ಐಪಿಎಲ್‌ 11,ಲಕ್ಕಿ ಧೋನಿಯೇ ಕಿಂಗ್‌ 


Team Udayavani, Jun 2, 2018, 11:10 AM IST

2.jpg

ಮಹೇಂದ್ರ ಸಿಂಗ್‌ ಧೋನಿ ಎಲ್ಲಿ ಇರುತ್ತಾನೋ ಅಲ್ಲಿಯೇ ಲಕ್‌ ಇರುತ್ತದೆ. ಧೋನಿ ಎಲ್ಲಿ ಇರುತ್ತಾನೋ ಅಲ್ಲಿಯೇ ಗೆಲುವು ಇರುತ್ತದೆ. ಧೋನಿ ಎಲ್ಲಿರುತ್ತಾನೋ ಅಲ್ಲಿಯೇ ಅದೃಷ್ಟ ಲಕ್ಷ್ಮೀ ಇರುತ್ತಾಳೆ… ಬಹು ವರ್ಷದಿಂದ ಕ್ರಿಕೆಟ್‌ ಅಭಿಮಾನಿಗಳು ಇಂಥ ಮಾತುಗಳನ್ನು ಆಡುತ್ತಲೇ ಇದ್ದಾರೆ. ಈ ಮಾತಿಗೆ 11ನೇ ಐಪಿಎಲ್‌ನಲ್ಲಿ ಮತ್ತಷ್ಟು ಬಲ ಬಂದಿದೆ.

ತಂಡ ಎಷ್ಟೇ ದುರ್ಬಲವಾಗಿರಲಿ, ಆದ್ರೇ ಆ ತಂಡದ ನಾಯಕ ಧೋನಿ ಆಗಿದ್ದರೆ ಸಾಕು. ಗೆಲುವು ಹುಡುಕಿಕೊಂಡು ಬರುತ್ತದೆ. ಎಂಬ ಮಾತುಗಳು ಜೋರಾಗಿಯೇ ಕೇಳಿಬಂದಿವೆ. ವಾಸ್ತವವಾಗಿ ಈ ಬಾರಿ ಆರ್‌ಸಿಬಿ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಕೋಲ್ಕತಾ ನೈಟ್‌ ರೈಡರ್, ಸನ್‌ ರೈಸರ್ ಹೈದರಾಬಾದ್‌ ತಂಡಗಳಿಗೆ ಹೋಲಿಸಿದರೆ, ಚೆನ್ನೈ ಸೂಪರ್‌ ಸಿಂಗ್ಸ್‌ “ಕಿಂಗ್‌’ ಆಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ, ಆರಂಭದಲ್ಲಿ ಕ್ರೀಡಾ ವಿಶ್ಲೇಷಕರು ಕೂಡ ಚೆನ್ನೈ ತಂಡದ ಮೇಲೆ ನಿರೀಕ್ಷೆ ಇಟ್ಟಿರಲಿಲ್ಲ. ಆದರೆ, ಅಲ್ಲಿ ನಾಯಕನಾಗಿ ಧೋನಿ ಇದ್ದಾನೆ. ಆ ತಂಡವನ್ನು ಯಾವ ಕಾರಣಕ್ಕೂ ಸುಲಭವಾಗಿ ಕಡೆಗಣಿಸುವುದು ಬೇಡ ಅನ್ನುವಂತಹ ಮಾತುಗಳೂ ನುಸುಳಿಬರುತ್ತಿದ್ದವು. ಅಂತಿಮವಾಗಿ ಆ ನುಸುಳಿದ ಪದಗಳಿಗೇ ಗೆಲುವು ಸಿಕ್ಕಿದೆ.

ಡ್ವೇನ್‌ ಬ್ರಾವೋಗೆ ಮೊದಲಿನ ಚಾರ್ಮ್ ಇಲ್ಲ. ರೈನಾ ಅಬ್ಬರ ಕೆಲವು ಪಂದ್ಯಗಳಿಗೆ ಸೀಮಿತ, ರವೀಂದ್ರ ಜಡೇಜ ಕಥೆ ಹೇಳುವುದೇ ಬೇಡ, ಗಾಡ್‌ ಫಾಧರ್‌ ಆಗಿ ಧೋನಿ ಇದ್ದಾನೆಂಬ ಒಂದೇ ಕಾರಣಕ್ಕೆ ಜಡೇಜ ತಂಡದಲ್ಲಿ ಉಳಿಸಿಕೊಂಡಿದ್ದೆ ಹೆಚ್ಚು. ಬೌಲರ್‌ಗಳ ಕಥೆ ಕೂಡ ಅಷ್ಟೇ ಆಗಿತ್ತು. ಆದರೆ, ಒಂದು ತಂಡವನ್ನು ಸಂಘಟಿತವಾಗಿ ಹೋರಾಟ ಮಾಡುವಂತೆ ಮಾಡಿದ್ದು, ಧೋನಿ. ಕಳೆದ ಆವೃತ್ತಿಯಲ್ಲಿ ಪಕ್ಕಾ ಪ್ಲಾಪ್‌ ಆಗಿದ್ದ ಶೇನ್‌ ವಾಟ್ಸನ್‌ ಮಹತ್ವದ ಪಂದ್ಯದಲ್ಲಿ ಸಿಡಿದ. ಧೋನಿ ಕೂಡ ತಾನೊಬ್ಬ ಗ್ರೇಟ್‌ ಫಿನಿಷರ್‌ ಅನ್ನುವುದನ್ನು ನಾಲ್ಕೈದು ಪಂದ್ಯಗಳಲ್ಲಿ ಸಾಬೀತು ಪಡಿಸಿದ. ಅಂಬಟಿ ರಾಯುಡು ಸ್ಫೋಟಕ ಆಟ ಕೆಲವು ಪಂದ್ಯಗಳಲ್ಲಿ ಗೆಲುವು ಸಾಧಿಸಲು ನೆರವಾಯಿತು. ಅಂತಿಮವಾಗಿ ಧೋನಿ ನೇತೃತ್ವದಲ್ಲಿ ಚೆನ್ನೈ ತಂಡ 3ನೇ ಬಾರಿಗೆ ಟ್ರೋಫಿ ಎತ್ತಿಯನ್ನು ಹಿಡಿಯಿತು.

ನಿರೀಕ್ಷೆ ಸುಳ್ಳಾಗಿಸಿದ ಫ್ರಾಂಚೈಸಿಗಳು

ಈ ಬಾರಿ ಐಪಿಎಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದು, ಕಪ್‌ ನಮೆªà ಎಂದೇ ಹವಾ ಸೃಷ್ಟಿಸಿದ ಆರ್‌ಸಿಬಿ ತಂಡ. ಇಲ್ಲಿ ಘಟಾನುಘಟಿ ಆಟಗಾರರಾದ ಕೊಹ್ಲಿ, ಎಬಿ ಡಿವಿಲಿಯರ್, ಕೋರಿ ಆ್ಯಂಡರ್ಸನ್‌, ಕಾಕ್‌.. ಇದ್ದರೂ ಪ್ರಯೋಜನಕ್ಕೆ ಬರಲಿಲ್ಲ. ಹಾಗೇ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮೇಲೆ ಕೂಡ ದೊಡ್ಡ ಪ್ರಮಾಣದ ನಿರೀಕ್ಷೆ ಇತ್ತು. ಅದಕ್ಕೆ ತಕಂತೆ ಆರಂಭಿಕ ಪಂದ್ಯಗಲ್ಲಿ ಕೆ.ಎಲ್‌.ರಾಹುಲ್‌, ಕ್ರಿಸ್‌ ಗೇಲ್‌, ಕರುಣ್‌ ನಾಯರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಗೆಲುವು ತಂದಿದ್ದರು. ದುರಾದೃಷ್ಟವಶಾತ್‌ ಅದೇ ಗೆಲುವಿನ ಅಲೆ ಮುಂದುವರಿಸಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ರೋಹಿತ್‌ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ ಸಮರ್ಥ ತಂಡವಾಗಿದ್ದರೂ ಆರಂಭದಲ್ಲಿಯೇ ಎಡವಿತು. ಆದರೆ ಇದ್ದುದ್ದರಲ್ಲಿಯೇ ಅಚ್ಚರಿ ಫ‌ಲಿತಾಂಶ ನೀಡಿದ್ದು, ರಾಜಸ್ಥಾನ್‌ ರಾಯಲ್ಸ್‌. ಹೌದು, ಯಾಕೆಂದರೆ ಚೆಂಡು ವಿರೂಪ ಪ್ರಕರಣದಿಂದ ಸ್ಟೀವ್‌ ಸ್ಮಿತ್‌ ಅವರನ್ನು ಕಳೆದುಕೊಂಡ ರಾಜಸ್ಥಾನ್‌ ಬಡವಾಗಿತ್ತು. ಬೆನ್‌ ಸ್ಟೋಕ್ಸ್‌ ಏಕಾಂಗಿಯಾಗಿ ಒಂದೇ ಒಂದು ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಆದರೆ, ಸಂಜು ಸ್ಯಾಮ್ಸನ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌ ಅವರಂತಹ ಯುವ ಪ್ರತಿಭೆಗಳ ಪ್ರದರ್ಶನದ ನೆರವಿನಿಂದ ಆ ತಂಡ ಪ್ಲೇಆಫ್ಗೆ ಏರಿ ಅಚ್ಚರಿ ಮೂಡಿಸಿತ್ತು.

ಕನ್ನಡಿಗರ ಕಥೆ ಏನು?
ಕಳೆದ 10 ಆವೃತ್ತಿಗಳಿಗೆ ಹೋಲಿಸಿದರೆ, 11ನೇ ಆವೃತ್ತಿಯಲ್ಲಿ ಕನ್ನಡಿಗರು ಹೆಚ್ಚಿನ ಪ್ರಮಾಣದಲ್ಲಿ ಮಿಂಚಿದ್ದಾರೆ.  ತಾವು ಪ್ರತಿನಿಧಿಸಿದ್ದ ತಂಡಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಪಂಜಾಬ್‌ ತಂಡದಲ್ಲಿ ಆಡಿದ ಕೆ.ಎಲ್‌.ರಾಹುಲ್‌ (659 ರನ್‌), ಕರುಣ್‌ ನಾಯರ್‌ (301 ರನ್‌), ಕೋಲ್ಕತಾ ತಂಡದಲ್ಲಿ ಆಡಿದ ರಾಬಿನ್‌ ಉತ್ತಪ್ಪ (351 ರನ್‌), ಹೈದರಾಬಾದ್‌ನಲ್ಲಿ ಆಡಿದ ಮನೀಶ್‌ ಪಾಂಡೆ (284 ರನ್‌) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ ರಾಜಸ್ಥಾನ್‌ ತಂಡವನ್ನು ಪ್ರತಿನಿಧಿಸಿದ ಶ್ರೇಯಸ್‌ ಗೋಪಾಲ್‌ (11 ವಿಕೆಟ್‌), ಕೆ.ಗೌತಮ್‌ (11 ವಿಕೆಟ್‌) ಕಡಿಮೆ ವಿಕೆಟ್‌ ಪಡೆದರೂ ಕೆಲವು ಪಂದ್ಯಗಳಲ್ಲಿ ಮಹತ್ವದ ವಿಕೆಟ್‌ ಕಬಳಿಸಿ ಪಂದ್ಯಕ್ಕೆ ತಿರುವು ನೀಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮಿಂಚಿದ ಯುವ ಪ್ರತಿಭೆಗಳು
ಈ ಬಾರಿಯ ವಿಶೇಷ ಅಂದರೆ, ಭಾರತದ ಹಳೆ ಹುಲಿಗಳಿಗಿಂತ ಹೊಸ ಪ್ರತಿಭೆಗಳೇ ದೊಡ್ಡ ಪ್ರಮಾಣದಲ್ಲಿ ಮಿಂಚಿದ್ದು. ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ನಿತೀಶ್‌ ರಾಣಾ, ಇಶಾನ್‌ ಕಿಶಾನ್‌ ಅವರಂತಹ ಪ್ರತಿಭೆಗಳು ತಮ್ಮ ಬ್ಯಾಟಿಂಗ್‌ ಕೈಚಳಕ ತೋರಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಉಳಿದ ಹೊಸ ಪ್ರತಿಭೆಗಳು ಮಿಂಚುವಲ್ಲಿ ವಿಫ‌ಲರಾಗಿದ್ದಾರೆ. 

ಅಗ್ರ 5 ಬ್ಯಾಟ್ಸ್‌ಮನ್‌ಗಳು:
ಹೆಸರು    ತಂಡ    ರನ್‌
ಕೇನ್‌ ವಿಲಿಯಮ್ಸನ್‌    ಹೈದರಾಬಾದ್‌    735
ರಿಷಭ್‌ ಪಂತ್‌    ಡೆಲ್ಲಿ    684
ಕೆ.ಎಲ್‌.ರಾಹುಲ್‌    ಪಂಜಾಬ್‌    659
ಅಂಬಟಿ ರಾಯುಡು    ಚೆನ್ನೈ    602
ಶೇನ್‌ ವಾಟ್ಸನ್‌    ಚೆನ್ನೈ    555

ಅಗ್ರ 5 ಬೌಲರ್‌ಗಳು:
ಹೆಸರು    ತಂಡ    ವಿಕೆಟ್‌
ಆ್ಯಂಡ್ರೋ ಟೈ    ಪಂಜಾಬ್‌    24
ರಶೀದ್‌ ಖಾನ್‌    ಹೈದರಾಬಾದ್‌    21
ಸಿದ್ಧಾರ್ಥ್ ಕೌಲ್‌    ಹೈದರಾಬಾದ್‌    21
ಉಮೇಶ್‌ ಯಾದವ್‌    ಆರ್‌ಸಿಬಿ    20
ಟ್ರೆಂಟ್‌ ಬೌಲ್ಟ್    ಡೆಲ್ಲಿ    18

ಟಾಪ್ ನ್ಯೂಸ್

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.