ನೀವೂ ಮಾಡಿ ಜೋಕಾಲಿ ಯೋಗ
Team Udayavani, Jun 3, 2017, 1:44 PM IST
ಆಂಟಿ ಗ್ರಾವಿಟಿ ಯೋಗ ಅಂತೊಂದಿದೆ. ಹಠಯೋಗ, ಪತಂಜಲಿಯೋಗ ಬಿಟ್ಟರೆ ಈ ರೀತಿಯ ಯೋಗ ಚಾಲ್ತಿಯಲ್ಲಿದೆ.ಸದಾ ಹಪಹಪಿಸುವ ಅಮೇರಿಕದ ಯುವ ಜನತೆ ನ್ಯೂಯಾರ್ಕ್ ನಗರದಲ್ಲಿ 1991ರಲ್ಲಿ ಹೊಸತೊಂದು ಯೋಗದ ಅವತರಿಣಿಕೆಯನ್ನು ಹುಟ್ಟು ಹಾಕಿದರು.
ಇದು ಹೇಗೆಂದರೆ ಸುಸಜ್ಜಿತವಾದ ಹವಾನಿಯಂತ್ರಕ ಕೊಠಡಿಯಲ್ಲಿ ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ, ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸುವುದು. ಗಾಳಿಯಲ್ಲಿಯೇ ಬಗೆಬಗೆಯ ಯೋಗದ ಆಸನಗಳನ್ನು ಮಾಡಲು ಭಿನ್ನವಾದ ಪ್ರಯತ್ನ ಮಾಡುವುದು.
ಸುಮಾರು 300ಕಿ. ಲೋ ಗ್ರಾಂವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ನಾಲೆಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ಲೀನ ಮಾಡುವ ಕ್ರಿಯೆ ಇದು. ಒಂದೇ ರೀತಿಯ ದೈಹಿಕ ವ್ಯಾಯಾಮದಿಂದ ಏಕಾಗ್ರತೆಗೆ ಒಳಪಟ್ಟ ಜನರು ಈ ರೀತಿಯ ಹೆಚ್ಚು ಶ್ರಮದಿಂದ ಕೂಡಿದ ಹೆಚ್ಚು ಕೊಬ್ಬು ಕರಗಿಸುವ, ಈ ರೀತಿ ‘ತೇಲಾಡುವ ಯೋಗ’ಕ್ಕೆ ಹೆಚ್ಚು ಆಕರ್ಷಿತರಾದರು. ಅಮೇರಿಕಾದಲ್ಲಿ ಸುಗಮವಾದ ಈ ತೇಲಾಡುವ ಯೋಗ ಕ್ರಮೇಣ ಜರ್ಮನಿ, ಹಾಂಕಾಂಗ್, ಇಟಲಿ, ಆಸ್ಟೇಲಿಯ… ಹೀಗೆ ಜಗತ್ತಿನ ಎಲ್ಲೆಡೆ ಪಸರಿಸಿದೆ.
ನಮ್ಮಲ್ಲೂ ದೆಹಲಿ, ಮುಂಬಯಿ, ಚೆನೈ, ಬರೋಡಾ, ಕೊಲ್ಕತಾ, ಬೆಂಗಳೂರು ಹೀಗೆ ಎಲ್ಲಾ ನಗರದಲ್ಲಿ ಯುವಜನರನ್ನು ಹೆಚ್ಚು ಹೆಚ್ಚು ಆಕರ್ಷಿಸಿ ‘ತೇಲಾಡುವ ಯೋಗ’ ಮತ್ತಷ್ಟು ಜನಪ್ರಿಯವಾಗಿದೆ. ಮೊದಮೊದಲು ಸೆಲಬ್ರೆಟಿಗಳನ್ನು ತನ್ನೆಡೆಗೆ ಸೆಳೆಯುತ್ತಿತ್ತು. ಈಗ ಎಲ್ಲರನ್ನು ಸೆಳೆಯುತ್ತಿದೆ.
ವ್ಯತ್ಯಾಸ ಏನು?
ಸಾಂಪ್ರದಾಯಿಕ ಯೋಗದಲ್ಲಿ ಧ್ಯಾನ, ಪ್ರಾಣಾಯಾಮ ಮತ್ತು ವಿವಿಧ ಯೋಗಾಸನಗಳು ಒಂದಕ್ಕೊಂದು ಪೂರಕವಾಗಿ ಇರುತ್ತವೆ. ಉಸಿರಾಟದ ಏರಿಳಿತಕ್ಕೆ ಅನುಗುಣವಾಗಿ ದೈಹಿಕ ಆಸನಗಳನ್ನು ಮಾಡಬೇಕಾಗುತ್ತದೆ.
ಸಾಂಪ್ರದಾಯಿಕ ಯೋಗಕ್ಕೆ ಹೋಲಿಸಿದಲ್ಲಿ ತೇಲು ಯೋಗದಲ್ಲಿ ದೇಹದ ಎಲ್ಲಾ ಭಾಗಕ್ಕೂ ಹೆಚ್ಚಿನ ರಕ್ತ ಸಂಚಾರ ಸಾಧ್ಯವಾಗುತ್ತದೆ. ಇದರಿಂದ ಜೀರ್ಣ ಪ್ರಕ್ರಿಯೆಗೂ ಹೆಚ್ಚಿನ ಸಹಾಯವಾಗುತ್ತದೆ. ದೇಹದ ಸಮತೋಲನ ಹೆಚ್ಚಾಗಿ ನೆನಪಿನ ಶಕ್ತಿ ಕೂಡಾ ವೃದ್ಧಿಸುತ್ತದೆ. ಮಾನಸಿಕವಾಗಿ ಹೆಚ್ಚಿನ ಆತ್ಮಸ್ಥೆರ್ಯ, ಸ್ನಾಯುಗಳ ಶಕ್ತಿ ವೃದ್ಧಿಯಾಗುವುದು. ಬೆನ್ನು ನೋವಿಗೆ ಹೆಚ್ಚಿನ ಪರಿಹಾರ ಹೀಗೆ ಹಲವಾರು ಲಾಭವಂತೂ ಇರುವುದು ಸತ್ಯವಾದ ಮಾತು.
ಡಾ|| ಮುರಲೀ ಮೋಹನ್ ಚೂಂತಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.