ಟಿ20 ಬೆಳೆ ಹಾರ್ದಿಕ್‌ ಪಾಂಡ್ಯ ಟೆಸ್ಟ್‌ ಕ್ರಿಕೆಟಿಗನಾದ ಪರಿ!


Team Udayavani, Aug 19, 2017, 12:26 PM IST

6.jpg

ಒಬ್ಬ ಆಟಗಾರನನ್ನು ಟೆಸ್ಟ್‌ ಕ್ರಿಕೆಟ್‌ ಎಲಿಮೆಂಟ್‌ ಎಂದು ಪರಿಭಾವಿಸುವ ಬಗ್ಗೆಯೇ ಅನುಮಾನಗಳಿವೆ ಎಂತಿಟ್ಟುಕೊಳ್ಳಿ. ಆತ ಇದ್ದಕ್ಕಿದ್ದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಗಳಿಸಿದರೆ? ಬೇರೆಯವರ ವಿಚಾರದಲ್ಲಿ ಏನಾದೀತೋ ಗೊತ್ತಿಲ್ಲ, ಭಾರತದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಕುರಿತಾಗಿ ಮೊದಲಿದ್ದ ಅನುಮಾನ ಇನ್ನಷ್ಟು ದಟ್ಟವಾಗುತ್ತದೆ!

ಭಾರತ ಅನುಭವಿಸುತ್ತಿರುವ ಆಲ್‌ರೌಂಡರ್‌ಗಳ ಕೊರತೆ ಇವತ್ತಿನ ಸಮಸ್ಯೆಯಲ್ಲ. ರವಿಚಂದ್ರನ್‌ ಅಶ್ವಿ‌ನ್‌, ರವೀಂದ್ರ ಜಡೇಜಾ ಮೊದಲಾದವರು ಬ್ಯಾಟ್‌ ಮಾಡಬಲ್ಲರು. ಆದರೆ ಬೌಲಿಂಗ್‌ನ ದೊಡ್ಡ ಜವಾಬ್ದಾರಿಯ ನಂತರ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವುದು ಇಂತವರಿಗೆ ಕಷ್ಟವೇ. ಬಹುಶಃ ಈ ಬ್ಯಾಟಿಂಗ್‌ ಆಲ್‌ರೌಂಡರ್‌ ಶೂನ್ಯವನ್ನು ತುಂಬುವ ಒಂದು “ಟ್ರಯಲ್‌ನ ಭಾಗವಾಗಿ ಹಾರ್ದಿಕ್‌ ಪಾಂಡ್ಯ ಅವರನ್ನು ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಈಗ ಆಯ್ಕೆ ಸಮಿತಿಯೇ ಅಚ್ಚರಿಯಲ್ಲಿ ಬೀಳುವಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಂಡ್ಯ ದಾಖಲೆಗಳ ಅಬ್ಬರದ ಜೊತೆಗೆ ಚೊಚ್ಚಲ ಟೆಸ್ಟ್‌ ಶತಕ ಬಾರಿಸಿದ್ದಾರೆ!

ಹಾರ್ದಿಕ್‌ ತಮ್ಮ ಮೂರು ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್‌ ಅಭಿಯಾನದಲ್ಲಿ ಒಂದೇ ಒಂದು ಶತಕ ಬಾರಿಸಿದ ದಾಖಲೆಯನ್ನು ಹೊಂದಿಲ್ಲ. ಅಷ್ಟೇಕೆ, ಅವರು ಕೊನೆಯ ಸಮಯ ಯಾವಾಗ ಮೂರಂಕಿ ಆಟ ಆಡಿದ್ದು ಎಂಬುದು ಖುದ್ದು ಅವರಿಗೇ ನೆನಪಿನಲ್ಲಿಲ್ಲ. 17 ಏಕದಿನ ಪಂದ್ಯ, 19 ಟಿ20, 37 ಐಪಿಎಲ್‌ ಪಂದ್ಯಗಳನ್ನು ಆಡಿರುವ ಪಾಂಡ್ಯ ಏಕದಿನ ಪಂದ್ಯದಲ್ಲಿ ಗಳಿಸಿದ 76 ರನ್‌ಗಳೇ ಈವರೆಗಿನ ಗರಿಷ್ಠ ಸಾಧನೆಯಾಗಿತ್ತು. ಮೊನ್ನೆ ಶ್ರೀಲಂಕಾ ವಿರುದ್ಧ ಪಲ್ಲೆಕಿಲೆಯಲ್ಲಿ ನಡೆದ ಮೂರನೇ ಟೆಸ್ಟ್‌ ನಲ್ಲಿ ಗಳಿಸಿದ 108 ರನ್‌ ಅವರ ಪ್ರಥಮ ಶತಕ ಚುಂಬನ!

76 ರನ್‌ಗಳ ಆ ಇನಿಂಗ್ಸ್‌ನ ಮುನ್ನುಡಿ!
ನಿಜಕ್ಕಾದರೆ ಹಿಂದಿನ ಗರಿಷ್ಠ 76 ರನ್‌ ಬ್ಯಾಟಿಂಗ್‌ ಕೂಡ ಸಾಮರ್ಥ್ಯದ ಒಂದು ಮುನ್ಸೂಚನೆ. ಅವತ್ತು ಹಾರ್ದಿಕ್‌ ಗಳಿಸಿದ 76 ರನ್‌ಗಳ ಇನಿಂಗ್ಸ್‌ ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಬಂದಿತ್ತು. ಕೇವಲ 43 ಎಸೆತಗಳಲ್ಲಿ ಆರು ಸಿಕ್ಸ್‌, ನಾಲ್ಕು ಬೌಂಡರಿಯುಕ್ತವಾಗಿ ಬಂದಿದ್ದ ಈ ಆಟ ಭಾರತಕ್ಕೆ ಗಗನ ಕುಸುಮವೆನಿಸಿದ್ದ ಗೆಲುವಿನ ವಾಸನೆಯನ್ನು ಆಘ್ರಾಣಿಸುವಂತೆ ಮಾಡಿತ್ತು. ದುರದೃಷ್ಟ, ಅವತ್ತು ಅವರ ರನ್‌ಔಟ್‌ ಭಾರತದ ಆಸೆಗಳನ್ನು ಕೊಂದು ಹಾಕಿತ್ತು. ಕಷ್ಟದ ಪಿಚ್‌ನಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡುವ ಹಾರ್ದಿಕ್‌ ಪಾಂಡ್ಯ ಎಳೆಯ ಕಪಿಲ್‌ ದೇವ್‌ ಎಂದು ನಿಧಾನವಾಗಿ ಕರೆಸಿಕೊಳ್ಳಲಾರಂಭಿಸಿದ್ದಾರೆ.

ಹಾರ್ದಿಕ್‌ರ ಕ್ರಿಕೆಟ್‌ ತಾದಾತ್ಮ$Âಕ್ಕೆ ಅನುಮಾನಗಳಿಲ್ಲ. ಒಂದು ವರ್ಷ ಈತ ಕೇವಲ ನ್ಯೂಡಲ್ಸ್‌ ತಿಂದು ಕ್ರಿಕೆಟ್‌ ಪ್ರಾಕ್ಟೀಸ್‌ ಮಾಡುತ್ತಲೇ ಇದ್ದರಂತೆ. ಮೈತುಂಬಾ ಹಚ್ಚೆ ಬರೆಸಿಕೊಂಡಿರುವ, ವಿಚಿತ್ರ ಹೇರ್‌ಸ್ಟೆçಲ್‌ಗ‌ಳನ್ನು ಪ್ರದರ್ಶಿಸುವ ಹಾರ್ದಿಕ್‌ ಆತ್ಮವಿಶ್ವಾಸದ ಮೂಟೆ. ಫೀಲ್ಡಿಂಗ್‌ನಲ್ಲಿ ಶೇ. 100ಕ್ಕಿಂತ ಹೆಚ್ಚಿನ ಬಂಡವಾಳ ಹೂಡುವುದನ್ನು ಕ್ರಿಕೆಟ್‌ ಪ್ರಪಂಚ ಗಮನಿಸಿದೆ. ವಾಸ್ತವವಾಗಿ ಹಾರ್ದಿಕ್‌ ಐಪಿಎಲ್‌ ಬೆಳೆ. 2015ರಲ್ಲಿ ಮುಂಬೈ ಇಂಡಿಯನ್ಸ್‌ ಮೂಲಕ ಅಂಕಣಕ್ಕಿಳಿದ ಪಾಂಡ್ಯ ಆ ವರ್ಷವೇ ಎರಡು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆಯುವಂತಹ ಪ್ರದರ್ಶನ ನೀಡಿದ್ದರು.
ಇವತ್ತಿಗೂ ಹಾರ್ದಿಕ್‌ರದ್ದು ಆರಕ್ಕೇರದ ಮೂರಕ್ಕಿಳಿ ಯದ ಸಾಧನೆ. ಬ್ಯಾಟಿಂಗ್‌ ಆಲ್‌ರೌಂಡರ್‌ ಎಂಬ ಹಣೆಪಟ್ಟಿಯಷ್ಟೇ ಅವರನ್ನು  ಟೆಸ್ಟ್‌ ಕ್ರಿಕೆಟ್‌ಗೆ ಇಳಿಸಿತ್ತು. ಶ್ರೀಲಂಕಾ ಎದುರಿನ ಮೊದಲ ಪಂದ್ಯದಲ್ಲಿಯೇ ಶತಕಾರ್ಧದ ಸಾಧನೆ ಮಾಡಿದ್ದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ.ಪ್ರಸಾದ್‌ರಿಗಂತೂ ಗರಿ ಮೂಡಿಸಿತ್ತು. ಮೂರನೇ ಟೆಸ್ಟ್‌ನ ಶತಕ ತಮ್ಮ ಪ್ರಥಮ ದರ್ಜೆ ಶತಕವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಗಳಿಸಿದ ಅಪರೂಪದ ಸಾಧಕರಲ್ಲಿ ಹಾರ್ದಿಕ್‌ ಹಿಮಾಂಶು ಪಾಂಡ್ಯ ಅವರನ್ನು ಐದನೆಯ ಭಾರತೀಯನನ್ನಾಗಿಸಿತು. ವಿಜಯ್‌ ಮಾಂಜ್ರೆàಕರ್‌, ಅಜಯ್‌ ರಾತ್ರಾ, ಹರ್‌ಭಜನ್‌ ಸಿಂಗ್‌ರ ಈ ಸಾಲಿನಲ್ಲಿ ಕಪಿಲ್‌ ದೇವ್‌ ಕೂಡ ಇದ್ದಾರೆ!

ಲಂಚ್‌ಗೆ ಮುನ್ನವೇ ಒಂದೇ ಅವ ಯಲ್ಲಿ ಮೂರಂಕಿ ಸಂಪಾದಿಸಿದ್ದು, ಮಲಿಂದ ಪುಷ್ಪಕುಮಾರರ ಒಂದೇ ಓವರ್‌ನಲ್ಲಿ ಲಾರಾರ 28 ಮತ್ತು ಜಾರ್ಜ್‌ ಬೈಲಿ ಅವರ 27ರ ನಂತರ 6,6,6,4,4 ಸಹಿತ 26 ರನ್‌ ಬಾರಿಸಿದ್ದು, ಎಬಿ ಡಿವಿಲಿಯರ್, ಅಫ್ರಿದಿ, ಕಪಿಲ್‌ ಹೊಡೆದ ಸತತ ನಾಲ್ಕು ಸಿಕ್ಸರ್‌ ಬಿಟ್ಟರೆ ಸತತ ಮೂರು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ್ದು, ಸೆಹ್ವಾಗ್‌ 78 ಚೆಂಡಿನ ಶತಕದ ಹೊರತಾಗಿ 86 ಎಸೆತಗಳಲ್ಲಿ ಮೂರಂಕಿ ದಾಟಿದ್ದು…. ಹಾರ್ದಿಕ್‌ರನ್ನು  ಟೆಸ್ಟ್‌ನ ಪಂದ್ಯ ಪುರುಷೋತ್ತಮ ಪ್ರಶಸ್ತಿವರೆಗೆ ಕೊಂಡೊಯ್ದಿತು. ಇಷ್ಟಿದ್ದೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಂಡ್ಯ ಬಾಳಬಲ್ಲರೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಸಿಡಿಲಬ್ಬರಕ್ಕೆ ಟೆಸ್ಟ್‌ ಅಂಕ ಕಡಿಮೆ!
ಈವರೆಗಿನ ಪ್ರದರ್ಶನಗಳ ಅನುಸಾರ ಈ ಗುಜರಾತ್‌ ಪ್ರತಿಭೆ ಸಿಡಿಲಬ್ಬರದ ಬ್ಯಾಟಿಂಗ್‌ ಮಾಡಬಲ್ಲರು. ಅಲ್ಲಿ ನೀವು ಕಪಿಲ್‌ಗೆ ಹೋಲಿಸಿದರೆ ನಷ್ಟವಿಲ್ಲ. ಆದರೆ ಬೌಲಿಂಗ್‌ನಲ್ಲಿ ಹಾರ್ದಿಕ್‌ ಚೂರು ಪಾರು ಕ್ರಿಕೆಟಿಗರೇ. ಐಪಿಎಲ್‌ನ 37 ಪಂದ್ಯಗಳಲ್ಲಿ 10, ಟಿ20ಯ 19 ಪಂದ್ಯದ 15 ಹಾಗೂ ಏಕದಿನದ 17ರಲ್ಲಿನ 19 ವಿಕೆಟ್‌ ಆಕರ್ಷಕ ಸಾಧನೆಯೇನಲ್ಲ. ಭಾರತ ಸದೃಢ ಸ್ಥಿತಿಯಲ್ಲಿ ಎದುರಾಳಿ ಬೌಲರ್‌ ಬಸವಳಿದ ಸ್ಥಿತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದರೆ ಅದನ್ನು ಅದ್ಭುತ ಸಾಧನೆ ಅಂದುಕೊಳ್ಳಬೇಕಾಗಿಲ್ಲ.

 ಮೊದಲ ಟೆಸ್ಟ್‌ನಲ್ಲಿ 114 ಓವರ್‌ ನಂತರ ಬ್ಯಾಟಿಂಗ್‌ಗಿಳಿದ ಹಾರ್ದಿಕ್‌ ಹಿಂದೆ 491 ರನ್‌ ಕುಷನ್‌ ಇತ್ತು. 5 ಬೌಂಡರಿ, 3 ಸಿಕ್ಸರ್‌ನ 49 ಎಸೆತದ 50 ರನ್‌ ಒತ್ತಡರಹಿತ ಆಟ. ಎರಡನೇ ಟೆಸ್ಟ್‌ನಲ್ಲೂ ಬ್ಯಾಟಿಂಗ್‌ಗೆ ಇಳಿದಿದ್ದು 110 ಓವರ್‌ ನಂತರ. ಆವಾಗಲೂ 413 ರನ್‌ ಕುಷನ್‌. 20 ಎಸೆತದಲ್ಲಿ ಆಗ 20 ರನ್‌. ಮೂರನೇ ಟೆಸ್ಟ್‌ನಲ್ಲೂ 78 ಓವರ್‌ ಆಟಗಳ ತರುವಾಯವೇ ಹಾರ್ದಿಕ್‌ರ ಪ್ರವೇಶವಾಗಿದ್ದು. ಕೊನೆಯ ಟೆಸ್ಟ್‌ನಲ್ಲಿ ಪಿಚ್‌ ಸ್ಪಿನ್‌ಗೆ ಸಹಾಯಕವಾಗುತ್ತಿದ್ದ ಸಂದರ್ಭದಲ್ಲಿಯೇ ಪಾಂಡ್ಯ ಆಟವಾಡಲಿಳಿದಿದ್ದನ್ನು ಗಮನಿಸಬೇಕಾಗುತ್ತದೆ. ಅದರಲ್ಲೂ 8ನೇ ಕ್ರಮಾಂಕದಲ್ಲಿ ಆಡಲಿಳಿದು ಬಾಲಂಗೋಚಿಗಳನ್ನು ಸಂಭಾಳಿಸಿಕೊಂಡು ರನ್‌ ಗಳಿಸುವುದು ಬೇರೆಯದೇ ವಿಜಾnನ. ಅದನ್ನು ಹಾರ್ದಿಕ್‌ ತಮ್ಮ ಶತಕದ ಹಾದಿಯಲ್ಲಿ ತೋರ್ಪಡಿಸಿದ್ದಾರೆ. ಮೊದಲ 50ಕ್ಕೆ 61 ಎಸೆತ ಬೇಕಾದರೆ ಮುಂದಿನ 50 ಕೇವಲ 25 ಚೆಂಡುಗಳಲ್ಲಿ ಬರಲು ಕಾರಣ ಭಾರತ ಆಲೌಟ್‌ ಪರಿಸ್ಥಿತಿಯತ್ತ ಸಾಗಿದ್ದು. ಹೋಗಲಿ, ಅವತ್ತು ಪಾಕ್‌ ವಿರುದ್ಧ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಿಚ್‌ ಕೂಡ ಕಷ್ಟದಾಯಕವಾದದ್ದೇ. ಈ ಲೆಕ್ಕದಲ್ಲಿ ಹಾರ್ದಿಕ್‌ ಕುರಿತ ಅನುಮಾನಗಳನ್ನು ತ್ಯಜಿಸುವುದು ಕ್ಷೇಮ!
ಹೀಗೆ ಯೋಚಿಸುವುದೊಳ್ಳೆ ಯದು. ಎಂ.ಎಸ್‌.ಧೋನಿ ಅವರ ಸಂಪೂರ್ಣ ನಿವೃತ್ತಿಯ ಕಾಲ ಸನ್ನಿಹಿತವಾಗಿದೆ. ಭಾರತ ಆಗ “ಫಿನಿಶರ್‌ನ ಕೊರತೆಯಿಂದ ಬಳಲುತ್ತದೆ. ಆ ಸ್ಥಾನವನ್ನು ಹಾರ್ದಿಕ್‌ ತುಂಬಬಲ್ಲರು. ಟೆಸ್ಟ್‌ ಕ್ರಿಕೆಟ್‌ನ ಐವರು ಬೌಲರ್‌ಗಳ ತಂತ್ರಗಾರಿಕೆಯಲ್ಲೂ ಪಾಂಡ್ಯ ತರಹದ ಮಧ್ಯಮ ವೇಗಿಗೆ ಅವಕಾಶವಿದೆ. ತಮ್ಮ ಬೌಲಿಂಗ್‌ನ್ನು ಅವರು ಇನ್ನಷ್ಟು ಮೊನಚುಗೊಳಿಸಿದರೆ ತಂಡಕ್ಕೆ ದೊಡ್ಡ ಪ್ಲಸ್‌!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.