ಪರಶಿವನ ಪಾಪ ಕಳೆದ ವೊತಿಗೋಡಿನ ಗೌರಿಶಿವಾಲಯ
Team Udayavani, May 5, 2018, 2:10 PM IST
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವೋತಿಗೋಡುವಿನಲ್ಲಿ ಪ್ರಾಚೀನವಾದ ಗೌರಿಶಿವಾಲಯವಿದೆ. ಪುರಾಣವನ್ನು ಕೆದಕಿದಾಗ ಈ ದೇವಾಲಯದ ನಂಟು ತಿಳಿಯುತ್ತದೆ. ಸಾಕ್ಷಾತ್ ಪರಶಿವನು ತನ್ನ ಪಾಪವನ್ನು ಕಳೆದುಕೊಳ್ಳಲು ಆಗಮಿಸಿ, ಇಲ್ಲಿನ ಗೌರಿ ತೀರ್ಥದಲ್ಲಿ ಮಿಂದು ಪಾವನನಾದ ಪವಿತ್ರ ಕ್ಷೇತ್ರವಿದು ಎಂಬ ನಂಬಿಕೆ ಇದೆ.
ಇತಿಹಾಸದಲ್ಲೂ ಪ್ರಸಿದ್ಧಿ
ಸಾಗರದಿಂದ ಸುಮಾರು 5 ಕಿ.ಮೀ.ದೂರದಲ್ಲಿ ಈ ಶಿವಗೌರಿ ದೇಗುಲವಿದೆ. ಸ್ಕಂದ ಪುರಾಣದ ಸಹ್ಯಾದ್ರಿ ಕಾಂಡದಲ್ಲಿ ಈ ದೇವಾಲಯದ ವರ್ಣನೆ ಇದೆ. ಆ ಪ್ರಕಾರ ಪುರಾಣಕಾಲದಲ್ಲಿ ಸೃಷ್ಟಿಕರ್ತ ಬ್ರಹ್ಮ, ತನ್ನ ಮಗಳಾದ ಶಾರದೆಯನ್ನೇ ಮದುವೆಯಾಗುತ್ತಾನೆ. ಈ ರೀತಿ ತಂದೆಯಾದವನು ಮಗಳನ್ನು ಮದುವೆಯಾಗುವ ಮೂಲಕ ಲೋಕದ ಜನರಿಗೆ ತಪ್ಪು ಸಂದೇಶ ನೀಡಿದಂತಾಯಿತು ಎಂದು ಶಿವನು ವಾಗ್ವಾದನಡೆಸುತ್ತಾನೆ. ವಾದ ವಿವಾದವಾಗಿ, ಜಗಳವಾಗಿ 5 ತಲೆಗಳಿರುವುದರಿಂದಲೇ ಬ್ರಹ್ಮನಿಗೆ ಗರ್ವ ಹೆಚ್ಚಾಗಿದೆ ಎಂದು ಭಾವಿಸಿ ಸಿಟ್ಟಾದ ಶಿವ ಮಧ್ಯಭಾಗದಲ್ಲಿದ್ದ 5 ನೇ ಶಿರಸ್ಸನ್ನು ಕತ್ತರಿಸುತ್ತಾನೆ. ಇದರಿಂದ ಶಿವನಿಗೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ. ಈ ಪಾಪ ನಿವಾರಣೆಗೆ ದಕ್ಷಿಣ ಭಾರತದ ಸಹ್ಯಾದ್ರಿ ತಪ್ಪಲಿನ ಕ್ಷೇತ್ರವಾದ ವರದಾಮೂಲದಲ್ಲಿ ಶಿವನು ಘೋರ ತಪಸ್ಸನ್ನಾಚರಿಸಿದನಂತೆ.
ಆಗ ವಿಷ್ಣುವು ಅಲ್ಲಿಗೆ ಆಗಮಿಸಿ, ಶಿವನ ಬ್ರಹ್ಮಹತ್ಯಾ ದೋಷ ನಿವಾರಣೆಗೆ ತನ್ನ ಪಾಂಚಜನ್ಯವೆಂಬ ಶಂಖದಿಂದ ಪವಿತ್ರ ಭಾಗೀರಥಿಯನ್ನು ಶಿವನ ತಲೆಯ ಮೇಲೆ ಅಭಿಷೇಕ ಮಾಡುತ್ತಾನೆ. ಇದರಿಂದ ಶಿವನ ಪಾಪ ಕಳೆಯಿತು ಎಂದು ದೇವತೆಗಳೆಲ್ಲ ಆಗಮಿಸಿ ಹರ್ಷಿಸುತ್ತಾರೆ. ಪಾಪ ನಿವಾರಣೆಯ ಜೊತೆಗೆ ಪುಣ್ಯ ಪ್ರಾಪ್ತಿ ಸಹ ಲಭಿಸುವಂತಾಗಲು ಸಮೀಪದಲ್ಲೇ ಇರುವ ಗೌರಿತೀರ್ಥಕ್ಕೆ ತೆರಳಿ ಸ್ನಾನ ಮಾಡುವಂತೆ ವಿಷ್ಣು ಸೂಚಿಸುತ್ತಾನೆ. ಅದಕ್ಕಾಗಿ ಈಶ್ವರ ಓತುಗೋಡಿನಲ್ಲಿರುವ ಈ ಗೌರಿ ತೀರ್ಥಕ್ಕೆ ಆಗಮಿಸಿ ಮಿಂದು, ಪರಿಶುದ್ಧನಾಗುತ್ತಾನೆ. ಇದರ ನೆನಪಿಗಾಗಿ ಈ ಸ್ಥಳದಲ್ಲಿ ಉಳಿದ ದೇವತೆಗಳೆಲ್ಲ ಸೇರಿ ಗೌರಿಶಿವ ದೇಗುಲ ನಿರ್ಮಿಸುತ್ತಾರೆ. ಈ ದೇವಾಲಯದ ಪಕ್ಕದಲ್ಲಿ ಗೌರಿಯ ಅಗ್ನಿಕುಂಡ ಸಹ ಇದೆ.
ಆಕರ್ಷಕ ಪುಷ್ಕರಣಿ
ಈ ದೇವಾಲಯದ ಮುಂದೆ ಕಲ್ಲಿನಿಂದ ಕಟ್ಟಿದ ಆಕರ್ಷಕ ಪುಷ್ಕರಣಿ ಇದೆ. ಇದನ್ನು ಗೌರಿತೀರ್ಥ ಎಂದು ಗುರುತಿಸಲಾಗುತ್ತಿದೆ. ಸಮಸ್ಯೆಗಳಿಗೆ ಕುರಿತು ಪರಿಹಾರ ಕಂಡು ಕೊಳ್ಳಲು ಈ ತೀರ್ಥದಲ್ಲಿ ಬಿಲ್ವ ಪತ್ರೆ ಹಾಕುತ್ತಾರೆ. ಇಷ್ಟಾರ್ಥ ಈಡೇರುವುದಿದ್ದರೆ ಬಿಲ್ವ ಪತ್ರೆ ಮುಳುಗುತ್ತದೆ. ಇಲ್ಲವಾದರೆ ತೇಲುತ್ತದೆ ಎಂಬ ನಂಬಿಕೆ ಇದೆ. ಹಲವು ಭಕ್ತರು ನಿತ್ಯವೂ ತಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆಯೋ ಇಲ್ಲವೋ ಎಂಬುದನ್ನು ಬಿಲ್ವಪತ್ರೆ ಹಾಕು ಮೂಲಕ ತಿಳಿಯಲೆಂದೇ ಇಲ್ಲಿಗೆ ಆಗಮಿಸುತ್ತಾರೆ.
ಶಿಥಿಲಾವಸ್ಥೆಯಲ್ಲಿದ್ದ ಈ ದೇಗುಲವನ್ನು ಗ್ರಾಮಸ್ಥರೆಲ್ಲ ಸೇರಿ 2000ರಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿ ವರ್ಷ ಗೌರಿ ಹುಣ್ಣಿಮೆಯಂದು ಇಲ್ಲಿ ವಿಶೇಷ ಉತ್ಸವ ಹಾಗೂ ಪೂಜೆಗಳು ಜರುಗುತ್ತದೆ. ಮಹಾಶಿವರಾತ್ರಿ, ದೀಪಾವಳಿ ಅಮಾವಾಸ್ಯೆ, ಶ್ರಾವಣಮಾಸ, ಕಾರ್ತಿಕ ಮಾಸಗಳಲ್ಲಿ ವೈಭವದ ಪೂಜೆ ನಡೆಯುತ್ತದೆ. ವಿದ್ಯೆ, ಸಂತಾನ ಪ್ರಾಪ್ತಿ, ಮನೋಕ್ಷೊàಭೆ ನಿವಾರಣೆ ಹಾಗೂ ಮನಃಶಾಂತಿಗಾಗಿ ಭಕ್ತರು ಆಗಮಿಸಿ ಹರಕೆ ಹೊತ್ತು, ಪೂಜೆ ಸಲ್ಲಿಸುತ್ತಾರೆ.
ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.