ಶಾಂತಿ ಸಮಾಧಾನಗಳಿಂದ, ಭಯಾನಕ ಪಾಪಿಗಳ ತನಕ
Team Udayavani, Mar 24, 2018, 12:28 PM IST
ಜಾತಕದಲ್ಲಿ ಚಂದ್ರ ಸಂಪನ್ನತೆ ಪಡೆದಾಗ ಅದ್ಬುತಗಳನ್ನು ಸೃಷ್ಟಿಸಬಲ್ಲ. ಒಳಿತುಗಳಿಗಾಗಿ ವೇದಿಕೆಗಳನ್ನು ಸೃಷ್ಟಿಸಬಲ್ಲ. ಅದೇ ಚಂದ್ರನ ಬಲ ಕ್ಷೀಣವಾಗಿದ್ದಾಗ ಎಷ್ಟೇ ಬಲಾಡ್ಯ ಅನ್ನಿಸಿಕೊಂಡವನಿಗೂ ಅಪಯಸ್ಸು, ಅಪಕೀರ್ತಿ ನಿಶ್ಚಿತ. ರಾಮಾಯಣದ ರಾಮಂಚಂದ್ರ, ದ್ವಾಪರದ ಕೃಷ್ಣ. ಪರಮಾತ್ಮ ಕೂಡ ಚಂದ್ರನ ಅವಕೃಪೆಯಿಂದ ತೊಂದರೆ ಅನುಭವಿಸಿದರು ಅಂದಮೇಲೆ ಉಳಿದವರ ಬಗ್ಗೆ ಹೇಳುವುದೇನಿದೆ?
ಸೌರಮಂಡಲದಲ್ಲಿರುವ ಗ್ರಹಗಳ ಪೈಕಿ ಅತಿ ಭಯಾನಕವೂ ಹೌದು, ಅತಿಯಾದ ಮೃದುವೂ ಹೌದು ಎಂದು ಹೆಸರಿಸಬಹುದಾದ ಗ್ರಹ ಯಾವುದು? ಯಾವ ಗ್ರಹವನ್ನು ಹೆಸರಿಸಬಹುದು ಎಂಬ ಪ್ರಶ್ನೆ ಎದುರಾದರೆ ನಿಸ್ಸಂದೇಹವಾಗಿ ಚಂದ್ರ ಎಂದು ಉತ್ತರಿಸಬಹುದು. ಹಾಗಾದರೆ ಸೌಮ್ಯ ಗ್ರಹಗಳ ಸಾಲಿನಲ್ಲಿ ಭಾರತೀಯ ಜ್ಯೋತಿಷ್ಯ ಪರಂಪರೆ ಚಂದ್ರನನ್ನು ಹೆಸರಿಸುತ್ತದೆ ಯಾಕೆ ಎಂಬು ಪ್ರಶ್ನೆ ತಟ್ಟನೆ ಏಳುತ್ತದೆ. ನಿಜ, ಚಂದ್ರ ಶುಭ್ರಗ್ರಹಗಳ ಪೈಕಿ, ಸೌಮ್ಯಗ್ರಹಗಳ ಪೈಕಿ ಚಂದ್ರನೂ ಒಬ್ಬ. ಇದಕ್ಕೆ ಒಂದೇ ಕಾರಣ, ಅದು ಚಂದ್ರನ ದೃಷ್ಟಿ ಬಿದ್ದಲ್ಲಿ ಶುಭಕ್ಕೆ ದಾರಿಯಾಗುತ್ತದೆ ಎಂಬ ಕಾರಣದಿಂದ.
ಧರಿಶಂಖ ತುಷಾರಾಂಭಂ ಕ್ಷೀರೋ ದಾರ್ಣವ ಸಂಭವಂ, ನಮಾಮಿ ಶಶೀನಾಂ ಸೋಮಂ ಶಭೋರ್ಮುಕುಟ ಭೂಷಣಂ . ಈ ರೀತಿಯಾಗಿ ನಮ್ಮ ವೈದಿಕ ವಾಗ್ಮಿಯ ಚಂದ್ರನನ್ನು ಆರಾಧಿಸುತ್ತದೆ. ಸಾûಾತ್ ಶಿವನಿಗೇ ಮುಕುಟದ ಭೂಷಣನಾಗಿ ಬೆಳಕು ಹೊರಹೊಮ್ಮಿಸುವ ಚಂದ್ರನ ಮೈ ಬಣ್ಣ, ಹಾಲ ಶರಧಿಯಲ್ಲಿ ( ಸಮುದ್ರದ ಮಂಥನ ನಡೆದಾಗ) ಕಡೆತದ ಸಮಯದಲ್ಲಿ ಹೊರಬಂದವನು ಎಂದು ಬಣ್ಣಿಸಿದೆ. ಇಂಥ ಚಂದ್ರನನ್ನು ಭಾರತೀಯ ಪರಂಪರೆ ಒಂದು ಗ್ರಹವನ್ನಾಗಿಯೇ ಸ್ವೀಕರಿಸಿದೆ. ಚಂದ್ರನೊಟ್ಟಿಗೆ ಸೂರ್ಯನೂ ಒಂದು ಗ್ರಹವಾಗಿಯೇ ಸ್ವೀಕರಿಸಲ್ಪಟ್ಟಿದ್ದಾನೆ ಭಾರತೀಯ ಖಗೋಲ ಪರಂಪರೆಗೆ. ಇದು ಸತ್ಯ. ಆಧುನಿಕ ವಿಜ್ಞಾನ ಈ ನಂಬಿಕೆಗೆ, ಈ ವಾಸ್ತವಕ್ಕೆ ನಗುತ್ತದೆ. ಆದರೆ ಭೂಮಿಯ ಜೀವ ಜಾಲರಿಯ ಮೇಲೆ, ಪ್ರಾಕೃತಿಕ ವಿಚಾರಗಳ ಬಗೆಗೆ ನಾವು (ಭಾರತೀಯರು) ಗುರುತಿಸಿಕೊಂಡಿರುವ 27 ನಕ್ಷತ್ರಗಳು, 9 ಗ್ರಹಗಳು ಮಾತ್ರ ಬೀರುವ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಆಧುನಿಕ ವಿಜ್ಞಾನ ಪರಿಗಣಿಸುವುದಿಲ್ಲ. ಅದು ಗ್ರಹಿಸಲಿಲ್ಲ ಎಂದ ಮಾತ್ರಕ್ಕೆ ಭಾರತೀಯರು ಕಂಡುಕೊಂಡದ್ದು ಅಸತ್ಯ ಎಂದಾಗುವುದಿಲ್ಲ. ಯಃಕಶ್ಚಿತ್ ಎಂದು ಆಧುನಿಕ ವಿಜ್ಞಾನ ಉರು ಹೊಡೆಸುವ (ನಮ್ಮ ಖಗೋಳ ಪಾಠದಲ್ಲಿ) ಭಾರತೀಯ ಪರಂಪರೆಯು ವ್ಯಾಖ್ಯಾನಿಸುವ ನೆಲೆಯಲ್ಲಿ ಚಂದ್ರನನ್ನು ನೋಡಲು, ಗಮನಿಸಲು ಮುಂದಾದರೆ, ಚಂದ್ರನಂಥ ಮನೋಹರ, ಆದರೂ ಕ್ರೂರಾತಿಕ್ರೂರ ವಿಕಾರ, ಯಾವಾಗಲೆಂದರೆ ಆಗ ನಿರ್ಮಿಸಲ್ಪಡುವ ಅವನ ಕಾರಣಕ್ಕಾಗಿನ ಹಾಹಾಕಾರ ಇತ್ಯಾದಿಗಳನ್ನು ಮನದಟ್ಟು ಮಾಡಿಕೊಂಡರೆ ಹೌದು…, ಪರಿಣಾಮದ ದೃಷ್ಟಿಯಿಂದ ಎಲ್ಲೋ ಇರುವ ದೂರದ ನಕ್ಷತ್ರಕ್ಕಿಂತ ಇದೇ ಪರಿಣಾಮಕಾರಿ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಚಂದ್ರನ ಮೂಲಕವಾಗಿ ಪೃಥ್ವಿಯ ವಿಷಯದಲ್ಲಿ ಭೂಕಂಪನದ ಅಲೆಗಳು,ಜ್ವಾಲಾಮುಖೀಯ ನ್ಪೋಟಗಳು, ಕಡಲು ಅಥವಾ ಮಹಾಸಾಗರಗಳು ಸಂಭವಿಸುತ್ತವೆ. ಏಕ ಕಾಲದಲ್ಲಿ ಶುಭನೂ, ಅಶುಭನೂ ಆಗುವ ಚಂದ್ರನ ವಿಚಾರದಲ್ಲಿ ಇದು ಹೀಗೇ ಎಂದು ತಿಳಿಯುವುದು ಕಷ್ಟವಲ್ಲದಿದ್ದರೂ, ಸ್ವಲ್ಪ ಕಗ್ಗಂಟಿನ ವಿಚಾರ. ಮೂಲದಲ್ಲಿನ ಚಂದ್ರ ಹೇಗೆ ಎಂಬುದನ್ನು ತಿಳಿಯಬೇಕು.
ಶಾಂತಿ ಸಮಾಧಾನಗಳನ್ನು ಯಾವಾಗ ಕೊಡಬಲ್ಲ?
ನಾವು ಅನೇಕ ರೀತಿಯ ಜನರನ್ನು ಸಂಧಿಸುತ್ತಿರುತ್ತೇವೆ. ಒಂದೋ ಅವರ ಶಾಂತಿ ಸಮಾಧಾನಗಳನ್ನು ಅವರೇ ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಇಲ್ಲವೇ ಬೇರೆಯವರ ಮನಸ್ಸನ್ನು ಹಾಳು ಮಾಡುತ್ತಿರುತ್ತಾರೆ. ಎಲ್ಲವೂ ಸುಸೂತ್ರವಾಗಿರುವಾಗ ಥಟ್ಟನೆ ಇವರ ಪ್ರವೇಶವಾಗಿ ಸರಿಯಾಗಿರುವ ವರ್ತಮಾನವನ್ನು ಅಸ್ತವ್ಯಸ್ತಗೊಳಿಸುತ್ತಾರೆ. ಉದಾಹರಣೆಗೆ, ದೇವ ಸಭೆಯಲ್ಲಿ ನಡೆಯುವ ದಿವ್ಯ ಸತ್ರರ ಸಂದರ್ಭದಲ್ಲಿ ಪರಮೇಶ್ವರನ ಸತಿಯಾದ ಶಕ್ತಿ ಸ್ವರೂಪಿಣಿ ದಾಕ್ಷಾಯಿಣಿಯ ತಂದೆ ದಕ್ಷ ಬ್ರಹ್ಮನ ಆಗಮನವಾಗುತ್ತದೆ. ಪ್ರಪಂಚದ ಒಳಿತಿನ ವಿಚಾರದ ಮಾತುಕತೆ ನಡೆಯುತ್ತಿರುವ ದಿವ್ಯ ಸತ್ರದ ಸಭೆಗೆ ಪರಮೇಶ್ವರನೇ ಅಧ್ಯಕ್ಷನಾಗಿ ಕಾರ್ಯಕ್ರಮ ನಡೆಸಿಕೊಡುವ ಹಿರಿತನ ಪಡೆದಿರುತ್ತಾನೆ. ಆದರೆ ಸಭೆಗೆ ವಿಳಂಬದೊಂದಿಗೆ ಬಂದು, ಶಿವನನ್ನು ನಿಂದಿಸಿ, ಶಿವನ ಅಧೈರ್ಯವನ್ನು ಒಪ್ಪಿಕೊಂಡ ದೇವಾನುದೇವತೆಗಳಿಗೆ ಛೀಮಾರಿ ಹಾಕಿ, ನಾಗರೀಕತೆ ಇರದ ಶಿವನನ್ನು ಅಧ್ಯಕ್ಷನನ್ನಾಗಿಸಿ ಅದಕ್ಷತೆ ಸೂಚಿಸಿದ್ದೀರಿ, ಇಂಥ ಹೀನರ ಸಭೆಯಲ್ಲಿ ಇರಲಾರೆ ಎಂದು ದಕ್ಷ ಬ್ರಹ್ಮಸಭೆಯಿಂದ ನಿರ್ಗಮಿಸುತ್ತಾನೆ. ನಂತರ ಸಭೆ ನಡೆದರೂ ಸೇಡಿನ ಛಾಯೆಯಿಂದ ಹೊರಬರಲಾಗದ ದಕ್ಷ ಬ್ರಹ್ಮ ಶಿವನ ಕೋಪಾವೇಶಕ್ಕೆ ಉದ³ವಿಸಿದ ಕಾಲ ಬೈರವನಿಂದ ಶಿರಚ್ಛೇದಕ್ಕೆ ತುತ್ತಾಗಿ, ನಂತರ ಶಿವನ ಕೃಪೆಯಿಂದಲೇ ಕುರಿಯ ತಲೆಯನ್ನು ಪಡೆದು ಜೀವ ಉಳಿಸಿಕೊಳ್ಳುತ್ತಾನೆ. ಆದರೆ ಜಾತಕದಲ್ಲಿ ಚಂದ್ರ ಪ್ರಬಲನಾಗಿದ್ದರೆ ವಿಧ್ಯುಕ್ತವಾದ ಸಭೆಯಲ್ಲಿ ದಕ್ಷ ಪ್ರಜಾಪತಿಯಂತೆ ವಿಕೃತವಾಗಿ ಒಬ್ಬ ವ್ಯಕ್ತಿ ವರ್ತಿಸಲಾರ. ತನಗೆ ಅನನುಕೂಲಕರವಾದ ವಾತಾವರಣವಿದ್ದರೂ, ಸಮಯ ಸಂದರ್ಭದ ಗಾಂಭೀರ್ಯವನ್ನು ಅರಿತು ವರ್ತಮಾನದ ಬೆಳಕನ್ನು ತನ್ನಡೆಗೆ ಹೊರಳಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳುತ್ತಾನೆ. ಹುಣ್ಣಿಮೆಯ ಚಂದ್ರನಾಗಿ ಪರಮೋಚ್ಚ ಶಕ್ತಿ ಪಡೆದಿದ್ದರೂ ಚಂದ್ರ ಉಪಟಳವನ್ನು ಕೊಡಬಲ್ಲ. ಆದರೆ ತುಂಬಿದಕೊಡವಾಗಿ ಚಂದ್ರ ಸಂಪನ್ನತೆ ಪಡೆದಾಗ ಅದ್ಬುತವನ್ನು ಸೃಷ್ಟಿಸಬಲ್ಲ. ಒಳಿತುಗಳಿಗಾಗಿನ ವೇದಿಕೆ ನಿರ್ಮಿಸಬಲ್ಲ.
ಕ್ಷೀಣ ಚಂದ್ರನಿಂದ ಏನೇನು ತೊಂದರೆ ಬರಬಹುದು?
ಸರ್ರನೆ ಸಾಲದ ಸುಳಿಯಲ್ಲಿ ಸಿಕ್ಕಿ ಬೀಳಿಸುವ, ತಪ್ಪು ನಿರ್ಣಯ, ತಪ್ಪು ಬಾಳ ಸಂಗಾತಿಯ ಆಯ್ಕೆ, ದುಡುಕಿ ಆಡುವ ಮಾತು, ವಿಕೃತವಾದ ಕಾಮದ ಚೇಷ್ಟೆಗಳಿಂದ ವರ್ಚಸ್ಸನ್ನು ಕಳೆದುಕೊಳ್ಳುವ ದಿಕ್ಕುಗಳಿಗೆ ವ್ಯಕ್ತಿ ಹೊರಳಿಕೊಳ್ಳಬಹುದು. ಅನುಭವ ಇರದ ಕೆಲಸಗಳಿಗೆ ಮುಂದಾಗುವುದು, ಸೂಕ್ತವಾದ ಸಮಯ ಬರದೇ ಇರುವ ಕೆಲಸ ಬಿಡುವುದು ಇತ್ಯಾದಿ ಆತುರಗಳಿಂದ ಸೃಷ್ಟಿಗೊಳ್ಳುವ ಬಿಕ್ಕಟ್ಟುಗಳಲ್ಲಿ ಕ್ಷೀಣ ಚಂದ್ರ ವಿಲವಿಲ ಒದ್ದಾಡಿಸಬಲ್ಲ. ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಜನರ ಜೊತೆಗೇ ಕಾದಾಟ, ಮಾತಿನ ಚಕಮಕಿ, ಶೀತಲ ಯುದ್ಧ ನಡೆಸಿ ಪ್ರಾಣ ರಕ್ಷಕ ಸಂಗತಿಗಳನ್ನೇ ದೂರ ಮಾಡಿಕೊಳ್ಳುವ ಅವಿವೇಕ ತೋರಿಸಬಹುದಾಗಿದೆ. ಸಂಪೂರ್ಣವಾದ ಬಲ ಹೊಂದಿದ್ದರೂ ಶ್ರೀರಾಮ, ಶ್ರೀ ಕೃಷ್ಣ ಮುಂತಾದವರು ಕಷ್ಟ ಅನುಭವಿಸುತ್ತಿದ್ದು ನಾವು ಕೇಳಿದ್ದೇವೆ ಪುರಾಣದ ಕಥೆಗಳಲ್ಲಿ.
ರೋಹಿಣಿ ನಕ್ಷತ್ರದಂಥ ಚಂದ್ರನ ಅನುಗ್ರಹ ದಿವ್ಯವಾಗುವ ನಕ್ಷತ್ರದಲ್ಲಿ ಹುಟ್ಟಿಯೂ ಕೃಷ್ಣ ಜೀವನದಲ್ಲಿ ತಾಪತ್ರಯಗಳನ್ನು, ಕೆಟ್ಟ ಹೆಸರನ್ನು ಗಂಟು ಹಾಕಿಸಿಕೊಂಡ ಘಟನೆಗಳನ್ನು ನಾವು ಪುರಾಣದಲ್ಲಿ ಓದಿದ್ದೇವೆ. ಶ್ಯಮಂತಕ ಮಣಿಯನ್ನು ಕೃಷ್ಣ ಕದ್ದವನು ಎಂಬ ಆರೋಪ ಬಂತು. ಸೋದರ ಮಾವನಿಗೇ ಕಂಟಕ ಪ್ರಾಯವಾದವನು ಎಂಬ ಅಪವಾದವೂ ರೋಹಿಣಿ ನಕ್ಷತ್ರದ ಕಾರಣದಿಂದಾಗಿ ಕೃಷ್ಣನನ್ನು ಬೆನ್ನು ಹತ್ತುತ್ತದೆ. ಶ್ರೀ ರಾಮಚಂದ್ರ, ಪುನರ್ವಸು ನಕ್ಷತ್ರದಲ್ಲಿ ಚಂದ್ರನ ಮನೆಯಲ್ಲಿ ಇತ್ಯಾದಿ ಎಲ್ಲಾ ಉತ್ತಮ ಅಂಶಗಳಿದ್ದರೂ ಕಾಡಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಮಂಥರೆಯಂಥ ಕೆಲಸದ ಹೆಣ್ಣು ಮಗಳು ಕೈಕೇಯಿಗೆ ರಾಮನನ್ನು ಕಾಡಿಗಟ್ಟಿಸು ಎಂಬ ಕುಯುಕ್ತಿಯನ್ನು ಬೋಧನೆ ಮಾಡುತ್ತಾಳೆ. ಇದಕ್ಕೆ ದಶರಥ ಮಹಾರಾಜ ಶ್ರವಣ ಎಂಬು ಋಷಿ ಪುತ್ರನ ತಂದೆಯಿಂದ ಪಡೆ ದಾರುಣ ಶಾಪದ ಫಲವಾಗಿ ಇದು ಘಟಿಸುತ್ತದೆ. ಅಂತೂ ಕೃಷ್ಣನಾಗಲಿ, ರಾಮನಾಗಲಿ ಇತ್ಯಾದಿ ದೈವಾಂಶ ಸಂಭೂತರೂ ಕ್ಷೀಣ ಚಂದ್ರನಿಂದಾಗಿ ತೊಂದರೆ ಎದುರಿಸುತ್ತಾರೆ. ಹೊರಟಿದ್ದ ಸರಿದಾರಿಯೇ ಮುಂದೆ ದಾರಿಯೇ ಮುಂದವರಿಯದ ಅಡೆತಡೆಯನ್ನು ತಲುಪುವಂತೆ ನಿರ್ದಾಕ್ಷಿಣ್ಯವಾಗಿ ಚಂದ್ರನ ಅಣತಿಯಂತೆ ಮಾಡಿಬಿಡುತ್ತದೆ.
ಚಿದಂಬರಂಗೆ ಈಗ ಚಂದ್ರ ದೋಷ ಇದೆಯೇ?
ಕೇತು ಗ್ರಸ್ತ ಚಂದ್ರನಾಗಿ ನಮ್ಮ ಮಾಜಿ ಸಚಿವ ಚಿದಂಬರಂ ಈಗ ಪುತ್ರನ ಸಂದರ್ಭದಲ್ಲಿ ಬಿಕ್ಕಟ್ಟು ಎದುರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಹೌದು ಎಂಬುದೇ ಉತ್ತರ. ಮಗನನ್ನು ಸಂಕೇತಿಸುವ ಚಂದ್ರ ಈಗ ಕಾಟದ ಶನಿ ಮಹಾರಾಜನಿಂದ ಬಾಧೆಗೆ ಒಳಗಾಗಿದ್ದಾನೆ. ಕೇತು ಎಂಬ ಸರ್ಪದ ಬಾಲ ಮೂಲ ಚಂದ್ರನನ್ನು ಚಿದಂಬರಂ ಜಾತಕದಲ್ಲಿ ಅಡಕತ್ತರಿಗೆ ಸಿಲುಕಿಸಿ ಸದ್ಯ ತಾಪತ್ರಯದಲ್ಲಿರಿಸಿದ್ದಾನೆ. ರಾಜಕೀಯದ ಅಂಶಗಳೇನೇ ಇರಲಿ. ವ್ಯಾಖ್ಯಾನಗಳೇನೇ ಇರಲಿ. ಸದ್ಯದ ಶನಿಕಾಟ (ಸಾಡೇಸಾತಿಯಲ್ಲಿ) ಮಗನ ಸಂಬಂಧವಾಗಿ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ. ಅಷ್ಟಮಾಧಿಪ ( ಅಷ್ಟಮ ಸ್ಥಾನ ಕಷ್ಟದ ಸ್ಥಳ, ತಾಪತ್ರಯ, ವರ್ಚಸ್ಸಿಗೆ ಧಕ್ಕೆ, ಅವಸರದಿಂದ ಕಾರ್ಯವೈಫಲ್ಯ ಉಂಟಾಗಿಸುವ ಮನೆ) ಶುಕ್ರ ಗ್ರಹ ಚಿದಂಬರಂ ಅವರ ಪೂರ್ವಪುಣ್ಯ ಸ್ಥಾನದಲ್ಲಿರುವುದೂ ಚಂದ್ರನ ಕಾರಣವಾದ ಬಿಕ್ಕಟ್ಟು ಶನೈಶ್ಚರನ ಮೂಲಕ ಮಗನ ನೆಪ ಮುದಿಟ್ಟುಕೊಂಡು ಚಿದಬಂರಂ ಅವರನ್ನು ಬಾಧಿಸಿದೆ. ಕೇಮುದ್ರವ ದೋಷವೂ ಚಂದ್ರನ ಒಂದು ಹಿನ್ನಡೆಯವಿಷಯವಾಗಿದೆ. ಚಂದ್ರ ಬಲಾಡ್ಯನಾಗಿದ್ದು ಚಿದಂಬರಂ ಅವರಿಗೆ ಅತ್ಯುಚ್ಚ ಅಧಿಕಾರ, ಸಂಪತ್ತು, ಆಯುರಾರೋಗ್ಯ ಕೊಟ್ಟಿದ್ದರೂ, ಈಗ ಕೆಂಡದ ಮೇಲೆ ನಿಲ್ಲಿಸಿದ್ದಾನೆ. ಮನೋಹರನಾಗಿ ಕಾಣುವ ಚಂದ್ರನೇ ಸದ್ಯ ಸುಡುವ ಕೆಂಡಗಳ ಕುಲುಮೆಯಾಗಿದ್ದಾನೆ.
ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.