ಕೀಟಾಂತರಂಗ ಇದು ವಿಸ್ಮಯಗಳ ಸಂಕಲನ
Team Udayavani, Jul 15, 2017, 12:21 PM IST
ಯಾವುದೇ ಕೀಟದ ಜೀವನ ಚಕ್ರವನ್ನು ಆಸಕ್ತಿಯಿಂದ ಗಮನಿಸುತ್ತಾ ಹೋದಂತೆಲ್ಲಾ ಅಚ್ಚರಿಯ ಲೋಕವೊಂದು ನಿಮಗರಿವಿಲ್ಲದಂತೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ನಿಸರ್ಗದಲ್ಲಿ ಯಾವುದೋ ಯಕಶ್ಚಿತ್ ಅಲ್ಲ. ಪ್ರತಿಯೊಂದರ ಹಿಂದೆಯೂ ಅಸಾಧಾರಣ ಹಾಗೂ ಅದ್ಭುತವಾದ ಇತಿಹಾಸವಿರುತ್ತದೆ. ತೆರೆದು ನೋಡುವ ಮಾನಸಿಕ ಸಿದ್ಧತೆ ಹಾಗೂ ಜಾಗೃತ ಇಂದ್ರಿಯಗಳಿರಬೇಕು.
ಕಾಫಿ ಕುಡಿದು ಟವಿ ನೋಡುತ್ತಾ ಕುಳಿತಿದ್ದವನಿಗೆ ನಮ್ಮಕ್ಕನ ಮಗಳು ಬಾಂಧವ್ಯಳ “ನಂಗೆ ಬೇಕೇ ಬೇಕು, ಬೇಕೇ ಬೇಕು’ ಎಂಬ ಅಳು ಮಿಶ್ರಿತ ರಂಪಾಟ ಕೇಳಿ, ಇದೆಂಥದಪ್ಪಾ ಈ ರಾತ್ರೀಲಿ ಎಡವಟ್ಟು , ಪೇಟೆಯಿಂದ ತರೋದಾದ್ರೆ 5-6 ಕಿ.ಮೀ. ಹೋಗ್ಬೇಕಲ್ಲಾ ಎಂದು ಕೊಳ್ತಾ ಇದ್ದೆ. ಅದು ಸುಲಭವಾಗಿ ಸಿಗೋಲ್ಲ, ಕತ್ತಲೆ ಬೇರೆ, ಇನ್ನಾéವಾಗಾದ್ರು ಸಿಗುತ್ತಾ ನೋಡೋಣ ಎಂದು ನಮ್ಮಮ್ಮ ಹೇಳ್ತಿದ್ದನ್ನು ಕೇಳಿ ವಿಷಯ ಏನೆಂದೆ. ಇವಳಿಗೆ ಮಿಂಚುಹುಳ ಬೇಕಂತೆ ಎಂದರು.
ಆಗಲೇ ನಾನು ಟಿ.ವಿ. ಪರದೆಯಿಂದ ಕಣ್ಣು ಸರಿಸಿ ಮನೆಯ ಎದುರಿನ ತೋಟದೆಡೆಗೆ ದೃಷ್ಟಿ ಹರಿಸಿದೆ. ಅಲ್ಲಿ ಅಸಂಖ್ಯಾತ ಮಿಂಚು ಹುಳಗಳು ಪಣಕ್ ಪಣಕ್ಕೆಂದು ಮಿಂಚುತ್ತಾ ಇಡೀ ವಾತಾವರಣದಲ್ಲಿ ಹಬ್ಬದ ಸಡಗರ ಮೂಡಿಸಿಬಿಟ್ಟಿದ್ದವು. ಇಂಥಾ ಪ್ರಕೃತಿ ಸಹಜವಾದ ಅಭೂತಪೂರ್ವ ಉತ್ಸವ ನೋಡುವುದನ್ನು ಬಿಟ್ಟು, ಟಿವಿ, ಮುಂದೆ ಕುಳಿತ ನನ್ನ ಅವಿವೇಕಕ್ಕೆ ನನಗೇ ತಥ್ ಎನಿಸಿತು.
ಬಾಂಧವ್ಯಳನ್ನು ಕರೆದುಕೊಂಡು ಟೆರೇಸಿಗೆ ಹೋಗಿ ತನುಮನ ದಣಿಯೇ ನೋಡಿ ಆನಂದಿಸುತ್ತಿರುವಾಗ ನನ್ನ ಅಂಗಿಯ ಮೇಲೆಯೇ ಎರಡು ಹುಳಗಳು ಕುಳಿತು ಅತ್ತಿತ್ತ ಹರಿದಾಡುತ್ತಿದ್ದುದನ್ನು ಗಮನಿಸಿದ ಬಾಂಧವ್ಯ ಆನಂದಾತಿರೇಕದಿಂದ ಸಿಕು¤, ಸಿಕು¤ ಎಂದು ನೆಗೆದಾಡ ತೊಡಗಿದಳು.
ಇಬ್ಬರೂ ಸೇರಿ ಆ ಎರಡೂ ಹುಳಗಳನ್ನೂ ಪ್ರಪಂಚದ ಅತ್ಯಮೂಲ್ಯ ವಸ್ತುವನ್ನು ತರುವಂತೆ ಸಂಭ್ರಮ, ಜಾಗರೂಕತೆ ಹಾಗೂ ನಾಜೂಕಿನಿಂದ ಮುಷ್ಟಿಯಲ್ಲಿ ಬಂಧಿಸಿ ತಂದೆವು. ಮನೆಯೊಳಗೆ ಬಂದು ಮುಷ್ಟಿ ಬಿಚ್ಚಿದರೆ ಅವಳ ಅಂಗೈ ನಡುವಿನಿಂದ ಹುಳ ನಿಧಾನವಾಗಿ ಗೊಂದಲ ಗೊಂಡಂತೆ ಹೊರಬಂದು, ಟೇಬಲ್ಲಿನ ಮೇಲೆ ದಿಗ್ರಾºಂತವಾಗಿ ಕುಳಿತುಕೊಂಡು, ಶಾಖದಿಂದ ಬಿಡುಗಡೆಯಾಗಿ ನಿರಾಳವಾಗುತ್ತಾ ಇತ್ತು. ನನ್ನ ಮುಷ್ಟಿ ಬಿಚ್ಚಿದರೆ, ಅಲ್ಲಿ ಹುಳವೇ ಇಲ್ಲ. ಏನಾಯ್ತು ಎಂದು ಅತ್ತಿತ್ತ ನೋಡುತ್ತಿದ್ದರೆ ಬಾಂಧವ್ಯ ” ಓ ಇಲ್ಲಿ ಇಲ್ಲಿ ‘ ಎಂದು ಚೀರಿದಳು. ನೋಡಿದರೆ ಆ ಹುಳ ನನ್ನ ಗುಂಗುರು ಕೂದಲಿನ ಮಧ್ಯದಲ್ಲಿ ಹರಿದಾಡುತ್ತಿದೆ. ಹುಳವನ್ನು ಹಿಡಿಯುವ ಅಂದಾಜಿನಲ್ಲಿ ನನ್ನ ಬುರುಡೆಗೆ ಸರಿಯಾಗೇ ಬಾರಿಸಿದಳು. ಹಾಗೂ ಹೀಗೂ ಮಾಡಿ ಹುಳು ಹಿಡಿದು ಟೇಬಲ್ಲಿನ ಮೇಲೆ ಇರಿಸಿ ಅವು ಬೆಳಕನ್ನು ಹೊಮ್ಮಿಸುವ ರೀತಿಯನ್ನೇ ನೋಡುತ್ತಾ ಕುಳಿತೆವು.
ಬಾಂಧವ್ಯಳ ತಂಗಿ ಫಿಜಿ, ಬಾಂಧವ್ಯ ಹಾಗೂ ನಾನು ಮೂವರೂ ಹುಳುಗಳು ತಿಳಿಹಸಿರು ಬೆಳಕು ಹೊಮ್ಮಿಸಿದ್ದನ್ನು ನೋಡಿದೆವು. ಈ ಹುಳುಗಳ ದೇಹದಲ್ಲಿ ಲ್ಯೂಸಿಫೆರೇಸ್ ಎಂಬ ಕಿಣ್ವವಿದೆ. ಅದು ಆಕ್ಸಿಡೇಶನ್‌ನ ಪರಿಣಾಮವಾಗಿ ಲ್ಯೂಸಿಫೆರಿನ್ ಎಂಬ ರಸಾಯನಿಕ ವಿವಿಧ ಪ್ರಕ್ರಿಯೆಗಳ ಸಮ್ಮಿಳನವಾಗಿ ಈ ತಿಳಿಹಸಿರು ಬೆಳಕನ್ನು ಚಿಮ್ಮಿಸುತ್ತದೆ ಎಂದು ತಿಳಿಸಿದೆ. ಬೇರೆ ಯಾವುದಾದರೂ ಕೀಟ ಈ ರೀತಿಯ ಬೆಳಕು ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪುಸ್ತಕವನ್ನು ಜಾಲಾಡುತ್ತಾ ಕುಳಿತೆ. ಆಗ ಸಿಕ್ಕಿದ್ದೇ ಬ್ರೆಸಿಲ್‌ನ ಆಟದ ರೈಲು ಎಂದೇ ಹೆಸರಾದ ಉಗಿಬಂಡಿಹುಳ ಪ್ರಿಕೊÕàತ್ರಿಕ್ಸ್. ಸುಮಾರು ಎರಡು ಇಂಚು ಉದ್ದವಿರುವ ಹೆಣ್ಣು, ಒಂದಿಂಚು ಉದ್ದದ ಗಂಡು ಲಾರ್ವ ಅವಸ್ಥೆಯಲ್ಲಿ ಕಲ್ಲು, ಮರದ ದಿಮ್ಮಿಗಳ ಅಡಿಯಲ್ಲಿ ವಾಸಿಸುವ ಈ ಹುಳಗಳು ದೇಹದುದ್ದಕ್ಕೂ ಎರಡು ಬದಿಯ 11 ಹಳದಿ ಹಸಿರು ಮಿಶ್ರಿತ 22 ದೀಪಗಳನ್ನು ಹಾಗೂ ತಲೆಯ ಭಾಗದಲ್ಲಿ ಕೆಂಪಾದ ದೀಪವನ್ನು ಉರಿಸುತ್ತದೆ. ಯಾವುದೇ ಒಂದು ದೀಪವನ್ನು ಬೇಕೆಂದಾಗ ಉರಿಸುವ/ಆರಿಸುವ ಸೌಲಭ್ಯವನ್ನು ಇನ್ ಬ್ಯುಲ್ಟ್ ಆಗಿ ಪಡೆದಿರುವ ಈ ಹುಳು ಜೀವ ಜಗತ್ತಿನ ವಿಸ್ಮಯಗಳಲ್ಲೊಂದು. ನೋಡುವವರಿಗೆ ರಾತ್ರಿ ಹೊತ್ತಿನಲ್ಲಿ ಸಂಚರಿಸುವ ಪ್ರಯಾಣಿಕರ ರೈಲೊಂದು ದೂರದಲ್ಲಿ ಕಾಣುವಂತೆ ಗೋಚರಿಸುತ್ತದೆ. ಆಹಾರಕ್ಕಾಗಿ ಯಾವುದೇ ಜೀವಿಯನ್ನು ಕೊಲ್ಲುವಾಗ ಇದು ವಿಷ ಅಥವಾ ದೇಹರಸವನ್ನು, ಆಹಾರ ಜೀವಿಯ ದೇಹದೊಳಗೆ ಕೊಂಡಿಯ ಮೂಲಕ ಇಂಜೆಕ್ಟ್ ಮಾಡುತ್ತದೆ.
ಹೆಣ್ಣಿಗೆ ಗರ್ಭದಾನ ಮಾಡಿದ ಕೆಲವೇ ದಿನಗಳಲ್ಲಿ ಗಂಡು ಸಾಯುತ್ತದೆ. ಎರಡು ವಾರಗಳ ನಂತರ ಹೆಣ್ಣು 30-40 ಮೊಟ್ಟೆಗಳನ್ನು ಇಡುತ್ತದೆ. ಕಂದು ಬಣ್ಣದ ಬೆನ್ನಿನ ಕವಚ ಹೊಂದಿರುವ ಈ ಹುಳು ಸೂಕ್ಷ್ಮವಾದ ರೋಮಗಳನ್ನು ಪಡೆದಿದೆ. ಯಾವುದಾದರೂ ಸಂದೇಶ ರವಾನೆ, ಅಪಾಯ, ವಿಚಲಿತಗೊಂಡ ಸಮಯ ಬೆಳಕನ್ನು ಹೊಮ್ಮಿಸುವ ಈ ಜೀವಿ ಕ್ಷುದ್ರವಾಗಿ ಕಂಡರೂ ಅದ್ಬುತ.
ಬೆಳಗ್ಗೆ ಹೀಗೇ ತೋಟದೊಳಗೆ ತಿರುಗಾಡುತ್ತಿದ್ದಾಗ ನನ್ನನ್ನು ಆಕರ್ಷಿಸಿದ್ದು ಜೇಡರ ಬಲೆಗಳು. ಇಬ್ಬನಿಯ ಹನಿಗಳನ್ನು ಅಲ್ಲಲ್ಲಿ ಯಾರೋ ಪೋಣಿಸಿಟ್ಟಂತೆ ಪಳಪಳನೆ ಹೊಳೆಯುವ ಇವು ಚಿತ್ತಾಕರ್ಷಕ. ಮರದಿಂದ ಮರಕ್ಕೆ ಪ್ರದರ್ಶನಕ್ಕಾಗಿಯೇ ನೇತು ಹಾಕಲ್ಪಟ್ಟಿವೆಯೇನೋ ಎಂಬಂತೆ ಇವು ಕಾಣುವುದುಂಟು. ಆಹಾರ ಸಂಗ್ರಹಿಸಲು ಹೆಣೆದ ಈ ಬಲೆ ನೋಡುಗರ ಕಣ್ಣಿಗೆ ಇಷ್ಟೊಂದು ಮುದ ನೀಡುತ್ತದೆ ಎಂದು ತಿಳಿಯದೇ ಹೊಟ್ಟೆ ಪಾಡಿಗೆ ಈ ಕಸುಬು ಮಾಡುವ ಜೇಡನ ಜೀವನವಂತೂ ರೋಚಕ.
ಯಾವುದೇ ಕೀಟದ ಜೀವನ ಚಕ್ರವನ್ನು ಆಸಕ್ತಿಯಿಂದ ಗಮನಿಸುತ್ತಾ ಹೋದಂತೆಲ್ಲಾ ಅಚ್ಚರಿಯ ಲೋಕವೊಂದು ನಿಮಗರಿವಿಲ್ಲದಂತೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ನಿಸರ್ಗದಲ್ಲಿ ಯಾವುದೂ ಯಕಶ್ಚಿತ್ ಅಲ್ಲ. ಪ್ರತಿಯೊಂದ ಹಿಂದೆಯೂ ಅಸಾಧಾರಣ ಹಾಗೂ ಅದ್ಭುತತವಾದ ಇತಿಹಾಸವಿರುತ್ತದೆ, ತೆರೆದು ನೋಡುವ ಮಾನಸಿಕ ಸಿದ್ಧತೆ ಹಾಗೂ ಜಾಗೃತ ಇಂದ್ರಿಯಗಳಿರಬೇಕು. ಎಷ್ಟೊಂದು ವಿಸ್ಮಯಗಳ ಸಂಕಲನ ಈ ಕೀಟಜಾಲ. ಉದಾಹರಣೆಗೆ ಇಂಚ್‌ವರ್ಮ ಎಂಬು ಕೀಟವೊಂದು ತನ್ನ ಶೈಶವಾವಸ್ಥೆಯಲ್ಲಿ ನಮ್ಮ ಅವರೇಕಾಯಿಲ್ಲಿ ಕಾಣಸಿಗುವ ಹಸಿರು ಅಂಗುಲ ಉದ್ದದ ಹುಳವನ್ನೇ ಹೊಲುತ್ತದೆ. ಜಿಗಣೆಯಂತೆ ಅಂಗುಲ ಅಂಗುಲ ಕ್ರಮಿಸುವ ಈ ಹುಳದ ಜೀವನ ಕ್ರಮವೇ ಕುತೂಹಲಕಾರಿಯಾದುದು. ಮುಂಭಾಗದಲ್ಲಿರುವ ಮೂರು ಜೊತೆ ಕೈಗಳಂಥ ಆವಯವಗಳನ್ನೇ ಕೀಟಗಳನ್ನು ಲಬಕ್ಕನೆ ಹಿಡಿಯಲು ಉಪಯೋಗಿಸುವ ಈ ಜೀವಿ. ಈ ರೀತಿಯ ಹುಳಗಳೆಲ್ಲಾ ಸಸ್ಯಾಹಾರಿಗಳೆಂಬ ನನ್ನ ನಂಬಿಕೆಯನ್ನೇ ದಿಕ್ಕು ತಪ್ಪಿಸಿದ್ದು ಸೋಜಿಗ.
ದಿನಗಳೆದಂತೆ ಕಂದು ರೆಕ್ಕೆಗಳುಳ್ಳ ಪತಂಗವಾಗಿ ರೂಪಾಂತರ ಹೊಂದುವ ಈ ಹುಳದ ಮತ್ತೂಂದು ವಿಶಿಷ್ಟ ಗುಣವೆಂದರೆ ಗೋಸುಂಬೆ ಬುದ್ಧಿ, ಹರಿದಾಡುವ ಹಂತದಲ್ಲಿರುವಾಗ ತಾನಿರುವ ಪರಿಸರದೊಳಗೆ ಎಂಥಾ ಪರಿಣಿತರಿಗೂ ಮೋಸ ಮಾಡುವಂತೆ ಎಲೆಯ ಅಥವಾ ತೊಗಟೆಯ ಒಂದು ಅವಿಭಾಜ್ಯ ಅಂಗವೇನೋ ಎನ್ನುವಂತೆ ನಿಶ್ಚಲವಾಗಿ ಲೀನವಾಗಿ ಆಹಾರಕ್ಕಾಗಿ ಹೊಂಚುಹಾಕುವ ಈ ಹುಳ ಬೇಟೆಯ ಮೇಲೆ ಎರಗುವ ವೇಗವಂತೂ ಬೆಚ್ಚಿ ಬೀಳಿಸುತ್ತದೆ. ಹುಳವೆಂದರೆ ಬಸವನ ಹುಳದ ತೆವಳುವಿಕೆಯನ್ನೇ ನೆನಪಿಸಿಕೊಳ್ಳುವ ನಮಗೆ ಈ ಹುಳು ಒಂದು ಸೆಕೆಂಡಿನ 1/12ನೇ ಭಾಗದಷ್ಟೇ ಸಮಯದಲ್ಲಿ, ಮನುಷ್ಯನ ಅಂಗೈಯಂತೆಯೇ ಚಲನೆ, ಹಿಡಿತ ಹೊಂದಿರುವ, ಬೆರಳುಗಳಂಥ ರಚನೆಯಿಂದ ಬೇಟೆಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳುವ ಪ್ರಕ್ರಿಯೆ ದಂಗು ಬಡಿಸುತ್ತದೆ. ಈ ರೀತಿಯ ಚಟುವಟಿಕೆಗಳು ಈಗಲೂ ನಿಮ್ಮ ಸನಿಹದಲ್ಲೇ ನಿಮಗರಿವಿಲ್ಲದಂತೆ ನಿರಾತಂಕವಾಗಿ ಸಹಜವಾಗಿ ಘಟಿಸುತ್ತಲೇ ಇವೆ. ಸ್ವಲ್ಪ ಸಮಯ ಮಾಡಿಕೊಂಡು ಸುತ್ತೂಮ್ಮೆ ಕಣ್ಣಾಡಿಸಿ.
ಕಾಫಿ ಬೆಳೆಯ ಈ ಭಾಗದಲ್ಲಿ ಕಾಫಿ ಹಣ್ಣಿನ ಗೊಂಚಲಿನಲ್ಲಿ ಸೆಗಣಿಯಂಥ ಮಿಶ್ರಣದಿಂದ ಗೂಡು ಕಟ್ಟುವ ಕುಣ ಎಂಬ ಇರುವೆಯ ಕಾಟ ಸ್ವಾಭಾವಿಕ. ಕಾಫಿ ಹಣ್ಣು ಕುಯ್ಯುವ ಕೆಲಸಗಾರರ ಕಣ್ಣಿನಲ್ಲಿ ನೀರು ತರಿಸುವ ಈ ಹುಣುಕಗಳು ಕಚ್ಚುವಾಗ ತಮ್ಮ ದೇಹದ ಹಿಂಭಾಗವನ್ನು ಎತ್ತೆತ್ತಿ ಎತ್ತೆತ್ತಿ ಕಚ್ಚುವುದರಿಂದ ಅವಕ್ಕೇ ಸ್ಥಳೀಯವಾಗಿ ಈ ಹೆಸರು. ಕಟ್ಟಿರುವೆ ಎಂಬ ಪ್ರಭೇದವಂತೂ ಎಂಥವರಿಗೂ ಭಯತರಿಸುತ್ತದೆ. ಗುಂಪುಗಳಲ್ಲಿದ್ದು, ಹಳೆಯ ಸತ್ತ ಮರದ ಬಿರುಕುಗಳಲ್ಲಿ ವಾಸಿಸುವ ಇವು ಕಡಿದಾಗ ಮೈಕೈ ಊದಿ ವಿಪರೀತ ನೋವಾಗುತ್ತದೆ.
ಮೈಸೂರು ಸೀಮೆಯ ಗ್ರಾಮೀಣ ಪ್ರದೇಶದಲ್ಲಿ ತಪ್ಪು ಮಾಡಿದವರನ್ನು ಕನಿಷ್ಠ ಉಡುಪಿನಲ್ಲಿ ಕಂಬವೊಂದಕ್ಕೆ ಕಟ್ಟಿ ಹಾಕಿ ಮೈಮೇಲೆ ಬೆಲ್ಲದ ನೀರನ್ನು ಸುರಿಯುತ್ತಿದ್ದರು. ಅಷ್ಟೇ, ದಿನಗಟ್ಟಲೇ ಇರುವೆಗಳ ದಾಳಿಗೆ ಸಿಕ್ಕು ತಪ್ಪಿತಸ್ಥರು ಪಡುವ ಪಾಡು ನರಕದ ದರ್ಶನವನ್ನೇ ಮಾಡಿಸುತ್ತಿದ್ದವು.
ನಮಗೆ ಸಾಮಾನ್ಯವಾಗಿ ಕಾಣಿಸಿಗುವ ಇರುವೆಗಳು745 ದಶಲಕ್ಷ ವರ್ಷಗಳ ಹಿಂದಿನ ಕಾರ್ಬಾನಿಫೆರಸ್ ಭೂಯುಗದಲ್ಲಿ ಅವತರಿಸಿದಂತೆ ಇಂದಿಗೂ ವಿಫುಲ, ವಿಶಾಲ ಹಾಗೂ ಯಶಸ್ವಿಯಾಗಿ ಉಳಿದಿರುವ ಇವು ತ್ರಿವಿಕ್ರಮ ದಾಖಲೆಯ ವಾಮನ ಜೀವಿಗಳು. ಇವುಗಳಲ್ಲಿರುವ ಪ್ರಭೇದಗಳು 8000 ಎಂದರೆ ಬೆಚ್ಚಿ ಬೀಳುವಂತಾಗುತ್ತದೆ. ಭೂಮಿಯ ಧೃವಪ್ರದೇಶಗಳನ್ನು ಬಿಟ್ಟರೆ ಉಳಿದೆಲ್ಲೆಡೆ ನೆಲಸಿರುವ ಇರುವೆಗಳು ಗಾತ್ರದಲ್ಲಿ ಸೂಜಿಮೊನೆಯಿಂದ ಹಿಡಿದು ಎರಡು ಸೆಂ.ಮೀ. ಉದ್ದದವೂ ಇವೆ. ಏನನ್ನಾದರೂ ತಿಂದು ಬದುಕುವ ಇವು ಗೆದ್ದಲನ್ನು ಹೆಚ್ಚಾಗಿ ಇಷ್ಟಪಡುತ್ತದೆ.
ಇವುಗಳಲ್ಲಿ ಕೆಲ ಪ್ರಭೇದಗಳು ಕೆಲ ನಿರ್ದಿಷ್ಟ ಇರುವೆ ಗೂಡುಗಳ ಮೇಲೆ ದಾಳಿ ಮಾಡಿ ಅಲ್ಲಿಯ ಇರುವೆಗಳನ್ನು ತಮ್ಮ ಗೂಡಿಗೆ ಸಾಗಿಸಿ ಜೀತದಾಳುಗಳನ್ನಾಗಿಸಿ ದುಡಿಸಿ ಕೊಳ್ಳುತ್ತವೆ ಎಂದರೆ ಅಚ್ಚರಿಯಾಗುತ್ತದೆ. ಮರ, ನೆಲ, ಪೊಟರೆ, ಕಲ್ಲು ಬಂಡೆಗಳಡಿಯಲ್ಲಿ ಗೂಡು ನಿರ್ಮಿಸುವ ಇವು ಗೂಡಿನೊಳಗೇ, ರಾಣೀವಾಸ, ಮೊಟ್ಟೆ ಕೊಠಡಿಗಳು, ಮರಿ ಹುಳುಗಳ ಕೋಣೆ, ಆಹಾರ ಸಂಗ್ರಹಣಾಗಾರ ಮುಂತಾದವನ್ನು ರಚಿಸುತ್ತವೆ. ಕೆಲ ಅಪರೂಪದ ಪ್ರಭೇದದ ಇರುವೆಗಳು ತಮ್ಮ ತೂಕದ 500ಪಟ್ಟು ತೂಕದ ವಸ್ತುವನ್ನು ಎಳೆಯಬಲ್ಲವು. ಮಲೇಷಿಯಾದ ಕಾಡುಗಳಲ್ಲಿರುವ ದನಗಾಹಿ ಇರುವೆ ಜಾತಿಯೊಂದು ಇತರ ಕೆಲ ಕೀಟಗಳನ್ನು ನಾವು ಹಸು ಸಾಕುವಂತೆ ಸಾಕಿ ಅವುಗಳಿಂದ ಸಿಹಿ ದ್ರವವನ್ನು ಹಾಲು ಕರೆದಂತೆ ಕರೆಯುತ್ತವೆ.
ರೈತ ಇರುವೆಗಳೆಂಬ ಪ್ರಭೇಧವೊಂದು ನಿರ್ದಿಷ್ಟ ಎಲೆಗಳನ್ನು ಕತ್ತರಿಸಿ ಗೂಡಿಗೆ ತಂದು ಕೆಲ ಶಿಲೀಂದ್ರಗಳನ್ನು ಎಲೆಯ ಮೇಲೆ ಬೆಳೆಸಿ ಎಲೆಯನ್ನು ಕೊಳೆಯಿಸಿ ಆಹಾರ ತಯಾರಿಸುತ್ತವೆ.
ನೆಲದ ಮಣ್ಣನ್ನು ಕೊರೆದು, ಗಾಳಿಯಾಡಿ, ನೀರು ಬಸಿದು, ಭೂಜಲ ಸಂಗ್ರಹವಾಗುವುದರಲ್ಲಿ ಇರುವೆಗಳ ಪಾತ್ರಿ ಹಿರಿದು. ಸಸ್ಯಗಳ ಪರಾಗಸ್ಪರ್ಶ ಬೀಜ ಪ್ರಸಾರದಲ್ಲಿ ಗಮನಾರ್ಹ ಕೊಡುಗೆ. ಮೃತ ಜೀವಿಗಳನ್ನು ತಿನ್ನುವುದರಿಂದ ಪರಿಸರ ಸ್ವತ್ಛತೆಗೆ ಸಹಾಯಮಾಡಿ ನೈಸರ್ಗಿಕ ಸಮತೋಲನ ಕಾಪಾಡುತ್ತದೆ.
ಬಿ.ಕೆ. ಧನಂಜಯ ಜೀವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.