ಭಾರತೀಯ ಕ್ರಿಕೆಟಿಗರ ಪ್ರೇಮಪ್ರಸಂಗಗಳು?!
Team Udayavani, Feb 2, 2019, 12:40 AM IST
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ “ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಭಾಗವಹಿಸಿದ್ದು, ಅದರಲ್ಲಿ ಒಂದಷ್ಟು ಮಾತನಾಡಿ ನಿಷೇಧಕ್ಕೊಳಗಾಗಿದ್ದು, ಕೆಲವು ದಿನಗಳ ಹಿಂದಷ್ಟೇ ನಿಷೇಧ ತೆರವಾಗಿದ್ದು ಈಗ ಹಳೆಯ ಕಥೆ.
ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್, ಯುವತಿಯರ ಜೊತೆಗಿನ ತನ್ನ ಸಂಬಂಧಗಳ ಬಗ್ಗೆ, ಕ್ಲಬ್, ಪಾರ್ಟಿಗಳ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೇ ಮಾತನಾಡಿದ್ದರು. ಅದು ಮಹಿಳೆಯರ ಕುರಿತು ಈ ಕ್ರಿಕೆಟಿಗರಿಗಿರುವ ಹಗುರ ಭಾವನೆಯ ಸಂಕೇತ ಎಂದು ಭಾರೀ ವಿವಾದವೆದ್ದಿತ್ತು. ಈ ವಿವಾದದ ಬೆನ್ನಲ್ಲೇ ಬೇರೆ ಬೇರೆ ಕ್ರಿಕೆಟಿಗರ ಪ್ರೇಮ ಸಂಬಂಧಗಳ ಬಗ್ಗೆ ಚರ್ಚೆ ಶುರುವಾಗಿದೆ. ಈ ಕ್ರಿಕೆಟಿಗರಿಗಿತ್ತು ಎನ್ನಲಾದ ಪ್ರೇಮ ಪ್ರಸಂಗಗಳ ಕುರಿತ ಬರಹ ಇದು.
ಮೊದಲ ಭೇಟಿಯಲ್ಲೇ “ಮುತ್ತಿಕ್ಕಿದ್ದರಂತೆ” ರೋಹಿತ್
ಮೈದಾನದಲ್ಲಿ ಬೌಲರ್‌ಗಳ ಬೆವರಿಳಿಸುವ “ಹಿಟ್ ಮ್ಯಾನ್’ ರೋಹಿತ್ ಶರ್ಮ, ಮಾಡೆಲ್ ಒಬ್ಬರ ಮಾದಕ ನೋಟಕ್ಕೆ ಬೌಲ್ಡ್ ಆಗಿದ್ದರಂತೆ. ಮಾಜಿ ನಟಿ, ರೂಪದರ್ಶಿ ಹಾಗೂ ಗಾಯಕಿಯೂ ಆದ ಬ್ರಿಟಿಷ್ ಮೂಲದ ಸೋಫಿಯಾ ಹಯಾತ್ ಸೌಂದರ್ಯಕ್ಕೆ ಮನ ಸೋತಿದ್ದ ರೋಹಿತ್ ಶರ್ಮ, ಮೊದಲ ಭೇಟಿಯಲ್ಲೇ “ಕಿಸ್’ ಕೊಟ್ಟಿದ್ದರಂತೆ. ಇದನ್ನು ಸ್ವತಃ ಅಫೇರ್ ಹೊಂದಿದ್ದ ಸೋಫಿಯಾನೇ ಸಂದರ್ಶನವೊಂದರಲ್ಲಿ ಬಾಯಿ ಬಿಟ್ಟಿದ್ದಾರೆ. ಇಬ್ಬರು ಕ್ಲಬ್‌ನಲ್ಲಿ ಮೊದಲು ಭೇಟಿ ಆಗಿದ್ದೆವು, ಸ್ವಲ್ಪ ಹೊತ್ತು ಹರಟೆ ಹೊಡೆದು ನಂತರ, ನಿರ್ಜನ ಪ್ರದೇಶಕ್ಕೆ ಹೋದೆವು, ಆಗ ರೋಹಿತ್ ಯಾವುದೇ ಅಂಜಿಕೆ ಇಲ್ಲದೆ “ಕಿಸ್’ ಮಾಡಿದ್ರು. ನಂತರ ಇಬ್ಬರು ವಾಪಸ್ ಬಂದು ಡ್ಯಾನ್ಸ್ ಮಾಡಿದೆವು ಎಂದು ಹಯಾತ್ ಹೇಳಿದ್ದಾರೆ. ಇದಾದ ಬಳಿಕ ರೋಹಿತ್ ಶರ್ಮ, ಸೋಫಿಯಾ ಮನೆಗೂ ಹೋಗಿದ್ದರಂತೆ. 2012ರವರೆಗೂ ಸೋಫಿಯಾ ಜತೆ ಅಫೇರ್ ಇಟ್ಟುಕೊಂಡಿದ್ದ ಹಿಟ್‌ಮ್ಯಾನ್, 2015ರಲ್ಲಿ ರಿತಿಕಾ ಸಜೆªರನ್ನು ಮದುವೆಯಾಗಿ ಈಗ ಒಂದು ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಪಾಂಡ್ಯ ವಿವಾದ ನಂತರ ರೋಹಿತ್ ಶರ್ಮರ ಪ್ರಣಯ ಪ್ರಸಂಗ ಕೂಡ ಮತ್ತೆ ಸುದ್ದಿಯಾಗಿತ್ತು. ಇದಕ್ಕೆ ಇನ್ಸಾ$rಗ್ರಾಂನಲ್ಲಿ ಸ್ಪಷ್ಟನೆ ನೀಡಿರುವ ಸೋಫಿಯಾ, ತಾನು ರೋಹಿತ್ ಜತೆ ಡೇಟಿಂಗ್ ಮಾಡಿದ್ದು ನಿಜ. ಆದರೆ, ಅದೆಲ್ಲ ಮುಗಿದ ಹೋದ ಕತೆ, ಮತ್ತೆ ಆತನ ಜತೆ ಡೇಟಿಂಗ್ ಮಾಡಿಲ್ಲ, ಈಗ ಜಂಟಲ್‌ಮಾÂನ್ ತರ ನೋಡುತ್ತಿದ್ದೇನೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಹಾರ್ದಿಕ್ ಪ್ರಸಂಗಗಳು ಒಂದೆರಡಲ್ಲ
ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿರುವ ಹಾರ್ದಿಕ್ ಪಾಂಡ್ಯ, ಮೊದಲು ಡೇಟಿಂಗ್ ಮಾಡಿದ್ದು ಬಾಲಿವುಡ್ ನಟಿ ಎಲಿ ಅವ್ರಾಮ್ ಜತೆ. ಕಳೆದ ಮಾ.5ರಂದು ಮುಂಬೈ ಏರ್‌ಪೋರ್ಟ್‌ಗೆ ತನ್ನ ಕಾರಿನಲ್ಲೇ ಪಾಂಡ್ಯರನ್ನು ಎಲ್ಲಿ ಡ್ರಾಪ್ ಮಾಡಿದ್ದಾಗ ಅಭಿಮಾನಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಇದಕ್ಕೂ ಮೊದಲು ತನ್ನ ಸಹೋದರ ಕೃಣಾಲ್ ಪಾಂಡ್ಯನ ಮದುವೆಯಲ್ಲಿ ಎಲ್ಲಿ-ಹಾರ್ದಿಕ್ ಜತೆ ಕಾಣಿಸಿಕೊಂಡು ಫೋಟೋಗೆ ಫೋಸ್ ಕೂಡ ಕೊಟ್ಟಿದ್ದರು. ತನಗಿಂತ ಮೂರು ವರ್ಷ ದೊಡ್ಡವಳಾದ ಎಲ್ಲಿ ಅವ್ರಾಮ… ಅವರನ್ನು ಪಾಂಡ್ಯ ಮದುವೆ ಆಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಅದು ಬರೀ ಸುತ್ತಾಡೋಕೆ ಅಷ್ಟೇ ಸಿಮೀತವಾಗಿ, ಈಗ ಇಬ್ಬರೂ ದೂರವಾಗಿದ್ದಾರೆ. ಆದರೆ, ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಂಡ್ಯ ನೀಡಿದ್ದ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿದ್ದ ಎಲ್ಲಿ ಅವ್ರಾಮ…, ತಾವು ಕಂಡಿರುವ ಹಾರ್ದಿಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯರ ಈ ಕೆಟ್ಟ ಮುಖ ನಾನು ನೋಡಿಯೇ ಇರಲಿಲ್ಲ. ನನಗೆ ಗೊತ್ತಿರುವ ಹಾರ್ದಿಕ್ ಇವರಾಗಿರಲಿಲ್ಲ ಎಂದು ಎಲ್ಲಿ ಹೇಳಿಕೊಂಡಿರೆ. ಅಷ್ಟೇ ಅಲ್ಲ ಇಡೀ ಪ್ರಕರಣ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಗುವುದು ಬಹಳ ಅಪರೂಪ. ಅದರಲ್ಲೂ ಒಬ್ಬ ಕ್ರಿಕೆಟಿಗನಾಗಿ ಅವರನ್ನು ಹಲವು ಯುವಕರು ಹಿಂಬಾಲಿಸುತ್ತಾರೆ. ಹಾಗಿರುವಾಗ ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡುವುದು ತಪ್ಪು ಎಂದು ಬುದ್ಧಿವಾದ ಹೇಳಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ಮಾಡಿದ್ದಾರೆ ಎನ್ನಲಾದ ಇಶಾ ಗುಪ್ತಾ, ಪಾಂಡ್ಯ ಅವರ ವಿವಾದಿತ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಿಮ್ಮ ಬೆಸ್ಟ್ ಫ್ರೆಂಡ್ ಹಾರ್ದಿಕ್ ಪಾಂಡ್ಯ ಅವರು ಮಹಿಳೆಯರ ಕುರಿತು ನೀಡಿರುವ ಅನುಚಿತ ಹೇಳಿಕೆ ಬಗ್ಗೆ ಪ್ರಶ್ನೆ ಕೇಳಿದ್ರೆ, ನೀವು ನನ್ನ ಫ್ರೆಂಡ್ ಎಂದು ಹೇಳುತ್ತಿರುವ ವ್ಯಕ್ತಿ ಯಾರು? ಎಂದು ಮರು ಪ್ರಶ್ನೆ ಹಾಕಿದ್ದರು. ಇದೇ ವೇಳೆ ಹಾರ್ದಿಕ್, ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜತೆ ಟ್ವಿಟ್ಟರ್‌ನಲ್ಲಿ ಮಾತುಕತೆ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಮಾಡೆಲ… ಲಿಸಾ ಶರ್ಮಾ ಜೊತೆ ಪಾಂಡ್ಯ ಹೆಸರು ತಳಕು ಹಾಕಿಕೊಂಡಿದೆ.
ದೀಪಿಕಾ ಜೊತೆ ಶಾಂತಮೂರ್ತಿ ಧೋನಿ
ಪಾಂಡ್ಯನ ವಿವಾದಾತ್ಮಕ ಹೇಳಿಕೆ ಸಮರ್ಥಿಸಿಕೊಂಡಿರುವ ನೆಟ್ಟಿಗರು, ಹಾಲಿ, ಮಾಜಿ ಕ್ಯಾಪ್ಟನ್‌ಗಳು ಕೂಡ ಕೆಲ ನಟಿ, ಯುವತಿಯರ ಜತೆ ಲವ್ ಅಫೇರ್ ಇಟ್ಟುಕೊಂಡಿದ್ದರು ಎಂಬ ಆರೋಪ ಮಾಡಿದ್ದರು. ಆದರೆ, ಇದು ನಿಜ ಅಥವಾ ಸುಳ್ಳು ಎಂದು ಹೇಳಲಾಗುವುದಿಲ್ಲ. ಆದರೆ, 2007-08ರಲ್ಲಿ ಎಂ.ಎಸ್.ಧೋನಿ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆಯಾಗಿ ಸುತ್ತಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದಂತು ಸುಳ್ಳಲ್ಲ. ಓಂ ಶಾಂತಿ ಓಂ ಚಿತ್ರದ ನಂತರ ದೀಪಿಕಾ, ಶಾರುಖ್ ಖಾನ್ ಬಳಿ ಧೋನಿ ಪರಿಚಯಿಸುವಂತೆ ಕೇಳಿದ್ದರಂತೆ. ಇದಾದ ನಂತರ ಕೆಲವು ಪಂದ್ಯಗಳು ನಡೆಯುವಾಗ ಧೋನಿ ಜೊತೆ ಪಡುಕೋಣೆ ಕಾಣಿಸಿಕೊಂಡಿದ್ದರು. ನಂತರ ಯಾಕೋ ಏನೋ ದೋನಿಯಿಂದ ದೂರಾದ ದೀಪಿಕಾ ಹೆಸರು ಯುವರಾಜ್ ಸಿಂಗ್ ಜತೆ ಕೇಳಿಬಂದಿತ್ತು.
ಬ್ರೆಜಿಲ್ ರೂಪದರ್ಶಿ ಇಜಬೆಲ್ಲೆ-ಕೊಹ್ಲಿ ಡೇಟಿಂಗ್?
ಟೀಂ ಇಂಡಿಯಾದ ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದ್ಯ ಅನುಷ್ಕಾ ಶರ್ಮರನ್ನು ಮದುವೆಯಾಗಿದ್ದಾರೆ. ಆದರೆ, ಇದಕ್ಕೂ ಮುನ್ನ ರನ್ ಮಷಿನ್ ಹಲವು ನಟಿಯರ ಜೊತೆ ಸುತ್ತಾಡಿರುವುದು ಸುಳ್ಳಲ್ಲ. ಸಿಕ್ಸ್‌ಟೀನ್ ಮತ್ತು ಪುರಾನಿ ಜೀನ್ಸ್ ಎಂಬ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಬ್ರಿಜಿಲಿಯನ್‌ನ ಸುಂದರಿ ಇಜಬೆಲ್ಲೆ ಲಿಯೆಟ್ ಜತೆ ವಿರಾಟ್ 2 ವರ್ಷ ಡೇಟಿಂಗ್ ಮಾಡಿದ್ದರಂತೆ. ಹಾಗಂತ ಲಿಯೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 2014ರಲ್ಲಿ ಕೊಹ್ಲಿ ಜತೆ ನನ್ನ ಸಂಬಂಧವಿತ್ತು ಎಂದಿರುವ ಈ ಬ್ರೆಜಿಲಿಯನ್ ಸುಂದರಿ, ನಾನು ಭಾರತಕ್ಕೆ ಬಂದಾಗ ನನಗಿದ್ದ ಬೆಸ್ಟ್ ಫ್ರೆಂಡ್‌ಗಳಲ್ಲಿ ವಿರಾಟ್ ಕೂಡ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಕೆಲವು ಸಮಯ ಡೇಟಿಂಗ್ ಕೂಡ ಮಾಡಿದ್ದೇವೆ. ಸುಮಾರು 2 ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ಆದರೆ, ಅದನ್ನು ಪಬ್ಲಿಕ್ ಮಾಡಲು ನಾನು ಇಷ್ಟಪಡುವುದಿಲ್ಲ. ಆದರೆ, ವಿರಾಟ್ ಜತೆ ಸಂಬಂಧ ಇದ್ದಿದ್ದಂತೂ ನಿಜ ಎಂದು ಬರೆದುಕೊಂಡಿದ್ದಾರೆ. ಕನ್ನಡದ ನಟಿ ಸಂಜನಾ, ಸಾರಾ -ಜೇನ್ ಡಯಾಸ್, ತಮನ್ನ ಭಾಟಿಯ ಜತೆಯೂ ಕೊಹ್ಲಿ ಅಫೇರ್ ಇಟ್ಟುಕೊಂಡಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು.
ನಟಿಯರ ಜತೆ ಯುವಿ ಲವ್ವಿ-ಡವ್ವಿ
ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲ, ಡ್ಯಾನ್ಸಿಂಗ್‌ನಲ್ಲೂ ಒಂದು ಹೆಜ್ಜೆ ಮುಂದೆ ಇರುವ ವಿಶ್ವವಿಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್, ಹಲವು ವರ್ಷಗಳ ಹಿಂದೆ ಕೆಲವು ನಟಿಯರ ಮನಸು ಕದ್ದಿದ್ದು, ಅವರ ಜೊತೆ ಡೇಟಿಂಗ್ ಮಾಡಿದ್ದು ಆಗಾಗ ಮಾಧ್ಯಮಗಳಲ್ಲಿ ಕೇಳಿಬರುತ್ತಿತ್ತು. ಬಾಲಿವುಡ್ ನಟಿಯರಾದ ಕಿಮ… ಮಿಷೆಲ… ಶರ್ಮ, ದೀಪಿಕಾ ಪಡುಕೋಣೆ, ಪ್ರೀತಿ ಜಿಂಟಾ, ನೇಹಾ ದೂಪಿಯಾ, ಮಿನಿಷಾ ಲಾಂಬಾ, ರಿಯಾ ಸೇನ್, ಪ್ರೀತಿ ಜಂಗಾನಿ, ಅಂಚಲ… ಕುಮಾರ್, ಅನುಷಾ ದಾಂಡೇಕರ್…ಹೀಗೆ ಕೆಲವರೊಂದಿಗೆ ಯುವಿ ಹೆಸರು ಥಳಕು ಹಾಕಿಕೊಂಡಿತ್ತು. ಆದರೆ, ಯುವರಾಜ್ ಸಿಂಗ್ ನಿಜವಾಗಿಯೂ ಲವ್ ಅಫೇರ್ ಇಟ್ಟುಕೊಂಡಿದ್ದು ಡೇಟಿಂಗ್ ಮಾಡಿದ್ದು, ಮದುವೆಯಾಗಿದ್ದು ಬ್ರಿಟನ್ ಮೂಲದ ನಟಿ ಜತೆ. ಬಾಡಿ ಗಾರ್ಡ್ ಚಿತ್ರದಲ್ಲಿ ನಟಿಸಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಬ್ರಿಟನ್ ನಟಿ ಹೇಜೆಲ… ಕೀಚ್ ಕ್ರಿಕೆಟಿಗ ಯುವರಾಜನ ಪ್ರೀತಿ ಬಲೆಗೆ ಬಿದ್ದು, ಹಲವು ವರ್ಷ ಸುತ್ತಾಡಿ ಈಗ ಸತಿ ಪತಿಗಳಾಗಿದ್ದಾರೆ.
ತರಬೇತುದಾರ ರವಿಶಾಸ್ತ್ರಿ -ನಿಮ್ರತ್ ಸಂಬಂಧ ಸುಳ್ಳಂತೆ
ಆಟಗಾರರು ಡೇಟಿಂಗ್ ನಡೆಸುವುದು ಸಾಮಾನ್ಯ. ಆದರೆ, ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಬಾಲಿವುಡ್ ನಟಿ ನಿಮ್ರತ್ ಕೌರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವದಂತಿ ಹಬ್ಬಿದೆ. ಏರ್‌ಲಿಫ್ಟ್, ಒನ್ ನೈಟ್ ವಿಥ್ ದಿ ಕಿಂಗ್, ಲಂಚ್ ಬಾಕ್ಸ್ ಸಿನಿಮಾಗಳಲ್ಲಿ ನಟಿಸಿರುವ ಕೌರ್, 36 ವರ್ಷದಿಂದ ಏಕಾಂಗಿಯಾಗಿಯೇ ಇದ್ದ ನಟಿ. ಹಾಗೆಯೇ ರವಿಶಾಸ್ತ್ರಿ , ರಿತೂ ಸಿಂಗ್ ಅವರನ್ನು ಮದುವೆಯಾಗಿ 1990ರಲ್ಲೇ ದೂರವಾಗಿದ್ದಾರೆ. ಇಬ್ಬರಿಗೂ ಒಂದು ಹೆಣ್ಣು ಮಗು ಕೂಡ ಇದೆ. ಇನ್ನು ನಟಿ ನಿಮ್ರತ್ ಕೌರ್ ಖಾಸಗಿ ಕಾರು ಕಂಪನಿಯೊಂದರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರವಿಶಾಸ್ತ್ರಿಯ ಪರಿಚಯವಾಗಿದೆ. ಆದರೆ, ತನಗಿಂತ 20 ವರ್ಷ ಹಿರಿಯ ರವಿಶಾಸ್ತ್ರಿ ಯೊಂದಿನ ಡೇಟಿಂಗ್ ಸುದ್ದಿಯ ಕುರಿತು ನಟಿ ನಿಮ್ರತ್ ಕೌರ್ ಪ್ರತಿಕ್ರಿಯೆ ನೀಡಿ, ಇಂತಹ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
-ಬಸವರಾಜು ಎಂ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.