ಗೊರವನಹಳ್ಳಿಯ ಮಹಾಲಕ್ಷ್ಮೀ ಕ್ಷೇತ್ರ

Team Udayavani, Mar 25, 2017, 3:55 AM IST

13.jpg

ರಾಜ್ಯದೆಲ್ಲೆಡೆ ವರ ಮಹಾಲಕ್ಷ್ಮೀ  ಹಬ್ಬದ ದಿನ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮೀಯನ್ನು ಭಕ್ತಿ ಭಾವದಿಂದ ಪೂಜಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿರುವುದು ವಿಶೇಷ ಸಂಗತಿಯಾಗಿದೆ.

ಮುತೈದೆಯರ ಮನಮನೆಗಳಲ್ಲಿ ನೆಲೆಗೊಂಡಿರುವ ಮಹಾಲಕ್ಷ್ಮೀಯ ಪ್ರಸಿದ್ಧ ಕ್ಷೇತ್ರವೊಂದನ್ನು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಕಾಣಬಹುದು. ಅದುವೇ ಗೊರವನಹಳ್ಳಿ ಮಹಾಲಕ್ಷ್ಮೀಯ ಕ್ಷೇತ್ರ.

ಇಲ್ಲಿ ಶಿಲಾರೂಪದಲ್ಲಿ ನೆಲೆಗೊಂಡಿರುವ ಲಕ್ಷ್ಮೀಯು ಸಾವಿರಾರು ಭಕ್ತಾಧಿಗಳ ಆರಾಧ್ಯ ದೇವತೆ. ಈ ಕ್ಷೇತ್ರ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗುವುದರ ಜೊತೆಗೆ ಪ್ರವಾಸಿ ತಾಣವಾಗಿಯೂ ಸಹ ರೂಪುಗೊಂಡಿದೆ. ಬಹಳ ಹಿಂದಿನ ಕಾಲದಲ್ಲಿ ಒಂದು ಚಿಕ್ಕ ಹಳ್ಳಿಯಾಗಿದ್ದ ಈ ಗೊರವನಹಳ್ಳಿ ಇಲ್ಲಿನ ಲಕ್ಷ್ಮೀದೇವಿಯ ಮಹಿಮೆಯಿಂದಾಗಿ ದಿನೇ ದಿನೇ ಅಭಿವೃದ್ದಿಯಾಗುತ್ತಿದೆ. ಇಲ್ಲಿ ಶಿಕ್ಷಣ ಕೇಂದ್ರಗಳು ಸ್ಥಾಪಿತಗೊಂಡಿವೆ. ದೇವಾಲಯದ ಟ್ರಸ್ಟ್‌ವತಿಯಿಂದ ಸಾಮೂಹಿಕ ವಿವಾಹಗಳು, ಬಡ ವಿಧ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರಗಳನ್ನು ವಿತರಿಸುವಂತಹ ಕಾರ್ಯಕ್ರಮಗಳು ನಡೆಯುತ್ತವೆ.

ಇಪ್ಪತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಣ್ಣ ದೇಗುಲದಲ್ಲಿ ಪ್ರತಿಷ್ಠಾಪನೆಗೊಂಡ 
ಲಕ್ಷ್ಮೀಯು ಇಂದು ದೊಡ್ಡ ದೇವಾಲಯವನ್ನು ಹೊಂದಿದೆ. ಈ ದೇಗುಲದ ಸುಂದರವಾದ ಗೋಪುರದಲ್ಲಿ ಎಂಟು ಲಕ್ಷ್ಮೀಯರ ಪ್ರತಿಮೆಗಳನ್ನು ಕಾಣಬಹುದು.

ಲಕ್ಷ್ಮೀ ನೆಲೆಗೊಂಡ ಕಥೆ 

ಇಂದು ಶಿಲಾ ರೂಪದಲ್ಲಿ ಪೂಜೆಗೊಳ್ಳುತ್ತಿರುವ ಲಕ್ಷಿ$¾ಯು ಇಲ್ಲಿಗೆ ಬಂದು ನೆಲೆಗೊಂಡ ಬಗ್ಗೆ ದಂತಕತೆಯೊಂದು ಇಲ್ಲಿ ಪ್ರಚಲಿತದಲ್ಲಿದೆ. ಅದರ ಪ್ರಕಾರ ಹಿಂದಿನ ಕಾಲದಲ್ಲಿ ಈ ಗ್ರಾಮದ ಅಬ್ಬಯ್ಯ ಎಂಬುವರು ದನ ಕಾಯಲು ಕೆರೆಯೊಂದರ ಬಳಿ ಹೋದಾಗ ನಾನು ಲಕ್ಷ್ಮೀ ರೂಪದಲ್ಲಿ ಬರುತ್ತೇನೆ ಎಂಬ ದೇವತೆಯ ಸಂದೇಶ ಕೇಳಿ ಬರುತ್ತದೆ. ಆಗ ಅಬ್ಬಯ್ಯ  ಬಾ ಎಂದು ಕರೆದಾಗ ಶಂಖು, ಚಕ್ರ, ನಾಮ ಪದ್ಮಗಳಿಂದ ಕೂಡಿದ ಶಿಲಾಮೂರ್ತಿಯೊಂದು ಕಾಣಿಸುತ್ತದೆ. ಇದನ್ನು ಮನೆಗೆ ತಂದ ಅಬ್ಬಯ್ಯ ಪೂಜಿಸತೊಡಗುತ್ತಾರೆ. ಆತನ ಮರಣದ ನಂತರ ಅವರ ಮಗ ತೋಟದಪ್ಪರು ಎಳೆನೀರಿನಲ್ಲಿ ಮಣ್ಣು ಕಲೆಸಿ,ಅದರಿಂದ ಸಣ್ಣ ದೇಗುಲವೊಂದನ್ನು ಕಟ್ಟಿ ಅದರಲ್ಲಿ ಲಕ್ಷ್ಮೀಯನ್ನು ಇಟ್ಟು ಪೂಜಿಸುತ್ತಾರೆ. ಅವರ ನಂತರ ಲಕ್ಷ್ಮೀ ಪೂಜೆಯು ಕೆಲವು ವರ್ಷ ಸ್ಥಗಿತಗೊಳ್ಳುತ್ತದೆ.

ಈ ಮನೆತನಕ್ಕೆ ಸೊಸೆಯಾಗಿ ಬಂದ ಕಮಲಮ್ಮರು ಈ ಶಿಲಾಮೂರ್ತಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾ ಬರುತ್ತಾರೆ. ಆಗ ಗೊರವನಹಳ್ಳಿ ಲಕ್ಷ್ಮೀಯು ರಾಜ್ಯದೆಲ್ಲೆಡೆ ಜನಪ್ರಿಯವಾಗುತ್ತದೆ. ಕಮಲಮ್ಮರು ಈಗ ಮರಣ ಹೊಂದಿದ್ದಾರೆ. ಆದರೆ ಅವರ ಮಹಿಮೆ ಭಕ್ತರಲ್ಲಿ ಸದಾ  ಹಚ್ಚ ಹಸಿರಾಗಿದೆ.

ಲಕ್ಷ್ಮೀಯ ಗರ್ಭಗುಡಿಯಲ್ಲಿ ದೊಡ್ಡದೊಂದು ಹುತ್ತವಿದೆ. ಇದು ದಿನೇ ದಿನೇ ಬೆಳೆಯುತ್ತಿದೆ ಎನ್ನಲಾಗುತ್ತದೆ. ಇದನ್ನು “ಮಾಂಚಲಾ ನಾಗಪ್ಪ ‘ ಎಂದು ಭಕ್ತರು ಕರೆಯುತ್ತಾರೆ.

ವಿಶೇಷ ಪೂಜೆ 

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿ ಲಕ್ಷ ದಿಪೋತ್ಸವ ನಡೆಯುತ್ತದೆ. ಆಗ ಕಲಶ ಪೂಜೆಯು ಜರುಗುತ್ತದೆ. ಅಂದು ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ವರಮಹಾ ಲಕ್ಷ್ಮೀ ಹಬ್ಬದ ದಿನ ಈ ಕ್ಷೇತ್ರದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿ ಪುನೀತರಾಗುತ್ತಾರೆ. ಅಂದು ದಿನವಿಡೀ ವಿಶೇಷ ಪೂಜೆಗಳು ಏರ್ಪಡುತ್ತವೆ. ಈ ಕ್ಷೇತ್ರಕ್ಕೆ ಬರುವ ಜನರಿಗೆ ಅನ್ನದಾನದ ಸೌಕರ್ಯವಿದೆ.

ಜಯಮಂಗಲಿ ನದಿಯ ದಂಡೆಯ ಪಕ್ಕದಲ್ಲಿರುವ ಗೊರವನಹಳ್ಳಿಯು ಪ್ರವಾಸಿಗರ ಮನಕ್ಕೆ ಮುದ ನೀಡುವಂತಹ ಪ್ರಕೃತಿ ಸೊಬಗನ್ನು ಹೊಂದಿ ಕಂಗೊಳಿಸುತ್ತಿದೆ. ದೇವಾಲಯದ ಬಲಭಾಗದಲ್ಲಿ ಜಯಮಂಗಲಿ ನದಿಗೆ ನಿರ್ಮಿಸಲಾಗಿರುವ ತೀತಾ ಜಲಾಶಯ ನೋಡಲು ಮನಮೋಹಕವಾಗಿದೆ. ಈ ಜಲಾಶಯದಿಂದ ಸಾವಿರಾರು ಎಕರೆ ಜಮೀನಿಗೆ ನೀರು ಪೂರೈಕೆಯಾಗುತ್ತದೆ.

ಈ ಸ್ಥಳದಲ್ಲಿ ಜಯಮಂಗಲಿ ನದಿಯ ನೀರು ಇಬ್ಭಾಗವಾಗಿ ಹರಿಯುತ್ತದೆ. ಇದರ ಮಧ್ಯದಲ್ಲಿ ಪುರಾತನವಾದ ಸಂಗಮೇಶ್ವರನ ದೇವಾಲಯವನ್ನು ಕಾಣಬಹುದು. ದೇಗುಲದ ಮುಂದಿರುವ ಬಾವಿಯಲ್ಲಿ ಪಂಚಲಿಂಗಗಳಿವೆ ಎಂಬ ಐತಿಹ್ಯವಿದೆ. ಇಲ್ಲಿ ಸಂಗಮೇಶ್ವರನಿಗೆ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಗೊರವ ಎಂಬ ಶಿವಯೋಗಿಯು ನೆಲೆಗೊಂಡು ಈ ನದಿಯಲ್ಲಿ ಸ್ನಾನ ಮಾಡಿ ಪ್ರತಿನಿತ್ಯ ಸಂಗಮೇಶ್ವರನನ್ನು ಆರಾಧನೆ ಮಾಡುತ್ತಿದ್ದನಂತೆ. ಆದ್ದರಿಂದ ಈ ಸ್ಥಳಕ್ಕೆ ಗೊರವನಹಳ್ಳಿ ಎಂಬ ಹೆಸರು ಬಂದಿರುವುದಾಗಿ ಪ್ರತೀತಿ ಇದೆ.

ತಲುಪುವುದು ಹೇಗೆ ? 

  ಗೊರವನಹಳ್ಳಿಯ ಮಹಾಲಕ್ಷ್ಮೀ ಕ್ಷೇತ್ರ ರಾಜ್ಯದೆಲ್ಲೆಡೆ ವರ ಮಹಾಲಕ್ಷ್ಮೀ  ಹಬ್ಬದ ದಿನ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮೀಯನ್ನು ಭಕ್ತಿ ಭಾವದಿಂದ ಪೂಜಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿರುವುದು ವಿಶೇಷ ಸಂಗತಿಯಾಗಿದೆ.

ಮುತೈದೆಯರ ಮನ ಮನೆಗಳಲ್ಲಿ ನೆಲೆಗೊಂಡಿರುವ ಮಹಾಲಕ್ಷ್ಮೀಯ ಪ್ರಸಿದ್ಧ ಕ್ಷೇತ್ರವೊಂದನ್ನು ತುಮಕೂರು ಜಿÇÉೆಯ ಕೊರಟಗೆರೆ ತಾಲ್ಲೂಕಿನಲ್ಲಿ ಕಾಣಬಹುದು. ಅದುವೇ ಗೊರವನಹಳ್ಳಿ ಮಹಾಲಕ್ಷ್ಮೀಯ ಕ್ಷೇತ್ರ.

ಇಲ್ಲಿ ಶಿಲಾರೂಪದಲ್ಲಿ ನೆಲೆಗೊಂಡಿರುವ ಲಕ್ಷ್ಮೀಯು ಸಾವಿರಾರು ಭಕ್ತಾಧಿಗಳ ಆರಾಧ್ಯ ದೇವತೆ. ಈ ಕ್ಷೇತ್ರ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗುವುದರ ಜೊತೆಗೆ ಪ್ರವಾಸಿ ತಾಣವಾಗಿಯೂ ಸಹ ರೂಪುಗೊಂಡಿದೆ. ಬಹಳ ಹಿಂದಿನ ಕಾಲದಲ್ಲಿ ಒಂದು ಚಿಕ್ಕ ಹಳ್ಳಿಯಾಗಿದ್ದ ಈ ಗೊರವನಹಳ್ಳಿ ಇಲ್ಲಿನ ಲಕ್ಷ್ಮೀ ದೇವಿಯ ಮಹಿಮೆಯಿಂದಾಗಿ ದಿನೇ ದಿನೇ ಅಭಿವೃದ್ದಿಯಾಗುತ್ತಿದೆ. ಇಲ್ಲಿ ಶಿಕ್ಷಣ ಕೇಂದ್ರಗಳು ಸ್ಥಾಪಿತಗೊಂಡಿವೆ. ದೇವಾಲಯದ ಟ್ರಸ್ಟ್‌ವತಿಯಿಂದ ಸಾಮೂಹಿಕ ವಿವಾಹಗಳು, ಬಡ ವಿಧ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರಗಳನ್ನು ವಿತರಿಸುವಂತಹ ಕಾರ್ಯಕ್ರಮಗಳು ನಡೆಯುತ್ತವೆ.

ಇಪ್ಪತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಣ್ಣ ದೇಗುಲದಲ್ಲಿ ಪ್ರತಿಷ್ಠಾಪನೆಗೊಂಡ 
ಲಕ್ಷ್ಮೀಯು ಇಂದು ದೊಡ್ಡ ದೇವಾಲಯವನ್ನು ಹೊಂದಿದೆ. ಈ ದೇಗುಲದ ಸುಂದರವಾದ ಗೋಪುರದಲ್ಲಿ ಎಂಟು ಲಕ್ಷ್ಮೀಯರ ಪ್ರತಿಮೆಗಳನ್ನು ಕಾಣಬಹುದು.

ಲಕ್ಷ್ಮೀ ನೆಲೆಗೊಂಡ ಕಥೆ 

ಇಂದು ಶಿಲಾ ರೂಪದಲ್ಲಿ ಪೂಜೆಗೊಳ್ಳುತ್ತಿರುವ ಲಕ್ಷ್ಮೀಯು ಇಲ್ಲಿಗೆ ಬಂದು ನೆಲೆಗೊಂಡ ಬಗ್ಗೆ ದಂತಕತೆಯೊಂದು ಇಲ್ಲಿ ಪ್ರಚಲಿತದಲ್ಲಿದೆ. ಅದರ ಪ್ರಕಾರ ಹಿಂದಿನ ಕಾಲದಲ್ಲಿ ಈ ಗ್ರಾಮದ ಅಬ್ಬಯ್ಯ ಎಂಬುವರು ದನ ಕಾಯಲು ಕೆರೆಯೊಂದರ ಬಳಿ ಹೋದಾಗ ನಾನು ಲಕ್ಷಿ$¾à ರೂಪದಲ್ಲಿ ಬರುತ್ತೇನೆ ಎಂಬ ದೇವತೆಯ ಸಂದೇಶ ಕೇಳಿ ಬರುತ್ತದೆ. ಆಗ ಅಬ್ಬಯ್ಯ ಬಾ ಎಂದು ಕರೆದಾಗ ಶಂಖು, ಚಕ್ರ, ನಾಮ ಪದ್ಮಗಳಿಂದ ಕೂಡಿದ ಶಿಲಾಮೂರ್ತಿಯೊಂದು ಕಾಣಿಸುತ್ತದೆ. ಇದನ್ನು ಮನೆಗೆ ತಂದ ಅಬ್ಬಯ್ಯ ಪೂಜಿಸತೊಡಗುತ್ತಾರೆ. ಆತನ ಮರಣದ ನಂತರ ಅವರ ಮಗ ತೋಟದಪ್ಪರು ಎಳೆನೀರಿನಲ್ಲಿ ಮಣ್ಣು ಕಲೆಸಿ,ಅದರಿಂದ ಸಣ್ಣ ದೇಗುಲವೊಂದನ್ನು ಕಟ್ಟಿ ಅದರಲ್ಲಿ ಲಕ್ಷಿ$¾ಯನ್ನು ಇಟ್ಟು ಪೂಜಿಸುತ್ತಾರೆ. ಅವರ ನಂತರ ಲಕ್ಷ್ಮೀ ಪೂಜೆಯು ಕೆಲವು ವರ್ಷ ಸ್ಥಗಿತಗೊಳ್ಳುತ್ತದೆ.

ಈ ಮನೆತನಕ್ಕೆ ಸೊಸೆಯಾಗಿ ಬಂದ ಕಮಲಮ್ಮರು ಈ ಶಿಲಾಮೂರ್ತಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾ ಬರುತ್ತಾರೆ. ಆಗ ಗೊರವನಹಳ್ಳಿ ಲಕ್ಷ್ಮೀಯು ರಾಜ್ಯದೆಲ್ಲೆಡೆ ಜನಪ್ರಿಯವಾಗುತ್ತದೆ. ಕಮಲಮ್ಮರು ಈಗ ಮರಣ ಹೊಂದಿದ್ದಾರೆ. ಆದರೆ ಅವರ ಮಹಿಮೆ ಭಕ್ತರಲ್ಲಿ ಸದಾ  ಹಚ್ಚ ಹಸಿರಾಗಿದೆ.

ಲಕ್ಷ್ಮೀಯ ಗರ್ಭಗುಡಿಯಲ್ಲಿ ದೊಡ್ಡದೊಂದು ಹುತ್ತವಿದೆ. ಇದು ದಿನೇ ದಿನೇ ಬೆಳೆಯುತ್ತಿದೆ ಎನ್ನಲಾಗುತ್ತದೆ. ಇದನ್ನು “ಮಾಂಚಲಾ ನಾಗಪ್ಪ ‘ ಎಂದು ಭಕ್ತರು ಕರೆಯುತ್ತಾರೆ.

ವಿಶೇಷ ಪೂಜೆ 

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿ ಲಕ್ಷ ದಿಪೋತ್ಸವ ನಡೆಯುತ್ತದೆ. ಆಗ ಕಲಶ ಪೂಜೆಯು ಜರುಗುತ್ತದೆ. ಅಂದು ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ವರಮಹಾ ಲಕ್ಷ್ಮೀ ಹಬ್ಬದ ದಿನ ಈ ಕ್ಷೇತ್ರದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿ ಪುನೀತರಾಗುತ್ತಾರೆ. ಅಂದು ದಿನವಿಡೀ ವಿಶೇಷ ಪೂಜೆಗಳು ಏರ್ಪಡುತ್ತವೆ. ಈ ಕ್ಷೇತ್ರಕ್ಕೆ ಬರುವ ಜನರಿಗೆ ಅನ್ನದಾನದ ಸೌಕರ್ಯವಿದೆ.

ಜಯಮಂಗಲಿ ನದಿಯ ದಂಡೆಯ ಪಕ್ಕದಲ್ಲಿರುವ ಗೊರವನಹಳ್ಳಿಯು ಪ್ರವಾಸಿಗರ ಮನಕ್ಕೆ ಮುದ ನೀಡುವಂತಹ ಪ್ರಕೃತಿ ಸೊಬಗನ್ನು ಹೊಂದಿ ಕಂಗೊಳಿಸುತ್ತಿದೆ. ದೇವಾಲಯದ ಬಲಭಾಗದಲ್ಲಿ ಜಯಮಂಗಲಿ ನದಿಗೆ ನಿರ್ಮಿಸಲಾಗಿರುವ ತೀತಾ ಜಲಾಶಯ ನೋಡಲು ಮನಮೋಹಕವಾಗಿದೆ. ಈ ಜಲಾಶಯದಿಂದ ಸಾವಿರಾರು ಎಕರೆ ಜಮೀನಿಗೆ ನೀರು ಪೂರೈಕೆಯಾಗುತ್ತದೆ.

ಈ ಸ್ಥಳದಲ್ಲಿ ಜಯಮಂಗಲಿ ನದಿಯ ನೀರು ಇಬ್ಭಾಗವಾಗಿ ಹರಿಯುತ್ತದೆ. ಇದರ ಮಧ್ಯದಲ್ಲಿ ಪುರಾತನವಾದ ಸಂಗಮೇಶ್ವರನ ದೇವಾಲಯವನ್ನು ಕಾಣಬಹುದು. ದೇಗುಲದ ಮುಂದಿರುವ ಬಾವಿಯಲ್ಲಿ ಪಂಚಲಿಂಗಗಳಿವೆ ಎಂಬ ಐತಿಹ್ಯವಿದೆ. ಇಲ್ಲಿ ಸಂಗಮೇಶ್ವರನಿಗೆ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಗೊರವ ಎಂಬ ಶಿವಯೋಗಿಯು ನೆಲೆಗೊಂಡು ಈ ನದಿಯಲ್ಲಿ ಸ್ನಾನ ಮಾಡಿ ಪ್ರತಿನಿತ್ಯ ಸಂಗಮೇಶ್ವರನನ್ನು ಆರಾಧನೆ ಮಾಡುತ್ತಿದ್ದನಂತೆ. ಆದ್ದರಿಂದ ಈ ಸ್ಥಳಕ್ಕೆ ಗೊರವನಹಳ್ಳಿ ಎಂಬ ಹೆಸರು ಬಂದಿರುವುದಾಗಿ ಪ್ರತೀತಿ ಇದೆ.

ತಲುಪುವುದು ಹೇಗೆ ?
ಜಿಲ್ಲಾ ಕೇಂದ್ರ ತುಮಕೂರಿನಿಂದ 25 ಕಿಮೀ ದೂರದಲ್ಲಿದೆ ಗೊರವನಹಳ್ಳಿ. ಕೊರಟಗೆರೆಯಿಂದ ಕೇವಲ 15 ಕಿಮೀ ದೂರವಿದೆ. ಇಲ್ಲಿಗೆ ಖಾಸಗಿ ಬಸ್‌ಗಳ ಸೌಕರ್ಯವಿದೆ. ದೇವಾಲಯದಲ್ಲಿ ಉಟದ ವ್ಯವಸ್ಥೆ ಇದೆ.

ದಂಡಿನಶಿವರ ಮಂಜುನಾಥ್‌

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.