ವಿಶ್ವಕಪ್‌ ಕ್ರಿಕೆಟ್‌ ಮತ್ತು ಭಾರತ-ಪಾಕ್‌ ಪಂದ್ಯ


Team Udayavani, Mar 2, 2019, 3:25 AM IST

50.jpg

ಪುಲ್ವಾಮ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಮತ್ತೆ ಕಾವೇರಿಸಿಕೊಂಡಿದೆ. ಇದಕ್ಕೆ ಕಾರಣ, ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌. ಈ ಪ್ರತಿಷ್ಠಿತ ಕೂಟದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಬೇಕೇ, ಪಾಕಿಸ್ತಾನ ಈ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಭಾರತ ವಿಶ್ವಕಪ್‌ ಪಂದ್ಯಾವಳಿಯನ್ನೇ ಬಹಿಷ್ಕರಿಸಬೇಕೇ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿ ಕ್ರಿಕೆಟ್‌ ನಿಷೇಧ ಹೇರಬೇಕೇ… ಹತ್ತು ಹಲವು ಪ್ರಶ್ನೆಗಳು ತೂರಿಬರುತ್ತಿವೆ. ಐಸಿಸಿ, ಬಿಸಿಸಿಐ, ಕೇಂದ್ರ ಸರಕಾರ, ವಿಶ್ವ ಕ್ರಿಕೆಟ್‌ ವಲಯಗಳೆಲ್ಲ ಜಟಿಲ ಸಮಸ್ಯೆಯನ್ನು ಹೊತ್ತು ಕೂತಿವೆ.

 ಕ್ರಿಕೆಟ್‌ನಿಂದ ಶಾಂತಿ ಲಭಿಸಿದೆಯೇ?
ಕ್ರಿಕೆಟ್‌ “ಶಾಂತಿಯ ಸಂಧಾನಕಾರ’, ಕ್ರಿಕೆಟ್‌ನಿಂದ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಸುಧಾರಿಸುತ್ತದೆ ಎಂಬುದೆಲ್ಲ ಭಾರತ-ಪಾಕಿಸ್ತಾನ ವಿಷಯದಲ್ಲಿ ಸುಳ್ಳಾಗಿರುವುದಕ್ಕೆ ಪುಲ್ವಾಮ ದಾಳಿಯೇ ಸಾಕ್ಷಿ. ಇದರಿಂದ ಕ್ರೀಡೆಗಿಂತ ದೇಶ ದೊಡ್ಡದು ಎಂಬ ಅಭಿಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವುದು ಬೇಡ ಎಂಬ ಕೂಗು ತೀವ್ರಗೊಂಡಿದೆ.

ಹಾಗೆಯೇ, ನಾವೇಕೆ ಪಾಕಿಸ್ತಾನಕ್ಕೆ ಪುಕ್ಕಟೆ ಎರಡಂಕ ಕೊಡಬೇಕು, ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತ ಸೋಲಿಲ್ಲದ ದಾಖಲೆ ಹೊಂದಿರುವುದರಿಂದ ಅವರನ್ನು ಇನ್ನೊಮ್ಮೆ ಹೆಡೆಮುರಿ ಕಟ್ಟಿ ಸಂಭ್ರಮಿಸೋಣ ಎಂಬ ಹೇಳಿಕೆಗಳೂ ಬಂದಿವೆ. ಮೇಲ್ನೋಟಕ್ಕೆ ಎರಡೂ ಸರಿ ಎನಿಸುತ್ತದೆ.

ವಿಶ್ವಕಪ್‌ನಲ್ಲಿ ಭಾರತ ಆಡದೇ ಹೋದರೆ, ಪಾಕಿಸ್ತಾನಕ್ಕೆ ನಿಷೇಧ ಹೇರಿದರೆ ಯಾವ ಚಿಂತೆಯೂ ಇಲ್ಲ. ಆದರೆ “ನಿಷೇಧ’ ಎನ್ನುವುದು ಅಷ್ಟು ಸುಲಭದಲ್ಲಿ ಹೇರಲ್ಪಡುವ ಸಂಗತಿಯಲ್ಲ. ಅಂದು ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ಬಸ್ಸಿನ ಮೇಲೆ ಭಯೋತ್ಪಾದಕ ದಾಳಿ ನಡೆದಾಗಲೇ ಪಾಕಿಸ್ತಾನವನ್ನು ವಿಶ್ವ ಕ್ರಿಕೆಟ್‌ನಿಂದ ದೂರ ಇಡಬೇಕಿತ್ತು. ಆದರೆ ಹಾಗಾಗಲಿಲ್ಲ.

ಫೈನಲ್‌ನಲ್ಲಿ ಎದುರಾದರೆ?: ಈ ಬಾರಿಯ ವಿಶ್ವಕಪ್‌ ರೌಂಡ್‌ ರಾಬಿನ್‌ ಲೀಗ್‌ ಮಾದರಿಯನ್ನು ಹೊಂದಿದೆ. ಇದರಂತೆ ಭಾರತ-ಪಾಕಿಸ್ತಾನ ಮುಖಾಮುಖೀ ನಡೆಯಬೇಕಿದೆ. ಈ ಪಂದ್ಯವನ್ನು ಭಾರತ ತ್ಯಜಿಸಿದರೆ ಎರಡಂಕ ನಷ್ಟವಾಗುತ್ತದೆ. ಪಾಕಿಗೆ ಲಾಭವಾಗುತ್ತದೆ. ಇದರಿಂದ ಭಾರತದ ಸೆಮಿಫೈನಲ್‌ ಪ್ರವೇಶಕ್ಕೇನೂ ಅಡ್ಡಿಯಾಗಲಿಕ್ಕಿಲ್ಲ ಎಂದೇ ಭಾವಿಸೋಣ. ಅಕಸ್ಮಾತ್‌ ಭಾರತ-ಪಾಕಿಸ್ತಾನ ತಂಡಗಳೇ ಫೈನಲ್‌ನಲ್ಲಿ ಎದುರಾದರೆ? ಆಗಲೂ ಭಾರತ “ಕಪ್‌’ ಬಿಟ್ಟುಕೊಡುತ್ತದೆಯೇ? ಈ ಬಗ್ಗೆ ಈಗಲೇ ಚಿಂತಿಸಿ ಸೂಕ್ತ ಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ.

1996ರ ವಿಶ್ವಕಪ್‌ ವೇಳೆ ಎಲ್‌ಟಿಟಿಇ ಭೀತಿಯಿಂದ ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌ ತಂಡಗಳು ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ್ದವು. ಆಗ ಲಂಕೆಗೆ ಪುಕ್ಕಟೆ 4 ಅಂಕ ಲಭಿಸಿತ್ತು. ಕಡೆಗೆ ಫೈನಲ್‌ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆಯಿತು. ಲೀಗ್‌ ಹಂತದಲ್ಲಿ ಆಡಲು ನಿರಾಕರಿಸಿದ್ದ ಆಸ್ಟ್ರೇಲಿಯವೇ ಫೈನಲ್‌ನಲ್ಲಿ ಎದುರಾದಾಗ, ಮೇಲೆರಗಿ ಹೋದ ಶ್ರೀಲಂಕಾ ಚಾಂಪಿಯನ್‌ ಆದದ್ದು ಈಗ ಇತಿಹಾಸ. ಆದರೆ ಭಾರತ-ಪಾಕಿಸ್ತಾನ ವಿಷಯದಲ್ಲಿ ಈ ಘಟನೆಯನ್ನು ತುಲನೆ ಮಾಡಲಾಗದು.

* ಅಂದು ಕಾರ್ಗಿಲ್‌ ಕದನ: ಕಾಕತಾಳೀಯವೆಂಬಂತೆ, 1999ರಲ್ಲಿ ಇಂಗ್ಲೆಂಡ್‌ ಆತಿಥ್ಯದಲ್ಲೇ ವಿಶ್ವಕಪ್‌ ನಡೆದಾಗ ಆಗಲೂ ಭಾರತ-ಪಾಕಿಸ್ತಾನ ನಡುವೆ ಬಿಗು ವಾತಾವರಣ ನೆಲೆಸಿತ್ತು. ಕಾರಣ, ಕಾರ್ಗಿಲ್‌ ಯುದ್ಧ!

ವಿಶ್ವಕಪ್‌ ಮತ್ತು ಕಾರ್ಗಿಲ್‌ ಕದನ ಏಕಕಾಲದಲ್ಲಿ ನಡೆಯುತ್ತಿತ್ತು. ಅಂದು “ಸೂಪರ್‌ ಸಿಕ್ಸ್‌’ ಹಂತದಲ್ಲಿ ಭಾರತ-ಪಾಕ್‌ ಎದುರಾದವು. ಎಂದಿನಂತೆ ಭಾರತ ವಿಶ್ವಕಪ್‌ ಅಂಗಳದಲ್ಲಿ ಪಾಕಿಸ್ತಾನವನ್ನು ಹೊಡೆದುರುಳಿಸಿ ಸಂಭ್ರಮಿಸಿತು. ಅಂದು ಕೂಡ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಆಡಬಾರದು-ಆಡಬೇಕು ಎಂಬ ಕೂಗು ತೀವ್ರವಾಗಿಯೇ ಇತ್ತು. ಆದರೆ ನೇರಾನೇರ ಕಾರ್ಗಿಲ್‌ ಕದನಕ್ಕೆ ಪುಲ್ವಾಮದ ಕಳ್ಳ ದಾಳಿಯನ್ನು ಸಮೀಕರಿಸಲಾಗದು. ವಿಶ್ವಕಪ್‌ಗೆ ಇನ್ನೂ 3 ತಿಂಗಳಿರಬಹುದು, ಆದರೆ ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಶೀಘ್ರದಲ್ಲಿ ಸ್ಪಷ್ಟ ಹಾಗೂ ದಿಟ್ಟ ನಿರ್ಧಾರವೊಂದಕ್ಕೆ ಬರಬೇಕಾದ ಅಗತ್ಯವಿದೆ.

-ಪ್ರೇಮಾನಂದ ಕಾಮತ್‌ 

ಟಾಪ್ ನ್ಯೂಸ್

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

1-horoscope

Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

sanjeev-ramya

Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್‌

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.