ಭಾರತೀಯ ಜ್ಯೋತಿಷ್ಯ ವಿಜ್ಞಾನ ಮತ್ತು ಹವ್ಯವಾಹನ


Team Udayavani, Dec 9, 2017, 12:45 PM IST

255.jpg

 ಹವ್ಯವಾಹನ ಎಂದರೆ ಅಗ್ನಿ. ಇವನೂ ನಮ್ಮನ್ನು ಕಾಯುವ ದೈವವಾಗಿದ್ದಾನೆ. ಮಾತೃ ಸ್ವರೂಪಿಯಾಗಿ ಇವನೇ ದುರ್ಗೆಯಾಗಿದ್ದಾನೆ. ಪಿತೃ ಸ್ವರೂಪಿಯಾಗಿ ಶಿವನೂ ಆಗುತ್ತಾನೆ. ಇವನ ಮೂಲಕವೇ ಜೀವದ ಸಂಚಲನ ಸಾಧ್ಯ. ನಾವು ನೀಡುವ ಹವಿಸ್ಸನ್ನು ಅರ್ಥಾತ್‌ ನಮ್ಮ ಯಜ್ಞಯಾಗಗಳಲ್ಲಿ ಸುರಿಯುವ ಪೂಜಾ ದ್ರವ್ಯವನ್ನು ಸಂಬಂಧಿಸಿದ ದೇವತೆಗಳಿಗೆ ಈತ ತಲುಪಿಸುತ್ತಾನೆ. ಅಂದರೆ ಜೀವ ಜೀವದ ಕೊಂಡಿಯಾಗಿರುವ ಈತನೇ ನಮ್ಮನ್ನು ಅಂದರೆ ಮನುಷ್ಯರನ್ನು ದೇವತೆಗಳೊಂದಿಗೆ, ಪಿತೃಗಳೊಂದಿಗೆ, ಪಿತಾಮಹ, ಪ್ರಪಿತಾಮಹರೊಂದಿಗೆ ಸಂಬಂಧ ಕಲ್ಪಿಸಿ ಕೊಡುತ್ತಾನೆ. ನಾವು ಯಜ್ಞದ ಸಮಯದಲ್ಲಿ ಹೋಮಕ್ಕೆ ಹಾಕುವ ಹವಿಸ್ಸನ್ನು ಯಾರನ್ನು ಉದ್ದೇಶಿಸಿ “ಸ್ವಾಹಾ’ ಎಂದು ಘೋಷಿಸಿ ಸುರಿಯುತ್ತೇವೆಯೋ ಅವರಿಗೆ ತಲುಪಿಸುತ್ತಾನೆ. ಮಂತ್ರ ಮತ್ತು ತಂತ್ರಾದಿಗಳು ಈ ವಿಧಾನದಲ್ಲಿಯೇ ಹೋಮವನ್ನು ಮಾಡಬೇಕು ಎಂಬುದಾಗಿ ನಿರ್ದೇಶಿಸುತ್ತವೆ. 

  ಪುತ್ರ ಕಾಮೇಷ್ಟಿಯನ್ನು ನಡೆಸಿದರೆ, ಪುತ್ರ ಸಂತಾನ ಸಂಬಂಧವಾದ ವಿಚಾರಗಳನ್ನೇ ತಳಹದಿಯನ್ನಾಗಿಸಿ ಅದಕ್ಕೆ ಬೇಕಾದ ಮಂತ್ರ, ತಂತ್ರಗಳನ್ನು, ಪೂಜಾ ದ್ರವ್ಯಗಳನ್ನು ಉಪಯೋಗಿಸಬೇಕಾಗುತ್ತದೆ. ಈ ರೀತಿಯಾಗಿ ಮಂತ್ರ, ತಂತ್ರಾದಿಗಳು (ತಂತ್ರಾದಿಗಳು ಎಂದರೆ ಇಲ್ಲಿ ನಾನು ವಾಮಾಚಾರದ ಪ್ರಸ್ತುತ ಮಾಡಿಲ್ಲ. ನಾನು ಹೇಳುತ್ತಿರುವುದು ಶಿಷ್ಟ ತಂತ್ರಗಳ ಬಗ್ಗೆ. ಮಂತ್ರಗಳು ಶಕ್ತಿ ಪಡೆಯಬೇಕಾದರೆ ವಾಕ್‌ ಶುದ್ಧಿ, ಚಿತ್ತ ಶುದ್ದಿ, ಆತ್ಮ ಶುದ್ಧಿ ಮತ್ತು ಜ್ಞಾನ ಶುದ್ದಿಗಳನ್ನು ಬಯಸುತ್ತವೆ. ನಮ್ಮ ವೈದಿಕರಲ್ಲಿ ವಾಕ್‌ ಶುದ್ಧಿ ಲೋಪವಾದರೆ, ಆತ್ಮ ಶುದ್ಧಿಯ ಕೊರತೆ ಎದುರಾದರೆ, ತಾವು ಪಠಿಸುವ ಮಂತ್ರಗಳ ಅರ್ಥಗಳನ್ನೇ ತಿಳಿಯದವರಾಗಿದ್ದರೆ ನಡೆಸುವ ಹೋಮ ಹವನಗಳಿಂದ ಯಾವ ಪ್ರಯೋಜನವೂ ಸಿದ್ಧಿಸಲಾರದು. ನಿರರ್ಥಕ ಯಜ್ಞ-ಹವನಗಳಿಂದ ಸಂಕಲ್ಪಿತ ಉದ್ದೇಶಗಳು ಈಡೇರಲಾರವು. ಮಂತ್ರಕ್ಕೆ ಮಾವಿನ ಕಾಯಿ ಉದುರುವುದೇ ಎಂಬ ಮಾತಿನ ಅರ್ಥ ಏನೆಂಬುದನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು). ಸಂಪನ್ನತೆ ಪಡೆದು ಕೊಂಡವಾದರೆ ಅಪೇಕ್ಷಿತ ಉದ್ದೇಶ ನೆರವೇರುತ್ತದೆ. ಯಾವುದು ಹಣೆಬರಹವೋ ಅದನ್ನು ಅಳಿಸಲಾಗದು ಎಂಬ ಮಾತೊಂದಿದೆ. ಆದರೆ ಅಳಿಸುವುದನ್ನು ಸಾಧ್ಯ ಮಾಡಿಕೊಳ್ಳಬೇಕಾದರೆ ಹವ್ಯವಾಹನ ಅನುಗ್ರಹಿಸಬೇಕು. 

 ಶ್ರದ್ಧೆ
 ಮುಖ್ಯವಾಗಿ ನಾವು ಮನುಷ್ಯರಿಗೆ ಮಾಡುವ ಕೆಲಸದಲ್ಲಿ ನಂಬಿಕೆ ಮತ್ತು  ಶ್ರದ್ಧೆ ಇರದೇ ಹೋದರೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಮೂಲಭೂತವಾಗಿ ನಂಬಿಕೆ. ನಂಬಿ ಕೆಟ್ಟವರಿಲ್ಲವೋ ಎಂಬ ಮಾತನ್ನು ಗ್ರಹಿಸಬೇಕು. ಹಾಗಾದರೆ ಯಾವುದನ್ನು ನಂಬಬೇಕು. ಒಳ್ಳೆಯದಾಗುತ್ತದೆ  ಎಂಬುದನ್ನು ನಂಬಬೇಕು. ಸಹಕರಿಸುವವರಿದ್ದಾರೆ ಎಂಬುದನ್ನು ನಂಬಬೇಕು. ಪ್ರಜಾಸತ್ತೆಯಲ್ಲಿ ನಂಬಿಕೆಯೇ ನಮಗೆ ಸಂಜೀವಿನಿ, ನಮ್ಮ ಓಟುಗಳನ್ನು, ಈತ/ಈಕೆ ಒಳ್ಳೆಯದನ್ನು ಮಾಡುತ್ತಾನೆ/ಳೆ ಎಂದು ನಂಬಿ, ಇವರುಗಳಿರುವ ಪಕ್ಷದ ಸಿದ್ಧಾತಗಳನ್ನು ನಂಬಿ ಮತ ಹಾಕುತ್ತೇವೆ. ಶ್ರದ್ಧೆಯೇ ಇರದೆ ಒಬ್ಬರ ಬಗೆಗೆ, ಒಂದು ವಿಚಾರದ ಬಗೆಗೆ, (ಔಷಧ ಗುಣಪಡಿಸುತ್ತದೆ ಎಂಬ ಶ್ರದ್ಧೆ ಹೇಗೋ ಹಾಗೆ) ನಮಗೆ ನಂಬಿಗೆ ಬಾರದು. ಹವ್ಯವಾಹನನಾದ ಅಗ್ನಿಯು ನಮಗೆ ಶ್ರದ್ಧೆಯನ್ನು ಕೊಡುವವನಾಗಿದ್ದಾನೆ. 

ಮೇಧಾಂ
 ಜ್ಞಾನಕ್ಕೆ ಕಾರಣನಾಗುವವನೂ ಹವ್ಯವಾಹನನೇ ಆಗಿದ್ದಾನೆ. ಜ್ಞಾನದಲ್ಲಿ ದುಷ್ಟ ಜ್ಞಾನ,ಶಿಷ್ಟ ಜ್ಞಾನ ಎಂಬ ಬೇಧ ಭಾವಗಳಿಲ್ಲ. ಜ್ಞಾನ ಯಾವಾಗಲೂ ಪಾರದರ್ಶಕ. ಬುದ್ಧಿ ಬಲ, ದುಬುìದ್ಧಿಯ ಆವರಣ ಪಡೆಯುವಂತಾಗಬಹುದು. ಆದರೆ “ನಹಿಜ್ಞಾನೇನ ಸದೃಶಂ’ ಎಂಬ ಮಾತಿದೆ. ಹೀಗಾಗಿ ಇದು ಏನು, ಅದು ಏನು, ಇದು ಹೀಗ್ಯಾಕೆ, ಅದು ಹೀಗ್ಯಾಕೆ  ಎಂಬು ವಿಚಾರಗಳು ಜ್ಞಾನದ ಮೂಲಕ ತಿಳಿಯುವಂಥದು. ಜ್ಞಾನದ ಮೂಲಕವೇ ವಿಸ್ತರಿಸಿ ಇನ್ನಿತರ ವಿಚಾರಗಳ ಬಗೆಗೆ ಮಾಹಿತಿಯನ್ನು ಒದಗಿಸುವಂಥದು. ಇಷ್ಟೆಲ್ಲ ಸಂಶೋಧನೆಗಳನ್ನು ಮನುಷ್ಯ ನಿರಂತರವಾಗಿ ಮಾಡುತ್ತಲೇ ಬಂದಿದ್ದಾನೆ. ಅಕ್ಕಿಯಲ್ಲಿ ನಮಗೆ ಬೇಕಾದ ಸತ್ಯವಿದೆ ಎಂಬ ಜ್ಞಾನದ ಅರಿವು ಸಿಕ್ಕಿದ ನಂತರವೇ ಬುದ್ಧಿ ಬಲದಿಂದ ಅದನ್ನು ಬೇಯಿಸಿ ಅನ್ನ ಮಾಡುವ ಕಲೆಯನ್ನು ಕಂಡುಕೊಂಡಿದ್ದಾನೆ. ಹೀಗಿರುವುದರಿಂದಲೇ ಜ್ಞಾನದ ಸತ್ವ ಪೂರ್ಣ ಬೀಜಗಳು ನಮಗೆ ಹವ್ಯವಾಹನನಾದ ಅಗ್ನಿ ದೇವನ ಮೂಲಕವೇ ಲಭ್ಯ. 

 ಪ್ರಜ್ಞೆ
 ಪ್ರಜ್ಞೆ ಮಾನವನ ಜೀವನದಲ್ಲಿ ಅಗತ್ಯದ ಘಟಕ. ಪ್ರಜ್ಞೆಯೇ ಇರದಿರುವಾಗ ನಾವು ಹಲಬುತ್ತ ಇರುತ್ತೇವೆ. ಸಮಯ ಪ್ರಜ್ಞೆ ಎಂಬುದನ್ನು ನಾವು ಕೇಳಿಸಿಕೊಳ್ಳುತ್ತಲೇ ಬಂದಿದ್ದೇವೆ. ಸಮಯಕ್ಕೆ ಸರಿಯಾಗಿ ನಮ್ಮ ವೇಳಾಪಟ್ಟಿಯನ್ನು, ದಿನಚರಿಯನ್ನು ಕಾರ್ಯಗತಗೊಳಿಸುವ ಕ್ರಮ ಒಂದು ರೀತಿಯ ಸಮಯ ಪ್ರಮಯ ಪ್ರಜ್ಞೆ ಎಂದು ಅನಿಸಿಕೊಂಡರೆ, ಏನೋ ಎಡವಟ್ಟು ಸಂಭವಿಸಿದಾಗ, ಎಡವಟ್ಟುಗಳನ್ನು ನಡೆಸಿ ನಮ್ಮನ್ನು ಬೇಸ್ತು ಬೀಳಿಸಿ ಅಪಾಯಕ್ಕೆ ಕೆಡವಬೇಕು ಎಂದು ಯೋಚಿಸುವ ಧೂರ್ತರಿಗೆ ಸಮಯ ಪ್ರಜ್ಞೆಯಿಂದ ಅವರ ದುರುದ್ಧೇಶ ಫ‌ಲಿಸದಂತೆ ಕಟ್ಟಿಹಾಕುವುದೂ ಕೂಡ ಸಮಯ ಪ್ರಜ್ಞೆಯ ಶಕ್ತಿಯಿಂದಲೇ ಸಾಧ್ಯವಾಗುತ್ತದೆ.  ಪ್ರಜ್ಞಾ ಪ್ರವಾಹ ಎಂಬ ಮಾತೊಂದು ರೂಢಿಯಲ್ಲಿದೆ. ಪ್ರಜ್ಞೆ ಹೀಗಾಗಿ ಯಾವಾಗಲೂ ಕಾಮದೇನುವಿನಂತೆ. ಪ್ರಜ್ಞೆಯಿಂದ ಅನಾಹುತಗಳನ್ನು ತಪ್ಪಿಸಬಹುದು. ಅಗ್ನಿಯಾಗಿರುವ ಹವ್ಯವಾಹನನ ಮೂಲಕ ಜಗತ್ತಿಗೆ ಅವಶ್ಯವಾದ ಪ್ರಜ್ಞೆಯನ್ನು ನಾವು ದೇವತೆಗಳ ಮೂಲಕ ಪಡೆಯಬಹುದು. 

 ಸಿದ್ಧಿ
 ಯಾವುದನ್ನೇ ಮಾಡಿದರೂ ಸಿದ್ಧಿಯು ದಕ್ಕಬೇಕಾಗುತ್ತದೆ. ತೆಂಗಿನ ಮರಗಳನ್ನು ನೆಟ್ಟರೆ ಅದು ಬೆಳೆದು ಫ‌ಲ ಕೊಡುವಾಗಲೂ ನಾವು ಅದನ್ನು ಆನಂದಿಸಲು ಆಯಸ್ಸು, ಆರೋಗ್ಯ ಪಡೆದಿರಬೇಕು. ಹಲವರಿಗೆ ಬುದ್ಧಿ, ವಿದ್ಯೆ, ಜ್ಞಾನ ಎಲ್ಲವೂ ಇರುತ್ತದೆ. ಆದರೆ ಸಿದ್ಧಿ ಸಿಗಲಾರದು. ಎಷ್ಟೆಲ್ಲವನ್ನು ಓದಿ ದೊಡ್ಡದು ಎಂದು ಅನಿಸದ ಕಾರ್ಯಕ್ಷೇತ್ರದಲ್ಲಿ ಸಣ್ಣ ಕೆಲಸ ಸಂಪಾದಿಸುತ್ತಾರೆ. ಸೂಕ್ತವಾದುದು ದಕ್ಕಬೇಕಾದರೆ ಸಿದ್ಧಿ ಬೇಕು. ಹೀಗಾಗಿಯೇ ಗಣೇಶನ ಬಳಿ ಆತನ ಸಂಗಾತಿಗಳಿಗಾಗಿ ಸಿದ್ಧಿ, ಬುದ್ಧಿ ಒಟ್ಟಿಗೇ ಇರುತ್ತವೆ. ಹಣ ಬಂದರೂ ಏಳ್ಗೆ ಇರಲಾರದು. ಏನೋ ಕಾರ್ಪಣ್ಯ. ಏನೋ ಹಿನ್ನಡೆ, ಟೀಕೆಗಳು, ವ್ಯಂಗೋಕ್ತಿಗಳು, ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳುತ್ತ ಕುಬjತ್ವ ಪಡೆದಿರುತ್ತಾರೆ. ಕುಬjತ್ವವನ್ನು ಮೀರುವ ಅತ್ಯಂತ ಮೇರು ಮಟ್ಟದ ಸಿದ್ಧಿಯನ್ನು ಹವ್ಯವಾಹನನಾದ ಅಗ್ನಿ ದೇವನೇ ಒದಗಿಸಬೇಕಾಗುತ್ತದೆ. 

 ಬುದ್ಧಿ
 ಬುದ್ದಿ ಬಲ ಎಲ್ಲರಿಗೂ ದಕ್ಕದು. ಏನೇ ಪ್ರಯತ್ನಪಟ್ಟರೂ ಬುದ್ಧಿ ಓಡದು ಎಂದು ಹಳಹಳಿಸುವವರಿರುತ್ತಾರೆ. ಇನ್ನೊಬ್ಬರನ್ನು ಸಮರ್ಥವಾಗಿ ಎದುರಿಸುವ, ಕ್ಲಿಷ್ಟ ಸಂದರ್ಭಗಳಿಂದ ಪಾರಾಗಿ ಬರುವ ಬುದ್ಧಿ ಬಲ ಒದಗಿಬರುವುದು ಸುಲಭವಾಗಿರದು. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬುದ್ಧಿಯೇ ಇರದಿದ್ದರೆ ಇದ್ದರೂ ಸತ್ತಂತೆ. ಹಲವರು ಓದಿ ಓದಿ ಡಿಗ್ರಿ ಸಂಪಾದಿಸುತ್ತಾರೆ. ಆದರೆ ಬುದ್ಧಿ ಬಲದಲ್ಲಿ ಏನನ್ನು ಸಂಪಾದಿಸಿದರು ಎಂದು ಕೇಳಿದರೆ ಏನನ್ನೂ ಸಂಪಾದಿಸಿರುವುದಿಲ್ಲ. ಕೆಲಸಕ್ಕಾಗಿನ ಸಂದರ್ಭದಲ್ಲಿ ಅನೇಕರು ಆಯ್ಕೆಯ ಬಗೆಗಾಗಿನ ಸಂದರ್ಶನಕ್ಕೆ ಆಗಮಿಸುತ್ತಾರೆ. ಸಂದರ್ಶನಕ್ಕೆ ಬಂದವರಿಗೆಲ್ಲ ಕೆಲಸ ಕೊಡುವವರು ಬಯಸಿದ ಪದವಿ, ಅನುಭವ ಇತ್ಯಾದಿ ಇದ್ದೇ ಇರುತ್ತದೆ. ಆದರೂ ಎಲ್ಲರೂ ಆಯ್ಕೆಯಾಗುವುದಿಲ್ಲ. ಬುದ್ಧಿ ಶಕ್ತಿಯ ಅಭ್ಯರ್ಥಿ ಕಡೆಯದಾಗಿ ಆಯ್ಕೆಯಾಗುತ್ತಾನೆ. ಹಾಗಾದರೆ ಉಳಿದ ಸ್ಪರ್ಧಾಳುಗಳಿಗಿಂತ ಆಯ್ಕೆಯಾದ ವ್ಯಕ್ತಿಯು ಹೇಗೆ ಬೇರೆಯಾಗುತ್ತಾನೆ. ಅದು ಕೇವಲ ಆ ವ್ಯಕ್ತಿಯ ಬುದ್ಧಿ ಬಲದಿಂದಲೇ ಎಂದು ಅನ್ನಬಹುದು. ಕಲಿತರಾಗಲಿಲ್ಲ, ವಿನಯ ವಿದ್ದರಾಗಲಿಲ್ಲ, ತರ್ಕ, ಜಾಣ್ಮೆ, ಮಾತಿನ ವೈಖರಿ, ಸೆಳೆಯುವ, ಆಕರ್ಷಿಸಿ ಕೆಲಸ ಸಾಧಿಸುವ ಘನವಂತಿಕೆ ಬೇಕು. ಇದೆಲ್ಲ ಬರುವುದು ಬುದ್ಧಿ ಬಲದಿಂದ. ಈ ಇದು ಕೇವಲ ಓದಿನಿಂದಲೇ ಬರುವಂಥ ವಿಚಾರ ಆಗಿರುವುದಿಲ್ಲ. ಬುದ್ಧಿಯು ಅಗ್ನಿ ದೇವನಿಂದಲೇ ಸಿಗಬೇಕು. 

 ಯಶಸ್ಸು,ಹಣ, ಬಲ ಆಯಸ್ಸು, ತೇಜಸ್ಸು ಹಾಗೂ ಆರೋಗ್ಯ 
 ಯಶಸ್ಸು ಎಲ್ಲರಿಗೂ ಸಿಗದು. ಹಣವೂ ಎಲ್ಲರಿಗೂ ದಕ್ಕಲಾರದು. ಈ ಸಿದ್ದಿಗೆ ಅದೃಷ್ಟಬೇಕು. ದುಡಿಯುವ ತಾಕತ್ತು ಬೇಕು. ದುಡಿದ ಮಾತ್ರಕ್ಕೆ ಹಣಸಿಗುತ್ತದೆಯೇ ? ಇಲ್ಲ. ಅದಕ್ಕೆ ಬಲ ಬೇಕು. ಬಲ ಬಂದ ಮಾತ್ರಕ್ಕೆ ಸಮಾಜ ವಿರೋಧಿಗಳಾಗಿ, ಪುಂಡಾಟಿಕೆ ನಡೆಸಿ, ಅನ್ಯಾಯದ ಮಾರ್ಗದ ಹಳಿ ಹಿಡಿದು ಬಲ ಸಂಪಾದಿಸುವುದಲ್ಲ. ಯಶಸ್ಸು ಹಾಗೂ ಸಮರ್ಪಕವಾದ ಬುದ್ಧಿ ಶಕ್ತಿಗಳು ಯಾರಿಗೂ ಹೆದರದ ಅಂತಃ ಸತ್ವ, ನೈತಿಕ ಶಕ್ತಿಯನ್ನು ಒದಗಿಸುತ್ತದೆ. ಯಶಸ್ಸು ತೇಜಸ್ಸಿನಿಂದ ಹೆಚ್ಚಿನ ಆಳ, ಆಗಲ, ಅಂಗ, ಆಕಾರಾದಿ ವೈಶಿಷ್ಟéಗಳನ್ನು ಕೊಡುತ್ತವೆ. ಈ ಕಾರಣದಿಂದ ಆರೋಗ್ಯವು ಮುಖ್ಯ ಘಟಕವಾಗಿ ಅರಳಿಕೊಳ್ಳುತ್ತದೆ. ಈ ವಿಷಯದ ಕುರಿತು ಮುಂದಿನವಾರ ಇನ್ನೊಂದಷ್ಟು ಚರ್ಚೆ ಮಾಡೋಣ. 

ಅನಂತ ಶಾಸ್ತ್ರಿ 

ಟಾಪ್ ನ್ಯೂಸ್

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.