ವಿದಾಯದ ಅಂಚಲ್ಲಿ ಟೆನಿಸ್‌ ದಿಗ್ಗಜರು


Team Udayavani, Jan 27, 2018, 12:27 PM IST

2-aaaaa.jpg

ಹೀಗೂ ಆಗುತ್ತದೆಯೇ ಎಂಬ ಪ್ರಶ್ನೆ ಟೆನಿಸ್‌ ಅಭಿಮಾನಿಗಳನ್ನು 2018ರ ಆರಂಭದಲ್ಲಿಯೇ ಕಾಡಲುತೊಡಗಿದೆ. 100ನೇ ಕ್ರಮಾಂಕದ ಆಟಗಾರ ಕೂಡ ನಡಾಲ್‌, ಜೋಕೋವಿಚ್‌, ಮರ್ರೆ, ಫೆಡರರ್‌ರನ್ನು ಸೋಲಿಸಬಲ್ಲರು ಎಂಬಂತಹ ಸನ್ನಿವೇಶದಿಂದ ಇದ್ದಕ್ಕಿದ್ದಂತೆ ಆ ಗುಣಮಟ್ಟದ ಸಮರ್ಥರು ಇಲ್ಲವೇನೋ ಎಂಬ ಮಾದರಿಯ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಮುಖ ಆಟಗಾರರು ಆಡಿದಾಗಲೆಲ್ಲ ಅವರೇ ಮಿಂಚುತ್ತಿದ್ದಾರೆ. ಅವರಲ್ಲೊಬ್ಬರು ಗ್ರಾÂನ್‌ ಸ್ಲಾಂ ಗೆಲ್ಲುತ್ತಿದ್ದಾರೆ. ಈ ಮಂದಿ ನಿವೃತ್ತಿಯ ಅಂಚಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅಪ್ರತಿಮರಲ್ಲದ ಅಲ್ಪ ಪ್ರತಿಭಾವಂತರೂ ಗ್ರಾÂನ್‌ಸ್ಲಾಂ ಗೆಲ್ಲಬಹುದು ಎಂಬ ಪ್ರತಿಪಾದನೆ ಕೇಳಿಬರುತ್ತಿದೆ. ಬಹುಶಃ ಈ ಬಾರಿಯ ಆಸ್ಟ್ರೇಲಿಯನ್‌ ಓಪನ್‌ ಈ ದಿಕ್ಕಿನಲ್ಲಿ ಅನೇಕ ಸಾಕ್ಷಿಗಳನ್ನು ಒದಗಿಸುತ್ತ ಹೋಗಿದೆ.

ಅದೇ ಆಟಗಾರರು ಇನ್ನೆಷ್ಟು ದಿನ?
ರೋಜರ್‌ ಫೆಡರರ್‌ ಕಳೆದ 15 ವರ್ಷಗಳಿಂದ ಆಡುತ್ತಿದ್ದಾರೆ. ಸದ್ಯಕ್ಕೇನೋ ಅವರು ಪ್ರಜ್ವಲಿಸುತ್ತಲೇ ಇದ್ದಾರೆ. ಆದರೆ ಇದು ವರ್ಷಗಳ ಕಾಲ ವಿಸ್ತರಿಸುವುದು ಕಷ್ಟ. ಈಗಾಗಲೇ ಅವರು ಆಯ್ದ ಟೂರ್ನಿಗಳಲ್ಲಿ ಮಾತ್ರ ರ್ಯಾಕೆಟ್‌ ಝಳಪಿಸುತ್ತಿದ್ದಾರೆ. ಫ್ರೆಂಚ್‌ ಓಪನ್‌ಗೆ ಬೆನ್ನು ತೋರಿಸುವ ಅವರ ಪ್ರವೃತ್ತಿ ಈ ವರ್ಷವೂ ಮುಂದುವರಿದರೆ ಅಚ್ಚರಿ ಪಡಬೇಕಾಗಿಲ್ಲ. ಪ್ರಮುಖ ಸ್ಪರ್ಧಿಗಳಾದ ನಡಾಲ್‌ ಹಾಗೂ ನೋವಾಕ್‌ ಜೋಕೋವಿಚ್‌ ತಮ್ಮ ಗಾಯದ ಸಮಸ್ಯೆಯಿಂದಲೇ ಹೊರ ಬಂದಿಲ್ಲ. ಫಿಟ್‌ನೆಸ್‌ ಇಲ್ಲದ ಅವರ ಆಟದಲ್ಲಿ ಆತ್ಮವಿಶ್ವಾಸವೇ ಇಲ್ಲದೆ ನೋಡಲೂ ತ್ರಾಸ, ಯಡವಟ್ಟಾಗಿ ಆರಂಭಿಕ ಹಂತಗಳಲ್ಲಿ ಸೋಲುವುದು ಕೂಡ ನಿರೀಕ್ಷಿತವಾಗಿಬಿಡುತ್ತದೆ. 2018ರ ಋತುವಿನಲ್ಲಿ ಈ ಇಬ್ಬರೂ ಸ್ಪರ್ಧಾತ್ಮಕ ಟೆನಿಸ್‌ ಕೋರ್ಟ್‌ಗೇ ಇಳಿದಿಲ್ಲ. ವಿಚಿತ್ರ ಎಂದರೆ ಅವರು ಮನಸ್ಸಿನಲ್ಲಿಯೇ ನಾವು ಫಿಟ್‌ ಎಂದು ಪರಿಭಾವಿಸಿ ಮೆಲ್ಬೋನ್‌ನಲ್ಲಿ ಆಡಲು ಇಳಿದರೆ ಅನಾಮಿಕ ಆಟಗಾರರು ಪ್ರತಿಷ್ಟಿತರನ್ನು ಸೋಲಿಸಲು ತಮಗೊಂದು ಅವಕಾಶ ಸಿಕ್ಕಿದೆ. ಗಾಯದಿಂದ ಹಿಂತಿರುಗಿದ ಆಟಗಾರರಲ್ಲಿ ಒಂದು ಅಳುಕಿರುತ್ತದೆ. ಅದನ್ನು ತಾವು ನಗದು ಮಾಡಿಕೊಳ್ಳಬಹುದು ಎಂಬಂತಹ ಆಕ್ರಮಣಕಾರಿ ಮನೋಭಾವ, ಆಟ ಕಾಣುತ್ತಿಲ್ಲ. ಈ ಟಾಪ್‌ ಆಟಗಾರರು ಆಸ್ಟ್ರೇಲಿಯನ್‌ ಓಪನ್‌ನ ಎರಡನೇ ವಾರಕ್ಕೆ ಮುನ್ನಡೆಯುವಲ್ಲಿ ಈ ಅಂಶದ ಕಾಣಿಕೆಯೂ ಇದೆ.

ಇತ್ತ ಇದ್ದೊಬ್ಬ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆ ಗಾಯಾಳುಗಳ ಸಾಲಿಗೆ ಸೇರಿದ್ದಾರೆ. ನಾಲ್ಕರ ಜೊತೆಗೆ ಇನ್ನೊಬ್ಬ ಮುಖ್ಯರನ್ನು ಸೇರಿಸಬಹುದು ಎಂದರೆ ಗುಂಪಿಗೆ ಸೇರುವ ಸ್ಟಾನ್‌ ವಾವ್ರಿಂಕಾ ಕೂಡ ಅಂಕಣಕ್ಕಿಳಿಯುವ ಉತ್ತಮ ದೈಹಿಕ ಫಿಟ್‌ನೆಸ್‌ ಹೊಂದಿಲ್ಲ. ವಾವ್ರಿಂಕಾ ತಮ್ಮ ಅದ್ಭುತ ಬ್ಯಾಕ್‌ಹ್ಯಾಂಡ್‌ ಮತ್ತು ಪರಾಜಯವನ್ನು ಒಪ್ಪಿಕೊಳ್ಳದೆ ಹೋರಾಡುವ ಮನಸ್ಥಿತಿಯ ಕಾರಣ ಲೆಕ್ಕಕ್ಕೆ ಬರುತ್ತಿದ್ದರು. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಡಿದರೂ ಅವರು ಎರಡನೇ ಸುತ್ತಲ್ಲಿಯೇ ಬಸವಳಿದರು.

ಪ್ರತ್ಯಸ್ತ್ರಗಳ ಕೊರತೆ
ಅಮೆರಿಕದ ಪೀಟ್‌ ಸಾಂಪ್ರಾಸ್‌ ಹಾಗೂ ಆ್ಯಂಡ್ರಿ ಅಗಾಸ್ಸಿಯವರ ನಿರ್ಗಮನದ ಸಂದರ್ಭದಲ್ಲಿಯೂ ಇಂತಹದ್ದೊಂದು ನಿರ್ವಾತ ಏರ್ಪಟ್ಟಿತ್ತು. ಈ ಇಬ್ಬರ 2000ದ ದಶಕದ ನಂತರ 2001ರಿಂದ 2004ರವರೆಗೆ ಏಕೈಕ ಹೊಡೆತದ ಅದ್ಭುತಗಳು ಕೂಡ ಸ್ಲಾಂ ಗೆಲ್ಲಲಾರಂಭಿಸಿದರು. ಅವತ್ತು ಗ್ರಾನ್‌ ಸ್ಲಾಂ ಗೆದ್ದ ಥಾಮಸ್‌ ಜಾನ್ಸನ್‌, ಅಲೆºರ್ಟಾ ಕೋಸ್ಟಾ ಮಾದರಿಯ ಆಟಗಾರರು ಸ್ಲಾಂ ಗೆದ್ದರು, ನೆನಪುಗಳನ್ನು ಗೆಲ್ಲಲ್ಲಿಲ್ಲ!

ಒಂದು ಸ್ಲಾಂ ಅದ್ಭುತಗಳನ್ನು ಅದೊಂದೇ ಕಾರಣಕ್ಕೆ ಟೀಕಿಸಬೇಕಿಲ್ಲ. ಅಷ್ಟಕ್ಕೂ ಅವರು ಆ ವರ್ಷದ ಸ್ಪರ್ಧಿಗಳ ಸಾಲಿನಲ್ಲಿ ಅತ್ಯುತ್ತಮರು ಎಂಬ ಅರ್ಥದಲ್ಲಿ ಪ್ರಶಸ್ತಿ ವಿಜೇತರೇ ವಿನಃ ಅವರನ್ನು ಗ್ರೇಟ್‌ ಸ್ಲಾಂ ವಿಜೇತರ ಜೊತೆ ಹೋಲಿಸಬೇಕಿಲ್ಲ. ಮ್ಯಾಟ್ಸ್‌ ವಿಲಾಂಡರ್‌, ಬೋರಿಸ್‌ ಬೆಕರ್‌, ಮೈಕೆಲ್‌ ಚಾಂಗ್‌ ತರಹದ ಆಟಗಾರರು ಕೂಡ ಹೀಗೆ ಇದ್ದಕ್ಕಿದ್ದಂತೆ ಅಂಕಣದಲ್ಲಿ ಚಾಂಪಿಯನ್‌ರಾಗಿ ಸೃಷ್ಟಿಯಾದರು ಮತ್ತು ತಮ್ಮ ತಾಕತ್ತಿನಿಂದಲೇ ಜನಮಾನಸದಲ್ಲಿ ನೆಲೆ ನಿಂತರು. ಖುದ್ದು ಫೆಡರರ್‌ಗೆ ಹೊಸ ತಲೆಮಾರಿನ ಬಗ್ಗೆ ವಿಶ್ವಾಸವಿದ್ದಂತಿಲ್ಲ. ಅವರು ಇತ್ತೀಚೆಗೊಮ್ಮೆ ತಮ್ಮ ಜಂಟಲ್‌ವುನ್‌ ವ್ಯಕ್ತಿತ್ವದ ಹೊರತಾಗಿಯೂ ತುಸು ಅಸಹನೆ ವ್ಯಕ್ತಪಡಿಸಿದ್ದುಂಟು, ನನ್ನ ಹಾಗೂ ರಫಾರನ್ನು ಸರ್ಕ್ನೂಟ್‌ನಿಂದ ಹೊರಹಾಕುವಂತ ರ್ಯಾಕೆಟ್‌ ಶಕ್ತಿ ಹೊಸ ಜನರೇಷನ್‌ನಲ್ಲಿ ಇದ್ದಂತಿಲ್ಲ!

ಫೆಡರರ್‌ರ ಹೇಳಿಕೆಯಲ್ಲಿ ಆತಂಕ ಇತ್ತೇ ವಿನಃ ವ್ಯಂಗ್ಯವಿರಲಿಲ್ಲ. ಈ ಆತಂಕ ವಿಶ್ವ ಟೆನಿಸ್‌ ನಿರ್ವಾಹಕ ಎಟಿಪಿಯನ್ನು ಕೂಡ ಕಾಡಿದೆ. ಇಷ್ಟು ವರ್ಷಗಳ ತನಕ ನಿರುಮ್ಮಳವಾಗಿ ಸೃಷ್ಟಿಯಾಗುವ ಪ್ರತಿಭೆಗಳಿಗೆ ಅವಕಾಶಗಳನ್ನು ಹಂಚುವ ಕೆಲಸವನ್ನಷ್ಟೇ ಮಾಡುತ್ತಿದ್ದ ಆಲ್‌ ಟೆನಿಸ್‌ ಅಸೋಸಿಯೇಶನ್‌ 21ರೊಳಗಿನ ಟೆನಿಸ್‌ ಪ್ರತಿಭೆಗಳ ಪ್ರಕಾಶಕ್ಕೆ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಬರಲಿರುವ ನವೆಂಬರ್‌ನಲ್ಲಿ ಮಿಲಾನ್‌ನಲ್ಲಿ ನೆಕ್ಸ್‌r ಜನರೇಶನ್‌ ಎಟಿಪಿ ಫೈನಲ್‌ ಎಂಬ ಟೂನಿರ್ಣಯನ್ನು ಆಯೋಜಿಸಿದೆ. ಈ ಕೂಟದಲ್ಲಿ 1996 ಅಥವಾ ಆ ವರ್ಷದ ನಂತರ ಜನಿ¾ಸಿದ ಆಟಗಾರರು ಮಾತ್ರ ಆಡಬಹುದು!
ಪ್ರತಿಭೆಗಳು ಇಲ್ಲ ಅಂತಲ್ಲ. ವಿಶ್ವದ ನಂ. 4ನೇ ಶ್ರೇಯಾಂಕದ ಜರ್ಮನ್‌ ಅಲೆಕ್ಸಾಂಡರ್‌ ಜ್ವರೇವಾ, ರಷ್ಯಾದ ಆ್ಯಂಡ್ರೆಯಿ ರುಬ್ಲೇವ್‌, ಕೆನಡಾದ ಡೆನಿಸ್‌ ಶಪೊವಲೋವಾ, ಯುಎಸ್‌ಎಯ ಜರೆಡ್‌ ಡೊನಾಲ್ಡ್‌ಸನ್‌, ದಕ್ಷಿಣ ಕೊರಿಯಾದ ಹೈಯಾನ್‌ ಚುಂಗ್‌… ಪಟ್ಟಿಯನ್ನು ಮುಂದುವರೆಸಬಹುದು. 

ಐತಿಹಾಸಿಕ ಸಾಧನೆಯ ಹುಚ್ಚು?
ಓರ್ವ ಹೆಸರು ಪ್ರಕಟವಾಗುವುದನ್ನು ಬಯಸದ ಖ್ಯಾತ ಕೋಚ್‌ ಹೇಳುತ್ತಾರೆ, “ಇಂದಿನ ಯುವ ಜನರಲ್ಲಿ ಸಾಮರ್ಥ್ಯವಿದೆ. ಅವರು ಇಂದಿನ ತಂತ್ರಜಾnನವನ್ನು ಕೂಡ ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಅಮೋಘ ಫಿಟ್‌ನೆಸ್‌ ಹೊಂದುತ್ತಾರೆ. ಅವರ ಅಥ್ಲೆಟಿಸಂ ಗಮನಾರ್ಹವಾದುದು. ಸಮಸ್ಯೆ ಇರುವುದು ಅಲ್ಲಲ್ಲ. ಅವರಲ್ಲಿ ನಾವು ಫೆಡ್‌, ರಫಾ ಅವರಲ್ಲಿ ಕಾಣುವ ಆಟದ “ಹುಚ್ಚು ಕಾಣಿಸುವುದಿಲ್ಲ. ಆಟಕ್ಕಾಗಿಯೇ ನಾವು ಜೀವ ತಳೆದಿದ್ದೇವೆ ಎಂಬ ಸಮರ್ಪಣಾ ಮನೋಭಾವವಿಲ್ಲ. ಹಿಂದಿನ ಆಟಗಾರರ ಆಟವನ್ನು ಅವರು ನೋಡುವುದಿಲ್ಲ. “ಲೈವ್‌ನ್ನು ಕೂಡ ಗಮನಿಸುವುದಿಲ್ಲ. ಅವರ ಆಸಕ್ತಿಯನ್ನು ಆಚೀಚೆ ಮಾಡುವ ಹತ್ತಾರು ಅನುಕೂಲಗಳು ಇಂದು ಇವೆ. ಹಿಂದಿನ ಆಟಗಾರರ ಕುರಿತು ಪ್ರಶ್ನೆ ಕೇಳಿದರೆ ಕೂಡ ಅವರೆಲ್ಲ ಡ್ರಾಪ್‌ ಶಾಟ್‌! ಹಾಗಾಗಿಯೇ ಅವರು ಐತಿಹಾಸಿಕ ಆಟಗಾರರು ಆಗುವುದು ಕಷ್ಟ. ಹೆಚ್ಚೆಂದರೆ ಆ ದಿನಗಳ ಒಳ್ಳೆಯ ಆಟಗಾರರಾಗಬಹುದಷ್ಟೇ…..

ಭರವಸೆ ಇಡಬೇಕಾದುದು ಎಲ್ಲ ಆಶಾವಾದಿಯ ಕರ್ತವ್ಯ. ಎಟಿಪಿಯ 1996ರ ಗಡಿಯಿಂದ ಒಂದು ವರ್ಷ ಈಚೆ ಇರುವ ಬ್ರಿಟನ್‌ನ ನಿಕ್‌ ಕಿರ್ಗೋಯಿಸ್‌ ನಿರ್ವಾತ ತುಂಬುವ ಒಬ್ಬ ಸಶಕ್ತ. ಈತ ಮೊನ್ನೆ ಮೊನ್ನೆ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಗೆದ್ದು ಗಮನ ಸೆಳೆದಿದ್ದಾನೆ. ಚುಂಗ್‌ ಜೋಕೋವಿಚ್‌ರನ್ನು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸುಲಭವಾಗಿ ಮಣಿಸಿದ್ದಾರೆ. ಅವತ್ತಿನಿಂದ ಇವತ್ತಿನವರೆಗೆ ಆಟಗಳು ಅಚ್ಚರಿಯನ್ನೇ ನಮ್ಮ ಮುಂದಿಡುತ್ತಿವೆ. ಈ ಸರ್‌ಪ್ರ„ಸ್‌ ಎಲಿಮೆಂಟ್‌ನಿಂದಾಗಿಯೇ ಆಟ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಪುರುಷರ ಟೆನಿಸ್‌ನಲ್ಲಿಯೂ ಇದು ಮತ್ತೆ ಮತ್ತೆ ಸಂಭವಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. 

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.