ್ಷಾಚರಣೆ ನಡೆಯಿತು. ಎರಡೂ ಸಂದರ್ಭದಲ್ಲಿ ಆಸ್ಟ್ರೇಲಿಯ 45 ರನ್‌ಗಳ ಜಯ ಸಾಧಿಸಿತು!

ಪರ-ವಿರೋಧ
ಈಗ ಆಟದ ಸ್ವರೂಪ ಬದಲಾಗಿದೆ. ನಾಲ್ಕು ದಿನಗಳ ಟೆಸ್ಟ್‌ ಕ್ರಿಕೆಟ್‌ ಫ‌ಲಿತಾಂಶ ನೀಡಬಲ್ಲ ಸಾಮರ್ಥ್ಯ ಹೊಂದಿದ್ದರೆ, ಆ ಕಡೆ ಗಮನಹರಿಸುವುದು ಒಳ್ಳೆಯದು. ನಮಗೆಲ್ಲ ಐದು ದಿನಗಳ ಟೆಸ್ಟ್‌ ಇಷ್ಟ. ಆದರೆ ನಾಲ್ಕು ದಿನಗಳ ಕ್ರಿಕೆಟ್‌ ಯಶಸ್ವಿಯಾಗಬಲ್ಲುದೇ? ನನ್ನ ಮಟ್ಟಿಗೆ ಹೌದು. ಈ ಕಾಲಘಟ್ಟದಲ್ಲಿ ಟೆಸ್ಟ್‌ಗೆ ಒಳಿತಾಗುವ ಎಲ್ಲ ದಾರಿಗಳನ್ನು ನಾವು ಶೋಧಿಸಬೇಕು.
-ಜೋಸ್‌ ಬಟ್ಲರ್‌, ಇಂಗ್ಲೆಂಡ್‌ ಕ್ರಿಕೆಟಿಗ

ನನಗೆ ಈ ಉದ್ದೇಶವೇ ಸರಿಯೆನಿಸುತ್ತಿಲ್ಲ. ಮುಂದೆ ನೀವು ಮೂರುದಿನಗಳ ಪಂದ್ಯದ ಬಗ್ಗೆ ಮಾತನಾಡಬಹುದು. ಎಲ್ಲಿಗೆ ನೀವು ನಿಲ್ಲಿಸುತ್ತೀರಿ? ಒಂದುದಿನ ಟೆಸ್ಟ್‌ ಮಾಯವಾಗಬಹುದು. ಇದನ್ನೆಲ್ಲ ನಾನು ಒಪ್ಪುವುದಿಲ್ಲ. ಕ್ರಿಕೆಟ್‌ನ ಶುದ್ಧ ಮಾದರಿಗೆ ಧಕ್ಕೆಯಾಗುವುದನ್ನು ಸಹಿಸಲಾರೆ.
-ವಿರಾಟ್‌ ಕೊಹ್ಲಿ, ಭಾರತ ಕ್ರಿಕೆಟ್‌ ತಂಡದ ನಾಯಕ

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.