60 ಓವರ್ ಪೂರ್ತಿ ಆಡಿ 36 ರನ್ ಗಳಿಸಿದ ಗಾವಸ್ಕರ್!
Team Udayavani, Dec 7, 2019, 5:11 AM IST
ಕ್ರಿಕೆಟ್ ಆಟಗಾರನಾಗಿ ವಿಪರೀತ ಅನ್ನುವಷ್ಟು ಜನಪ್ರಿಯತೆ, ಹಣ ಮಾಡಿದವರ ಪೈಕಿ ಸುನೀಲ್
ಗಾವಸ್ಕರ್‌ಗೆ ಪ್ರಮುಖ ಸ್ಥಾನ. ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್ ಗಳಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಒಂದು ಹೆಗ್ಗಳಿಕೆ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ (ಈ ದಾಖಲೆ ಮುರಿಯಲ್ಪಟ್ಟಿದೆ) ಎಂಬ ಇನ್ನೊಂದು ಹೆಗ್ಗಳಿಕೆ ಕೂಡ ಗಾವಸ್ಕರ್ ಅವರದ್ದೇ ಆಗಿತ್ತು ಎಂಬುದನ್ನು ತಪ್ಪದೇ
ಹೇಳಬೇಕು. ಗಾವಸ್ಕರ್ ಹೆಸರಿನಲ್ಲಿ ಇರುವ ದಾಖಲೆಗಳು ಹಲವು. ಕುಳ್ಳಗಿದ್ದ ಕಾರಣಕ್ಕೆ, ಜಿಗಿದು
ಕ್ಯಾಚ್ ಹಿಡಿಯಲು ಅಥವಾ ಡೈವ್ ಹೊಡೆದು ಚೆಂಡು ತಡೆಯಲು ಆಗುವುದಿಲ್ಲ ಎಂಬ ಕಾರಣಕ್ಕೆ
ಈತನನ್ನು ಸ್ಲಿಪ್‌ನಲ್ಲಿ ಫೀಲ್ಡಿಂಗ್‌ಗೆ ನಿಲ್ಲಿಸಲಾಗುತ್ತಿತ್ತು. ಈ ಮಹರಾಯ ಅಲ್ಲಿ
ನಿಂತಿದ್ದೇ ಭರ್ತಿ 100 ಕ್ಯಾಚ್ ಹಿಡಿದ. ಪರಿಣಾಮ, 100 ಕ್ಯಾಚ್ ಹಿಡಿದ ಮೊದಲ ಭಾರತೀಯ
ಎಂಬ ಹೆಗ್ಗಳಿಕೆ ಕೂಡ ಅವನದೇ ಆಯ್ತು.
ಗಾವಸ್ಕರ್ ಹೆಸರಲ್ಲಿ ಇರುವ ಇನ್ನೊಂದು ಅಪರೂಪದ ದಾಖಲೆ ಎಂದರೆ, ಒಂದು ದಿನದ
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪೂರ್ತಿ 50 ಓರ್ವ ಆಡಿ, ಅತಿ ಕಡಿಮೆ ರನ್ ಗಳಿಸಿದ್ದು! ಏಕದಿನ ಪಂದ್ಯವೆಂದರೆ ಎಂಥಾ ತೆಪರು ಆಟಗಾರ ಆದರೂ ಪೂರ್ತಿ 15 ಓರ್ವ ಆಡಿದರೂ ಕಡಿಮೆ ಅಂದರೂ 25 ರನ್ ಹೊಡೆಯುತ್ತಾನೆ. ಅಷ್ಟು ರನ್ ಹೊಡೆಯಲೇ ಬೇಕು. ಆದರೆ ಈ ಮಹರಾಯ ಗಾವಸ್ಕರ್, ಪೂರ್ತಿ
60 ಓವರ್ ಆಡಿ, 174 ಎದುರಿಸಿ ಕೇವಲ 36 ರನ್ ಹೊಡೆದರು! ( ಆ ಸಂದರ್ಭದಲ್ಲಿ ಏಕದಿನ
ಪಂದ್ಯ 60 ಓವರ್ ನಡೆಯುತ್ತಿತ್ತು). ಅಷ್ಟು ಹೊತ್ತಿನ ಸುದೀರ್ಘ ಆಟದಲ್ಲಿ ಕೇವಲ ಒಂದು ಬೌಂಡರಿ ಇತ್ತು. ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್ 336 ರನ್ ಗಳಿಸಿತು. ಭಾರತ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಭಾರತ ಆ ಮ್ಯಾಚ್ ಸೋತಿತು ನಿಜ. ಆದರೆ ಗಾವಸ್ಕರ್ ಕಿರೀಟಕ್ಕೆ ಹೊಸದೊಂದು ದಾಖಲೆ ಸೇರಿಕೊಂಡಿತು.
ಮೊದಲ ಎಸೆತವೇ ಸಿಕ್ಸರ್‌ಗೆ ಅಟ್ಟಿದ ಕ್ರಿಸ್ ಗೇಲ್
ಟೆಸ್ಟ್ ಪಂದ್ಯ ಅಂದರೆ ಪೂರ್ತಿ ಐದು ದಿನದ ಆಟ. ಅಲ್ಲಿ ಅವಸರ ಇರುವುದಿಲ್ಲ.
ಆಟಗಾರರು ಈ ಲೆಕ್ಕಾಚಾರದಲ್ಲಿಯೇ ಮೈದಾನಕ್ಕೆ ಇಳಿಯುತ್ತಾರೆ. ಒಂದು ದಿನದ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಅರ್ಧಗಂಟೆಯಲ್ಲಿ 50 ರನ್ ಹೊಡೆಯುವ ಆಟಗಾರ,
ಟೆಸ್ಟ್‌ನಲ್ಲಿ ಪೂರ್ತಿ ಅರ್ಧ ದಿನ ಆಡಿದರೂ 40 ರನ್ ನ ಗಡಿ ದಾಟಿ ನಿರುಮ್ಮಳ ಭಾವದಿಂದ
ಇರುತ್ತಾನೆ. ಐದು ದಿನ ಸಮಯವಿದೆ ಅನ್ನುವ ಕಾರಣಕ್ಕೇ ಬ್ಯಾಟ್ಸ್‌ಮನ್‌ಗಳೂ ಮೊದಲ ಓವರ್
ನಲ್ಲಿಯೇ ಬೌಂಡರಿ ಹೊಡೆಯುವ ಪ್ರಯತ್ನ ಮಾಡುವುದಿಲ್ಲ. ಟೆಸ್ಟ್ ಕ್ರಿಕೆಟ್ ಆರಂಭ
ಆದಾಗಿಂದಲೂ ಇದು ಒಂದು ಸಂಪ್ರದಾಯದಂತೆಯೇ ನಡೆದುಕೊಂಡು ಬಂತು. ಆದರೆ, ಕ್ರಿಸ್ ಗೇಲ್
ಎಂಬ ಬಿಡುಬೀಸಿನ ಆಟಗಾರ ಬಂದವನೇ, ಅದೊಂದು ಸಂಪ್ರದಾಯವನ್ನೇ ಬದಲಿಸಿಬಿಟ್ಟ.
2012ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಓವರ್ ಮೊದಲ
ಎಸೆತವನ್ನೇ ಸಿಕ್ಸರ್‌ಗೆ ಕಳಿಸಿ ಹೊಸದೊಂದು ದಾಖಲೆ ಬರೆದ ಗೇಲ…. 137 ವರ್ಷದ
ಕ್ರಿಕೆಟ್ ಇತಿಹಾಸದಲ್ಲಿ, ಟೆಸ್ಟ್ ಪಂದ್ಯದಲ್ಲಿ ಮೊದಲ ಬಾಲನ್ನೇ ಸಿಕ್ಸರ್‌ಗೆ ಹೊಡೆದ
ಧೀರ ಅನ್ನಿಸಿಕೊಂಡ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.