“ಘಾಟಿ’ ಊಟದ ಘಮ
Team Udayavani, Feb 1, 2020, 6:07 AM IST
ಘಾಟಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 20 ವರ್ಷಗಳಿಂದ ಭಕ್ತಾದಿಗಳಿಗೆ ಅನ್ನದಾನ ಸೇವೆ ನಡೆಯುತ್ತಿದೆ. ದಾನಿಗಳ ಹಾಗೂ ಭಕ್ತಾದಿಗಳ ಕೊಡುಗೆ ಇಲ್ಲಿನ ನಿತ್ಯ ಅನ್ನದಾನಕ್ಕೆ ಬಲ ತುಂಬಿದೆ…
ನಾಗಾರಾಧನೆಗೆ ಪ್ರಸಿದ್ಧಿಪಡೆದ ಕ್ಷೇತ್ರಗಳಲ್ಲಿ ಘಾಟಿ ಸುಬ್ರಹ್ಮಣ್ಯವೂ ಒಂದು. ಬೆಂಗಳೂರಿಗೆ ಅಂಟಿಕೊಂಡಂತೆ, ದೊಡ್ಡಬಳ್ಳಾಪುರ ತಾಲೂಕಿನ ಈ ಪುಣ್ಯಕ್ಷೇತ್ರದಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಹಾಗೂ ನರಸಿಂಹಸ್ವಾಮಿ ಮೂರ್ತಿಗಳ ಏಕಶಿಲಾ ರೂಪ ನಿಜಕ್ಕೂ ವಿಸ್ಮಯ. ಸುಬ್ರಹ್ಮಣ್ಯನು ಪೂರ್ವಾಭಿಮುಖವಾಗಿಯೂ, ನರಸಿಂಹನು ಪಶ್ಚಿಮಾಭಿಮುಖವಾಗಿಯೂ, ಒಂದೇ ಶಿಲೆಯಲ್ಲಿದ್ದು, ಕನ್ನಡಿಯ ಮೂಲಕ ನರಸಿಂಹಸ್ವಾಮಿಯನ್ನು ದರ್ಶನ ಮಾಡಬಹುದಾಗಿದೆ.
ನಾಗರಕಲ್ಲುಗಳ ಪ್ರತಿಷ್ಠಾಪನೆ, ಪೂಜಾ ಕೈಂಕರ್ಯಗಳು ಇಲ್ಲಿನ ವಿಶೇಷ. ದೇವಾಲಯದ ಬಲಭಾಗದಲ್ಲಿರುವ ನರಸಿಂಹತೀರ್ಥ ಕಲ್ಯಾಣಿ, ದೇವಾಲಯದ ಆವರಣದಲ್ಲಿರುವ ಕುಮಾರತೀರ್ಥಗಳು ಭಕ್ತರ ಪಾಲಿಗೆ ಪವಿತ್ರ ತೀರ್ಥಗಳಾಗಿವೆ. ನಾಗರ ಮಹಿಮೆಯ ಕಾರಣಕ್ಕೆ, ಇಲ್ಲಿನ ಅನ್ನದಾನವೂ ಅಷ್ಟೇ ಮಹತ್ವ ಪಡೆಯುತ್ತದೆ.
ಅನ್ನದಾನ ವಿಶೇಷ: ಘಾಟಿ ಕ್ಷೇತ್ರದಲ್ಲಿ 20 ವರ್ಷಗಳಿಂದ ಭಕ್ತಾದಿಗಳಿಗೆ ಅನ್ನದಾನ ಸೇವೆ ನಡೆಯುತ್ತಿದೆ. ದಾನಿಗಳ ಹಾಗೂ ಭಕ್ತಾದಿಗಳ ಕೊಡುಗೆ ಇಲ್ಲಿನ ನಿತ್ಯ ಅನ್ನದಾನಕ್ಕೆ ಬಲ ತುಂಬಿದೆ. ನಿತ್ಯ ಕನಿಷ್ಠ 2 ಸಾವಿರ ಸದ್ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಮಂಗಳವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ 5ರಿಂದ 6 ಸಾವಿರ ಮಂದಿ ಭೋಜನ ಸ್ವೀಕರಿಸುತ್ತಾರೆ.
ಊಟದ ಸಮಯ
ಉಪಾಹಾರ: ಬೆಳಗ್ಗೆ 10- 12 ಗಂಟೆ
ಊಟ: 12.30- 4 ಗಂಟೆ ರಾತ್ರಿ ಊಟ ಇರುವುದಿಲ್ಲ.
ಭಕ್ಷ್ಯ ಸಮಾಚಾರ
– ಬೆಳಗ್ಗಿನ ಉಪಾಹಾರಕ್ಕೆ ಪುಳಿಯೊಗರೆ, ಚಿತ್ರಾನ್ನ, ಪಲಾವ್, ಟೊಮೆಟೊ ಬಾತ್…
– ಮಧ್ಯಾಹ್ನದ ಊಟದಲ್ಲಿ ಅನ್ನ, ಸಾರು, ರಸಂ, ಮಜ್ಜಿಗೆ, ಪೊಂಗಲ್ ಅಥವಾ ಪಾಯಸ.
– ಅಡುಗೆ ತಯಾರಿಯಲ್ಲಿ ಶುಚಿತ್ವಕ್ಕೆ ಆದ್ಯತೆ.
ಸಂಖ್ಯಾ ಸೋಜಿಗ
2 - ಬಾಣಸಿಗರಿಂದ ಅಡುಗೆ
6- ಸಹಾಯಕ ಸಿಬ್ಬಂದಿ
250- ಮಂದಿಗೆ ಏಕಕಾಲದಲ್ಲಿ ಭೋಜನ
2,000- ಭಕ್ತರಿಗೆ ನಿತ್ಯ ಭೋಜನ
6,000- ಭಕ್ತರು ಮಂಗಳವಾರ
10,00,000- ಜನ, ಕಳೆದವರ್ಷ ಊಟ ಸವಿದವರು
ಭಕ್ತಾದಿಗಳ ಹಾಗೂ ದಾನಿಗಳ ನೆರವಿನಿಂದ ಇಲ್ಲಿ ನಿತ್ಯ ಅನ್ನದಾನ ನಡೆಯುತ್ತಿದೆ. ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ.
-ಎನ್. ಕೃಷ್ಣಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ
ಅಡುಗೆ ಮಾಡುವ ಬಾಣಸಿಗರಿಗೆ ಸಮವಸ್ತ್ರ ಸೇರಿದಂತೆ ಶುಚಿತ್ವ ಕಾಪಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಭಕ್ತಾದಿಗಳು ಇಲ್ಲಿನ ಊಟದ ಬಗ್ಗೆ ಸಾಕಷ್ಟು ಮೆಚ್ಚುಗೆ ಸೂಚಿಸಿದ್ದಾರೆ.
-ಎನ್.ಎಸ್. ಲಕ್ಷ್ಮೀನಾರಾಯಣ, ಭೋಜನ ವ್ಯವಸ್ಥೆಯ ಮೇಲ್ವಿಚಾರಕರು
* ಡಿ. ಶ್ರೀಕಾಂತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.