ಐಪಿಎಲ್ ಓನ್ಲಿ ಬ್ಯಾಟ್ಸ್‌ಮನ್‌ಗಳ ಆಟವಲ್ಲ
Team Udayavani, May 6, 2017, 11:29 AM IST
ಇಂಡಿಯನ್ ಪ್ರೀಮಿಯಲ್ ಲೀಗ್(ಐಪಿಎಲ್) ಅಂದರೆ ಬ್ಯಾಟ್ಸ್‌ಮನ್‌ಗಳ ಹಬ್ಬ ಎಂದೇ ಖ್ಯಾತಿ ಪಡೆದಿದೆ. ಎಂತಹ ಮಾರಕ ಬೌಲರ್‌ಗಳಿಗೂ ಬ್ಯಾಟ್ಸ್‌ಮನ್‌ಗಳು ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಸುತ್ತಾರೆ. ಕೊನೆ ಕ್ಷಣದಲ್ಲಿ ಪಂದ್ಯವನ್ನು ಕಸಿದು ಎದುರಾಳಿಗೆ ಆಘಾತ ನೀಡುತ್ತಾರೆ. ಆದರೆ ಪ್ರತಿ ಐಪಿಎಲ್ ಆವೃತ್ತಿಯಲ್ಲಿಯೂ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾಗಿ ಕಾಡುವ ಕೆಲವೇ ಕೆಲವು ಬೌಲರ್‌ಗಳು ಕಣ್ಣಿಗೆ ಕಾಣಿಸುತ್ತಾರೆ. ಈ ಆವೃತ್ತಿಯಲ್ಲಿ ಕಂಡುಬಂದ ಅಂತಹ ಎಂಟೆದೆಯ ಬೌಲರ್‌ಗಳ ಬಗ್ಗೆ ಒಂದು ನೋಟ.
ಜಸಿøàತ್ ಬುಮ್ರಾ, ಪ್ರವೀಣ್ ಕುಮಾರ್, ಇಮ್ರಾನ್ ತಾಹಿರ್, ಆ್ಯಂಡ್ರೂé ಟೈ, ಮಿಚೆಲ್ ಮೆಕ್ಲೆನಗನ್, ಕ್ರಿಸ್ ಮಾರಿಸ್, ರಶೀದ್ ಖಾನ್, ಕ್ರಿಸ್ ವೋಕ್ಸ್….ಸದ್ಯ ಈ ಐಪಿಎಲ್ ಆವೃತ್ತಿಯಲ್ಲಿ ಬ್ಯಾಟ್ಸ್‌ಮನ್‌ಗಳ ಬೆವರಿಳಿಸುತಿರುವ ಖ್ಯಾತ ಬೌಲರ್‌ಗಳಾಗಿದ್ದಾರೆ. ಇವರ ಜತೆ ಯುವ ಬೌಲರ್‌ಗಳಾದ ಬಸಿಲ್ ಥಾಂಪಿ, ಪವನ್ ನೇಗಿ, ಕೃಣಾಲ್ ಪಾಂಡ್ಯ ಕೂಡ ಬ್ಯಾಟ್ಸ್‌ಮನ್‌ಗಳಿಗೆ ಭಯಹುಟ್ಟಿಸುತ್ತಿದ್ದಾರೆ. ಇವರು ತಮ್ಮ ಬೌಲಿಂಗ್ ಕೌಶಲ್ಯದಿಂದಲೇ ಪ್ರಮುಖ ಹಂತದಲ್ಲಿ ಪಂದ್ಯಕ್ಕೆ ತಿರುವು ನೀಡಿ ತಂಡಕ್ಕೆ ಗೆಲುವು ತಂದು ಐಪಿಎಲ್ ಒನ್ಲಿà ಬ್ಯಾಟ್ಸ್‌ಮನ್‌ಗಳ ಆಟವಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಬುಮ್ರಾ ಮ್ಯಾಜಿಕ್ ಸೂಪರ್
ಅದು ಏ.29 ರಂದು ರಾಜ್‌ಕೋಟ್‌ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ನಡುವಿನ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 153 ರನ್ ಪೇರಿಸಿತ್ತು. ಇದು ಮುಂಬೈ ತಂಡದ ಬ್ಯಾಟಿಂಗ್ ಶಕ್ತಿಗೆ ಹೋಲಿಸಿದರೆ ತುಂಬಾ ಸುಲಭದ ಗುರಿಯಾಗಿತ್ತು. ಆದರೂ ಮುಂಬೈ ಬಾರಿಸಿದ್ದು ಕೂಡ 153 ರನ್. ಹೀಗಾಗಿ ಪಂದ್ಯ ಟೈ ಆಗಿ ಸೂಪರ್ ಓವರ್‌ಗೆ ತಲುಪಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಬಂದಿದ್ದ ಮುಂಬೈ 5 ಎಸೆತದಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಬಾರಿಸಿತ್ತು. ನಂತರ ಗುಜರಾತ್ ಪರ ಏರಾನ್ ಫಿಂಚ್ ಮತ್ತು ಬ್ರೆಂಡನ್ ಮೆಕಲಂ ಕ್ರೀಸ್‌ಗೆ ಬಂದರೆ, ಬೌಲಿಂಗ್ ಮಾಡಲು ಜಸಿøàತ್ ಬುಮ್ರಾ ಇಳಿದರು. ಫಿಂಚ್, ಮೆಕಲಂ ಸ್ಫೋಟಕ ಬ್ಯಾಟ್ಸ್‌ಮನ್‌ಗಳು. ಈ ಐಪಿಎಲ್‌ನಲ್ಲಿ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದವರು. ಹೀಗಾಗಿ ಕ್ರೀಡಾಪ್ರೇಮಿಗಳ ಲೆಕ್ಕಾಚಾರ ಗುಜರಾತ್‌ಗೆ ಗೆಲುವು ಖಚಿತ ಅನ್ನುವುದಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮೊದಲ ಎಸೆತವೇ ನೋಬಾಲ್ ಆಗಿತು. ಫ್ರೀ ಹಿಟ್ ಅವಕಾಶ ಬೇರೆ. ಆದರೆ ನಂತರ ನಡೆದಿದ್ದು ಬುಮ್ರಾ ಮ್ಯಾಜಿಕ್.
ಫ್ರೀ ಹಿಟ್‌ನಲ್ಲಿ ಕೊಟ್ಟಿದ್ದು, ಒಂದೇ ರನ್. ಎರಡನೇ ಎಸೆತ ವೈಡ್. ಹೀಗಾಗಿ 1 ಎಸೆತ 3 ರನ್ ಆಗಿ ಹೋಗಿತ್ತು. ನಂತರ ಫಿಂಚ್ ಮತ್ತು ಮೆಕಲಂಗೆ ಬುಮ್ರಾ ಅಕ್ಷರಶಃ ಆಟ ಆಡಿಸಿ ಬಿಟ್ಟರು. ಒಂದೇ ಒಂದು ಬೌಂಡರಿಯನ್ನು ಬಿಟ್ಟುಕೊಡಲಿಲ್ಲ. ಹೀಗಾಗಿ ಗುಜರಾತ್ ಕೇವಲ 6 ರನ್ ಬಾರಿಸಿ ಸೋಲುಂಡಿತು. ಇದೊಂದು ಉದಾಹರಣೆ ಅಷ್ಟೇ. ಕಳೆದ 10 ಐಪಿಎಲ್‌ನಲ್ಲಿ ಇಂತಹ ಹಲವು ಘಟನೆಗಳು ಮರುಕಳಿಸಿವೆ.
ಭುವಿ ಹೈದರಾಬಾದ್‌ನ ಪ್ರಮುಖ ಅಸ್ತ್ರ
ಭಾರತ ತಂಡದ ಪ್ರಮುಖ ಬೌಲರ್ ಆಗಿರುವ ಭುವನೇಶ್ವರ ಕುಮಾರ್ ಸನ್ ರೈಸರ್ ಹೈದರಾಬಾದ್ ತಂಡಕ್ಕೆ ಆಪತಾºಂಧವ. ತಂಡದಲ್ಲಿ ಡೇವಿಡ್ ವಾರ್ನರ್, ಯುವರಾಜ್ ಸಿಂಗ್, ಶಿಖರ್ ಧವನ್, ಕೇನ್ ವಿಲಿಯಮ್ಸನ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಹೈದರಾಬಾದ್‌ಗೆ ಆಸರೆಯಾಗುತ್ತಿರುವವರು ಭುವನೇಶ್ವರ್ ಕುಮಾರ್. ಪಂದ್ಯ ಇನ್ನೇನು ಕೈ ಜಾರಿ ಹೋಯಿತು ಅನ್ನುವ ಹಂತದಲ್ಲಿ ಎದುರಾಳಿಯ ಪ್ರಮುಖ ವಿಕೆಟ್ ಪೆವಿಲಿಯನ್ ಸೇರುವಂತೆ ಮಾಡುವ ಚಾಣಾಕ್ಷತನ ಭುವನೇಶ್ವರ್‌ಗಿದೆ. ಆಫ್ಘಾನಿಸ್ತಾನದ ರಶೀದ್ ಖಾನ್ ಸ್ಪಿನ್ ಕೂಡ ವಕೌìಟ್ ಆಗ್ತಿದೆ. ಈ ನಿಟ್ಟಿನಲ್ಲಿ ಎದುರಾಳಿ ಬ್ಯಾಟ್ಸ್ ಮನ್‌ಗಳು ಈ ಇಬ್ಬರು ಬೌಲರ್‌ಗಳ ಬಗ್ಗೆ ತುಸು ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ.
ಇದೇ ರೀತಿ ಪುಣೆ ತಂಡದಕ್ಕೆ ಇಮ್ರಾನ್ ತಾಹಿರ್, ಮುಂಬೈ ಇಂಡಿಯನ್ಸ್‌ಗೆ ಮಿಚೆಲ್ ಮೆಕ್ಲೆನಗನ್, ಗುಜರಾತ್‌ಗೆ ಆ್ಯಂಡ್ರೂ ಟೈ, ಡೆಲ್ಲಿ ತಂಡಕ್ಕೆ ಕ್ರಿಸ್ ಮಾರಿಸ್, ಕೋಲ್ಕತಾಗೆ ಕ್ರಿಸ್ ವೋಕ್ಸ್ ಬಲವಿಕೆ. ಎಲ್ಲಾ ಪಂದ್ಯದಲ್ಲಿಯೂ ವಿಜಯಲಕ್ಷ್ಮೀ ಕಸಿಯುತ್ತಾರೆ ಎನ್ನಲಾಗದು. ಆದರೆ ಚೇಸಿಂಗ್ ವೇಳೆ ಬ್ಯಾಟ್ಸ್‌ಮನ್‌ಗಳಿಗೆ ಕೊನೆಯ ಓವರ್ ಎಸೆಯಲು ಚೆಂಡು ಇವರ ಕೈ ಸೇರಿದಂತೆ ಎದುರಾಳಿಗಳಿಗೆ ಅಪಾಯ ಗ್ಯಾರಂಟಿ.
ಬೌಲರ್‌ಗಳು ಪಂದ್ಯ ಕಸಿಯುತ್ತಾರೆ
ಕೊನೆಯ ಒಂದೋ ಎರಡೋ ಓವರ್‌ನಲ್ಲಿ ಹಿಗ್ಗಾಮಗ್ಗಾ ಬ್ಯಾಟಿಂಗ್, ಮನಬಂದಂತೆ ಬೌಲರ್‌ಗಳಿಗೆ ದಂಡಿಸಿ ಪಂದ್ಯವನ್ನು ಕಸಿಯುವ ಬ್ಯಾಟ್ಸ್‌ಮನ್‌ಗಳು ಹೀರೋ ಆಗಿ ಬಿಡುತ್ತಾರೆ. ಆದರೆ ಒಬ್ಬ ಚಾಣಾಕ್ಷ್ಯ ಬೌಲರ್ ಕೂಡ ಪಂದ್ಯದ ದಿಕ್ಕು ಬದಲಿಸಬಲ್ಲ ಅನ್ನುವುದನ್ನು ಕೆಲವು ಬೌಲರ್‌ಗಳು ಸಾಬೀತು ಮಾಡಿದ್ದಾರೆ. ಕೇವಲ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಖರೀದಿ ಮಾಡಿ, ಚುರುಕಿನ ಬೌಲರ್‌ಗಳ ಖರೀದಿಗೆ ಲಕ್ಷ್ಯ ವಹಿಸದ ಆರ್‌ಸಿಬಿ, ಗುಜರಾತ್, ಪಂಜಾಬ್ ನಂತಹ ತಂಡಗಳು ಸೋಲಿನ ಸುಳಿಗೆ ಸಿಲುಕಿರುವುದು ಇದರಿಂದಲೇ ಅಲ್ಲವೇ?
ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.