ಕಷ್ಟದ ವಿಷಯ ನೆನಪಿಡೋಕೆ ಐಡ್ಯಾ ಮಾಡ್ಯಾರ…!


Team Udayavani, Jul 29, 2017, 2:29 PM IST

6988.jpg

 ಪರೀಕ್ಷೆ ಎದುರಿಗೆ ನಿಂತರೆ ಓದಿದ್ದೆಲ್ಲಾ ಮರೆತು ಹೋಗುವುದು ಸಾಮಾನ್ಯ.  ಹೀಗೆ ಮರತೆ ಹೋಗಬಾರದು ಎನ್ನುವ ಉದ್ದೇಶದಿಂದ ನಿವೃತ್ತ ಜಂಟಿ ನಿರ್ದೇಶಕ ವಿಶ್ವನಾಥ್‌ 7, 10 ನೇ ತರಗತಿ ವಿದ್ಯಾರ್ಥಿಗಳ ಪಠ್ಯಗಳನ್ನು ಡಿಜಿಟಲೀಕರಣ ಮಾಡಿದ್ದಾರೆ. ಅದು ಹೇಗಿದೆ ಎಂದರೆ ನ್ಯಾಷನಲ್‌ ಜಿಯೋಗ್ರಫಿ ಚಾನೆಲ್‌ ನೋಡಿದ ಹಾಗೇ ಆಗುತ್ತದೆ. 

 “ಭೂಗೋಳ ಪಠ್ಯವನ್ನು ಅರ್ಥ ಮಾಡಿಕೊಳ್ಳೋದು ಕಷ್ಟವಾಗ್ತಿದೆ, ಸಮಾಜ ವಿಜ್ಞಾನ ಏಕೋ ತಲೆಗೇ ಹೋಗ್ತಿಲ್ಲ, ಸಮಾಜಶಾಸ್ತ್ರದ ಪಿತಾಮಹರ ಹೆಸರುಗಳು ನಾಲಿಗೆ ಮೇಲೆ ನಿಲ್ತಾ ಇಲ್ವಲ್ಲಾ ? ಏನು ಮಾಡೋದು?’

  ವಿದ್ಯಾರ್ಥಿಗಳನ್ನು ಇಂಥ ಸಮಸ್ಯೆಗಳು ಸದಾ ಕಾಡುತ್ತವೆ. ಮಕ್ಕಳಿಗೆ, ಪರೀಕ್ಷೆ ಎಂದರೆ ಭಯ ಶುರುವಾಗುವುದು ಇದೇ ಕಾರಣಕ್ಕೆ.  ಓದಿದ ನೆನಪು ಮಾಸಿದಂತೆ ಪರೀಕ್ಷೆ ಎನ್ನುವುದು ಶಿಕ್ಷೆಯಾಗುತ್ತಾ ಹೋಗುತ್ತದೆ.  ಓದಿದ್ದೆಲ್ಲಾ ಮರೆತೇ ಹೋಗುವುದು ರೋಗವೋ, ಖಾಯಿಲೆಯೋ?   ವಾಖ್ಯಾನಕಾರರ, ವಿಜ್ಞಾನಿಗಳ ಸಾಧನೆಗಳನ್ನು ತಲೆಯಲ್ಲಿ ಇಟ್ಟುಕೊಳ್ಳುವುದು ತ್ರಾಸದಾಯಕ ಕೆಲಸವೇ. ಇಸ್ವಿಗಳು ಇದ್ದರಂತೂ ಒದ್ದಾಟ ಇನ್ನೂ ಹೆಚ್ಚು.  ಶಾಲೆಯಲ್ಲಿ ಎಷ್ಟು ಹೇಳಿಕೊಟ್ಟರೂ ಅದು ತಲೆಗೆ ಹೋಗದು. ವಿಶೇಷ ತರಗತಿಗಳೂ ಇದಕ್ಕೆ ಸಹಾಯ ಮಾಡದೇ ಇದ್ದರೆ ಏನು ಮಾಡುವುದು?

 ಇವೆಲ್ಲ ಸಮಸ್ಯೆಗಳನ್ನು ಎರಡು, ಮೂರು ದಶಕ ಕಣ್ಣಾರೆ ಕಂಡವರು ಶಿಕ್ಷಣ ಇಲಾಖೆಯಲ್ಲಿ 38 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನಿವೃತ್ತ ಜಂಟಿ ನಿರ್ದೇಶಕ ವಿಶ್ವನಾಥ್‌.  ಅದಕ್ಕೆ ಅವರು ಒಂದು ಐಡಿಯಾ ಮಾಡ್ಯಾರೆ!  ಏನೆಂದರೆ 10 ನೇ ತರಗತಿ ಹಾಗೂ 7ನೇ ತರಗತಿಯ ವಿಜ್ಞಾನ ಮತ್ತು ಸಮಾಜವಿಜ್ಞಾನ. ಪಠ್ಯಗಳನ್ನು ಡಿಜಿಟಲೀಕರಣ ಮಾಡಿದರು. 

 ಸಮಾಜ ವಿಜ್ಞಾನದಲ್ಲಿ ಇತಿಹಾಸ, ಪೊಲಿಟಿಕಲ್‌ ಸೈನ್ಸ್‌, ಭೂಗೋಳ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ ಸೇರಿದಂತೆ 6 ವಿಷಯಗಳಿವೆ. ವಿಜ್ಞಾನದಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರಗಳನ್ನು ಒಳಗೊಂಡ ವಿಷಯಗಳಿಗೆ ವಿಶೇಷ ಡಿವಿಡಿ ಮಾಡಿದ್ದಾರೆ. ಇದರಲ್ಲಿ ಚಿತ್ರಸಹಿತವಾದ ವಿವರಣೆಗಳಿವೆ. ಇದನ್ನು ನೋಡಿದರೆ ನೀವೊಂಥರಾ ನ್ಯಾಷನಲ್‌ ಜಿಯೋಗ್ರಫಿ ನೋಡಿದಂತೆ ಆಗುತ್ತದೆ.

ಪಠ್ಯದ ವಿಷಯ, ಅದಕ್ಕೆ ತಕ್ಕ ಚಿತ್ರಗಳನ್ನು ಹೊಂದಿಸಿ, ಹಿಂದೆ ಸರಳವಾದ ನಿರೂಪಣೆ ಮಾಡಿದ್ದಾರೆ. ಶಾಲೆಯಲ್ಲಿರುವ ಪಠ್ಯವನ್ನೇ ಇಂಪಾದ ಹಿನ್ನೆಲೆ ಮಾತುಗಳಲ್ಲಿ ತಂದಿದ್ದಾರೆ.  ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಲಾಭ.  ತಾವು ಶಾಲೆಯಲ್ಲಿ ಓದುವ ಪಠ್ಯವೇ ಇದಾಗಿರುವುದರಿಂದ ಮತ್ತು ಪಠ್ಯಕ್ಕೆ ತಕ್ಕ ವಿಷ್ಯುಯಲ್‌ ಇರುವುದರಿಂದ ಡಿವಿಡಿಯನ್ನು ವೀಕ್ಷಿಸಿದ ನಂತರ ಅವರು ತಲೆಯಲ್ಲಿ ವಿಷಯ ಅಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.

 ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ ಕಣ್ಣೆದುರಿಗೇ ನಡೆದಂತೆ ತೋರಿಸುವ ನೈಜ ದೃಶ್ಯಾವಳಿ ಇದರ ಪ್ಲಸ್‌ ಪಾಯಿಂಟ್‌. ಸ್ವಾಮಿ ವಿವೇಕಾನಂದ, ಸುಭಾಷ್‌ ಚಂದ್ರಬೋಸ್‌, ಗಾಂಧೀಜಿ, ನೆರಹರು ಮೌಂಟ್‌ ಬ್ಯಾಟನ್‌, ಅಂಬೇಡ್ಕರ್‌ ದೃಶ್ಯಭಾಗಗಳು ಪಠ್ಯಕ್ಕೆ ಪೂರಕವಾಗಿವೆ. 

ಐಡಿಯಾ ಬಂದದ್ದು ಹೇಗೆ?
ಈ ಐಡಿಯಾ ಬಂದದ್ದೇ ವಿಚಿತ್ರ. ಒಂದು ಸಲ ಯಲ್ಲಾಪುರದ ಶಾಲೆಯೊಂದರಲ್ಲಿ ವಿಶೇಷ ತರಗತಿಯನ್ನು ತೆಗೆದು ಕೊಂಡಿದ್ದರು ವಿಶ್ವನಾಥ್‌. ಇದಕ್ಕಾಗಿ ವೀಡಿಯೋ ಕ್ಲಿಪಿಂಗ್‌ ಇಟ್ಟುಕೊಂಡು ಪಾಠ ಮಾಡುತ್ತಿದ್ದರು. ಇದನ್ನು ನೋಡಿದ ಶಾಲಾ ಮಂಡಳಿ- “ಇದನ್ನು ಇನ್ನೂ ಚೆನ್ನಾಗಿ ಹಿನ್ನಲೆ ಧ್ವನಿ ಇಟ್ಟು ಮಾಡಿಕೊಡಿ ‘ಎಂದರಂತೆ. ವಿಶ್ವನಾಥ್‌ಗೆ ಹೌದಲ್ಲಾ ಎನಿಸಿ ಕೆಲಸ ಶುರುಮಾಡಿದರು. 
ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂತು. ಆದರೆ ಹೂಡಿಕೆ ಮಾಡಲು ಹಣ ಬೇಕಲ್ಲ? 

 ಮಂಡ್ಯದ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಮಠದ ಶ್ರದ್ದಾನಂದ ಸ್ವಾಮಿಜಿ ಅವರು ” ನೀವು ಡಿವಿಡಿ ಮಾಡಿ. ನಿಮ್ಮ ಜೊತೆ ನಾವು ಇರುತ್ತೇವೆ’ ಎಂದು ಒಂದೂ ಕಾಲು ಲಕ್ಷದ ಖರ್ಚನ್ನು ಕೊಟ್ಟರು. ಅಲ್ಲಿಂದ ಶುರುವಾದದ್ದೇ ಈ ಡಿವಿಡಿ ಉರುಫ್ ಪಠ್ಯ ಡಿಜಿಟಲೀಕರಣದ ಯಾತ್ರೆ. ನಂತರ  ರೆಕಾರ್ಡಿಂಗ್‌ಗೆ ಸ್ಟುಡಿಯೋ, ವಾಯ್ಸ ಓವರ್‌ ಎಲ್ಲದಕ್ಕೂ ನೆರವಾಗಿದ್ದು ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್‌. 

 ವಿಶ್ವನಾಥ್‌ ಡಿವಿಡಿ ತಯಾರಿಸಿ, ಅದನ್ನು ನೇರವಾಗಿ ಯಾವುದೋ ವಿತರಕರಿಗೆ ರೈಟ್ಸ್‌ ಕೊಟ್ಟು ಮಾರಿಬಿಡಬಹುದಿತ್ತು. ಆ ಕೆಲಸ ಮಾಡಲಿಲ್ಲ. ಏಕೆಂದರೆ, ಈ ರೀತಿ ಮಾಡುವುದರಿಂದ ತಮಗೆ ಹೆಚ್ಚಿಗೆ ಹಣ ಬರಬಹುದು. ಆದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ  ಹೊರೆಯಾಗುತ್ತದೆ. ವಿದ್ಯಾರ್ಥಿಗಳನ್ನು ತಲುಪಬೇಕು ಎನ್ನುವ ಮೂಲ ಉದ್ದೇಶವೇ ಬುಡಮೇಲಾಗುತ್ತದೆ ಎನ್ನುವ ಕಾರಣಕ್ಕೆ ಆ ಕೆಲಸ ಮಾಡಲಿಲ್ಲ. ಬದಲಾಗಿ ತಾವೇ ಖುದ್ದು, ನಾಡಿನಾದ್ಯಂತ ಶಾಲೆಗಳಿಗೆ ಭೇಟಿ ಕೊಟ್ಟು, ಡಿವಿಡಿಯನ್ನು ತೋರಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೂ ಮೊದಲು  ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಚಿಕ್ಕಮಗಳೂರು, ಮಂಗಳೂರಿನ ಆಯ್ದ ಶಾಲೆಗಳ ಶಿಕ್ಷಕರು, ಪ್ರಿನ್ಸಿಪಾಲರಿಗೆ ಡಿವಿಡಿ ಕೊಟ್ಟು, ಅವರುಗಳ ಅಭಿಪ್ರಾಯ ಪಡೆದು. ಚೆನ್ನಾಗಿ ಮಕ್ಕಳಿಗೆ ಅರ್ಥವಾಗುತ್ತದೆ. ಸಾರ್ಥಕ ಕೆಲಸ ಅಂತ ಹೇಳಿ, ಭರವಸೆ ಕೊಟ್ಟ ಮೇಲೆ  ಮಾರಾಟ ಮಾಡಲು ಮುಂದಾಗಿದ್ದು. 

” ಇದರಲ್ಲಿ ಲಾಭದ ಉದ್ದೇಶವಿಲ್ಲ.ನನಗೆ ಪೆನÒನ್‌ ಬರುತ್ತದೆ. ಜೀವನ ನಡೆಸಲು ತೊಂದರೆ ಇಲ್ಲ. ಹೀಗಾಗಿ ಪರೀಕ್ಷೆಯ ಸಂದರ್ಭದಲ್ಲಿ ಎದುರಾಗುವ ಒದ್ದಾಟದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲೆಂದೇ ಈ ಡಿವಿಡಿ ಮಾಡಿದ್ದು ‘ ಎನ್ನುತ್ತಾರೆ ವಿಶ್ವನಾಥ್‌. 

 ಒಂದೇ ಸಲಕ್ಕೆ ನೋಟ, ಓದು ಎರಡೂ ಆಗುವುದರಿಂದ ವಿದ್ಯಾರ್ಥಿಗಳು ಸುಲಭವಾಗಿ ಗ್ರಹಿಸಬಹುದು. ಗ್ರಹಿಸಿದ್ದನ್ನು ನೆನಪಿಟ್ಟುಕೊಳ್ಳಬುದು. ಮನನ ಮಾಡಿಕೊಳ್ಳಬಹುದಂತೆ.  ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಬೆಂಗಳೂರು ರಾಜ್ಯದ ಇನ್ನಿತರ ಕಡೆಯಲ್ಲಿರುವ ನೂರಾರು ಶಾಲೆಯ ವಿದ್ಯಾರ್ಥಿಗಳು ಡಿವಿಡಿಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇನ್ನು ನೀವು?

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.