“ಜೈನಕಾಶಿ’ಯ ಸವಿ

Team Udayavani, Dec 14, 2019, 6:08 AM IST

jaina-kashi

ಜೈನ ಧರ್ಮದ ಉಚ್ಛಾಯ ಕಾಲದಲ್ಲಿ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಜನಪ್ರಿಯತೆ ಗಳಿಸಿದವು. ಹಾಗೆಯೇ, ಜೈನ ರಾಜರ ಅವನತಿಯೊಂದಿಗೆ ಈ ಕ್ಷೇತ್ರಗಳೂ ಕ್ರಮೇಣ ಪಾಳುಬಿದ್ದವು. ಆದರೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ, ಬಹು ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿ, ಶ್ರೀ ಪದ್ಮಾವತಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ, ಜೈನ ಧರ್ಮೀಯರ ಕಾಶಿಯಾಗಿ ನಿತ್ಯ ಹಿಂದೂ ಹಾಗೂ ಜೈನಭಕ್ತರನ್ನು ಸೆಳೆಯುತ್ತಿದೆ.

ಜೈನ ರುಚಿಯ ಇಲ್ಲಿನ ಭೋಜನಕ್ಕೆ ಮಾರುಹೋಗದವರೇ ಇಲ್ಲ. 1400 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ರಾಜರ ಆಡಳಿತಕ್ಕೂ ಒಳಪಟ್ಟಿತ್ತು. ಅಂದಿನಿಂದಲೂ ದಾಸೋಹ ಪರಂಪರೆ ಇದೆ. ಸಾಂತರಸರು ಈ ಕ್ಷೇತ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರ ವರ್ಷ ಆಳಿದ್ದರು. ನಂತರದ ಕಾಲದಲ್ಲೂ ಚತುರ್ವಿಧ ದಾನಗಳು ನಡೆಯುತ್ತಾ ಬಂದಿವೆ.

ನಿತ್ಯ ಅನ್ನಸಂತರ್ಪಣೆ: ಇಲ್ಲಿ ಮೂರು ಹೊತ್ತು ದಾಸೋಹ ನಡೆಯುತ್ತದೆ. ಪ್ರತಿನಿತ್ಯ ಕನಿಷ್ಠ 750 ಭಕ್ತಾದಿಗಳು ಶ್ರೀ ಪದ್ಮಾವತಿ ಸನ್ನಿಧಾನದ ಅನ್ನಪ್ರಸಾದವನ್ನು ಸವಿಯುತ್ತಾರೆ. ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ಹಾಗೂ ರಜಾ ದಿನಗಳಂದು, 1500ಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸುತ್ತಾರೆ.

ಭೋಜನಶಾಲೆ ಹೇಗಿದೆ?”: ಹಲವು ಶತಮಾನಗಳಿಂದ, ಪಾರಂಪರಿಕವಾಗಿ ಇಲ್ಲಿ ದಾಸೋಹ ವ್ಯವಸ್ಥೆ ಇದ್ದರೂ, 2016ರಲ್ಲಿ ನೂತನ ಭೋಜನ ಶಾಲೆಯನ್ನು ತೆರೆಯಲಾಯಿತು. ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ “ಅಭೀಷ್ಠ ಪ್ರಸಾದ ಭವನ’ ನಿರ್ಮಾಣಗೊಂಡಿದೆ.

– ಸ್ಟೀಮ್‌ನಲ್ಲಿ ಅಡುಗೆ ವ್ಯವಸ್ಥೆ
– ಎರಡು ಮಹಡಿಯ ಭೋಜನಶಾಲೆ
– ಏಕಕಾಲದಲ್ಲಿ 500 ಮಂದಿ ಭೋಜನ ಸಾಮರ್ಥ್ಯ

ಭಕ್ಷ್ಯ ಸಮಾಚಾರ
– ಜೈನಶೈಲಿಯ ಭೋಜನ. ಈರುಳ್ಳಿ- ಬೆಳ್ಳುಳ್ಳಿ ಬಳಸದೆ ಅಡುಗೆ.
– ನಿತ್ಯದ ಊಟದಲ್ಲಿ ಅನ್ನ, ಸಾಂಬಾರು, ಪಲ್ಯ, ಪಾಯಸ, ಉಪ್ಪಿನಕಾಯಿ, ಮಜ್ಜಿಗೆ ಇರುತ್ತದೆ.
– ಜಾತ್ರೆ, ಶ್ರಾವಣ, ನವರಾತ್ರಿ, ಕಾರ್ತಿಕ ಮಾಸದ ವಿಶೇಷ ದಿನಗಳಲ್ಲಿ ಕೋಸಂಬರಿ, ಪ‌ಲಾವ್‌, ಜಿಲೇಬಿ, ಪುಳಿಯೊಗರೆ, ಹುಣಸೇಗಟ್ಟಿ, ಸಂಡಿಗೆ, ಮೊಸರುಬಜ್ಜಿ, ಚಟ್ನಿ ಇತ್ಯಾದಿ.
– ಪ್ರತಿದಿನ ಬೆಳಗ್ಗೆ ಉಪಾಹಾರವಾಗಿ ಉಪ್ಪಿಟ್ಟು, ಪೇಪರ್‌ ಅವಲಕ್ಕಿ, ಉಪ್ಪಿನಕಾಯಿ, ಟೀ- ಕಾಫಿ ವ್ಯವಸ್ಥೆ.
– ವಿಶೇಷ ದಿನಗಳಲ್ಲಿ ಉಪಾಹಾರಕ್ಕೆ ಇಡ್ಲಿ, ಸಾಂಬಾರ್‌, ಗೋದಿಹಲ್ವಾ.

ವೇಳಾಪಟ್ಟಿ
ಉಪಾಹಾರ: ಬೆಳಗ್ಗೆ 8ರಿಂದ 9.30ರವರೆಗೆ
ಮಧ್ಯಾಹ್ನ ಭೋಜನ: ಮಧ್ಯಾಹ್ನ 12ರಿಂದ 2
ರಾತ್ರಿ ಭೋಜನ: ಸಂಜೆ 4.30ರಿಂದ 6ರವರೆಗೆ

ಸಂಖ್ಯಾ ಸೋಜಿಗ
1- ಕ್ವಿಂಟಲ್‌ ಅಕ್ಕಿಯಿಂದ ಅನ್ನ
6- ಬಾಣಸಿಗರಿಂದ ಅಡುಗೆ ತಯಾರಿ
20- ಕಿಲೋ ತರಕಾರಿ ನಿತ್ಯ ಬಳಕೆ
750- ಮಂದಿಗೆ ನಿತ್ಯ ಭೋಜನ
1500 - ಮಂದಿ, ವಿಶೇಷ ದಿನಗಳಲ್ಲಿ ಭೋಜನ
2016- ನೂತನ ಭೋಜನ ಶಾಲೆ ಆರಂಭ
3,50,000- ಮಂದಿ, ಈ ವರ್ಷ ಭೋಜನ ಸ್ವೀಕಾರ

* ಶರತ್‌ ಭದ್ರಾವತಿ

ಟಾಪ್ ನ್ಯೂಸ್

Gangavath-Rain

Gangavathi: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು; ಭತ್ತ, ಇತರ ಬೆಳೆಗಳಿಗೆ ಹಾನಿ

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

madikeri

Madikeri: ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾ ವಶ; 7 ಆರೋಪಿಗಳ ಬಂಧನ

MLC-elctin-Congress

Council By Polls: ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾದ ರಾಜು ಪೂಜಾರಿ

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Gangavath-Rain

Gangavathi: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು; ಭತ್ತ, ಇತರ ಬೆಳೆಗಳಿಗೆ ಹಾನಿ

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.