ಗಾಜಿನ ಅರಮನೆ


Team Udayavani, Feb 23, 2019, 12:30 AM IST

26.jpg

ಕರ್ನಾಟಕದ ಮ್ಯಾಂಚೆಸ್ಟರ್‌ ಅಂದರೆ ಅದು ದಾವಣಗೆರೆಯೇ. ಈ ಹೆಮ್ಮೆಯ ಜೊತೆಗೆ ಈಗ ಇನ್ನೊಂದು ಸೇರ್ಪಡೆ ಈ ಗಾಜಿನ ಮನೆ. ದೇಶದ ನಂ. 1 ಗಾಜಿನ ಮನೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಇದು,  ಇಲ್ಲಿನ ಕುಂದುವಾಡ ಕೆರೆಗೆ ಹೊಂದಿಕೊಂಡಂತೆಯೇ ಇದೆ. ಅಲ್ಲಿ ಏನುಂಟು, ಏನಿಲ್ಲ? ಇಲ್ಲಿದೆ ಮಾಹಿತಿ.

  

 ದಾವಣಗೆರೆಯಲ್ಲಿ ಈಗ ಎಲ್ಲರದ್ದೂ ಒಂದೇ ಮಾತು. ಅದುವೇ ಗ್ಲಾಸ್‌ ಹೌಸ್‌ ಬಗ್ಗೆ.   ಒಳಗೊಳಗೇ ಹೆಮ್ಮೆ. ನಮ್ಮೂರಲ್ಲಿ ಗ್ಲಾಸ್‌ ಹೌಸ್‌ ಇದೆ ಅಂತ. ಬೆಂಗಳೂರು, ಮೈಸೂರು, ತುಮಕೂರು ಹೀಗೆ ಹಲವೆಡೆ ಇರುವ ಗ್ಲಾಸ್‌ ಹೌಸ್‌ಗಳಿಗಿಂತ ದಾವಣಗೆರೆಯ ಗ್ಲಾಸ್‌ ಹೌಸ್‌ ಬಹಳ ದೊಡ್ಡದು. ದೇಶದ ನಂ. 1 ಗ್ಲಾಸ್‌ ಹೌಸ್‌ ಅಂತಲೂ ಹೆಸರಾಗಿದೆ.  ಇಷ್ಟೇ ಅಲ್ಲ, ಇದು ವಿಶ್ವದ ನಂ. 2 ಗ್ಲಾಸ್‌ ಹೌಸ್‌ ಕೂಡ ಆಗಿದೆಯಂತೆ. ಇದು ಎಲ್ಲಿದೆ ಅಂದರೆ, ದಾವಣಗೆರೆ ಜಿಲ್ಲೆಯ  ಕುಂದುವಾಡ ಕೆರೆಗೆ ಹೊಂದಿಕೊಂಡಿರುವಂತೆ, 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಗ್ಲಾಸ್‌ ಹೌಸ್‌ ತಲೆ ಎತ್ತಿದೆ. 

ದಾವಣಗೆರೆಯಿಂದ 40 ಕಿ.ಮೀ ದೂರದಲ್ಲಿ ಶಾಂತಿಸಾಗರ ಕೆರೆಯಿದೆ. ಇದು ಇಡೀ ಜಿಲ್ಲೆಯನ್ನು ಹೆಸರುವಾಸಿ ಮಾಡಿತ್ತು. ಈಗ ಆ ಸರದಿ ಈ ಗಾಜಿನ ಮನೆಗೂ ಸಂದಿದೆ. 

ಇದರ ಒಳಗೆ ನಿಂತರೆ ಮನಸ್ಸು ಸಂಭ್ರಮದಲ್ಲಿ ತೇಲುತ್ತದೆ. ಗಾಜಿನ ಮನೆಯ ಮಹಿಮೆಯೇ ಅಂಥದ್ದು.  ಇದು ಕೇವಲ ಮನೆಯಂತೆ ಭಾಸವಾಗುವುದಿಲ್ಲ. ಬದಲಾಗಿ, ಯಾವುದೇ ಅರಮನೆಯಂತೆ ಅನಿಸುತ್ತದೆ.  ಗೋಡೆ ಸಿಕ್ಕರೂ ಅದೂ ಕೂಡ ಗಾಜೇ ಆದ್ದರಿಂದ ಬಯಲಲ್ಲಿ ನಿಂತಂತೆ ಆಗುತ್ತದೆ. 

ಗಾಜಿನ ಮನೆ ವಿಸ್ತೀರ್ಣ 75 ಸಾವಿರ ಚದುರ ಅಡಿ ಇದೆ. ಪೂರ್ವ-ಪಶ್ಚಿಮ 258 ಮೀಟರ್‌ ಉದ್ದ, ಉತ್ತರ-ದಕ್ಷಿಣ 63 ಮೀಟರ್‌ ಅಗಲವಿದೆ.  17 ಮೀಟರ್‌ ಎತ್ತರದ ಸೆಂಟ್ರಲ್‌ ಡ್ನೂಮ್‌ ಹಾಗೂ 14 ಮೀಟರ್‌ನ ಸೈಡ್‌ ವಿಂಗ್ಸ್‌ ಹೊಂದಿದೆ. 

5 ಕೋಟಿ ರೂ. ಅಂದಾಜಿನಲ್ಲಿ ಆರಂಭಿಸಿದ ಗಾಜಿನ ಮನೆ ನಿರ್ಮಾಣದ ವೆಚ್ಚ ಸದ್ಯ 26.28 ಕೋಟಿ ರೂ. ತಲುಪಿದೆ. ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಈ ಗಾಜಿನ ಮನೆ ಅತ್ಯದ್ಭುತವಾಗಿ ಮೂಡಿ ಬರಲು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಲ್ಪನೆ, ದೃಷ್ಟಿಕೋನ ಕಾರಣ. ಜೊತೆಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾಗಿದ್ದ ಎಸ್‌.ಟಿ.ವೇದಮೂರ್ತಿ ಮತ್ತವರ ತಂಡದ ಪರಿಶ್ರಮವೂ ಇದೆ. 

ಈ ಗ್ಲಾಸ್‌ ಹೌಸ್‌ನಿಂದಾಗಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು,  ಶೈಕ್ಷಣಿಕ-ವಾಣಿಜ್ಯ ನಗರಿ ದಾವಣಗೆರೆ ಇನ್ನು ಮುಂದೆ ಮತ್ತಷ್ಟು ಜನಪ್ರಿಯವಾಗಲಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. 

ಹೆಮ್ಮೆಯ ಸಂಗತಿ ಎಂದರೆ ದಾವಣಗೆರೆ ಗಾಜಿನ ಮನೆ ಆಕರ್ಷಕ ವಿನ್ಯಾಸಕ್ಕೆ ಝಾಕ್‌ ಗ್ರೂಪ್‌ ಪ್ರಶಸ್ತಿ ಲಭಿಸಿದೆ. ಆ ಮೂಲಕ  ಗಾಜಿನ ಮನೆಗೆ ಅಂತಾರಾಷ್ಟೀಯ ಮನ್ನಣೆ ಸಿಕ್ಕಂತಾಗಿದೆ.   

ವಿದೇಶಿ ಮರಗಳು..
ಪೈನಾಪಲ್‌ ಪಾಲ್ಮ್, ಇಟಾಲಿಯನ್‌ ಸೈಪ್ರಸ್‌, ಪೆರೆÕ$çನ್‌ ಸೈಪ್ರಸ್‌, ಇಟಾಲಿಯನ್‌ ಸೈಪ್ರಸ್‌ ಸ್ಟ್ರಿಕ್ಟ, ರೆಡ್‌ ನೆಕ್‌ ಪಾಲ್ಮ್, ಆಲಿವ್‌, ಮೆಕ್ಸಿಕಾನ್‌ ಫ್ಯಾನ್‌ ಪಾಲ್ಮ್, ಬಾಟಲ್‌ ಟ್ರಿ, ಡ್ರಾಗನ್‌, ಟರ್ಮಿನಲಿಯಾ ಮಸೊcಟ, ಫಿಕಸ್‌ ಸೇರಿ ವಿವಿಧ ವಿದೇಶಿ ಗಿಡ-ಮರಗಳನ್ನು ಗಾಜಿನ ಮನೆ ಉದ್ಯಾನ ವನದಲ್ಲಿ ನಾಟಿ ಮಾಡಲಾಗಿದೆ. 

ಜಿಮ್‌-ಆಟಿಕೆ
ವಿಶಾಲವಾದ ಜಾಗದಲ್ಲಿ ಬರೀ ಗಾಜಿನ ಮನೆಯೊಂದೇ ಇಲ್ಲ. ಆವರಣದಲ್ಲಿ ಕಂಗೊಳಿಸುತ್ತಿರುವ ಉದ್ಯಾನವನ, ಮಕ್ಕಳ ಆಟಿಕೆ, ವಯಸ್ಕರಿಗೆ ಜಿಮ್‌ ಇವೆ. ಪಾದಚಾರಿಗಳಿಗೆ ವಾಕಿಂಗ್‌ ಪಾಥ್‌ ಸೇರಿದಂತೆ  ಹಲವು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಶೌಚಾಲಯ. ಕ್ಯಾಂಟೀನ್‌ ವ್ಯವಸ್ಥೆ ಯೋಜನೆ ರೂಪಿಸಲಾಗಿದೆ.
  ಗ್ಲಾಸ್‌ ಬಳಕೆ 
ಈ ಗಾಜಿನ ಮನೆ ನಿರ್ಮಾಣದಲ್ಲಿ 6+6 ಎಂ.ಎಂನ ಪೇಂಟ್‌ ಗ್ಲೋಬಿಂಗ್‌ ಗಾಜನ್ನು ಬಳಸಿದ್ದಾರೆ. ಹೈದರಾಬಾದ್‌, ಚೆನ್ನೈಯಿಂದ ಗಾಜನ್ನು ತರಿಸಿದ್ದಾರೆ. ವಿಶೇಷ ಸಂದರ್ಭದಲ್ಲಿ ಮೈಸೂರು ಅರಮನೆಯಂತೆ ಕಂಗೊಳಿಸಲು ವಿಶೇಷವಾದ ಲೈಟಿಂಗ್‌ ವ್ಯವಸ್ಥೆ ಮಾಡಿದ್ದಾರೆ. 

ಎನ್‌.ಆರ್‌.ನಟರಾಜ್‌

ಟಾಪ್ ನ್ಯೂಸ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.