ಮೂರ್ತಿ ಪೂಜೆಯ ಮೂಲ ಏನಿರಬಹುದು?


Team Udayavani, Aug 11, 2018, 12:27 PM IST

98.jpg

ಮೂರ್ತಿ ಎಂಬುದು ನಮ್ಮ ಮನಸ್ಸನ್ನು ನಿಗ್ರಹಿಸುವ ಸಾಧನ ಮತ್ತು ಶಕ್ತಿ. ಗುರುತೊಂದು ಕಣ್ಣೆದುರು ಇಲ್ಲದೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದು ಕಷ್ಟ. ಹಾಗಾಗೀ, ನಮಗೆ ಮನಸ್ಸನ್ನು ಹಿಡಿದಿಡಲು ಮೂರ್ತಿಯೂ ಬೇಕು; ಇಂದ್ರಿಯಗಳನ್ನು ನಿಗ್ರಹಿಸಲು ಧ್ಯಾನವೂ ಬೇಕು. 

ಮನುಷ್ಯ ಜ್ಞಾನಿಯಾಗುತ್ತ ಹೋದಂತೆ ಅವನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಅಂತಹ ಪ್ರಶ್ನೆಗಳಲ್ಲಿ ಈ ಮೂರ್ತಿಪೂಜೆ ಯಾಕೆ? ಏನು? ಎಂಬ ಪ್ರಶ್ನೆಯೂ ಹೊರತಾದುದಲ್ಲ. ಮೂರ್ತಿಯನ್ನಿಟ್ಟು ಅದರಲ್ಲಿ ದೇವರನ್ನು ಕಾಣುವವನು ಭಕ್ತ. ಮೂರ್ತಿಯಿಲ್ಲದೆಯೂ ನಿರ್ವಾತದಲ್ಲಿ ದೇವರನ್ನು ಕಾಣುತ್ತಾನೆಂದಾದರೆ ಆತ ದೇವರ ಬಳಿಯಲ್ಲಿಯೇ ಇ¨ªಾನೆಂದು ಅರ್ಥೈಸಬಹುದು. ಏಕೆಂದರೆ ಅವನ ಮನಸ್ಸು ಅಷ್ಟು ಬಲವಾದ ಏಕಾಗ್ರತೆಯನ್ನೂ ತಪೋಬಲವನ್ನೂ ಹೊಂದಿ¨ªಾಗ ಮಾತ್ರ ಇದು ಸಾಧ್ಯ.

ಏನೇ ಹೇಳಿದರೂ ಮಾನವನು ಚಂಚಲ ಮನಸ್ಸಿನವನು. ವಯೋಗುಣಕ್ಕೆ ಅನುಗುಣವಾಗಿ ಅವನ ಚಿತ್ತಚಂಚಲತೆಯಲ್ಲಿ ಬದಲಾವಣೆಗಳಾಗಬಹುದೇ ಹೊರತು ಅದರಿಂದ ಪರಿಪೂರ್ಣ ಬಿಡುಗಡೆ ಹೊಂದಲು ಅಸಾಧ್ಯ. ಈ ಚಿತ್ತಚಾಂಚಲ್ಯಕ್ಕೆ ಮನಸು ಮತ್ತು ಇಂದ್ರಿಯಗಳೇ ಮೂಲ ಕಾರಣ. ಮನಸ್ಸಿನ ಏಕಾಗ್ರತೆ ಮತ್ತು ಆ ಮೂಲಕ ಇಂದ್ರಿಯಗಳ ನಿಗ್ರಹವನ್ನು ಮಾಡಲು ನಾವು ದೇವರಸ್ತುತಿಯ ದಾರಿಯನ್ನು ಈಗಾಗಲೇ ಕಂಡುಕೊಂಡಿದ್ದೇವೆ.

ಆದರೆ ದೇವರತ್ತ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಸುಲಭಸಾಧ್ಯವಾದುದಲ್ಲ. ಅಲ್ಲಿ ನಮಗೊಂದು ಗೋಚರವಾದ ಅಂಶ ಬೇಕೇಬೇಕು. ಮೂರ್ತಿಯೇ ಇಲ್ಲದ ಸ್ಥಳವನ್ನು ತೋರಿಸಿ ಇಲ್ಲಿ ದೇವರಿದ್ದಾನೆಂದು ನಮ್ಮ ಮನಸ್ಸಿಗೆ ಬಲವಾಗಿ ತಲುಪಿಸಲು ಸಾಧ್ಯವಿಲ್ಲ. ಹಾಗಾಗಿ, ನಮಗೆ ಪೂಜಿಸಲು ಅಂದರೆ, ನಮ್ಮ ಮನಸ್ಸನ್ನು ನಿಯಂತ್ರಿಸಲು ದೇವರೆಂಬ ಮೂರ್ತಿಯ ರೂಪಬೇಕು ಎಂಬಲ್ಲಿಗೆ ಮನೋನಿಗ್ರಹದ ಗೋಚರಸಾಧನವೇ ದೇವರ ಮೂರ್ತಿ. ಆಕಾರ ಆಕೃತಿಗಳಿಲ್ಲದೆ ನಾವು ಏನನ್ನೂ ಕಲ್ಪಿಸಿಕೊಳ್ಳಲು ಅಸಾಧ್ಯ. ಆಗ ನಾವು ಹೇಗೆ ಮನಸ್ಸನ್ನು ನಿಗ್ರಹಿಸಬಹುದು? ಎಂದು ಚಿಂತಿಸುತ್ತಾ ಹೋದಾಗ ಒಂದು ಗೋಚರ ವಸ್ತುವನ್ನು ನೋಡುತ್ತ ಅಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಚಂಚಲತ್ವದಿಂದ ಹೊರಬರಲು ಸಿಗುವ ಸುಲಭ ಮಾರ್ಗ.

ಅಂಬೆಗಾಲಿಕ್ಕುವ ಮಗುವೊಂದರ ಕಣ್ಣಿಗೆ ಹರಿತವಾದ ಕತ್ತಿ ತುಸುದೂರದಲ್ಲಿಯೇ ಬಿದ್ದಿರುವುದು ಕಾಣುತ್ತದೆ. ಅದನ್ನು ಹಿಡಿಯಬೇಕೆಂಬ ಆಸೆಯಿಂದ ಅದರತ್ತ ಹೋಗಲನುವಾಗುತ್ತದೆ. ಅದೇ ಸಮಯಕ್ಕೆ ನಾವು ಆ ಮಗುವಿನ ಕಣ್ಣೆದಿರು ಆಕರ್ಷಕವಾದ ಆಟಿಕೆಯೊಂದನ್ನ ಎಸೆದರೆ, ಆ ಮಗು ಅದರತ್ತ ಗಮನಹರಿಸಿ ಕತ್ತಿಯತ್ತ ಹೋಗದೆ ಆಟಿಕೆಯನ್ನು ಹಿಂಬಾಲಿಸುತ್ತದೆ. ಅಂದರೆ, ಇಲ್ಲಿ ಮೂರ್ತಿ ಕೆಲಸ ಮಾಡಿದೆ. ಇದೇ ರೀತಿ ಹುಲುಮಾನವರಾದ ನಮಗೆ ಮೂರ್ತಿಯ ಅಗತ್ಯ ಇದ್ದೇ ಇದೆ ಎಂಬುದನ್ನು ತಿಳಿದ ಪೂರ್ವಜರು ಮೂರ್ತಿಯ ಕಲ್ಪನೆಯನ್ನು ಬೆಳೆಸಿದರು. ಇದೇ ಮೂರ್ತಿಪೂಜೆಯ ಮೂಲವಿರಬಹುದು. ದೇವರು ಎÇÉಾ ಕಡೆ ಇದ್ದಾನೆಂಬುದು ನಮಗೆ ಗೊತ್ತಿದ್ದರೂ ಅಧರ್ಮದಲ್ಲಿ ನಡೆಯುವಾಗ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದೇ ಸಂದರ್ಭ, ದೇವಾಲಯದಲ್ಲಿರುವಾಗ ದೇವರೆದುರು ತಪ್ಪೆಸಗಬಾರದು ಎಂದುಕೊಂಡು ನೀತಿಯುತರಾಗಿ ನಡೆದುಕೊಳ್ಳುತ್ತೇವೆ.  ಅಲ್ಲಿಗೆ ಮೂರ್ತಿ ಎಂಬುದಿಲ್ಲದೆ ನಮ್ಮ ಚಿತ್ತವನ್ನು ಕೇಂದ್ರೀಕರಿಸಲಾಗದು.

ಮೂರ್ತಿ ಎಂಬುದು ನಮ್ಮ ಮನಸ್ಸನ್ನು ನಿಗ್ರಹಿಸುವ ಸಾಧನ ಮತ್ತು ಶಕ್ತಿ. ಗುರುತೊಂದು ಕಣ್ಣೆದುರು ಇಲ್ಲದೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದು ಕಷ್ಟ. ಹಾಗಾಗೀ, ನಮಗೆ ಮನಸ್ಸನ್ನು ಹಿಡಿದಿಡಲು ಮೂರ್ತಿಯೂ ಬೇಕು; ಇಂದ್ರಿಯಗಳನ್ನು ನಿಗ್ರಹಿಸಲು ಧ್ಯಾನವೂ ಬೇಕು. ಆದುದರಿಂದ ವ್ಯಕ್ತಿ ಮೂರ್ತಿ ಭಕ್ತಿ ಧ್ಯಾನದ ನಡುವೆ ಅವಿನಾಭಾವ ಸಂಬಂಧವಿದೆ.

ಮೂರ್ತಿಯ ಸಾಂಗತ್ಯ: ಪ್ರತಿ ಮನಸ್ಸು ಬಯಸುವುದು ಮುಕ್ತಿಯನ್ನು ಅದಕ್ಕಿರುವ ದಾರಿಯೇ ಭಕ್ತಿ; ಭಕ್ತಿ ಮತ್ತು ಧ್ಯಾನದ ಹುಟ್ಟು ನೆಲೆಯಡಗಿರುವುದೇ ದೇವರ ಮೂರ್ತಿಯಲ್ಲಿ.

   ||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

  ವಿಷ್ಣು ಭಟ್ಟ ಹೊಸ್ಮನೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.