ಚಿನ್ನದ ರಾಣಿ ನಮ್ಮ “ಹಿಮ ಶಿಖರ”


Team Udayavani, Jul 27, 2019, 5:00 AM IST

v-2

ಒಂದೇ ತಿಂಗಳಲ್ಲಿ ಐದು ಚಿನ್ನ ಗೆದ್ದ ಅಸ್ಸಾಂ ತಾರೆ

ಹಿಮಾ ದಾಸ್‌ ಒಂದೇ ತಿಂಗಳಲ್ಲಿ 5 ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದು ಭಾರೀ ಸುದ್ದಿಯಾಗಿದ್ದಾರೆ. ಜಿಂಕೆಯಂತೆ ಓಡಬಲ್ಲ ಹಿಮಾ ದಾಸ್‌ ಸಾಧನೆ ಕಂಡು ಎಲ್ಲರು ನಿಬ್ಬೆರಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌, ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಸೇರಿದಂತೆ ಅನೇಕ ಗಣ್ಯರು ಹಿಮಾ ದಾಸ್‌ಗೆ ಶುಭ ಕೋರಿದ್ದಾರೆ.

ಯಾರಿವರು ಹಿಮಾ ದಾಸ್‌?:
ಧಿಂಗ್‌ ಎಕ್ಸ್‌ಪ್ರೆಸ್‌ ಖ್ಯಾತಿಯ ಓಟಗಾರ್ತಿ ಹಿಮಾ ದಾಸ್‌ ಮೂಲತಃ ಅಸ್ಸಾಂನವರು. ಅವರಿಗೆ 19 ವರ್ಷ. ನಗವೊನ್‌ನ ಧಿಂಗ್‌ ಎಂಬ ಪುಟ್ಟ ಊರಿನವರು. ವೇಗದ ಓಟದಲ್ಲೇ ಹಿಮಾ ದಾಸ್‌ ವಿಶ್ವ ಮಟ್ಟದಲ್ಲಿ ಅತ್ಯಂತ ವೇಗವಾಗಿ ಗುರುತಿಸಿಕೊಂಡಿರುವ ಪ್ರತಿಭೆ. ಬುಡಕಟ್ಟು ಜನಾಂಗದ ಹಿನ್ನೆಲೆಯುಳ್ಳವರು. ಬಡತನದ ನಡುವೆಯೂ ಅಪ್ಪನ ಕನಸನ್ನು ನನಸು ಮಾಡಿದ ಹಿಮಾ ದಾಸ್‌ ಇಂದು ಭಾರತದ ಎಲ್ಲ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಏಷ್ಯಾದ ಸುಂಟರಗಾಳಿ:
ಹಿಮಾ ದಾಸ್‌ ರಾಷ್ಟ್ರೀಯ, ರಾಜ್ಯ ಮಟ್ಟದ ಹಲವು ಕೂಟಗಳಲ್ಲಿ ಮಿಂಚಿದ್ದರು. ಆದರೆ ಅವರ ಸಾಧನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಆದರೆ 2018 ಇಂಡೋನೇಷ್ಯಾದಲ್ಲಿ ನಡೆದ ಕೂಟ ಹಿಮಾ ದಾಸ್‌ ಜೀವನವನ್ನೇ ಬದಲಾಯಿಸಿತು. ಹಳ್ಳಿಯ ಹುಡುಗಿ ದಿಲ್ಲಿ ಮೀರಿ ವಿಶ್ವದಾದ್ಯಂತ ಸುದ್ದಿಯಾಗಿದ್ದಳು. ಹೌದು, ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನ 400 ಮೀ. ಓಟದಲ್ಲಿ ಹಿಮಾ ದಾಸ್‌ 50.79 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಮಾತ್ರವಲ್ಲ ಐಎಎಎಫ್ ಕಿರಿಯರ ವಿಶ್ವ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಇದಾದ ಬಳಿಕ ಜಕಾರ್ತ ಏಷ್ಯನ್‌ ಗೇಮ್ಸ್‌ನಲ್ಲಿ ವೈಯಕ್ತಿಕ 400 ಮೀ.ನಲ್ಲಿ ಬೆಳ್ಳಿ, ಮಹಿಳಾ 4/400 ಮೀ. ರಿಲೇನಲ್ಲಿ ಚಿನ್ನ, ಮಿಶ್ರ ರಿಲೇ 4/400 ಮೀ.ನಲ್ಲಿ ಚಿನ್ನ ಸೇರಿದಂತೆ ಒಟ್ಟಾರೆ 3 ಪದಕ ಗೆದ್ದು ಮಿಂಚಿದ್ದರು.

ಭತ್ತದ ಗದ್ದೆಯ ರೈತನ ಮಗಳು:
ಹಿಮಾ ದಾಸ್‌ ತಂದೆಯ ಹೆಸರು ರೊಂಜಿತ್‌, ತಾಯಿಯ ಹೆಸರು ಜೊನಾಲಿ ದಾಸ್‌. ಭತ್ತದ ಗದ್ದೆಯ ರೈತ ಹಿನ್ನೆಲೆಯುಳ್ಳ ಕುಟುಂಬ. ದಂಪತಿಯ 5 ಮಕ್ಕಳಲ್ಲಿ ಹಿಮಾ ದಾಸ್‌ ಕೊನೆಯವರು. ಬಾಲ್ಯದಿಂದಲೂ ಹಿಮಾ ದಾಸ್‌ ಅತ್ಯಂತ ಚೂಟಿ ಹುಡುಗಿ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು. ಧಿಂಗ್‌ನ ಪಬ್ಲಿಕ್‌ ಹೈ ಸ್ಕೂಲ್‌ನಲ್ಲಿ ಓದುತ್ತಿದ್ದ ಸಮಯದಲ್ಲಿ ಈಕೆ ಫ‌ುಟ್‌ಬಾಲ್‌ ಕಡೆಗೆ ಹೆಚ್ಚಿನ ಒಲವು ಹೊಂದಿದ್ದರು. ತನ್ನ ಶಾಲೆಯ ಹುಡುಗರ ಜತೆಗೆ ಫ‌ುಟ್‌ಬಾಲ್‌ ಆಡಿ ಸೈ ಎನಿಸಿಕೊಂಡಿದ್ದರು. ಭವಿಷ್ಯದಲ್ಲಿ ಫ‌ುಟ್‌ಬಾಲ್‌ ಆಟಗಾರ್ತಿಯಾಗುವ ಕನಸನ್ನು ಹಿಮಾ ದಾಸ್‌ ಕಟ್ಟಿಕೊಂಡಿದ್ದರು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಹಿಮಾ ದಾಸ್‌ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಯಿತು. ಇವರ ಬಾಲ್ಯದ ಕೋಚ್‌ ನಿಪೊನ್‌ ದಾಸ್‌ ಇವರ ಜೀವನವನ್ನು ಟ್ರ್ಯಾಕ್‌ ಅಂಡ್‌ ಫೀಲ್ಡ್‌ನಲ್ಲಿ ಗುರುತಿಸುವಂತೆ ಮಾಡಿ ಹಿಮಾ ದಾಸ್‌ ಎಂಬ ದೈತ್ಯ ಪ್ರತಿಭೆಯನ್ನು ದೇಶಕ್ಕೆ ಪರಿಚಯಿಸಿದರು.

ಫ‌ುಟ್‌ಬಾಲ್‌ ಕ್ರೀಡಾಂಗಣವೇ ಮೊದಲ ಟ್ರ್ಯಾಕ್‌:
ತಂದೆ-ತಾಯಿ ಬೆಂಬಲ ಗುರು ಹಿರಿಯ ಆಶೀರ್ವಾದದೊಂದಿಗೆ ಹಿಮಾ ದಾಸ್‌ ಕ್ರೀಡೆಯನ್ನು ವೃತ್ತಿ ಜೀವನವಾಗಿ ಆರಂಭಿಸಿದರು. ಆರಂಭದಲ್ಲಿ ಈಕೆ ತಂದೆ ಕೃಷಿ ಮಾಡುತ್ತಿದ್ದ ಭತ್ತದ ಗದ್ದೆಯನ್ನೇ ಟ್ರ್ಯಾಕ್‌ ಮಾಡಿಕೊಂಡು ಅಭ್ಯಾಸ ನಡೆಸಿದರು, ತಂದೆ ಮಗಳಿಗಾಗಿ ಭತ್ತದ ಗದ್ದೆಯನ್ನು ಟ್ರ್ಯಾಕ್‌ ಆಗಿ ಪರಿವರ್ತಿಸಿದ್ದು ವಿಶೇಷ. ಆ ಬಳಿಕ ಫ‌ುಟ್‌ಬಾಲ್‌ ಕ್ರೀಡಾಂಗಣವೊಂದರಲ್ಲಿ ಹಿಮಾ ದಾಸ್‌ ಅಭ್ಯಾಸವನ್ನು ಮುಂದುವರಿಸಿದರು. ಕೊನೆಗೆ ನಿಪೊನ್‌ ದಾಸ್‌ ಅವರು ಹಿಮಾ ದಾಸ್‌ ಪ್ರತಿಭೆಯನ್ನು ಕಂಡು ಹೆಚ್ಚಿನ ಕೋಚಿಂಗ್‌ ನೀಡಲು ನಿರ್ಧರಿಸಿದರು. ಭವಿಷ್ಯದಲ್ಲಿ ಈಕೆಯಿಂದ ದೇಶಕ್ಕೆ ದೊಡ್ಡ ಹೆಸರು ಬರಲಿದೆ ಎನ್ನುವುದನ್ನು ಗಮನಿಸಿದ ನಿಪೊನ್‌ ದಾಸ್‌ ಗುವಾಹಟಿಗೆ ಹಿಮಾರನ್ನು ಕರೆದುಕೊಂಡು ಬಂದರು. ಅಲ್ಲಿ ಉತ್ತಮ ಮೂಲಸೌಕರ್ಯವುಳ್ಳ ಕ್ರೀಡಾಂಗಣದಲ್ಲಿ ಅಭ್ಯಾಸ ಕೊಡಿಸಿದರು. ಅಲ್ಲಿಂದ ಬಳಿಕ ಹಿಮಾ ದಾಸ್‌ ಸಾಗಿದ ಹಾದಿ ಇಂದು ಇತಿಹಾಸವಾಗಿ ನಿಂತಿದೆ.

ಜನಪ್ರಿಯ ಅಥ್ಲೀಟ್‌ ಆಗಿ ಬೆಳೆದ ಹಿಮ: ಹಿಮಾ ದಾಸ್‌ ಇಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ. ಅಸ್ಸಾಂನ ಬ್ರ್ಯಾಂಡ್‌ ರಾಯಭಾರಿಯಾಗಿದ್ದಾರೆ. ಅಲ್ಲದೆ ಜರ್ಮನಿಯ ಖ್ಯಾತ ಶೂ ಉತ್ಪಾದಕ ಕಂಪನಿ ಅಡಿಡಾಸ್‌ನ ರಾಯಭಾರಿಯಾಗುವ ತನಕ ಹಿಮಾ ದಾಸ್‌ ಬೆಳೆದಿದ್ದಾರೆ ಎನ್ನುವುದು ವಿಶೇಷ. ಮಾತ್ರವಲ್ಲ 2018ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಯುನೆಸೆಫ್ ಭಾರತದ ರಾಯಭಾರಿಯಾಗಿ 2018 ನವೆಂಬರ್‌ನಲ್ಲಿ ಆಯ್ಕೆಯಾಗಿದ್ದು ಭಾರತಕ್ಕೆ ಸಂದ ಹೆಮ್ಮೆಯಾಗಿದೆ. ಅಸ್ಸಾಂಗೆ ಒಟ್ಟಾರೆ ಟ್ರ್ಯಾಕ್‌ ಅಂಡ್‌ ಫೀಲ್ಡ್‌ನಲ್ಲಿ ಮೊದಲ ಪದಕ ಗೆದ್ದು ತಂದ ರಾಜ್ಯದ ಓಟಗಾರ್ತಿ ಎನ್ನುವ ಸಾಧನೆಯನ್ನು ಹಿಮಾ ದಾಸ್‌ ಮಾಡಿದ್ದಾರೆ. ಕಠಿಣ ಪರಿಶ್ರಮ, ತ್ಯಾಗದ ಫ‌ಲವೇ ಇಂದು ಅವರನ್ನು ಇಂದು ಇಲ್ಲಿ ತನಕ ಕರೆದುಕೊಂಡು ಬಂದಿದೆ.

*ಪರಿಚಯ
ಪೂರ್ಣ ಹೆಸರು: ಹಿಮಾ ದಾಸ್‌
ಹುಟ್ಟಿದ್ದು: ಅಸ್ಸಾಂನ ಧಿಂಗ್‌
ಇಸವಿ: 9-1-2000
ಇವೆಂಟ್‌: 100 ಹಾಗೂ 400 ಮೀ. ಓಟ
ಕೋಚ್‌: ನಿಪೊನ್‌ ದಾಸ್‌, ನಬೊಜಿತ್‌ ಮಲಕರ್‌. ಗಲಿನಾ ಬುಕರಿನಾ
ಶಿಕ್ಷಣ: ದ್ವಿತೀಯ ಪಿಯುಸಿ ಪಾಸ್‌ (2019)

*ಸಾಧನೆ:
2018-ವಿಶ್ವ ಕಿರಿಯರ ಅಥ್ಲೆಟಿಕ್ಸ್‌ನ 400ಮೀ.ನಲ್ಲಿ ಚಿನ್ನ.
2018-ಏಷ್ಯನ್‌ ಗೇಮ್ಸ್‌ ಅಥ್ಲೆಟಿಕ್ಸ್‌ 400ಮೀ.ನಲ್ಲಿ ಬೆಳ್ಳಿ .
2018- ಏಷ್ಯನ್‌ ಗೇಮ್ಸ್‌ ಅಥ್ಲೆಟಿಕ್ಸ್‌ನ ಮಹಿಳಾ 4/400 ಮೀ. ರಿಲೇನಲ್ಲಿ ಚಿನ್ನ.
2018- ಏಷ್ಯನ್‌ ಗೇಮ್ಸ್‌ ಅಥ್ಲೆಟಿಕ್ಸ್‌ ಮಿಶ್ರ ವಿಭಾಗದ 4/400 ಮೀ. ರಿಲೇನಲ್ಲಿ ಚಿನ್ನ.

* ಪ್ರಶಸ್ತಿ:
2018- ಅರ್ಜುನ ಪ್ರಶಸ್ತಿ
2018-ಯುಎನ್‌ಐಸಿಇಎಫ್ನ ಭಾರತದ ರಾಯಭಾರಿಯಾಗಿ ಆಯ್ಕೆ
2018: ಅಸ್ಸಾಂನ ರಾಯಭಾರಿಯಾಗಿ ಆಯ್ಕೆ

ಒಂದು ತಿಂಗಳಲ್ಲಿ ಗೆದ್ದ 5 ಚಿನ್ನದ ಪದಕ
* ಜು.2, ಪೋಲೆಂಡ್‌ ಪೋಝ°ನ್‌ ಅಥ್ಲೆಟಿಕ್ಸ್‌ ಗ್ರ್ಯಾನ್‌ ಫ್ರೀನ 200 ಮೀ. ಓಟದಲ್ಲಿ ಚಿನ್ನ (23.65 ಸೆಕೆಂಡ್ಸ್‌)
* ಜು.7, ಪೋಲೆಂಡ್‌ ಕುತೊ° ಅಥ್ಲೆಟಿಕ್ಸ್‌ ಕೂಟದ 200 ಮೀ. ಓಟದಲ್ಲಿ ಚಿನ್ನ (23.97 ಸೆಕೆಂಡ್ಸ್‌)
* ಜು.13, ಚೆಕ್‌ ಗಣರಾಜ್ಯದ ಕ್ಲಾಡೊ° ಅಥ್ಲೆಟಿಕ್ಸ್‌ ಕೂಟದ 200 ಮೀ. ಓಟದಲ್ಲಿ ಚಿನ್ನ (23.43 ಸೆಕೆಂಡ್ಸ್‌)
* ಜು.17, ಚೆಕ್‌ ಗಣರಾಜ್ಯದ ತಬೊರ್‌ ಅಥ್ಲೆಟಿಕ್ಸ್‌ ಕೂಟದ 200 ಮೀ. ಓಟದಲ್ಲಿ ಚಿನ್ನ (23.25 ಸೆಕೆಂಡ್ಸ್‌)
* ಜು.20, ಚೆಕ್‌ ಗಣರಾಜ್ಯದಲ್ಲಿ 400 ಮೀ. ಓಟದಲ್ಲಿ ಚಿನ್ನ (52.09 ಸೆಕೆಂಡ್ಸ್‌)

ಟಾಪ್ ನ್ಯೂಸ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.