ಮಾನವ ಜನ್ಮ ದೊಡ್ಡದು

Team Udayavani, Nov 9, 2019, 5:07 AM IST

manava

ಸಕಲ ಜೀವಿಗಳಿಗೆಲ್ಲ ಮಾನವನೇ ಮಿಗಿಲು,
ಅವನಿಗಿಹುದು ಜ್ಞಾನದ ಬಲ,
ಇದಿಲ್ಲ ಇನ್ನಿತರ ಪ್ರಾಣಿಗಳಿಗೆ,
ಜ್ಞಾನಿಯಾಗುತ ನೀ ದೇವಮಾನವನಾಗೆಂದ,
ನಮ್ಮ ಮೃಡಗಿರಿ ಅನ್ನದಾನೀಶ

ಸಕಲ ಜೀವರಾಶಿಗಳಲ್ಲಿ ಮಾನವನೇ ಮಿಗಿಲು. ಬಹುಜನ್ಮದ ಪುಣ್ಯದ ಫ‌ಲವಾಗಿ ಮಾನವ ಜನ್ಮ ಸಿಕ್ಕುತ್ತದೆ. ಮಾನವನಿಗಿರುವ ಜ್ಞಾನಸಂಪತ್ತು ಇತರ ಪ್ರಾಣಿಗಳಿಗೆ ಇರುವುದಿಲ್ಲ. ಆದರೂ, ಭಗವಂತನು ಆಯಾ ಪ್ರಾಣಿಗಳಿಗೆ ವಿಶಿಷ್ಟವಾದ ಗುಣವನ್ನು ಕೊಟ್ಟಿದ್ದಾನೆ. ಮಾನವನಿಗೆ ಶಿವನು ಜ್ಞಾನ ಕೊಟ್ಟಿದ್ದರೂ ಗುರುಕೃಪೆಯಿಂದ ಮತ್ತು ಸ್ವಪ್ರಯತ್ನದಿಂದ ಮಾತ್ರ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ಮನುಷ್ಯರೂ ಬುದ್ಧಿವಂತರಾಗಿರುವುದಿಲ್ಲ.

ಜಾಣರಿಗಾಗಿ ವೇದೋಪನಿಷತ್ತುಗಳು, ಆಗಮ ಪುರಾಣಗಳು, ಶಾಸ್ತ್ರ ಕೃತಿಗಳು ವಿಪುಲವಾಗಿವೆ. ಬುದ್ಧಿವಂತರು ಜ್ಞಾನರಾಶಿಯನ್ನು ಅಭ್ಯಸಿಸಿ ಸುಖೀಗಳಾಗುತ್ತಾರೆ. ಒಮ್ಮೆ ಅರಣ್ಯದಲ್ಲಿ ಪ್ರಾಣಿಗಳ ಸಭೆ ಜರುಗಿತು. ಅಲ್ಲಿ ಪ್ರಾಣಿಗಳು ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಿದ್ದವು. ಇಲಿಯು, ಮಾನವರು ಸಂಗ್ರಹಿಸಿದ ಧವಸ ಧಾನ್ಯಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿ ಸುಖವಾಗಿರುವುದನ್ನು ಹೇಳಿತು. ಬೆಕ್ಕು, ತಾನು ಹಾಲು ತುಪ್ಪವನ್ನು ಕುಡಿದು ಸುಖವಾಗಿರುವೆ ಎಂದಿತು.

ಮಂಗ, ಹಣ್ಣು ಹಂಪಲನ್ನು ತಿಂದು ಆನಂದಿಸುವೆ ಎಂದು ಹೇಳಿದರೆ, ಹುಲಿ, ತಾನು ಘರ್ಜಿಸಿ ಮರದ ಮೇಲಿನ ಮಂಗಗಳನ್ನೇ ಕೆಡವಬಲ್ಲೆ, ಚಿಗರೆ ಆಕಳನ್ನೂ ಬೇಟೆಯಾಡಬಲ್ಲೆ ಎಂದಿತು. ಆನೆ, ತಾನು ದೊಡ್ಡ ದೊಡ್ಡ ಮರಗಳನ್ನು ಕಿತ್ತೆಸೆಯಬಲ್ಲೆ ಎಂದು ಬೀಗಿತು. ಹೀಗೆ, ಎಲ್ಲ ಪ್ರಾಣಿಗಳೂ ತಮ್ಮ ಶಕ್ತಿ ಸಾಮರ್ಥ್ಯಗಳ ಕುರಿತು ಕೊಚ್ಚಿಕೊಳ್ಳುತ್ತಿರುವು ದನ್ನು ಕಂಡ ನರಿಯು, “ನಿಮ್ಮೆಲ್ಲರಿಗಿಂತ ಬುದ್ಧಿವಂತ, ಮಾನವ. ಅವನು ಎಲ್ಲರನ್ನೂ ಹಿಡಿದು ತನ್ನ ಬುದ್ಧಿವಂತಿಕೆಯಿಂದ ಆಟವಾಡಿಸು ತ್ತಾನೆ. ಮಾನವನೇ ಜಾಣ. ಮಾನವನ ಜನ್ಮವೇ ದೊಡ್ಡದು. ಮಾನವರಾಗಿ ಹುಟ್ಟಿ ದೇವರನ್ನು ಕಾಣಬಹುದು’ ಎಂದು ಹೇಳಿತು. ಮನುಷ್ಯರಾಗಿ ಜನಿಸಿದ ಮೇಲೆ, ಮಾನವ ಜನ್ಮದ ಸಾರ್ಥಕತೆ ಮಾಡಿಕೊಳ್ಳಬೇಕಲ್ಲವೆ?!

* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ

ಟಾಪ್ ನ್ಯೂಸ್

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.