ಈ ಐಪಿಎಲ್‌ನಲ್ಲಾದರೂ ಕಪ್‌ ನಮ್ದೇನಾ?


Team Udayavani, Mar 7, 2020, 6:05 AM IST

ee-iplnala

ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಶುರುವಾಗುವ ದಿನಗಳು ಸನಿಹದಲ್ಲಿದೆ. ಕ್ರಿಕೆಟ್‌ ಹಬ್ಬವನ್ನು ಸ್ವಾಗತಿಸಲು, ಆನಂದದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಿಕ್ಸರ್‌, ಬೌಂಡರಿಗಳ ಮನರಂಜನೆ, 48 ದಿನಗಳ ರಸದೌತಣ, ಕ್ರೀಡಾಪ್ರೇಮಿಗಳ ಹೃದಯ ತಣಿಸಲಿದೆ. ಈ ಸಲವಾದರೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕಪ್‌ ಗೆಲ್ಲುವುದೆ? ಅಥವಾ ಹಿಂದಿನ ಆವೃತ್ತಿಗಳಲ್ಲಾದ ತಪ್ಪನ್ನು ಪುನರಾವರ್ತಿಸುವುದೇ?, ಕೊಹ್ಲಿ ಪಡೆ ಹಿಂದಿನ ನೋವನ್ನೆಲ್ಲ ಮರೆತು ಫಿನಿಕ್ಸ್‌ ಹಕ್ಕಿಯಂತೆ ಏಳಬೇಕಿದೆ. ಪ್ರಶಸ್ತಿ ಬರ ನೀಗಿಸಬೇಕಿದೆ. ಈ ಸಲದ ತಂಡ ಹೇಗಿದೆ?, ಆರ್‌ಸಿಬಿ ಬಗೆಗೆ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಲೇಖನವಿಲ್ಲಿದೆ ಓದಿ.

ಹೇಗಿದೆ ಬೆಂಗಳೂರು ತಂಡ?: ಕಣಕ್ಕಿಳಿಯುತ್ತಿರುವ 8 ಪ್ರಮುಖ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು. ವಿಶ್ವವಿಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕ. ಸೈಮನ್‌ ಕಾಟಿಚ್‌ ಕೋಚ್‌. ಈ ಸಲವಾದರೂ ಕಪ್‌ ಗೆಲ್ಲಲೇಬೇಕು ಎನ್ನುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕಿಳಿಯಲಿದೆ. ಒಟ್ಟಾರೆ 12 ವರ್ಷದ ಪ್ರಶಸ್ತಿ ಬರವನ್ನು ನೀಗಿಸುವ ಸಂಕಲ್ಪವನ್ನು ಆರ್‌ಸಿಬಿ ಮಾಡಿದೆ. ಈ ವರ್ಷ ಹರಾಜಿನಲ್ಲಿ ಆರ್‌ಸಿಬಿ ಒಟ್ಟು 8 ಹೊಸ ಆಟಗಾರರನ್ನು ಖರೀದಿಸಿದೆ. ಬಲಿಷ್ಠ ಆಟಗಾರರಲ್ಲಿ ಏರಾನ್‌ ಫಿಂಚ್‌, ಕ್ರಿಸ್‌ ಮೋರಿಸ್‌ ಖ್ಯಾತ ನಾಮರು ಎನ್ನುವುದು ವಿಶೇಷ. ಕೊಹ್ಲಿ, ಎಬಿಡಿ ವಿಲಿಯರ್, ಮೋಯಿನ್‌ ಅಲಿಯಂತಹ ತಾರೆಯರ ಜತೆಗೆ ಇವರಿಬ್ಬರು ಸೇರಿಕೊಂಡಿರುವುದು ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಬಲ್ಲದು.

ಉಳಿಕೆ ಆಟಗಾರರು: ವಿರಾಟ್‌ ಕೊಹ್ಲಿ, ಮೋಯಿನ್‌ ಅಲಿ, ಯಜುವೇಂದ್ರ ಚಹಲ್‌, ಪಾರ್ಥಿವ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ಉಮೇಶ್‌ ಯಾದವ್‌, ಪವನ್‌ ನೆಗಿ, ದೇವದತ್ತ ಪಡಿಕ್ಕಲ್‌, ಗುರುಕೀರತ್‌ ಸಿಂಗ್‌, ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ, ನವದೀಪ್‌ ಸೈನಿ, ಎಬಿಡಿ ವಿಲಿಯರ್ ಉಳಿಕೆ ಆಗಿರುವ ಆಟಗಾರರ.

ಹೊರ ಹೋದವರು: ಮಾರ್ಕಸ್‌ ಸ್ಟೋಯಿನಿಸ್‌, ಶಿಮ್ರಾನ್‌ ಹೆಟ್‌ಮೈರ್‌, ಆಕಾಶ್‌ದೀಪ್‌ ನಾಥ್‌, ನಥನ್‌ ಕೋಲ್ಟರ್‌ ನೀಲ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಪ್ರಯಾಸ್‌ ರೇ ಬರ್ಮನ್‌, ಟಿಮ್‌ ಸೌದಿ, ಪಿ.ಎಚ್‌.ಶಾಹಿರ್‌ಶಾ, ಕುಲ್ವಂತ್‌ ಖೆಜೋರಿಯಾ, ಹಿಮ್ಮತ್‌ ಸಿಂಗ್‌, ಹೆನ್ರಿಚ್‌ ಕ್ಲಾಸೆನ್‌, ಮಿಲಿಂದ್‌ ಕುಮಾರ್‌.

ಹೊಸ ಸೇರ್ಪಡೆ: ಏರಾನ್‌ ಫಿಂಚ್‌, ಕ್ರಿಸ್‌ ಮೋರಿಸ್‌, ಶಹಾºಜ್‌ ಅಹ್ಮದ್‌, ಪವನ್‌ ದೇಶಪಾಂಡೆ, ಜೋಶುವಾ ಫಿಲಿಪ್ಪೆ, ಇಸುರು ಉದಾನ, ಡೇಲ್‌ ಸ್ಟೇನ್‌, ಕೇನ್‌ ರಿಚರ್ಡ್‌ಸನ್‌.

ಪ್ರಶಸ್ತಿ ಬರ ನೀಗುವುದೇ?: ಆರ್‌ಸಿಬಿ 2008ರಲ್ಲಿ ಮೊದಲ ಆವೃತ್ತಿಯಲ್ಲಿ 7ನೇ ಸ್ಥಾನ ಡೆದುಕೊಂಡಿದ್ದು 2009ರಲ್ಲಿ ಫೈನಲ್‌ಗೆ ಪ್ರವೇಶಿಸಿ ರನ್ನರ್‌ಅಪ್‌ ಆಗಿತ್ತು. ವಾಂಡೆರರ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಡೆಕ್ಕನ್‌ ಚಾರ್ಜಸ್‌ ವಿರುದ್ಧ 6 ರನ್‌ಗಳಿಂದ ಸೋಲು ಅನುಭವಿಸಿತ್ತು. 2010ರಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಮಾಡಿ ಅಲ್ಲಿ ಎಡವಿತ್ತು. 2011ರಲ್ಲಿ 2ನೇ ಸಲ ಫೈನಲ್‌ ಪ್ರವೇಶಿಸಿದ್ದ ಆರ್‌ಸಿಬಿ ತಂಡವು 58 ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲು ಅನುಭವಿಸಿತ್ತು. 2012ರಲ್ಲಿ 5ನೇ , 2013ರಲ್ಲಿ 5ನೇ , 2014ರಲ್ಲಿ 7ನೇ , 2015ರಲ್ಲಿ ಪ್ಲೇಆಫ್ನಲ್ಲಿ 3ನೇ ಸ್ಥಾನ ಪಡೆದಿರುತ್ತದೆ.

ಆರ್‌ಸಿಬಿ 2016ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ 8 ರನ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋಲು ಅನುಭವಿಸಿತ್ತು. ಮತ್ತೂಂದು ಅವಕಾಶ ಹಾಳು ಮಾಡಿಕೊಂಡಿತ್ತು. ಆನಂತರದ ಮೂರು ಆವೃತ್ತಿಗಳಲ್ಲಿ ಕ್ರಮವಾಗಿ 8, 6 ಹಾಗೂ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಸಲ ನಿರೀಕ್ಷೆ ಗರಿಗೆದರಿದೆ. ಕಪ್‌ ನಮೆªà ಎಂದು ಅಭಿಮಾನಿಗಳು ಗುನುಗಲು ಶುರು ಮಾಡಿದ್ದಾರೆ, ಇದನ್ನು ಆರ್‌ಸಿಬಿ ನಿಜ ಮಾಡುವುದೇ? ಎನ್ನುವುದನ್ನು ಕಾದು ನೋಡಬೇಕಿದೆ.

ಲಾಂಛನ ಬದಲಿಸಿದ ಆರ್‌ಸಿಬಿ: ಆರ್‌ಸಿಬಿ 13ನೇ ಆವೃತ್ತಿ ಐಪಿಎಲ್‌ನಲ್ಲಿ ಹೊಸ ಲಾಂಛನದೊಂದಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಹೊಸ ಜೋಶ್‌ ಆರ್‌ಸಿಬಿಗೆ ಅದೃಷ್ಟ ತರಬಹುದೇ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ. ಆಸಿಬಿ ಲಾಂಛನ ಬದಲಿಸಿರುವುದು ಇದು ಮೊದಲೇನಲ್ಲ. ಮೊತ್ತ ಮೊದಲ ಬಾರಿಗೆ ಬೆಂಗಳೂರು ತಂಡ 2015ರಲ್ಲಿ ಲಾಂಛನ ಬದಲಾಯಿಸಿಕೊಂಡಿತ್ತು. ಅದಾದ ಬಳಿಕ 2016ರಿಂದ 2019ರ ತನಕ ಮತ್ತೂಂದು ಬಾರಿಗೆ ಲಾಂಛನ ಬದಲಾಯಿಸಲಾಯಿತು. ಇದೀಗ 2020ಕ್ಕೆ ಪೂರ್ಣ ಸಿಂಹದ ಲಾಂಛನವನ್ನು ಬಳಸಲಾಗಿದೆ. ಆರ್‌ಸಿಬಿ ಫ್ರಾಂಚೈಸಿ ಫ್ರೆಶ್‌ ನಿರ್ಧಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದು ಸದ್ಯ ಕುತೂಹಲವಾಗಿದೆ.

ಆರ್‌ಸಿಬಿಗೆ ತಾರೆಯರ ಬಲ: ಬೆಂಗಳೂರು ತಂಡವು ಸಿನಿಮಾ ಲೋಕದ ದಿಗ್ಗಜರನ್ನು ರಾಯಭಾರಿಯಾಗಿ ಹೊಂದಿದೆ. ಅದರಲ್ಲೂ ಬಾಲಿವುಡ್‌ನ‌ ಖ್ಯಾತ ನಟರಾದ ಸಲ್ಮಾನ್‌ ಖಾನ್‌, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ, ಕಿಚ್ಚ ಸುದೀಪ್‌ ಹಾಗೂ ರಚಿತಾ ರಾಮ್‌ ಆರ್‌ಸಿಬಿಯನ್ನು ಚಿಯರ್‌ ಮಾಡಲಿದ್ದಾರೆ.

ಆರ್‌ಸಿಬಿ ಐಪಿಎಲ್‌ ಹಾದಿ
ಇಸವಿ ಸ್ಥಾನ
2008 7ನೇ ಸ್ಥಾನ
2009 ರನ್ನರ್‌ಅಪ್‌
2010 4ನೇ ಸ್ಥಾನ
2011 ರನ್ನರ್‌ಅಪ್‌
2012 5ನೇ ಸ್ಥಾನ
2013 5ನೇ ಸ್ಥಾನ
2014 7ನೇ ಸ್ಥಾನ
2015 3ನೇ ಸ್ಥಾನ
2016 ರನ್ನರ್‌ಅಪ್‌
2017 8ನೇ ಸ್ಥಾನ
2018 6ನೇ ಸ್ಥಾನ
2019 8ನೇ ಸ್ಥಾನ

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.