ಭಾರತಕ್ಕೆಸುಲಭದ ತುತ್ತಾಗಲಿದೆಯಾ ಲಂಕಾ?


Team Udayavani, Nov 18, 2017, 3:05 AM IST

1698.jpg

ಸತತ ಸೋಲುಗಳಿಂದ ಕಂಗೆಟ್ಟು ದಯನೀಯ ಸ್ಥಿತಿಯಲ್ಲಿರುವ ದುರ್ಬಲ ಶ್ರೀಲಂಕಾ ತಂಡವನ್ನು ಬಗ್ಗುಬಡಿಯಲು ಸಿದ್ಧತೆ ನಡೆಸಿರುವ ವಿರಾಟ್‌ ಕೊಹ್ಲಿ ಪಡೆ ತವರಿನಲ್ಲಿ ತನ್ನ ಸಾಮರ್ಥ್ಯ ತೋರಲು ಕಾತರವಾಗಿದೆ. 

ಮೂರು ತಿಂಗಳ ಹಿಂದೆ ಭಾರತ ತಂಡ ಶ್ರೀಲಂಕಾ ತಂಡವನ್ನು ಅವರದೇ ನೆಲದಲ್ಲಿ ಟೆಸ್ಟ್‌, ಏಕದಿನ, ಟಿ20 ಮೂರೂ ಮಾದರಿಯ ಒಂಬತ್ತು ಪಂದ್ಯಗಳಲ್ಲಿಯೂ ಮಣಿಸಿ ಪಾರಮ್ಯ ಮೆರೆದಿತ್ತು. ಇದೀಗ ಲಂಕಾ ತಂಡ ಭಾರತದ ಪ್ರವಾಸ ಕೈಗೊಂಡಿದ್ದು, ಗೆಲುವಿನ ಕನಸು ಕಾಣುತ್ತಿದೆ. ಆದರೆ ಪ್ರವಾಸಿಗರಿಗೆ ಮತ್ತೂಮ್ಮೆ ಸೋಲುಣಿಸುವ ಮೂಲಕ ತಮ್ಮ ಪರಾಕ್ರಮ ತೋರಲು ಕೊಹ್ಲಿ ಪಡೆ ಸಜ್ಜಾಗಿದೆ.

ಭಾರತದ ವಿರುದ್ಧ ಎಲ್ಲ ಮಾದರಿಗಳಲ್ಲಿಯೂ ಕ್ಲೀನ್‌ಸ್ವೀಪ್‌ ಆಗಿ ಮುಖಭಂಗ ಅನುಭವಿಸಿದ ಪರಿಣಾಮ, ಎಲ್ಲೆಡೆಯಿಂದ ತೀವ್ರ ಟೀಕೆಗಳು ಎದುರಾಗಿ ಕೊನೆಗೆ ಲಂಕಾ ಕ್ರಿಕೆಟ್‌ ಮಂಡಳಿಯ ಆಯ್ಕೆ ಮಂಡಳಿಯವರೇ ಅಧಿಕಾರದಿಂದ ಕೆಳಗಿಳಿದ ಘಟನೆಗಳು ಲಂಕಾದಲ್ಲಿ ನಡೆದವು. ಅದರ ಮುಂದುವರಿದ ಭಾಗವೆಂಬಂತೆ ತಂಡದ ನಾಯಕನನ್ನು ಬದಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್‌ಗಳನ್ನು ಲಂಕಾ ಜಯಗಳಿಸಿತ್ತು. ಆದರೆ, ಏಕದಿನ ಹಾಗೂ ಟಿ20 ಸರಣಿಗಳ ಒಂದೂ ಪಂದ್ಯ ಗೆಲ್ಲಲಾಗದೇ ಮುಜುಗರಕ್ಕೀಡಾಗಿತ್ತು. 

ಇತ್ತ ಲಂಕಾ ಪ್ರವಾಸ ಮುಗಿಸಿ ತವರಿಗೆ ಹಿಂತಿರುಗಿದ ಭಾರತ, ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳನ್ನು ಮಣಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಜತೆಗೆ ಭಾರತಕ್ಕೆ ವರ್ಷದ ಕೊನೆಯ ಸರಣಿ ಇದಾಗಿದ್ದು, ಎಲ್ಲ ಮಾದರಿ ಪಂದ್ಯಗಳಲ್ಲೂ ಜಯ ಸಾಧಿಸುವ ಮೂಲಕ ಗೆಲುವಿನೊಂದಿಗೆ ವರ್ಷ ಮುಗಿಸಲು ತಯಾರಿ ನಡೆಸಿದೆ.

40 ದಿನಗಳ ಪ್ರವಾಸದಲ್ಲಿ ಲಂಕಾ ತಲಾ ಮೂರು ಟೆಸ್ಟ್‌, ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಭಾರತವನ್ನು ಸೋಲಿಸುವ ಮೂಲಕ ಹೋದ ಮರ್ಯಾದೆ ಮರಳಿ ಪಡೆಯಬೇಕು ಎಂಬ ಹಂಬಲ ಲಂಕಾ ತಂಡಕ್ಕಿದೆ. ಆದರೆ, ಸಮತೋಲನದಿಂದ ಕೂಡಿರುವ ಭಾರತದ ಎದುರು ಅನನುಭವಿ ಆಟಗಾರರಿಂದ ಕೂಡಿರುವ ಲಂಕಾ ದುರ್ಬಲವಾಗಿದೆ ಎಂಬುದು ಕ್ರಿಕೆಟ್‌ ಪಂಡಿತರ ಅನಿಸಿಕೆ. ಈ ಕಾರಣದಿಂದಲೇ ಅದು ಭಾರತಕ್ಕೆ ಸುಲಭದ ತುತ್ತಾಗುವ ಎಲ್ಲಾ ಸಾಧ್ಯತೆಗಳು ಇವೆ.

ಖಾತೆ ತೆರೆಯುವ ತವಕ
ಭಾರತ ಮತ್ತು ಲಂಕಾ ನಡುವೆ 1982-83ರಲ್ಲಿ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ಆರಂಭವಾಗಿವೆ. ಆದರೆ, ಈವರೆಗೆ ಭಾರತದಲ್ಲಿ ಒಂದೇ ಒಂದು ಟೆಸ್ಟ್‌ ಪಂದ್ಯದಲ್ಲೂ ಗೆಲ್ಲಲು ಲಂಕಾಗೆ ಸಾಧ್ಯವಾಗಿಲ್ಲ. 1982-2017ರವರೆಗೆ ತವರಿನಲ್ಲಿ ಲಂಕಾದೊಂದಿಗೆ ಭಾರತ 17 ಬಾರಿ ಮುಖಾಮುಖೀಯಾಗಿದೆ. 10 ಪಂದ್ಯಗಳಲ್ಲಿ ಜಯಗಳಿಸಿದೆ. 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, 35 ವರ್ಷಗಳಲ್ಲಿ ಒಮ್ಮೆಯೂ ಗೆಲುವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಮೊದಲ ಜಯದ ನಿರೀಕ್ಷೆಯಲ್ಲಿ ಲಂಕಾ ಇದ್ದರೆ, ದಾಖಲೆಯನ್ನು ಹಾಗೇ  ಮುಂದುವರಿಸಿಕೊಂಡು ಹೋಗುವುದು ಭಾರತದ ಗುರಿಯಾಗಿದೆ. 

ಅನುಭವಿಗಳ ಕೊರತೆ
ಭಾರತಕ್ಕೆ ಬಂದಿಳಿದಿರುವ ಲಂಕಾ ತಂಡ ಸಂರ್ಪೂಣವಾಗಿ ಯುವ ಪ್ರತಿಭೆಗಳಿಂದ ಕೂಡಿದೆ. ನಾಯಕ ದಿನೇಶ್‌ ಚಾಂಡಿಮಲ್‌, ಆಲ್‌ರೌಂಡರ್‌ ಏಂಜೆಲೋ ಮ್ಯಾಥ್ಯೂಸ್‌, ಎಡಗೈ ಸ್ಪಿನ್ನರ್‌ ರಂಗನಾ ಹೆರಾತ್‌ ಹಾಗೂ ವೇಗದ ಬೌಲರ್‌ ಸುರಂಗ ಹೊರತುಪಡಿಸಿ ಉಳಿದವರು ಬಹುತೇಕ ಹೊಸಮುಖಗಳೇ. ಇದು ಯುವ ಆಟಗಾರರಿಗೆ ಮೊದಲ ಭಾರತದ ಪ್ರವಾಸವಾಗಿದ್ದು, ಎದುರಾಳಿ ಬೌಲರ್‌ಗಳನ್ನು ಎದುರಿಸುವುದು ಸವಾಲಾಗಲಿದೆ.

ಭರವಸೆ ಮೂಡಿಸಿದ ಯುವಕರು
ಇತ್ತೀಚೆಗೆ ಭಾರತ ಅಧ್ಯಕ್ಷ ಇಲೆವೆನ್‌ನೊಂದಿಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಲಂಕಾ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಲಂಕಾ ಕ್ರಿಕೆಟ್‌ ಮಂಡಳಿಗೆ ಹಾಗೂ ಆಟಗಾರರಿಗೆ ಭಾರತದಲ್ಲಿ ಚೆನ್ನಾಗಿ ಆಡಬಹುದು ಎಂಬ ವಿಶ್ವಾಸ ಮೂಡಿಸಿದೆ. ಅಧ್ಯಕ್ಷರ ಇಲೆವೆನ್‌ ವಿರುದ್ಧ ಸಮರವಿಕ್ರಮ 77 ಎಸೆತಗಳಲ್ಲಿ  74 ರನ್‌ಗಳಿಸಿದರೆ, ಹಿರಿಯ ಆಟಗಾರ ಏಂಜೆಲೋ ಮ್ಯಾಥ್ಯೂಸ್‌ 54, ಡಿಕ್ವೆಲ್ಲಾ 73 ರನ್‌ಗಳಿಸಿದ್ದು, ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. 

ಕೊಹ್ಲಿ ಪಡೆ ಎದುರಿಸುವುದು ಸುಲಭವಲ್ಲ
ಆರಂಭಿಕ ಆಟಗಾರ ಮುರಳಿ ವಿಜಯ್‌ ತಂಡಕ್ಕೆ ಮರಳಿರುವುದು ಭಾರತದ ಬ್ಯಾಟಿಂಗ್‌ ಶಕ್ತಿಯನ್ನು ಹೆಚ್ಚಿಸಿದೆ. ಶಿಖರ್‌ ಧವನ್‌, ಚೆತೇಶ್ವರ ಪೂಜಾರ, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ವೃದ್ಧಿಮಾನ್‌ ಸಹಾ ತಂಡದ ಬ್ಯಾಟಿಂಗ್‌ ಬಲವಾಗಿದ್ದಾರೆ. ಇನ್ನು ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿ‌ನ್‌, ವೇಗಿ ಇಶಾಂತ್‌ ಶರ್ಮಾ ಮತ್ತೆ ತಂಡಕ್ಕೆ ಮರಳಿರುವುದು ಬೌಲಿಂಗ್‌ ಬಲ ಹೆಚ್ಚಿಸಿದೆ. ಭುವನೇಶ್ವರ್‌ ಕುಮಾರ್‌, ರವೀಂದ್ರ ಜಡೇಜಾ, ಉಮೇಶ್‌ ಯಾದವ್‌ ಹಾಗೂ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಬೌಲಿಂಗ್‌ನಲ್ಲಿ ಜಾದೂ ಮಾಡಲಿದ್ದಾರೆ. 

ಆರಂಭಿಕ ಸ್ಥಾನಕ್ಕೆ ಪೈಪೋಟಿ
ಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕರಾಗಿ ಯಾರನ್ನು ಕಣಕ್ಕಿಳಿಸಬೇಕೆಂಬುದು ನಾಯಕ ವಿರಾಟ್‌ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ. ಈವರೆಗೆ ಶಿಖರ್‌ ಧವನ್‌ ಹಾಗೂ ಮುರುಳಿ ವಿಜಯ್‌ ಇನಿಂಗ್ಸ್‌ ಆರಂಭಿಸುತ್ತಿದ್ದರು. ಆದರೆ, ಮೂರು ತಿಂಗಳ ಹಿಂದೆ ನಡೆದ ಲಂಕಾ ಸರಣಿಯಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಇನಿಂಗ್ಸ್‌ ಆರಂಭಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ ಪೂಜಾರ ಸಹ ಆರಂಭಿಕ ಆಟಗಾರನಾಗಿದ್ದು, ಉತ್ತಮ ಫಾರ್ಮ್ನಲ್ಲಿದ್ದಾರೆ. ಇದರೊಂದಿಗೆ ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ ಸಹ ಉತ್ತಮ ಫಾರ್ಮ್ನಲ್ಲಿರುವುದು ನಾಯಕ ಕೊಹ್ಲಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಗಂಭೀರ್‌ ಏಕೆ ಆಯ್ಕೆಯಾಗಿಲ್ಲ
ಪ್ರಸಕ್ತ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಮೂರು ಸೆಂಚುರಿಗಳಿಸಿದರೂ, ಅವರನ್ನು ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಗಂಭೀರ್‌ ಸಹ ಆರಂಭಿಕ ಆಟಗಾರರಾಗಿದ್ದು, ಈಗಾಗಲೇ ತಂಡದಲ್ಲಿ ಆರು ಮಂದಿ ಆರಂಭಿಕ ಆಟಗಾರರು ಇರುವುದೇ 
ಅವರಿಗೆ ತಂಡದಲ್ಲಿ ಅವಕಾಶ ನೀಡದಿರಲು ಕಾರಣವಿರಬಹುದು ಎನ್ನಲಾಗಿದೆ. ಇನ್ನೊಂದು ಸುದ್ದಿ ಅಂದರೇ ಅದು ಗಂಭೀರ್‌ ಮತ್ತು ಕೊಹ್ಲಿ ನಡುವೆ ಇರುವ ಮುನಿಸಿನ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲ್ಲ ಎನ್ನಲಾಗುತ್ತಿದೆ.

ವೆಂ. ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Vishwaprabha Award 2025 to Actor Naveen D. Padil

Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.