ಪ್ರದಕ್ಷಿಣೆ ಯಾಕೆ ಆರಂಭವಾಗಿರಬಹುದು?


Team Udayavani, Oct 6, 2018, 3:25 AM IST

3-aa.jpg

ದೇವಾಲಯಗಳಲ್ಲಿ ಗರ್ಭಗುಡಿಗೆ ಸುತ್ತು ಬರುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅನಾದಿ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಇದು ಒತ್ತಾಯ ಪೂರ್ವಕ ಸಂಪ್ರದಾಯವಲ್ಲ. 

 ದೇವಾಲಯಕ್ಕೆ ಹೋದಾಗ ಪ್ರದಕ್ಷಿಣೆ ಹಾಕಿ ನಮಸ್ಕರಿಸುವುದು ಸಂಪ್ರದಾಯ. ಎಲ್ಲಾ  ದೇವಾಲಯಗಳಲ್ಲಿಯೂ ಪ್ರದಕ್ಷಿಣಾಪಥ ಇದ್ದೇ ಇರುತ್ತದೆ. ದೇವರ ಬಲಭಾಗದಿಂದ ಮತ್ತು ನಮ್ಮ ಬಲಬದಿಯಿಂದ ದೇವಾಲಯದ ಗರ್ಭಗುಡಿಯ ಸುತ್ತ ಸುತ್ತುವುದು ಕ್ರಮ. ದೇವಾಲಯಗಳಲ್ಲಿ ಗರ್ಭಗುಡಿಗೆ ಸುತ್ತು ಬರುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅನಾದಿ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಇದು ಒತ್ತಾಯ ಪೂರ್ವಕ ಸಂಪ್ರದಾಯವಲ್ಲ. ಜನರು ಸಮಯಾವಕಾಶವಿದ್ದಾಗ ಅಥವಾ ಮನಸ್ಸಿದ್ದಾಗ ಸುತ್ತು ಬಂದು ನಮಸ್ಕರಿಸುತ್ತಾರೆ. ಆದರೆ ಈ ಪ್ರದಕ್ಷಿ$ಣೆ ಆರಂಭ ಯಾಕಾಗಿರಬಹುದು ಮತ್ತು ಅದರಿಂದಾಗುವ ಪ್ರಯೋಜನವಾದರೂ ಏನು? ಎಂಬುದನ್ನು ಚಿಂತಿಸುತ್ತ ಹೋದರೆ ಸರಳ ಉತ್ತರ ಸಿಗುತ್ತದೆ.

ಗಣಪತಿ ಮತ್ತು ಸುಬ್ರಹ್ಮಣ್ಯನಿಗೆ ಶಿವಪಾರ್ವತಿಯರು ಜಗತ್ತನ್ನು ಸುತ್ತಿಬನ್ನಿ ಎಂದು ಹೇಳಿದಾಗ ಸುಬ್ರಹ್ಮಣ್ಯ ನವಿಲನ್ನೇರಿ ಜಗತ್ತನ್ನು ಸುತ್ತಲು ಹೊರಟೇ ಬಿಟ್ಟ. ಆದರೆ ಗಣಪತಿ, ತನ್ನ ಗಜಕಾಯದಿಂದ ತಮ್ಮನಷ್ಟು ಸಲೀಸಾಗಿ ಜಗತ್ತನ್ನು ಸುತ್ತಲು ಸಾಧ್ಯವಿಲ್ಲ ಎಂದು ಅರಿತು, ತನ್ನ ತಂದೆತಾಯಿ ಅಂದರೆ ಶಿವಪಾರ್ವತಿಯರಿಗೇ ಮೂರು ಸುತ್ತು ಬಂದ. ಆಗ ಶಿವಪಾರ್ವತಿಯರು, ಗಣಪತಿಯನ್ನು ಮೆಚ್ಚಿಕೊಳ್ಳುತ್ತಾರೆ. ಅಂದರೆ ದೇವರೇ ಜಗತ್ತು ಅರ್ಥಾತ… ದೇವರನ್ನು ಸುತ್ತಿದರೆ ಜಗತ್ತನ್ನೇ ಸುತ್ತಿದಂತೆ ಎಂಬುದನ್ನು ಈ ಕಥೆ ಬಿಂಬಿಸುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ದೇವಾಲಯಗಳಲ್ಲಿ ಪ್ರದಕ್ಷಿ$ಣೆ ಹಾಕುವ ಸಂಪ್ರದಾಯವನ್ನು ಹೇಳಲಾಗುತ್ತದೆ.

ಅಲ್ಲದೆ ಪ್ರತಿಯೊಂದು ದೇವಾಲಯದ ಸುತ್ತಲೂ ಆಯಾದೇವಾಲಯದ ಮೂಲ, ಆ ದೇವಾಲಯಕ್ಕೆ ಇರುವ ಪೌರಾಣಿಕ ಹಿನ್ನೆಲೆ, ಶಕ್ತಿ ಮೊದಲಾದ ಸಂಗತಿಗಳನ್ನು ಭಿತ್ತರಿಸುವ ಶಿಲೆಗಳಿಂದ ಕೆತ್ತಿದ ಆಕೃತಿಗಳು ಹಾಗೂ ಗೋಡೆಗಳಲ್ಲಿ ಬಿಡಿಸಲಾದ ಚಿತ್ರಗಳು ಕಂಡುಬರುತ್ತವೆ.

ಇವುಗಳನ್ನು ನೋಡಿ, ಅ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಸುತ್ತುಬರುವ ಕ್ರಮ ಆರಂಭವಾಯಿತು. ಇನ್ನು ಕೆಲವು ದೇವಾಲಯಗಳಲ್ಲಿ ಆ ದೇವರಿಗೆ ಸಂಬಂಧಪಟ್ಟ ಸಾರುವ ಚಿತ್ರಪಟಗಳನ್ನು ನೇತು ಹಾಕಿರುತ್ತಾರೆ. ದೇವಾಲಯಗಳೆಂದರೆ ಒಂದು ಧನಾತ್ಮಕ ಪರಿಸರವಿರುವ ಸ್ಥಳ. ದೇವಾಲಯ ಎಷ್ಟೇ ದೊಡ್ಡ ಪೇಟೆಯ ಮಧ್ಯ ಇದ್ದರೂ ದೇವಾಲಯದೊಳಗೆ ಕಾಲಿಟ್ಟರೆ ಅÇÉೊಂದು ಮೌನದ, ಮನಸ್ಸಿಗೆ ಮುದ ನೀಡುವ ವಾತಾವರಣ ಇದ್ದೇ ಇರುತ್ತದೆ. ಅಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಪ್ರದಕ್ಷಿಣೆ ಸಹಾಯಕವಾಗುತ್ತದೆ. ಇನ್ನು, ತುಂಬಾ ಜನಸಂದಣಿಯಿರುವಾಗ ನಿಂತÇÉೇ ನಿಂತು ನಮಸ್ಕರಿಸುತ್ತ ನಿಂತಿದ್ದರೆ ನಮಗೂ ಕಷ್ಟ;  ಇತರರಿಗೂ ಕಷ್ಟ.

ಏಕಾಗ್ರತೆ ಸಾಧನೆಗೆ ಸರಳ ಮಾರ್ಗ 
ಪ್ರದಕ್ಷಿಣೆ ಎಂಬುದಕ್ಕೆ ಕಲಾತ್ಮಕವಾಗಿ ಸುತ್ತು ಬರುವುದು ಎಂಬರ್ಥವಿದೆ. ಈ ಪ್ರದಕ್ಷಿ$ಣೆಯೂ ನಮ್ಮ ಮನಸ್ಸನ್ನು ಹಿಡಿದಿಡುವ ಸೂತ್ರವೇ. ದೇವಾಲಗಳಲ್ಲಿ¨ªಾಗ ನಮ್ಮ ಮನಸ್ಸು ಚಂಚಲವಾಗಿ ಹೊರಜಗತ್ತಿನತ್ತ ಅಂದರೆ ಅಲೌಕಿಕ ಸಂಗತಿಗಳ ಬಗ್ಗೆ ಗಮನ ಹರಿಸದೇ ದೇವರತ್ತ ಚಿತ್ತವಿರಿಸಿ, ಏಕಾಗ್ರತೆಯನ್ನು ಸಾಧಿಸಿ ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಒಂದು ಉತ್ತಮ ಮಾರ್ಗವೂ ಹೌದು.  ಪುರಾಣ ಕತೆಗಳನ್ನು ಓದುತ್ತ ತಿಳಿಯತ್ತ, ಶ್ಲೋಕಗಳನ್ನು ಪಠಿಸುತ್ತ ಆ ಮೂಲಕ ನಮ್ಮ ಚಿಂತನಾಕ್ರಮವನ್ನು ಧನಾತ್ಮಕವಾಗಿ ಬೆಳಸಿಕೊಳ್ಳಲು ಇದರಿಂದ ಸಹಾಯಕವಾಗಿದೆ.

ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿಚ|
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ||
ಎಂಬ ಶ್ಲೋಕವನ್ನು ಸುತ್ತು ಬರುವಾಗ ಸಾಮಾನ್ಯವಾಗಿ ಪಠಿಸಲಾಗುತ್ತದೆ.

ಈ ಸುತ್ತು ಬರುವುದು ಜಗತ್ತಿನ ನಿಯಮವೂ ಹೌದು. ಭೂಮಿ ತನ್ನನ್ನು ಸುತ್ತುತ್ತಾ ಸೂರ್ಯನನ್ನು ಸುತ್ತುತ್ತಿದೆ. ಜಗತ್ತಿನ ಆಗುಹೋಗುಗಳಿಗೆಲ್ಲ ಕಾರಣವೇ ಈ ಸುತ್ತುವಿಕೆ. ಅಂದರೆ ಜನಜೀವನದ ಮೂಲತಣ್ತೀ ನಿಂತಲ್ಲಿ ನಿಲ್ಲದೆ ಸುತ್ತುತ್ತಲೇ ಇ¨ªಾಗ ಮಾತ್ರ ಜೀವನ ಮುನ್ನಡೆಯುತ್ತದೆಂಬ ಸೂಚಕವೂ ಇದಾಗಿದೆ.
ಪ್ರದಕ್ಷಿಣೆಯ ಅರಿಕೆ: ದೇವರನ್ನು ಸುತ್ತುತ್ತಾ ತನ್ನಲ್ಲಿರುವ ತಪ್ಪುನಡೆಗಳನ್ನು ತೊಡೆದು ಹಾಕಲು ತೆರೆದುಕೊಳ್ಳುವ ಅವಕಾಶವೇ ಈ ಪ್ರದಕ್ಷಿಣೆ.

ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.