ಓಡುತ್ತಲೇ ಆಹಾರ ಹುಡುಕುವ ಸಿಂಪು ಹಿಡುಕ


Team Udayavani, Aug 19, 2017, 2:14 PM IST

3666.jpg

ಅಸ್ಟಿರ್‌ ಅಂದರೆ ಸಿಂಪು, ಕಪ್ಪೆ ಚಿಪ್ಪು- ಕಲ್ಲು ಮಾಂಸ ಎಂಬ ಹೆಸರಿದೆ. ಇಂತಹ ಮೃದ್ವಂಗಿಗಳನ್ನು ತಿನ್ನುವ ಹಕ್ಕಿ ಎಂಬ ಅರ್ಥದಲ್ಲಿ ಅನ್ವರ್ಥಕವಾಗಿ ಈ ಹಕ್ಕಿಗೆ ಈ ಹೆಸರು ಬಂದಿದೆ. ಇದೊಂದು ಸಮುದ್ರ ತೀರದ ಹಕ್ಕಿ. ಸಮುದ್ರದ ಮುಖಜ ಪ್ರದೇಶದಲ್ಲಿ ಇರುವ ಕಲ್ಲುಗಳಲ್ಲಿ ಬೆಳೆಯುವ ಮೃದ್ವಂಗಿ, ಚಿಕ್ಕ ಹುಳವೆ,  ಇದರ ಪ್ರಧಾನವಾದ ಆಹಾರ.

 ಇದರ ಆಹಾರ ಆದರಿಸಿ ಹೆಸರನ್ನು ಇಡಲಾಗಿದೆ. ಶರಾವತಿ ಮತ್ತು ಅಘನಾಶಿನಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಅದರಲ್ಲೂ ಅಘನಾಶಿನಿ ನದಿ ಪಶ್ಚಿಮ ಘಟ್ಟದಿಂದ ಹರಿಯುವುದರಿಂದ
ಚಿಕ್ಕ ಹುಳುಗಳಿರುವ ಆಗರವಾಗಿದೆ.  ಕಾರವಾರದ ಸಮುದ್ರ ತೀರದಲ್ಲಿ  ಸಿಂಪುಹಿಡುಕ ವಲಸೆ ಬರುವುದು ಹೆಚ್ಚು.  ಇದರಲ್ಲಿ ಬಣ್ಣ ವ್ಯತ್ಯಾಸದಿಂದ ಜಗತ್ತಿನ ಬೇರೆ ಬೇರೆ ಜಾಗದಲ್ಲಿ ಸುಮಾರು 11 ಉಪ ಪ್ರಬೇಧಗಳು ಸಿಕ್ಕಿವೆ.  ಈ ಹಕ್ಕಿಯ ಕುರಿತು ಹೆಚ್ಚು ನಿಖರ ಅಧ್ಯಯನ ನಡೆದಿಲ್ಲ.   ಉತ್ತರ ಕನ್ನಡ, ಗೋವಾ, ಕಾಸರಗೋಡು, ಕೇರಳದ ಸಮುದ್ರತೀರದಲ್ಲಿ ಇದು ಕಾಣಸಿಗುತ್ತದೆ. ಇದು ಪೆರು ನಡುಗಡ್ಡೆಯ ರಾಷ್ಟ್ರೀಯ ಪಕ್ಷಿ. ಹೆಮಟೊಪಿಡಿಡಿಯಾ ಕುಟುಂಬಕ್ಕೆ ಸೇರಿದೆ. ಹೆಮಟೋಪಸ್‌ ಎಂದರೆ ರಕ್ತದಂತಹ ಕೆಂಪು ಬಣ್ಣ ಎಂಬ ಅರ್ಥ ಇದೆ.  ರಕ್ತ ಕೆಂಪು ಬಣ್ಣದ ಕಾಲು, ಚುಂಚು ಇರುವ ಹಕ್ಕಿ ಎಂಬ ಅರ್ಥದಲ್ಲಿ ಈ ಹೆಸರು ಇಡಲಾಗಿದೆ.

ಚಿಪ್ಪು ಹಿಡುಕ ಪ್ರಪಂಚದ ತುಂಬೆಲ್ಲಾ ಇದೆ. ಕೆಲವು ತಳಿ ಯುರೋಪಿನಲ್ಲಿ, ಇನ್ನು ಕೆಲವು ತಳಿ ಏಷಿಯಾದಂತಹ ಪೂರ್ವ ಖಂಡದಲ್ಲಿ  ವಲಸೆ ಬಂದಂತಾಗಿದೆ. ಈ ಹಕ್ಕಿ ಸಾಮಾನ್ಯವಾಗಿ 40 ರಿಂದ 45 ಸೆಂಮೀ ದೊಡ್ಡದಿದೆ.  ಎದೆ ಭಾಗ ಸ್ವಲ್ಪ ದಪ್ಪ ಮತ್ತು ಕಾಲು ಚಿಕ್ಕದು.  ಕುತ್ತಿಗೆ ಕುಳ್ಳು ಇರುತ್ತದೆ.  ಕಾಲು ಕೆಲವು ತಳಿಗಳಲ್ಲಿ ಅಚ್ಚ ಕೆಂಪು, ಇನ್ನು ಕೆಲವು ತಳಿಗಳಲ್ಲಿ ಗುಲಾಬಿ ಬಣ್ಣದ್ದಾಗಿರುತ್ತದೆ. ಚಿಕ್ಕದಾಗಿರುವಾಗ ಬೂದು ಬಣ್ಣದಿಂದ ಕೂಡಿರುತ್ತದೆ. 

 ನಂತರ ಎಲ್ಲಾ ತಳಿಗಳಲ್ಲೂ ಪ್ರಾಯಕ್ಕೆ ಬಂದಾಗ ಕೆಂಪಾಗುವುದೋ? ಇಲ್ಲವೆ ಮರಿಮಾಡುವ ಸಮಯದಲ್ಲಿ ಕೆಂಪಾಗುವುದೋ? ಎಂಬುದನ್ನು  ಅವಲೋಕನದಿಂದ ತಿಳಿಯಬೇಕಾಗಿದೆ.  ಇದರ ಚುಂಚು ದಪ್ಪ ಮತ್ತು ಚೂಪಾಗಿದೆ. ಕೆಂಪು ಬಣ್ಣ -ಇದರಿಂದ ಚಿಪ್ಪು ಇಲ್ಲವೇ ಸುಣ್ಣದ ಕಲ್ಲಿನ ದಿಬ್ಬಗಳನ್ನು ಬಡಿದು ಬಡಿದು ಚೂರುಮಾಡಿ ಅದರಲ್ಲಿರುವ ಮಾಂಸ ಮತ್ತು ಸಿಂಪನ್ನು ತಿನ್ನಲು ಅನುಕೂಲವಾಗಿದೆ. ಇದರ ಕಾಲಿನಲ್ಲಿ ಚಿಕ್ಕ ಬೆರಳಿದು,ª ಪುಟ್ಟ ಬಲವಾದ ಕಂದುಬಣ್ಣದ ಉಗುರಿದೆ.  ಒಂದೇ ಹಾರಿಕೆಯಲ್ಲಿ ಬಹುದೂರ ಹಾರುವ ಗುಣವಿದೆ. 

ಇದರ ಚುಂಚು 8-9 ಸೆಂ.ಮೀ ಉದ್ದ ಇರುತ್ತದೆ. ಇದು ರೆಕ್ಕೆ ಅಗಲಿಸಿದಾಗ ಇದರ ವಿಸ್ತೀರ್ಣ 80-85 ಸೆಂ.ಮೀ ಆಗುತ್ತದೆ.   ಕುತ್ತಿಗೆ ತಲೆ ಕಪ್ಪು, ರೆಕ್ಕೆ ಅಡಿ ಮುಸಕು ಬಿಳಿಬಣ್ಣದಿಂದ ಕೂಡಿರುತ್ತದೆ.  ಹಾಗಾಗಿ ಹೆಗ್ಗೊರವ, ಕಲ್ಲು ಗೊರವ ಮರಳು ಗೊರವ ಹಕ್ಕಿಗಳ ಗುಂಪಿನಲ್ಲಿ ಇದನ್ನು ಸುಲಭವಾಗಿ ಗುರುತಿಸಲು ಸಹಾಯಕವಾಗಿದೆ. 

ಯುರೋಪಿನಲ್ಲಿ ಈ ಹಕ್ಕಿ ಮರಿಮಾಡುತ್ತವೆ.  ಚಳಿಗಾಲ ಕಳೆಯಲು ಆಫ್ರಿಕಾ , ಭಾರತ, ಪಾಕಿಸ್ಥಾನ, ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಇದರ ವಲಸೆ ಮಾರ್ಗ- ವಲಸೆಯ ದಿನದ ನಿಖರತೆ, ಕುರಿತು ವಿಷಯ ತಿಳಿಯಬೇಕಿದೆ. ವಲಸೆ ಬಂದ ನಂತರ ಒಂದೇ ಜಾಗದಲ್ಲಿ ಹೆಚ್ಚು ಸಮಯ ಕಳೆಯುವುದು ಇದರ ಸ್ವಭಾವ. ಇದು ಆಹಾರ ಸಂಗ್ರಹಿಸುವಾಗ ಹಾರುವುದಕ್ಕಿಂತ ಓಡುವುದು ಹೆಚ್ಚು . ಅನಿವಾರ್ಯ ಪ್ರಸಂಗದಲ್ಲಿ ಮಾತ್ರ ಹಾರುತ್ತದೆ.  

ಸಮುದ್ರ ತೀರದಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳಿಂದ ಗೂಡು ನಿರ್ಮಿಸಿ 2-4 ಮೊಟ್ಟೆ ಇಡುತ್ತದೆ. ಇದರ ಬಣ್ಣ ತಿಳಿ ಕಂದು. ಮೊಟ್ಟೆಯ ದಪ್ಪ ಭಾಗದಲ್ಲಿ ಹೆಚ್ಚು ದೊಡ್ಡ ಮಚ್ಚೆ ಇರುತ್ತದೆ. ಕಾವು ಕೊಡುವ ಕಾರ್ಯವನ್ನು ಹೆಣ್ಣು ನಿರ್ವಹಿಸಿದರೆ -ಗಂಡು ರಕ್ಷಣೆ ಮತ್ತು ಕೆಲವೊಮ್ಮೆ ಹೆಣ್ಣಿಗೆ ವಿಶ್ರಾಂತಿ ಕೊಡಲು -ಸ್ವಲ್ಪ ಸಮಯ ಮೊಟ್ಟೆಯ ಮೇಲೆ ಕುಳಿತು ಕಾಯುತ್ತದೆ. 20 ವರ್ಷಗಳ ಕಾಲ ಒಂದೇ ಜಾಗದಲ್ಲಿ ಗೂಡು ಮಾಡಿಕೊಂಡು ಬಾಳಿದ ನಿದರ್ಶನವೂ ಈ ಹಕ್ಕಿಗೆ ಇದೆ. 

ಪಿ. ವಿ. ಭಟ್‌ ಮೂರೂರು 

ಟಾಪ್ ನ್ಯೂಸ್

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.