ಕಲ್ಲು ಕತೆಯ ಹೇಳಿದೆ!


Team Udayavani, Jun 9, 2018, 12:38 PM IST

19.jpg

ಕಾರ್ಪೊರೇಟ್‌ ಕಲ್ಚರ್‌, ಪರಭಾಷಿಕರ ಸಂಸ್ಕೃತಿಯ ಮಧ್ಯೆ ವಾಸಿಸುತ್ತಿರುವ ನಮಗೆ ನಮ್ಮ ಇತಿಹಾಸವನ್ನು ಕಾಪಾಡಿಕೊಳ್ಳುವ ಜರೂರತ್ತು ತುಂಬಾ ಇದೆ. ನಾವು ಬೆಂಗಳೂರಿನವರು, ಕೆಂಪೇಗೌಡ ಮೆಟ್ಟಿದ ಕನ್ನಡ ನೆಲದವರು, ಎಂದೆಲ್ಲಾ ಹೇಳಿಕೊಂಡು ಹೆಮ್ಮೆಪಡುತ್ತೇವೆ. ಆಟೋಗಳ ಹಿಂದೆ ಭಾಷಾಭಿಮಾನ ಸಾರುವ ಸ್ಲೋಗನ್ನುಗಳನ್ನು ಓದಿ ಖುಷಿ ಪಡುತ್ತೇವೆ. ಕೆಂಪೇಗೌಡ, ಕೆಂಗಲ್‌ ಹನುಮಂತಯ್ಯನವರನ್ನು ನೆನೆದು ಹರ್ಷಿಸುತ್ತೇವೆ. ರಾಜ್ಯೋತ್ಸವ ಬಂದಾಗ ಕನ್ನಡ ಟಿ -ಶರ್ಟುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ ಪರಭಾಷಿಕರ ಮುಂದೆ ಬೀಗುತ್ತೇವೆ. ಎಸ್‌, ಕರೆಕ್ಟ್… ಅವೆಲ್ಲಾ ಸರಿ. ಆದರೆ ಅಷ್ಟಕ್ಕೇ ನಮ್ಮ ಕನ್ನಡಾಭಿಮಾನ ಸೀಮಿತವಾಗಬೇಕೆ? ನಾವು- ನೀವು ವಾಸಿಸುತ್ತಿರುವ ಪ್ರದೇಶ ಎಷ್ಟು ಹಳೆಯದು ಗೊತ್ತಾ? ಇಂದು ಅಪಾರ್ಟ್‌ಮೆಂಟುಗಳು, ಎಮ್ಮೆನ್ಸಿ ಕಟ್ಟಡಗಳು, ರಸ್ತೆಗಳು, ಮೆಟ್ರೊ ಪಿಲ್ಲರ್‌ಗಳು ಎದ್ದಿರುವ ಜಾಗದಲ್ಲಿ ಹಿಂದೇನಿತ್ತು ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಹನುಮಂತನಗರದ ಒರಿಜಿನಲ್‌ ಹೆಸರು ಸುಂಕೇನಹಳ್ಳಿ ಎಂಬುದು ಎಷ್ಟು ಜನರಿಗೆ ಗೊತ್ತು? ಹಿಂದೆ ರಾಜರ ಕಾಲದಲ್ಲಿ ಅಲ್ಲೊಂದು ಸುಂಕ ವಸೂಲಿ ಮಾಡುವ ಗೇಟ್‌ ಇತ್ತು ಎನ್ನುವುದು ಎಷ್ಟು ಜನರಿಗೆ ಗೊತ್ತು? ರಾಜಾಜಿನಗರ, ಚಾಮರಾಜಪೇಟೆ, ಮಾಗಡಿ ಮುಂತಾದ ಏರಿಯಾಗಳು ಎಷ್ಟು ವರ್ಷ ಹಳೆಯವು? ಆಗಿನ ಕಾಲದ ಜನ ಜೀವನ, ಸಾಮಾಜಿಕ ಸ್ಥಿತಿಗತಿ ಹೇಗಿತ್ತು? ಈ ಎಲ್ಲಾ ಪ್ರಶ್ನೆಗಳು ಕಾಡಿದ್ದು ಉದಯ್‌ ಕುಮಾರ್‌ ಮತ್ತು ವಿನಯ್‌ ಕುಮಾರ್‌ ಅವರನ್ನು.

ವೃತ್ತಿಯಲ್ಲಿ ಅವರು ಎಂಜಿನಿಯರ್. ಸಾಫ್ಟ್ವೇರ್‌ ಮಂದಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಎಣಿಸುವವರು. ದೇಶದ ಭವಿಷ್ಯವನ್ನು ರೂಪಿಸುವವರು ಅವರು ಎನ್ನುವ ಅಭಿಪ್ರಾಯ ಸಮಾಜದಲ್ಲಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಭವಿಷ್ಯವನ್ನು ಒಂದು ಕ್ಷಣ ಪಕ್ಕಕ್ಕಿಟ್ಟು ಬೆಂಗಳೂರಿನ ಇತಿಹಾಸವನ್ನು ರೂಪಿಸುತ್ತಿದ್ದಾರೆ ಉದಯ್‌ ಮತ್ತು ವಿನಯ್‌. ಉದಯ್‌ ಮೆಕಾನಿಕಲ್‌ ಎಂಜಿನಿಯರ್‌. ಸಾಫ್ಟ್ವೇರ್‌ ವೃತ್ತಿಯಲ್ಲಿದ್ದ ವಿನಯ್‌, ಈಗ ಅದರಿಂದ ಹೊರಬಂದಿದ್ದಾರೆ. ಇತಿಹಾಸದ ತುಣುಕನ್ನು ಜೋಪಾನ ಮಾಡಿ ಅದರ ಮುಖಾಂತರ ಬೆಂಗಳೂರಿಗರಿಗೆ ತಮ್ಮ ಊರು ಎಷ್ಟು ಶ್ರೀಮಂತವಾಗಿತ್ತು, ಆ ಕಾಲದಲ್ಲೇ ಎಷ್ಟೊಂದು ಮುಂದುವರಿದಿತ್ತು ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕು ಎನ್ನುವುದು ಅವರ ಕಾಳಜಿ. ಅಂದಹಾಗೆ, ಈ ಇತಿಹಾಸದ ತುಣುಕು ಎಂದರೆ ಬೇರೇನೂ ಅಲ್ಲ “ಶಾಸನ ಕಲ್ಲುಗಳು’. 

ಮಹಾನುಭಾವ ಬಿ.ಎಲ್‌. ರೈಸ್‌  
18ನೇ ಶತಮಾನದಲ್ಲಿ, ಮೈಸೂರು ಸಂಸ್ಥಾನದಲ್ಲಿ, “ಬಿಳಿ ಕನ್ನಡಿಗ’ ಎಂದೇ ಹೆಸರಾಗಿದ್ದ ಬಿ.ಎಲ್‌. ರೈಸ್‌ ಎನ್ನುವ ಮಹಾನುಭಾವರೊಬ್ಬರಿದ್ದರು. ಅವರು ಬೆಂಗಳೂರಿನಲ್ಲಿ ಶಿಕ್ಷಕವೃತ್ತಿ ನಿರ್ವಹಿಸುತ್ತಿದ್ದಾಗ ಹಾದಿ ಬದಿಯ ಕಲ್ಲುಗಳನ್ನು ನೋಡಿದ್ದರು. ಅದರ ಮೇಲಿದ್ದ ಹಳಗನ್ನಡ ಕೆತ್ತನೆಗಳನ್ನು ಗಮನಿಸಿದ್ದರು. ಅದರ ಕುರಿತು ವಿಚಾರಿಸಿದಾಗ ಯಾರ ಬಳಿಯೂ ಮಾಹಿತಿ ಸಿಗಲಿಲ್ಲ. ಆಮೇಲೆ  ಸ್ವತಃ ಸ್ಥೂಲವಾಗಿ ಅಧ್ಯಯನ ನಡೆಸಿದಾಗ ಅವೆಲ್ಲವೂ ಶತಮಾನಗಳಷ್ಟು ಹಳೆಯವು ಎಂಬುದು ತಿಳಿದು ಬಂತು. ಅವರ ಆಸಕ್ತಿ ಕಂಡು ಸರ್ಕಾರ ಅವರಿಗೆ ಪ್ರಾಚ್ಯ ವಸ್ತು ಇಲಾಖೆಯಲ್ಲಿ ಹುದ್ದೆ ನೀಡಿತು. ಅವರು ಬೆಂಗಳೂರಿನ ಉದ್ದಗಲಕ್ಕೂ ಓಡಾಡಿ ಶಾಸನ ಕಲ್ಲುಗಳ ಪಟ್ಟಿ ತಯಾರಿಸಿದರು. ಅವಷ್ಟನ್ನೂ “ಎಪಿಗ್ರಾಫಿಯಾ ಕರ್ನಾಟಕ’ ಗ್ರಂಥದ ಒಂಬತ್ತನೇ ಆವೃತ್ತಿಯಲ್ಲಿ ಪ್ರಕಟಿಸಿದರು. 

ಮೋರಿ ಕೊಚ್ಚೆ ಗುಂಡಿಗಳಲ್ಲಿ ಇಳಿದರು
ಉದಯ್‌ ಮತ್ತು ವಿನಯ್‌, ಬಿ.ಎಲ್‌ ರೈಸ್‌ ಬರೆದ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ಛಲದಂಕಮಲ್ಲರಂತೆ ಶಾಸನ ಕಲ್ಲುಗಳ ಹುಡುಕಾಟಕ್ಕೆ ಬಿದ್ದಿದ್ದರು. ಇದಕ್ಕಾಗಿ ಅವರು ಗಲ್ಲಿ ಗಲ್ಲಿಗಳನ್ನು ಸುತ್ತಿದ್ದಾರೆ. ಸರಕಾರಿ ಕಡತಗಳ ಸಮುದ್ರದಲ್ಲಿ ಮುಳುಗಿದ್ದಾರೆ, ಅನೇಕ ಹಿರಿಯ ಸ್ಥಳೀಯರನ್ನು ಭೇಟಿ ಮಾಡಿದ್ದಾರೆ. ಈ ಸಾಹಸದ ನಂತರ ಅವರಿಗೆ ತಿಳಿದು ಬಂದಿದ್ದಿಷ್ಟು- ಬಿ.ಎಲ್‌ ರೈಸ್‌ ಅವರ ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಶಾಸನ ಕಲ್ಲುಗಳ ಸಂಖ್ಯೆ 130. ಅವುಗಳಲ್ಲಿ ಈಗ ಉಳಿದಿರೋದು ಬರೇ 30! ಅವುಗಳು ಸಿಕ್ಕಿದ್ದಾದರೂ ಎಲ್ಲಿ ಅಂತೀರಾ…? ಮೋರಿ ಬದಿ, ಕೊಚ್ಚೆ ಗುಂಡಿಗಳಲ್ಲಿ, ಮರಗಳ ಕೆಳಗೆ!ಅವುಗಳಿಗೊದಗಿದ ಅವಸ್ಥೆಗೆ ಮರುಗಬೇಕೋ, ಇಲ್ಲಾ ನಮ್ಮ ಸಮಾಜದ ಅಜ್ಞಾನಕ್ಕೆ ಮರುಗಬೇಕೋ ಎಂದು ಅವರಿಬ್ಬರಿಗೂ ತಿಳಿಯದಾಯಿತು. ಸಿಕ್ಕಿದ್ದರಲ್ಲಿ ಕೆಲವನ್ನು ಮ್ಯೂಸಿಯಂಗೆ ಸ್ಥಳಾಂತರಿಸಲಾಗಿದ್ದರೆ, ಇನ್ನು ಕೆಲವು ದೇವಸ್ಥಾನಗಳಲ್ಲಿವೆ. ಇವುಗಳನ್ನು ಕಾಪಾಡಿಕೊಳ್ಳದಿದ್ದರೆ ನಾವು ಆದಷ್ಟು ಬೇಗನೆ ಬೆಂಗಳೂರಿನ ಇತಿಹಾಸದ ಪ್ರಮುಖ ಕೊಂಡಿಗಳನ್ನು ಕಳೆದುಕೊಳ್ಳಲಿದ್ದೇವೆ. 

ಏನ್ಮಾಡಿದ್ದೀರಾ ನೋಡಿ…
1342ನೇ ಇಸವಿಗೆ ಸೇರಿದ ಶಾಸನ ಕಲ್ಲು ಜಕ್ಕೂರಿನಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಜಕ್ಕೂರು ಅಂತಲೇ ಬರೆದಿತ್ತು. ಉದಯ್‌ ಮತ್ತು ತಂಡ ಕಲ್ಲನ್ನು ಶುಚಿಗೊಳಿಸುತ್ತಿದ್ದಾಗ ಊರಿನವರು ಕುತೂಹಲದಿಂದ - ಏನ್‌ ಸ್ವಾಮಿ ಇದು? ಅಂತ ಕೇಳಿದ್ದರು. ಕಲ್ಲಿನ ದುಃಸ್ಥಿತಿ ಕಂಡು ಮೊದಲೇ ಸಿಟ್ಟಾಗಿದ್ದ ಉದಯ್‌ “1342ನೇ ಇಸವಿ ಕಲ್ಲಿದು. ಇದರ ಮೇಲೆ ಜಕ್ಕೂರು ಅಂತಲೇ ಬರೆದಿದೆ. ಏನ್ಮಾಡಿದ್ದೀರಾ ನೋಡಿ’ ಅಂತ ಅಸಹನೆ ವ್ಯಕ್ತಪಡಿಸಿದರು. ಇದಾದ ಕೆಲ ದಿನಗಳ ಬಳಿಕ ಉದಯ್‌ ಹೋಗಿ ನೋಡಿದಾಗ ಊರಿನವರು ಆ ಕಲ್ಲನ್ನು ರಸ್ತೆಯ ಮಧ್ಯೆ ವೃತ್ತವೊಂದರಲ್ಲಿ ನಿಲ್ಲಿಸಿದ್ದರು. ಈಗ ಜಕ್ಕೂರಿನ ಪ್ರತಿ ಮನೆಯವರಿಗೂ ಆ ಕಲ್ಲಿನ ಕುರಿತು ಹೆಮ್ಮೆಯಿದೆ. ಮಕ್ಕಳು, ಮನೆಗೆ ಬಂದ ನೆಂಟರಿಗೆ ಆ ಕಲ್ಲನ್ನು ತೋರಿಸಿ ಅದು ನಮ್ಮ ಊರಿನ ಇತಿಹಾಸ ಎಂದು ಎದೆ ತಟ್ಟಿ ತೋರಿಸುತ್ತಾರೆ. “ಇಂಥ ಕೆಲಸ ಬೇರೆ ಏರಿಯಾಗಳಲ್ಲೂ ಆಗಬೇಕು. ಜನರಲ್ಲಿಯೇ ಈ ಬಗ್ಗೆ ಕಾಳಜಿ ಮೂಡಬೇಕು.’ ಎನ್ನುವ ಉದಯ್‌, ನಿರ್ಲಕ್ಷ್ಯಕ್ಕೊಳಪಟ್ಟ ಈ ಅತ್ಯಮೂಲ್ಯ ಶಾಸನ ಕಲ್ಲುಗಳು, ಮೂಢನಂಬಿಕೆಯಿಂದ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಮುಂತಾದ ಕೆಲಸಗಳಿಗೆ ಒಡೆಯಲ್ಪಟ್ಟಿರುವುದನ್ನೂ ನೋಡಿದ್ದಾರೆ. ಅಂದ ಹಾಗೆ, ಆ ಅಪರಾಧದಲ್ಲಿ ನಾವೆಲ್ಲರೂ ಭಾಗಿದಾರರು. ಯಾಕೆ ಗೊತ್ತಾ? ಶತಮಾನಗಳಿಂದ ಉಳಿದುಕೊಂಡು ಬಂದ ಕಲ್ಲುಗಳಲ್ಲಿ ಬಹುತೇಕವು ನಾಶಗೊಂಡಿದ್ದು ಕಳೆದ 15 ವರ್ಷಗಳಲ್ಲಿ!

ಶಾಸನ ಕಲ್ಲು ಯಾಕೆ ಮುಖ್ಯವಾಗುತ್ತೆ?
ಶತ ಶತಮಾನಗಳ ಹಿಂದೆ ಪತ್ರಿಕೆಗಳಿರಲಿಲ್ಲ, ಟಿವಿಗಳಿರಲಿಲ್ಲ. ಆಗಿನ ಎಲ್ಲಾ ಕೆಲಸಗಳು ಸಾರ್ವಜನಿಕರಿಗೆ ತಿಳಿಯುತ್ತಿದ್ದಿದ್ದು, ದಾಖಲಾಗುತ್ತಿದ್ದಿದ್ದು ಶಾಸನ ಕಲ್ಲುಗಳ ಮೂಲಕ. ಕೆರೆಕಟ್ಟೆ ನಿರ್ಮಾಣ, ದೇವಸ್ಥಾನ ಜೀರ್ಣೋದ್ಧಾರ, ಸುಂಕ ವಸೂಲಾತಿ ನಿಯಮ ಮುಂತಾದ ಪ್ರಮುಖ ಸಂದರ್ಭಗಳಲ್ಲಿ ರಾಜರು ಶಾಸನ ಕಲ್ಲುಗಳನ್ನು ಸ್ಥಾಪಿಸಿಬಿಡುತ್ತಿದ್ದರು. ಕಾಲದ ಹೊಡೆತಕ್ಕೆ ಸಿಕ್ಕಿ ಮಾಸಿದ, ಒಡೆದು ಹೋದ ಇಂಥ ಒಂದು ಕಲ್ಲಿನ ಚೂರೊಂದರ ಮೂಲಕ ನಾವು ಎಂತೆಂಥ ವಿಚಾರಗಳನ್ನು ಬಯಲಿಗೆಳೆಯಬಹುದು ಎನ್ನುವುದನ್ನು ತಿಳಿದರೆ ನೀವು ಹೌಹಾರಿಬಿಡುತ್ತೀರಿ!

ಕೊಡಿಗೆಹಳ್ಳಿಯ ಶಾಸನಕಲ್ಲಿನಲ್ಲಿ ಬರೆದದ್ದರ ಭಾವಾರ್ಥವಿದು- ಈ ಬಾರಿ ತೆರಿಗೆ ಕಟ್ಟುವ ಹಣವನ್ನು ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದಾನ ನೀಡಬೇಕೆಂದು ಗ್ರಾಮಸ್ಥರು ನಿಶ್ಚಯಿಸಿದ್ದಾರೆ. ಅದಕ್ಕೆ ರಾಜರ ಒಪ್ಪಿಗೆ ಸಿಕ್ಕಿರುತ್ತದೆ. ಸೂರ್ಯಗ್ರಹಣದ ದಿನ ಶುಭಮುಹೂರ್ತದ ವೇಳೆ ದಾನ ಪ್ರಕ್ರಿಯೆ ನೆರವೇರುತ್ತದೆ.

ಶಾಸನದ ಲಿಪಿಯಿಂದ ಆಗಿನ ಕಾಲಮಾನವನ್ನೂ ಪತ್ತೆಹಚ್ಚಬಹುದು. ಇದರಿಂದ ಊರಿನ ದೇವಸ್ಥಾನ ಎಷ್ಟು ಹಳೆಯದೆಂಬುದು ತಿಳಿಯುತ್ತದೆ. ಸುಂಕ ವಿವರದಿಂದ ಆಗಿನ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ತಿಳಿಯಬಹುದು. ಜನಜೀವನವನ್ನೂ ಅಂದಾಜಿಸಬಹುದು. ಇನ್ನೊಂದು ಕುತೂಹಲದ ವಿಷಯವೆಂದರೆ ಕೊಡಿಗೆಹಳ್ಳಿಯ ಶಾಸನದಲ್ಲಿ ಸೌರಗ್ರಹಣದ ಕುರಿತಾದ ವಿವರಗಳಿದ್ದಿದ್ದು. ಇದರಿಂದ ಆಗಿನವರಿಗೆ ಆ ಕುರಿತು ನಿಖರ ದಿನಾಂಕದ ಮಾಹಿತಿ ಇತ್ತು ಎಂಬುದು ತಿಳಿದುಬರುತ್ತದೆ. ಆಗಿನ ಕಾಲದಲ್ಲಿ ವಿಜ್ಞಾನ ಎಷ್ಟು ಮುಂದುವರಿದಿತ್ತು ಎಂಬುದನ್ನೂ ಇದರಿಂದ ತಿಳಿಯಬಹುದು. ಲಿಪಿಯಿಂದ ಶಾಸನ 14ನೇ ಶತಮಾನದ್ದೆಂದು ಗೊತ್ತಾಯ್ತು. ಅಷ್ಟಕ್ಕೇ ಸುಮ್ಮನಾಗದ ಉದಯ್‌ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅವರ ವೆಬ್‌ಸೈಟಿಗೆ ಭೇಟಿ ನೀಡಿ ಇತಿಹಾಸದಲ್ಲಿ ಘಟಿಸಿದ ಸೌರಗ್ರಹಣದ ಪಟ್ಟಿಯನ್ನು ಜಾಲಾಡಿದಾಗ ಅವರಿಗೆ 1431ನೇ ಇಸವಿ ಆಗಸ್ಟ್‌ 8 ರಂದು ಭಾರತದಲ್ಲಿ ಸೌರಗ್ರಹಣ ಕಂಡಿದ್ದ ಮಾಹಿತಿ ಸಿಕ್ಕಿತ್ತು. ಮೈ ಜುಮ್ಮೆನ್ನುವುದೊಂದು ಬಾಕಿ! 

ಇಬ್ಬರು ವ್ಯಕ್ತಿಗಳು ಬೆಂಗಳೂರಿನ ಗಲ್ಲಿಯೊಂದರಲ್ಲಿ ಶತಮಾನಗಳಷ್ಟು ಹಳೆಯದಾದ ಕಲ್ಲೊಂದರ ಹುಡುಕಾಟದಲ್ಲಿ ತೊಡಗಿದ್ದರು. ಅದಾಗಲೇ ಇಳಿಸಂಜೆಯಾಗಿತ್ತು. ಇನ್ನೇನು ವಾಪಸ್‌ ಹೊರಡಬೇಕು ಎನ್ನುವಷ್ಟರಲ್ಲಿ ಹುಡುಕುತ್ತಿದ್ದಿದ್ದು ಸಿಕ್ಕೇಬಿಡು¤. ಅದರ ಮೇಲೆ ಕುಂಕುಮ, ಬಳೆ ಚೂರುಗಳ ಅವಶೇಷಗಳಿದ್ದವು. “ಅಯ್ಯೋ ಆ ಕಲ್ಲಾ ಸಾರ್‌?! ಅದನ್ನು ಮುಟ್ಟಬೇಡಿ. ಯಾರೋ ಮಾಟ ಮಾಡಿಸಿದ ಕಲ್ಲದು. ಮುಟ್ಟಿದರೆ ಗಾಳಿ ಮೆಟ್ಟಿಕೊಳ್ಳುತ್ತೆ, ಕೆಟ್ಟದ್ದಾಗುತ್ತೆ’ ಎಂದು ಹೆಂಗಸೊಬ್ಬಳು ಎಚ್ಚರಿಸಿದಳು. ಅವಳ ಮಾತನ್ನು ಕೇಳಿ ತಬ್ಬಿಬ್ಟಾದ ಆ ಇಬ್ಬರು ವ್ಯಕ್ತಿಗಳು ಮುಖ ಮುಖ ನೋಡಿಕೊಂಡರು. ಆನಂತರ, 
ಆ ಹೆಂಗಸಿನ ಎಚ್ಚರಿಕೆಯ ಹೊರತಾಗಿಯೂ ಅವರು ಯಾವುದೇ ಹಿಂಜರಿಕೆಯಿಲ್ಲದೆ 
ಆ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟರು!

ಟಾಪ್ ನ್ಯೂಸ್

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.