ಒಗ್ಗಟ್ಟಿಲ್ಲದೇ ಬಲವಿಲ್ಲ!

Team Udayavani, Mar 31, 2018, 11:45 AM IST

55.jpg

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸಂದರ್ಭದಲ್ಲಿ ಪ್ರಬಲ ತಂಡಗಳನ್ನೆಲ್ಲ ಸೋಲಿಸಿ ಮೆರೆದಾಡಿದ್ದ ಭಾರತದ ಮಹಿಳಾ ಆಟಗಾರ್ತಿಯರು, ಇದೀಗ ಫಾರ್ಮ್ ಕಳೆದುಕೊಂಡಿದ್ದಾರೆ. ಪರಿಣಾಮವಾಗಿ, ಮೇಲಿಂದ ಮೇಲೆ ಪಂದ್ಯಗಳನ್ನು ಸೋಲುತ್ತಿದ್ದಾರೆ…   

ಸತತ ಗೆಲುವಿನ ನಾಗಲೋಟದಿಂದ ಮಹಿಳಾ ಕ್ರಿಕೆಟ್‌ ಲೋಕದಲ್ಲಿ ಮಿಂಚು ಹರಿಸಿದ್ದ‌ ಭಾರತ ತಂಡ ಮೊನ್ನೆ ಮೊನ್ನೆಯವರೆಗೂ ತನಗೆ ಸಾಟಿಯೇ ಇಲ್ಲ ಎನ್ನುವಂತೆ ಭರ್ಜರಿ ಪ್ರದರ್ಶನ ನೀಡುತ್ತಿತ್ತು. ಆದರೆ ತಂಡಕ್ಕೀಗ ಸಂಘಟಿತ ಪ್ರದರ್ಶನದ ಕೊರತೆ ಎದುರಾಗಿದೆ. ಈ ಫ‌ಲವೇ ಸತತ ಸೋಲಿನ ಸರಮಾಲೆ ಜತೆಯಾಗಿದೆ.

ಕ್ರಿಕೆಟ್‌ ಜಗತ್ತಿನಲ್ಲಿ ಬಲಿಷ್ಠ ತಂಡಗಳಿಗೆ ಸಡ್ಡು ಹೊಡೆದು ಪ್ರಬಲ ತಂಡವಾಗಿ ರೂಪುಗೊಳ್ಳುತ್ತಿದ್ದ ಭಾರತದ ಮಹಿಳೆಯರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋದಾಗ ಸರಣಿಯನ್ನು 3-1ರಿಂದ ಕೈ ವಶ ಮಾಡಿಕೊಂಡಿದ್ದರು. ಆದರೆ, ನಂತರ ಆರಂಭವಾಗಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಜೊತೆಗಿನ ತ್ರಿಕೋನ ಟಿ20 ಸರಣಿಯಲ್ಲಿ ಸತತ ಸೋಲುಗಳಿಂದ ಕಂಗಾಲಾಗಿದ್ದಾರೆ.

ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ….ತಂಡಗಳನ್ನು ಇತ್ತೀಚಿನ ವರ್ಷಗಳಲ್ಲಿ ತನ್ನ ಮುಂದೆ ಮಂಡಿಯೂರುವಂತೆ ಮಾಡಿದ ಭಾರತದ ನಾರಿಯರು ಸ್ಥಿರ ಪ್ರದರ್ಶನ ನೀಡುವಲ್ಲಿ ಪುನಃ ಪುನಃ ಎಡವುತ್ತಿದ್ದಾರೆ. ನಿರೀಕ್ಷೆಯಂತೆ ಮೂಡಿ ಬರದ ಸಂಘಟಿತ ಆಟ. ಅಗ್ರ ಪಂಕ್ತಿಯ ಆಟಗಾರ್ತಿಯರಿಂದ ಉತ್ತಮ ಪ್ರದರ್ಶನ ಬಂದರೂ ಅದನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಉಳಿದವರು ಯಶಸ್ಸು ಪಡೆಯದೇ ಇರುವುದು ತಲೆ ನೋವಾಗಿ ಪರಿಣಮಿಸಿದೆ.

ಮೂಡದ ಉತ್ತಮ ಜೊತೆಯಾಟ

ಭಾರೀ ನಿರೀಕ್ಷೆಯೊಂದಿಗೆ ತ್ರಿಕೋನ ಟೂರ್ನಿಗೆ ಎಂಟ್ರಿ ಕೊಟ್ಟ ಭಾರತದ ಆಟಗಾರ್ತಿಯರು ಹುಮ್ಮಸ್ಸಿನಿಂದಲೇ ಅಖಾಡಕ್ಕೆ ಧುಮುಕಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನೇ ನೀಡಿದ ಭಾರತ ತಂಡಕ್ಕೆ ಹೇಳಿಕೊಳ್ಳುವಂಥ ಜೊತೆಯಾಟಗಳು ಮೂಡಿ ಬರಲೇ ಇಲ್ಲ. ಪ್ರಮುಖ ಆಟಗಾರ್ತಿಯರಾದ ಮಿಥಾಲಿ ರಾಜ್‌, ಸ್ಮತಿ ಮಂದನಾ, ರೋಡಿಗ್ರಸ್‌, ಅನುಜಾ ಪಟೇಲ್‌ ಮಾತ್ರ ಸಿಡಿದರು. ಆದರೆ ಒಂದು ಪಂದ್ಯದಲ್ಲಿ ಒಬ್ಬರು ಹೋರಾಟ ನಡೆಸಿದರೆ ಇವರಿಗೆ ಸಾಥ್‌ ನೀಡಬೇಕಿದ್ದವರೇ ಕೈಕೊಡುತ್ತಿದ್ದರು. ಪರಿಣಾಮ, ಹೆಚ್ಚಿನ ಪಂದ್ಯಗಳನ್ನು ಸೋಲುವುದು ಸಾಮಾನ್ಯ ಸಂಗತಿ ಆಗಿಹೋಯಿತು!

ಮೊನಚು ಕಳೆದುಕೊಂದ ಬೌಲರ್‌ಗಳು
ಭಾರತ ಮಹಿಳಾ ತಂಡ ಪ್ರಬಲ ಬೌಲಿಂಗ್‌ ವಿಭಾಗವನ್ನು ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌ ನಂತರ ಭಾರತೀಯ ತಂಡ ಬೌಲರ್‌ಗಳದ್ದೇ ವಿಶ್ವ ಕ್ರಿಕೆಟ್‌ನಲ್ಲಿ ಪಾರುಪತ್ಯ. ಹಿರಿಯ ಆಟಗಾರ್ತಿ ಜೂಲನ್‌ ಗೋಸ್ವಾಮಿ ಭಾರತ ತಂಡದ ಅವಿಭಾಜ್ಯ ಅಂಗ. ಆದರೆ, ಈ ಟೂರ್ನಿಯಲ್ಲಿ ಜೂಲನ್‌ ಸೇರಿದಂತೆ ವಸ್ತ್ರಾಕರ್‌, ಅನುಜಾ ಪಟೇಲ್‌, ದೀಪ್ತಿ ಶರ್ಮಾ, ಪೂನಮ್‌, ರಾಧಾ ಪ್ರಬಲ ದಾಳಿ ಸಂಘಟಿಸುವಲ್ಲಿ, ವಿಕೆಟ್‌ ಪಡೆಯುವಲ್ಲಿ  ವಿಫ‌ಲವಾದರು. ಬೌಲಿಂಗ್‌ ಮೊನಚು ಕಳೆದುಕೊಂಡ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಆಟಗಾರ್ತಿಯರು ಭರ್ಜರಿ ಬ್ಯಾಟಿಂಗ್‌ನಿಂದ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಸರಣಿ ಸೋಲಿನ ಸುರುಳಿಯಲ್ಲಿ ಸಿಲುಕಿಕೊಂಡಿರುವ ಮಹಿಳಾ ತಂಡಕ್ಕೀಗ ಆತ್ಮವಿಶ್ವಾಸದ ಅವಶ್ಯಕತೆ ಇದೆ. ಮುಂದೆ ನಡೆಯುವ ಮಹಿಳಾ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇದೇ ರೀತಿ ಸಂಘಟಿತ ಪ್ರದರ್ಶನದ ಕೊರತೆ ಎದುರಾದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಪುಟಿದೇಳುವ ಮೂಲಕ ಮುಂಬರುವ ಪಂದ್ಯಗಳಲ್ಲಿ ಉತ್ತಮ ಸಂಘಟಿತ ಪ್ರದರ್ಶನ ನೀಡುವಂತಾಗಲಿ ಎಂಬುದೇ ಹಾರೈಕೆ.

ದೇವಲಾಪುರ ಮಹದೇವಸ್ವಾಮಿ

ಟಾಪ್ ನ್ಯೂಸ್

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.