ಗುರುವಿನ ದ್ವಾರಕೆ ಶರಣು!


Team Udayavani, Nov 9, 2019, 5:06 AM IST

guruvina

“ಕರ್ನಾಟಕದ ಕಿರೀಟ’ ಎಂದೇ ಕರೆಯಲ್ಪಡುವ ಬೀದರ್‌, ಸರ್ವಧರ್ಮಗಳ ಶಾಂತಿಯ ಬೀಡು, ಶರಣರ ನಾಡು. ಬೀದರ್‌ಗೆ ಕ್ರಿ.ಶ. 1512ರಲ್ಲಿ ಗುರುನಾನಕರು ಭೇಟಿ ನೀಡಿದ್ದರು. ಆಗಿನಿಂದ ಸಿಖ್ಖ್ ಧರ್ಮವು ಈ ನಗರಕ್ಕೆ ಪರಿಚಿತ. ಗುರುನಾನಕರು ಕಾವ್ಯಾತ್ಮಕವಾದ 974 ಸ್ತೋತ್ರಗಳನ್ನು ರಚಿಸಿದ್ದಾರೆ. ಈ ಸ್ತೋತ್ರಗಳ ಸಮಗ್ರ ಗುತ್ಛವನ್ನು “ಗುರು ಗ್ರಂಥ ಸಾಹೀಬ್‌’ ಎನ್ನುತ್ತಾರೆ. ನಾನಕರು ವಿಶ್ವಶಾಂತಿ ಹಾಗೂ ಸಹೋದರತೆ­ಗಳನ್ನು ಬೆಳೆಸಲು ಲೋಕಸಂಚಾರ ಕೈಗೊಂಡರು.

ಕ್ರಿ.ಶ.1510 ರಿಂದ 1515 ನಡುವೆ ಕನ್ನಡ ನಾಡನ್ನು ಹಾದು ಹೋಗಿದ್ದರು. ಈ ಸಮಯ­ದಲ್ಲಿ ಬೀದರ್‌ಗೆ ಕೊಟ್ಟ ಭೇಟಿ, ನಮ್ಮ ನಾಡಿಗೆ ಹಾಗೂ ಸಿಖ್‌ ಧರ್ಮಿಯರಿಗೆ ಅತ್ಯಂತ ಮಹತ್ವದ, ಐತಿಹಾಸಿಕ ಘಟನೆಯಾಗಿದೆ. ಗುರು ನಾನಕರು ಬೀದರ್‌ನ ಗುಡ್ಡವೊಂದರಲ್ಲಿ ತಂಗಿದ್ದಾಗ ಸ್ಥಳೀಯ ಸೂಫಿ ಸಂತರಾದ ಫ‌ಕೀರ್‌ ಜಲಾಲುದ್ದೀನ ಹಾಗೂ ಯಾಕುಬ್‌ ಅಲಿ ಅವರನ್ನು ಆದರಿಸಿ, ಸತ್ಕರಿಸಿದರು. ಅವರ ಸಮ್ಮುಖದಲ್ಲಿ ಸತ್ಸಂಗವನ್ನು ಏರ್ಪಡಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ತೋಡಿಕೊಂಡರು. ಅಲ್ಲದೆ ಅವರು ಗುರುಗಳಲ್ಲಿ, ಜಲಮೂಲವನ್ನು ಶೋಧಿಸಿ ಕೊಡುವಂತೆ ಮನವಿ ಸಲ್ಲಿಸಿದರು. ಆಗ ಬೀದರ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಜನರ ಸಂಕಷ್ಟವನ್ನು ಕಂಡು ಮರುಗಿದ ನಾನಕರು ಜನರಿಗೆ ಸಹಾಯ ಮಾಡಲು ನಿರ್ಧರಿಸಿದರು. ಗುಡ್ಡವೊಂದರ ಬಳಿ ತೆರಳಿ ಅಲ್ಲಿದ್ದ ಒಂದು ಕಲ್ಲನ್ನು ತಮ್ಮ ಪಾದಗಳಿಂದ ಸರಿಸಿದರು.

ಆಶ್ಚರ್ಯವೆಂಬಂತೆ ಅಲ್ಲಿ ಸಿಹಿನೀರಿನ ಕಾರಂಜಿ ಚಿಮ್ಮಿತಂತೆ. ಈ ಕಾರಂಜಿಯನ್ನೇ ‘ನಾನಕ ಝೀರಾ ಸಾಹೀಬ್‌’ ಎಂದು ಕರೆಯಲಾಗುತ್ತದೆ. ಬಿಸಿಲಿನ ನಾಡು ಎಂಬ ಅಪಖ್ಯಾತಿಗೆ ಒಳಗಾಗಿದ್ದ ಬೀದರ್‌ನಲ್ಲಿ ತಿಳಿ ನೀರಿನ ಚೆಲುಮೆ ಇಂದಿಗೂ ಅಮೃತದಂತೆ ಜಿನುಗುತ್ತಿದೆ. ಇಂದಿಗೂ ಸಿಖ್‌ ಧರ್ಮದ ಭಕ್ತಾದಿಗಳು ಆ ಕುಂಡದಲ್ಲಿನ ನೀರನ್ನು “ಅಮೃತ ಜಲ’ ಎಂದು ಭಾವಿಸಿ, ಮನೆಗೆ ಕೊಂಡೊಯ್ಯುತ್ತಾರೆ. ಇದು ಸಿಖ್‌ ಧರ್ಮೀಯರ ಪಾಲಿಗೆ ಪುಣ್ಯಕ್ಷೇತ್ರವಾಗಿದೆ.

ಗುರುದ್ವಾರ ನಿರ್ಮಾಣ: ನಾನಕ್‌ ಝಿರಾ ಸಾಹೀಬ್‌ ಸುತ್ತಲೂ ವಿಶಾಲವಾದ ಗುರುದ್ವಾರವನ್ನು ನಿರ್ಮಿಸಲಾಗಿದೆ. ಅಮೃತಕುಂಡವೆಂದೂ ಕರೆಯಲಾಗುವ ಈ ತಿಳಿ ನೀರಿನ ಬುಗ್ಗೆಯ ಪಕ್ಕದಲ್ಲಿ ನಾನಕರು ತಂಗಿದ್ದರು. ಅಲ್ಲೀಗ ಅತ್ಯಾಕರ್ಷಕ ದರ್ಬಾರ ಸಾಹೀಬ್‌ ಪ್ರಾರ್ಥನಾ ಗೃಹವಿದೆ. ಇಲ್ಲಿ ಪ್ರತಿನಿತ್ಯ ಗುರು ಗ್ರಂಥ ಸಾಹೀಬ್‌ ಪಠಣ ಮಾಡಲಾಗುತ್ತದೆ. ಇಲ್ಲಿ ಯಾತ್ರಿಗಳಿಗಾಗಿ ವಸತಿ ಸೌಲಭ್ಯವಿದೆ. ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸಿಖ್‌ ಧರ್ಮಕ್ಕೆ ಸಂಬಂಧಿಸಿದ ಅಮೂಲ್ಯ ವಸ್ತುಗಳನ್ನು ನೋಡಬಹುದಾಗಿದೆ.

ಎಡಬಿಡದೆ ನಡೆಯುವ ಲಂಗರ್‌(ಅನ್ನ ದಾಸೋಹ) ಸೇವೆಯಲ್ಲಿ ಸಾಧಕರು ಮತ್ತು ಯಾತ್ರಿಗಳು ಪ್ರಸಾದ ಸ್ವೀಕರಿಸಬಹುದು. ದಿನವೂ ನೂರಾರು ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಪ್ರದೇಶ ಇಂದು ಪ್ರವಾಸಿತಾಣವಾಗಿ ಜನರನ್ನು ಆಕರ್ಷಿಸುತ್ತಿದೆ. ಪ್ರತಿವರ್ಷ ಗುರು ನಾನಕ ಜಯಂತಿಯನ್ನು ಸಿಖ್ಖರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ.

ದರುಶನಕೆ ದಾರಿ…: ಬೀದರ್‌ ಕೇಂದ್ರ ಬಸ್‌ ನಿಲ್ದಾಣದಿಂದ ಬಲಕ್ಕೆ ಬಂದರೆ ಗುರುದ್ವಾರ ಗೇಟ್‌ ಸಿಗುತ್ತೆ ಅಲ್ಲಿಂದ 2 ಕಿ.ಮೀ. ದೂರದಲ್ಲಿ ಮಂದಿರವಿದೆ.

* ರವಿಕುಮಾರ ಮಠಪತಿ

ಟಾಪ್ ನ್ಯೂಸ್

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.