ಮುಂದಿದೆ ಮಾರಿ ಹಬ್ಬ!


Team Udayavani, Dec 23, 2017, 2:30 PM IST

4-asa.jpg

ಕೇಂದ್ರದ ಮಂತ್ರಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳ ಕುರಿತಾಗಿ “ಮುಂದಿದೆ ಮಾರಿ ಹಬ್ಬ’ ಎಂದು ಉದ^ರಿಸಿದ್ದು ರಾಜಕೀಯ ಧ್ವನಿಯಾದರೆ ಅತ್ತ ದಕ್ಷಿಣ ಆಫ್ರಿಕಾ ತಂಡ ಭಾರತದ ಈವರೆಗಿನ 2017ರ ಯಶಸ್ಸಿನ ಪಥ ನೋಡಿ ತನ್ನಷ್ಟಕ್ಕೆ ತಾನೇ ಭಾರತದತ್ತ ನೋಡಿ ಮುಂದಿದೆ ಮಾರಿ ಹಬ್ಬ ಎಂದು ಗುನುಗಿರಬಹುದೇ? ಇಷ್ಟಕ್ಕೂ ಮಾರಿ ಹಬ್ಬ ಎಂದರೆ ಕೋಣದ ಬಲಿ ನೆನಪಾಗುತ್ತದೆ. ಅಸಲಿಯತ್ತಾಗಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಮಾರಿ ಹಬ್ಬವೇ! ಈವರೆಗೆ ಭಾರತ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವು ಸಾಧಿಸಿಲ್ಲ. 2010-11ರಲ್ಲಿ ಸರಣಿಯನ್ನು 1-1ರಲ್ಲಿ ಸಮ ಮಾಡಿಕೊಂಡಿದ್ದೇ ಉಸ್ಸಪ್ಪಾ. ಭಾರತ ದಕ್ಷಿಣ ಆಫ್ರಿಕಾದಲ್ಲಿ 17 ಟೆಸ್ಟ್‌ಗಳನ್ನು ಆಡಿ ಎರಡು ಬಾರಿ  ಮಾತ್ರ ಗೆಲುವಿನ ರುಚಿ ಕಂಡಿದೆ. ಮೊದಲೇ ಹೇಳಿದಂತೆ ಸರಣಿ ನರಿರಾಯನಿಗಾದಂತೆ ಹುಳಿ!

ವೇಗ ಅಪಘಾತಕ್ಕೆ ಕಾರಣ!
ಭಾರತ ಪದೇ ಪದೇ ವೇಗಕ್ಕೆ ಬೆದರುತ್ತದೆ. ಅಲನ್‌ ಡೊನಾಲ್ಡ್‌, ಮ್ಯಾಕ್‌ಮಿಲನ್‌ರ ಕಾಲದಿಂದ ಭಾರತದ ಬಂಡವಾಳ ಬಯಲಾಗುತ್ತಿರುವುದು ಇದೇ ಕ್ಷೇತ್ರದಲ್ಲಿ. ಹತ್ತಿರದ ನೆನಪುಗಳಿಗೆ ಹೋದರೆ “ವೇಗ ಕೆಲಸ ಮಾಡಿದ ಎರಡು ಸಂದರ್ಭಗಳಲ್ಲಿ ಭಾರತ ಶ್ರೀಲಂಕಾದ ಮರಿ ವೇಗಿಗಳ ಎದುರು ಬಳಲಿ ಬೆಂಡಾಗಿದ್ದುದುಂಟು. ಈ ತಂಡದ ವಿರುದಟಛಿದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್‌ ನಲ್ಲಿ ಮೊದಲ ದಿನ 172ಕ್ಕೆ ಆಲ್‌ಔಟ್‌! ಇದೇ ರೀತಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧರ್ಮಶಾಲಾದಲ್ಲಿ 112ಕ್ಕೆ ಆಲ್‌ಔಟ್‌. ಈ ಪಂದ್ಯದ ಪುರುಷೋತ್ತಮ ಲಂಕೆಯ ಸುರಂಗ ಲಕ್ಮಲ್‌ ಅವತ್ತು ಟೆಸ್ಟ್‌ನಲ್ಲೂ 7 ವಿಕೆಟ್‌  ತೆಗೆದಿದ್ದರು. ಒಬ್ಬ ಭಾರತ ಉಪಖಂಡದ ವೇಗಿಯ ಸಾಧನೆಯ ಹಿನ್ನೆಲೆಯಲ್ಲಿಯೇ ನಾವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಎದುರಿಸಬೇಕಾದ ವೇಗಿಗಳನ್ನು ತೂಗಬೇಕಾಗಿದೆ.

ಈಗನಿಸುತ್ತಿದೆ, ಮುಂದಿದೆ ಮಾರಿಹಬ್ಬ!
ಭಾರತ ಪ್ರತಿ ಬಾರಿ ಹೆದರಬೇಕಾಗಿಲ್ಲ. ಇಂದು ನಮ್ಮ ಕೈಯಲ್ಲೂ ಭುವನೇಶ್ವರ ಕುಮಾರ್‌, ಉಮೇಶ್‌ ಯಾದವ್‌,ಇಶಾಂತ್‌ ಶರ್ಮಾ ತರಹದ  ಬೌಲರ್‌ ಇದ್ದಾರೆ. ವೇಗಿಗಳ ಶ್ರಮ ಸಫ‌ಲವಾಗಲು ಫೀಲ್ಡಿಂಗ್‌ ಪಡೆಗೆ ಅತ್ಯುತ್ತಮ ಸ್ಲಿಪ್‌ ರಕ್ಷಕರು ಬೇಕು. ಭಾರತ ಈ ವಿಚಾರದಲ್ಲಿ ಮತ್ತೆ ಸೋಲುತ್ತಿದೆ. ಮೊನ್ನೆ ಶ್ರೀಲಂಕಾ ವಿರುದಟಛಿ ಕೈಚೆಲ್ಲಿದ ಸ್ಲಿಪ್‌ ಕ್ಯಾಚ್‌ಗಳು ಕೋಚ್‌ ರವಿಶಾಸಿOಉ ಮುಂದಿರುವ ಸವಾಲನ್ನು ಹೇಳುತ್ತದೆ. ಭಾರತಕ್ಕೆ ನಿಶ್ಚಿತ ಸ್ಲಿಪ್‌ ಫೀಲ್ಡರ್‌ಗಳಿಲ್ಲ. ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್‌ ಪೂಜಾರ ಈ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಭಾರತದ ವಿಕೆಟ್‌ ಕೀಪರ್‌ ವೃದಿಟಛಿಮಾನ್‌ ಸಹಾ ಪ್ರಕಾರ, ಕ್ಯಾಚ್‌ ಕೈಚೆಲ್ಲುವುದು ಆಟದ ಸಹಜ ಪ್ರಕ್ರಿಯೆ. ಹಾಗಂದುಕೊಂಡರೆ  ಆಫ್ರಿಕಾ ಪ್ರವಾಸದ ಹಳೆಯ ದಾಖಲೆಗಳು ಮುಂದುವರಿಯುತ್ತವೆ! ಅನಾದಿ ಕಾಲದಿಂದಲೂ ಭಾರತ ವಿದೇಶಗಳಲ್ಲಿ ಸ್ಥಿರವಾಗಿ ನಿಲ್ಲಬಲ್ಲ ಆರಂಭಿಕರ ಕೊರತೆ ಅನುಭವಿಸಿದೆ. ಆರಂಭಿಕರು ಜೊತೆಯಾಗಿ ಮಿಂಚಿದರೆ ಮಾತ್ರ ಫ‌ಲ, ಒಬ್ಬ ಗಾವಸ್ಕರ್‌ ಇದ್ದರೆ ತಂಡ ಆ ಮಟ್ಟಿಗೆ ಲಾಭ ಹೊಂದುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಮೂರು ಟೆಸ್ಟ್‌ ಆಡಿರುವ ಮುರಳಿ ವಿಜಯ್‌ ಒಮ್ಮೆ 97 ರನ್‌ ಇನಿಂಗ್ಸ್‌ ಆಡಿರುವುದು ಬಿಟ್ಟರೆ ಅವರ ಸರಾಸರಿ 29.33 ಆಕರ್ಷಕವಲ್ಲ. ಇನ್ನು ಶಿಖರ್‌ ಧವನ್‌ ಆಡಿರುವ ಎರಡು ಟೆಸ್ಟ್‌ಗಳಿಂದ ಗಳಿಸಿರುವ 76 ರನ್‌. 19 ರನ್‌ಗಳ ಸರಾಸರಿ ಆತ್ಮವಿಶ್ವಾಸವನ್ನುಹೆಚ್ಚಿಸುವುದಿಲ್ಲ. ಇನ್ನೋರ್ವ ಆರಂಭಿಕ ಕೆ.ಎಲ್‌.ರಾಹುಲ್‌ ಈವರೆಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿಲ್ಲ. ಅಷ್ಟಕ್ಕೂ ರವಿಶಾಸ್ತ್ರೀ ಸ್ಪಷ್ಟಪಡಿಸಿಬಿಟ್ಟಿದ್ದಾರೆ, ಆರಂಭಿಕರ ಮೊದಲ ಆಯ್ಕೆ ಧವನ್‌ ಹಾಗೂ ವಿಜಯ್‌. ಈ ನಡುವೆ ಗ್ರೇಮ್‌ ಸ್ಮಿತ್‌ ಅನ್ವಯ, ಕೊಹ್ಲಿ, ವಿಜಯ್‌ ಹಾಗೂ ಧವನ್‌ ಬ್ಯಾಟ್‌ನಿಂದ ರನ್‌ ಹರಿದರೆ ಸರಣಿ ಗೆಲುವಿಗೆ ಭಾರತಕ್ಕೆ ಹೆಚ್ಚು ಅವಕಾಶವಿದೆ!

ವಿಮಾನವಿಳಿದು ಟೆಸ್ಟ್‌ ಆಡಲು…
ಸದ್ಯದ ಶ್ರೀಲಂಕಾ ತಂಡದೊಂದಿಗೆ ತನ್ನ ಕೊನೆಯ ಟಿ20 ಪಂದ್ಯವನ್ನು ಭಾರತ ಆಡುವುದು
ಡಿಸೆಂಬರ್‌ 24ರಂದು. ಅದಾದ ಮೂರು ದಿನಗಳಲ್ಲಿ ಅಂದರೆ ಡಿ.27ರಂದು ತಂಡ ದಕ್ಷಿಣ ಆμÅಕಾಗೆ
ಹಾರಲಿದೆ. ಅಲ್ಲಿ ನಿಯೋಜನೆಯಾಗಿದ್ದ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸುವಂತೆ
ಖುದ್ದು ಭಾರತ ತಂಡ ಹೇಳಿದ್ದರಿಂದ ಮುಂದಿನ ವರ್ಷದ ಜ.5ರಿಂದ ಆರಂಭವಾಗುವ ಮೊದಲ
ಟೆಸ್ಟ್‌ಗೆ ಮುನ್ನ ಭಾರತ ಕೇವಲ ನೆಟ್‌ ಪ್ರಾಕ್ಟೀಸ್‌ ಮಾಡಲಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು
ನಡೆದಿವೆ.

ಒಂದರ್ಥದಲ್ಲಿ ಆತಿಥೇಯ ಇಲೆವೆನ್‌ನೊಂದಿಗಿನ ಅಭ್ಯಾಸ ಪಂದ್ಯ ಹೊರಗಿನಿಂದ ತಂಡಕ್ಕೆ
ಮಾರಕವಾಗುವ ಸಂದರ್ಭವೇ ಹೆಚ್ಚು. ಇಂತಹ ತಂಡದಲ್ಲಿ ಗಮನಾರ್ಹ ಬ್ಯಾಟ್ಸ್‌ಮನ್‌ಗಳಿರುತ್ತಾರೆ,
ಬೌಲರ್‌ಗಳಿರುವುದಿಲ್ಲ. ಬ್ಯಾಟ್ಸ್‌ಮನ್‌ಗಳು ಗಳಿಸಿದ ರನ್‌ ಪ್ರವಾಸಿ ದೇಶದ ಬೌಲರ್‌ಗಳ ಆತ್ಮವಿಶ್ವಾಸ
ಕದಡುತ್ತದೆ. ಸಾಮಾನ್ಯ ಬೌಲರ್‌ ಎದುರಿಸಿ ಗಳಿಸಿದ ರನ್‌ ಅನಗತ್ಯವಾದ ದೃಢತೆಗೆ ಕಾರಣವಾಗಿ ಟೆಸ್ಟ್‌ ಎಂಬುದು ಬೇರೆಯದೇ ಜಗತ್ತು ಎಂಬುದನ್ನು ತೋರಿಸಿಬಿಡುತ್ತದೆ. ಆ ಲೆಕ್ಕದಲ್ಲಿ ಅಭ್ಯಾಸ ಪಂದ್ಯ
ಕ್ಕಿಂತ ನೆಟ್‌ ಅಭ್ಯಾಸ ವಿಹಿತ. ಇಲ್ಲಿ ಉತ್ತಮ ವೇಗಿಗಳ ಎದುರು ತಂಡ ತೊಡಗಿಸಿಕೊಳ್ಳಬೇಕು. ಅಲ್ಲಿನ
ವಾತಾವರಣದಲ್ಲಿ ಹೊಂದಿಕೊಳ್ಳಲು ಅನಧಿಕೃತ ಪಂದ್ಯಗಳ ಸ್ವರೂಪದಲ್ಲೂ ಅಭ್ಯಾಸ ನಡೆಸಬೇಕು.
ಪ್ರವಾಸದ ಕಾರ್ಯಕ್ರಮ ಪಟ್ಟಿಯಲ್ಲಿ ಮೊತ್ತಮೊದಲಾಗಿ ಟೆಸ್ಟ್‌ ಆಡುವ ಸಂಪ್ರದಾಯವನ್ನು
ಬದಲಿಸಿದರೆ ಭಾರತಕ್ಕೆ ಹೆಚ್ಚಿನ ಅನುಕೂಲಗಳಾಗುತ್ತಿತ್ತು. ಈ ದಿನಗಳಲ್ಲಿ ಏಕದಿನ ಟಿ20 ಪಿಚ್‌ಗಳು
ಇಡೀ ವಿಶ್ವದಲ್ಲಿ ಒಂದೇ ತರಹ, ಬ್ಯಾಟ್ಸ್‌ಮನ್‌ ಸ್ನೇಹಿ. ಹಾಗಾಗಿ ಶ್ರೀಲಂಕಾ ಎದುರು ಆಡಿಕೊಂಡು
ತೆರಳಿದ ಭಾರತ ತಂಡಕ್ಕೆ ಏಕದಿನ ಹಾಗೂ ಟಿ20ಯನ್ನು ಆಡುವುದು ಸುಲಭ. ಈ ಸರಣಿಗಳನ್ನು
ಮುಗಿಸುವ ವೇಳೆಗೆ ಭಾರತ ಅಲ್ಲಿನ ಹವಾಮಾನಕ್ಕೆ ಸಂಪೂರ್ಣ ಹೊಂದಿಕೊಂಡಿರುತ್ತಿತ್ತು. ಈ ವೇಳೆ
ಟೆಸ್ಟ್‌ ಸರಣಿ ನಡೆದಿದ್ದರೆ ಭಾರತ ಹೆಚ್ಚು ಪ್ರಬಲವಾಗಿ ಸೆಣೆಸಬಹುದಿತ್ತೇ?

ಗೊತ್ತಿಲ್ಲ. ಮುಂದಿದೆ ಮಾರಿಹಬ್ಬವನ್ನು ಕೇವಲ ನಕಾರಾತ್ಮಕವಾಗಿ ನೋಡಬೇಕಾಗಿಲ್ಲ. ಮಾರಿ
ಹಬ್ಬದಲ್ಲಿ ಕೋಣದ ಬಲಿಯ ಹೊರತಾಗಿ ದೇವಿಯ ಆರಾಧನೆಯಿದೆ. ಜಾತ್ರೆಯಿದೆ. ಜಾಯಿಂಟ್‌
ವೀಲ್‌, ತಿನಿಸು, ಆಟೋಟ…ಆ ನಿಟ್ಟಿನಲ್ಲಿ ಮಾರಿ ಹಬ್ಬ ಆಚರಿಸುವಂತಾಗಲಿ!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

puttige-7-

Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.