ದುರ್ಬುದ್ಧಿಯ ಮೂಲ ಯಾವುದು?


Team Udayavani, Apr 27, 2019, 6:20 AM IST

Udayavani Kannada Newspaper

ಬದುಕಿನ ನಿಲುವಿಗೆ ಕಾರಣಬೇಕು. ಆ ನಿಲುವು ಯಶಸ್ಸು, ಕೀರ್ತಿ ಮತ್ತು ಕೊನೆಗೊಂದು ಮುಕ್ತಿ ಇವನ್ನು ಬಯಸುವುದು ಸಹಜವೇ. ಇಂಥ ಯಶಸ್ಸನ್ನು ಬಯಸುವಾಗ ನನ್ನ ಜೀವನ ಹೇಗೆ ಇರಬೇಕು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಈ ಪ್ರಶ್ನೆ ಬಂದಾಗ, ನಮ್ಮ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಭಾಗಿಯಾಗುವ ಮನಸ್ಸು ಎಲ್ಲವಕ್ಕೂ ಮುಖ್ಯ ಸಾಧನ.

ಬುದ್ಧಿಯೂ ಮನಸ್ಸಿನ ರೂಪವೇ. ಇದು ಬದುಕಿನ ರೇಖೆಯನ್ನು ರೂಪಿಸುವಂಥದ್ದು. ಹಾಗಾಗಿಯೇ ಒಳ್ಳೆಯ ಬುದ್ಧಿ ಕೊಡಪ್ಪ ಎಂಬ ಪ್ರಾರ್ಥನೆ ಎಲ್ಲರದ್ದು. ಕೀರ್ತಿ ಅಥವಾ ಅಪಕೀರ್ತಿಯ ಹಿಂದೆ ನಿರ್ದಿಷ್ಟ ಕಾರಣವಾಗಿ ಗುರುತಿಸ­ಲ್ಪಡುವುದು ಕೂಡಾ ಈ ಬುದ್ಧಿ. ದುರ್ಬುದ್ಧಿಯನ್ನು ದೂರ ಮಾಡಿ­ಕೊಂಡವ ಮುಕ್ತಿಯನ್ನು ಪಡೆಯಲು ಶಕ್ತನಾಗುತ್ತಾನೆ. ಹಾಗಾದರೆ, ನಮ್ಮೊಳಗಿನ ದುರ್ಬುದ್ಧಿಯ ಮೂಲ ಕಾರಣ ಏನು?

ಸಂತಾಪಂ ತನುತೇ ಭಿನತ್ತಿ ವಿನಯಂ ಸೌಹಾರ್ಧ ಮುತ್ಪಾದಯ ತ್ಯುದ್ವೇಗಂ ಜನಯತ್ಯವದ್ಯವಚನಂ ಸೂತೇ ವಿಧತ್ತೇ ಕಲಿಂ |
ಕೀರ್ತಿಂ ಕೃಂತತಿ ದುರ್ಮತಿಂ ವಿತರತಿ ವ್ಯಾಹಂತಿ ಪುಣೊÂàದಯಂ ದತ್ತೇ ಯಃ ಕುಗತಿಂ ಸ ಹಾತುಮೂಚಿತೋ ರೋಷಃ ಸ ದೋಷಃ ಸತಾಮ…||
ಇದು ಸೋಮಪ್ರಭಾಚಾರ್ಯನ ಸುಕ್ತಿಮುಕ್ತಾವಳಿ,

ಇದರ ಅರ್ಥ, ಕೋಪವು ದೋಷಯುಕ್ತವಾದದ್ದು, ಇದನ್ನು ಸಜ್ಜನರು ತ್ಯಜಿಸಬೇಕು. ರೋಷವು ಮನಸ್ಸಿಗೆ ತಾಪವನ್ನು ಉಂಟುಮಾಡುತ್ತದೆ. ವಿನಯವನ್ನು ದೂರೀಕರಿಸುತ್ತದೆ. ಸ್ನೇಹವನ್ನು ಕೆಡಿಸುತ್ತದೆ. ಉದ್ವೇಗವನ್ನು ಉಂಟುಮಾಡುತ್ತದೆ. ಕೆಟ್ಟ ಮಾತನ್ನು ಹೇಳಿಸುತ್ತದೆ. ಜಗಳವನ್ನು ಹುಟ್ಟಿಸುತ್ತದೆ. ಕೀರ್ತಿಯನ್ನು ಕತ್ತರಿಸುತ್ತದೆ. ದುಬುìದ್ಧಿಯನ್ನು ಕೊಡುತ್ತದೆ. ಪುಣ್ಯವನ್ನು ತೂರಿ ದುರ್ಗತಿಯನ್ನು ತರುತ್ತದೆ.

ದುರ್ಬುದ್ಧಿಗೆ ಮೂಲ ಕಾರಣವೇ ಈ ಕೋಪ, ರೋಷಗಳೇ ಆಗಿವೆ. ಕೋಪ ಎಂಬುದು ಮನುಷ್ಯನ ಪರಮ ವೈರಿ. ಕೋಪ ಬಂದಾಗ ಮನಸ್ಸು ಅನಾಹುತಕ್ಕೆ ಕಾರಣವಾಗುವ ಕಾರ್ಯ ಮಾಡಲು ಸಿದ್ಧವಾಗಿಬಿಡುತ್ತದೆ. ಒಂದು ಒಳ್ಳೆಯ ಹಾದಿಯಲ್ಲಿದ್ದ ನಮ್ಮ ಬದುಕನ್ನು ದುರ್ಮಾರ್ಗಕ್ಕೆ ತಳ್ಳುವ ಶಕ್ತಿ ಈ ಕೋಪಕ್ಕಿದೆ. ನಮ್ಮೊಳಗಿನ ವಿನಯ, ಜ್ಞಾನ, ಜಾಣ್ಮೆ, ಸನ್ನಡತೆ ಎಲ್ಲವನ್ನೂ ಮೀರಿ ದುರ್ಬುದ್ಧಿ ನಮ್ಮನ್ನು ಆಳುವಂತೆ ಮಾಡುವ ಈ ಕೋಪ ಮನೋತಾಪವೂ ಹೌದು; ಬದುಕಿನ ಕೂಪವೂ ಹೌದು.

ಸಜ್ಜೀವನದ ಗುರಿಯನ್ನು ಕ್ಷಣಾರ್ಧದಲ್ಲಿ ತಪ್ಪಿಸಿ, ಯಶಸ್ಸನ್ನೂ, ಕೀರ್ತಿಯನ್ನೂ ದುರ್ಲಭವಾಗುವಂತೆ ಮಾಡಿಬಿಡುವ ಈ ಕೋಪವನ್ನು ತ್ಯಜಿಸುವುದು ಅಗತ್ಯ. ಕೋಪನಿಗ್ರಹ ಬದುಕಿನ ಸರಳ ದಾರಿಗೆ ಸವಾಲಾದರೂ ಇದನ್ನು ನಿಗ್ರಹಿಸದ ಹೊರತು ಬದುಕು ಸರಳವಾಗಿ ದಕ್ಕುವುದಿಲ್ಲ!

— ಭಾಸ್ವ

ಟಾಪ್ ನ್ಯೂಸ್

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.