ಅಕ್ಷರ ಲೋಕದ ಅಂಗಳದಲ್ಲಿ


Team Udayavani, Aug 31, 2019, 5:00 AM IST

Book-750

ಕಾಡಲ್ಲೊಂದು ಸುತ್ತು…
ಕಾಡು ಎಂದರೆ ಅರಣ್ಯವೂ ಹೌದು. ಅದು ನಮ್ಮನ್ನು ಕಾಡುವುದೂ ಹೌದು. ದಟ್ಟಾರಣ್ಯವನ್ನು ನೋಡಿದಾಗ ಮನಸ್ಸು ಅರಳುತ್ತದೆ. ಧ್ವಂಸಗೊಂಡ ಕಾಡನ್ನು ನೋಡಿದಾಗ ಮನಸ್ಸು ಮುದುಡುತ್ತದೆ. ಮನುಷ್ಯ, ತನ್ನ ವಿಕಾಸ ಚರಿತ್ರೆಯ ಶೇ.95ರಷ್ಟು ಭಾಗವನ್ನು ಕಾಡು ಮೇಡುಗಳಲ್ಲಿಯೇ ಕಳೆದಿದ್ದಾನೆ. ಕಾಡಿನ ಒಂದೊಂದು ಜೀವಿಯೂ ನಮ್ಮ ಪೂರ್ವಜರನ್ನು ಕಾಡಿದೆ. ಅವರನ್ನು ಸೆಳೆದಿದೆ, ಅಟ್ಟಾಡಿಸಿದೆ, ಬೆಳೆಸಿದೆ, ಹಿಂಸಿಸಿದೆ, ಅವನ ವ್ಯಕ್ತಿತ್ವವನ್ನು ರೂಪಿಸಿದೆ. ಕಾಡಿನ ಜೀವಿಗಳೆಲ್ಲ ಸೇರಿ, ಮನುಷ್ಯನನ್ನು ಅತ್ಯಂತ ಬಲಾಡ್ಯ ಜೀವಿಯನ್ನಾಗಿ ಮಾಡಿವೆ. ಅವನಿಗೆ ಓಡಲು, ಏರಲು, ಜಿಗಿಯಲು, ಈಜಲು ಕಲಿಸಿದ್ದೇ ಈ ಜೀವಿಗಳು.
ಹಾಗಾಗಿ, ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ಕಾಡಿನ ಮೆಮೊರಿ ಇದೆ. ಅದನ್ನು ಕೆದಕಿದಾಗಲೆಲ್ಲ ಕಾಡು ಕಾಡುತ್ತದೆ.ಇಂಥ ಹಿನ್ನೆಲೆಯ ಕಾಡನ್ನು, ಇದು ಮಾರುವೇಷದ ದೇವರು ಎಂದು ನಂಬಿ ಪೂಜಿಸುವ ಜನರಿದ್ದಾರೆ. ಕಾಡು ಪ್ರಾಣಿಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಮುತುವರ್ಜಿಯಿಂದ ಕಾಪಾಡುವ ಜನ ಇದ್ದಾರೆ. ಹಾಗೆಯೇ, ಹಲ ಬಗೆಯ ಸಂಪತ್ತಿನಿಂದ ಕೂಡಿರುವ ಕಾಡನ್ನು ಲೂಟಿ ಮಾಡುವವರೂ ಇದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಡಿಗೆ ಬೆಂಕಿ ಹಚ್ಚುವ ನೀಚರೂ ಇದ್ದಾರೆ. ಕಾಡು ಇದ್ರೆ ನಾಡು ಎಂದು ಎಚ್ಚರಿಸುವವರ ಮಧ್ಯೆಯೇ- ಕಾಡಾ? ಅದರಿಂದ ಏನುಪಯೋಗ ಹೋಗ್ರಿ ಎಂದು ಉಡಾಫೆಯಿಂದ ಮಾತಾಡುವ ಜನರಿದ್ದಾರೆ. ಇಂಥವರೆಲ್ಲ ಅಸಲಿ ಮುಖವನ್ನು ತೆರೆದಿಡುತ್ತಲೇ, ಕಾಡಿನ ಅಂತರಂಗ ಆಲಿಸುವ ವಿಶಿಷ್ಟ ಪ್ರಯತ್ನವಾಗಿ “ಜಂಗಲ್‌ ಡೈರಿ’ ಹೊರಬಂದಿದೆ.
ಜಂಗಲ್‌ ಡೈರಿ, ಲೇ: ವಿನೋದ್‌ ಕುಮಾರ್‌ ಬಿ. ನಾಯ್ಕ, ಪ್ರ: ಬಹುರೂಪಿ ಪ್ರಕಾಶನ, ಸಂಜಯನಗರ, ಬೆಂಗಳೂರು

ವೈದ್ಯ”ರತ್ನ’ಗಳು
ಇತಿಹಾಸ ಪುರುಷರಾದ ಹಲವು ವಿಜ್ಞಾನಿಗಳ ಅನುಭವ, ಸಾಧನೆ ಮತ್ತು ಜೀವನದರ್ಶನವನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ “ಲೋಕಜ್ಞಾನ ಮಾಲೆ’ಯನ್ನೂ ಆರಂಭಿಸಲಾಗಿದೆ. ನವಕರ್ನಾಟಕ ಪ್ರಕಾಶನದ ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಈ ವರೆಗಿನ ಮಹತ್ವದ ಸಂಶೋಧನೆಗಳು ಮತ್ತು ಸಂಶೋಧಕರನ್ನು ಪರಿಚಯಿಸಲಾಗುತ್ತದೆ.
ವೈದ್ಯವಿಜ್ಞಾನಿಗಳಿಂದ ಆವಿಷ್ಕಾರಗೊಂಡ ಹಲವು ರೀತಿಯ ಸಂಶೋಧನಾ ಫ‌ಲಗಳು ಇಂದು ಮಾನವನಿಗೆ ವರದಾನವಾಗಿ ಪರಿಣಮಿಸಿವೆ. ಮಾನವ ಕುಲಕ್ಕೆ ಮಾರಕವಾದ ಅನೇಕ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ವೈದ್ಯವಿಜ್ಞಾನದ ಕೊಡುಗೆ ಅಪಾರ. ಸಂಶೋಧನೆ- ಆವಿಷ್ಕಾರಗಳ ಮೂಲಕ ಮಹತ್ವದ್ದನ್ನು ಸಾಧಿಸಿದ, ಪ್ರಯೋಗಗಳ ಮೂಲಕ ಖಚಿತ ಫ‌ಲಿತಾಂಶ ಪಡೆದ ವಿಜ್ಞಾನಿಗಳು ಎಂದೆಂದಿಗೂ ಸ್ಮರಣೀಯರೇ. ಹೊಸ ರೀತಿಯ ಚಿಕಿತ್ಸಾ ವಿಧಾನ, ಹೊಸ ಉಪಕರಣಗಳ ಅಭಿವೃದ್ಧಿ, ಲೇಸರ್‌ ಬಳಕೆ… ಮುಂತಾದುವೆಲ್ಲ, ರೋಗಿಗೆ ಸಮಾಧಾನ ತರುವ ವಿಷಯಗಳೇ. ಔಷಧಿಗಳ ಹೊಸ ಆವಿಷ್ಕಾರವೂ ಅಷ್ಟೇ: ಎಲ್ಲರಿಗೂ ಗೊತ್ತಿರುವಂತೆ, ಇವತ್ತು ಎಲ್ಲ ಕಾಯಿಲೆಗಳಿಗೂ ಔಷಧಿಗಳಿವೆ. ಇದೆಲ್ಲಾ ಸಾಧ್ಯವಾಗಿರುವುದು ಬಗೆಬಗೆಯ ಸಂಶೋಧನೆಗಳಿಂದಲೇ. ಇದಕ್ಕೆಲ್ಲ ಕಾರಣರಾದ ವೈದ್ಯವಿಜ್ಞಾನಿಗಳ ಪರಿಚಯ ಇಲ್ಲಿದೆ. ಕ್ರಿಸ್ತಪೂರ್ವ 600ರಲ್ಲಿದ್ದ ಸುಶ್ರುತನಿಂದ ಆರಂಭಿಸಿ, 2013ರಲ್ಲಿ ನಿಧನನಾದ ರಾಬರ್ಟ್‌ ಎಡ್ವರ್ಡ್‌ ವರೆಗಿನ 41 ವೈದ್ಯ ವಿಜ್ಞಾನಿಗಳ ಬದುಕು ಸಾಧನೆಯ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.
ವಿಶ್ವವಿಖ್ಯಾತ ವೈದ್ಯವಿಜ್ಞಾನಿಗಳು, ಲೇ: ಡಾ.ಎಚ್‌.ಡಿ. ಚಂದ್ರಪ್ಪಗೌಡ, ಡಾ. ನಾ. ಸೋಮೇಶ್ವರ, ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್‌, ಬೆಂಗಳೂರು- 1

ತಲೆಮಾರಿನ ಮಾತು- ಕಥೆ
ಕಾದಂಬರಿಗಳಿಗೆ ಇದು ಕಾಲವಲ್ಲ. ಕಾದಂಬರಿಗಳನ್ನು ಓದುವಷ್ಟು ಸಮಯವಾಗಲಿ, ಸಹನೆಯಾಗಲಿ ಓದುಗರಿಗೆ ಇಲ್ಲ ಎಂದು ಅಲ್ಲಲ್ಲಿ ಮಾತಾಡುವುದನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಇಂಥ ಸಂದರ್ಭದಲ್ಲಿಯೇ ರಘು ವೆಂಕಟಾಚಲಯ್ಯ ಅವರ “ಬಿದಿರಿನ ಗಾಳ’ ಕಾದಂಬರಿ ಹೊರಬಂದಿದೆ. ಕಥೆಯೊಂದು ಹೇಗೆ ಕಾದಂಬರಿಯ ಸ್ವರೂಪ ಪಡೆಯಿತು ಎಂಬುದನ್ನು ಲೇಖಕರು ವಿವರಿಸುವುದು ಹೀಗೆ:
“ಬಿದಿರಿನ ಗಾಳ’ ಸಣ್ಣ ಕಥೆಯಾಗಿ ಥ್ರಿಲ್‌ ಕೊಡಲಿ ಎಂಬ ಉದ್ದೇಶದಿಂದ ಅದರ ಎರಡು ಕಂತುಗಳನ್ನು ವಾಟ್ಸಾéಪ್‌ ಮೂಲಕ ಮಿತ್ರ ಬಳಗಕ್ಕೆ ಕಳುಹಿಸಿದೆ. ರೋಚಕತೆ ನಿರ್ಮಿಸಲು ಹೋಗಿ ಅದೇ ಕತೆಯಾಗಿ ಹರಿದು, ಕೊನೆಗೆ ಕಾದಂಬರಿಯಾಗಿ ರೂಪುಗೊಂಡು ನಿಂತುಬಿಟ್ಟಿತು. ಕಂತುಗಳಲ್ಲಿ ಓದಿದ ಗೆಳೆಯರು, ವಾಟ್ಸಾéಪ್‌ನಲ್ಲಿಯೇ ಚರ್ಚೆಗೆ ಬಂದರು. ನಾಳೆ ಏನಾಗುತ್ತದೆ? ಯಾರು, ಯಾರ ವಿರುದ್ಧ ಮಸಲತ್ತು ಮಾಡುತ್ತಾರೆ? ಕಡೆಗೆ ಯಾರು ಗೆಲ್ಲುತ್ತಾರೆ ಎಂದೆಲ್ಲ ಕೇಳತೊಡಗಿದರು. ಈ ಕಥಾವಸ್ತು ಓದುಗರಿಗೆ ಇಷ್ಟವಾಗಿದೆ ಎಂಬುದಕ್ಕೆ ಸಾಕ್ಷಿ ಸಿಕ್ಕಿತು…’

ಈ ಕಾದಂಬರಿ, ಮೂರು ತಲೆಮಾರಿನ ಕಥೆ ಹೇಳುತ್ತದೆ. ಇಲ್ಲಿ ಗ್ರಾಮೀಣ ಬದುಕಿನ ರಮ್ಯ ಚಿತ್ರಣವಿದೆ. ಘೋರ ಚಿತ್ರಣವೂ ಇದೆ. ಸಾಮಾಜಿಕ ಸಂಘರ್ಷದ ಜೊತೆ ಜೊತೆಗೇ ಸಾಮರಸ್ಯದ ಸೊಗಸೂ ಇದೆ. ಹಳ್ಳಿಯಿಂದ ಕ್ರಮೇಣ ದೂರ ಸರಿದ ಬ್ರಾಹ್ಮಣ ಸಮುದಾಯದ ಒಳತೋಟಿ, ತಲ್ಲಣ, ಅಸಹಾಯಕತೆ, ಮಾಟ- ಮಂತ್ರವನ್ನು ನಂಬುವ, ಸಿದ್ಧಿ- ಸಾಧನೆಗಾಗಿ ಹಂಬಲಿಸುವ ಜನರ ಬದುಕಿನ ವಾಸ್ತವ ಚಿತ್ರಣವಿದೆ.
ಬಿದಿರಿನ ಗಾಳ, ಲೇ. ರಘು ವೆಂಕಟಾಚಲಯ್ಯ, ಪ್ರ ಸಮನ್ವಿತಾ ಪ್ರಕಾಶನ, ಬೆಂಗಳೂರು- 85

ಪುರಾಣ ಪಾತ್ರಗಳ ಸ್ವಗತಲಹರಿ
ರಾಮಾಯಣ ಅಂದಾಕ್ಷಣ, ರಾಮ, ಲಕ್ಷ್ಮಣ, ಸೀತೆ, ಭರತ- ಶತ್ರುಘ್ನ, ಆಂಜನೇಯ, ರಾವಣ, ವಿಭೀಷಣ… ಹೆಚ್ಚಾಗಿ ಇವರಷ್ಟೇ ನೆನಪಾಗುವುದು. ಮಹಾಭಾರತ ಅಂದರೆ, ಪಾಂಡವರು, ಕೃಷ್ಣ, ದುರ್ಯೋಧನ, ಕರ್ಣ, ಭೀಷ್ಮ- ದ್ರೋಣರು ಸೇರಿದಂತೆ ಇನ್ನೊಂದೈದಾದರು ಪಾತ್ರಗಳಷ್ಟೇ ಕಣ್ಮುಂದೆ ಬರುತ್ತವೆ.
ಆದರೆ, ಈ ಎರಡೂ ಮಹಾಕಾವ್ಯಗಳಲ್ಲಿ ಮತ್ತಷ್ಟು ಅತಿಮುಖ್ಯ ಪಾತ್ರಗಳಿವೆ. ಇಡೀ ರಾಮಾಯಣಕ್ಕೆ ಅತಿಮುಖ್ಯ ತಿರುವು ಸಿಗಲು ಕಾರಣಳಾಗುವ ಕೈಕೇಯಿ; ಬಂಗಾರದ ಜಿಂಕೆಯಾಗುವ ಮಾರೀಚ, ರಾವಣನೊಂದಿಗೆ ಯುದ್ಧ ಮಾಡುವ ಜಟಾಯು ಪಕ್ಷಿ; ಕೃಷ್ಣನನ್ನು ಕಾಡುವ, ಕಾಯುವ, ಮೋಹಿಸುವ ರಾಧೆ; ಹೆತ್ತ ತಾಯಿಯಾದರೂ ಕೃಷ್ಣನಿಂದ ದೂರವೇ ಉಳಿಯುವ ಯಶೋಧೆ, ಸೋದರಳಿಯನಿಂದಲೇ ಸಾಯುವ ಕಂಸ, ಕಣ್ಣಿದ್ದೂ ಕುರುಡಿಯಂತೆ ಬಾಳುವ ಗಾಂಧಾರಿ, ಮಹಾರಾಜನ ಪತ್ನಿ ಅನ್ನಿಸಿಕೊಂಡರೂ, ಸಂಕಟದಲ್ಲೇ ಬದುಕು ಕಳೆಯುವ ಭಾನುಮತಿ… ಇಂಥ ಪಾತ್ರಗಳ ಅಂತರಂಗದ ಪಿಸುಮಾತು ಏನಿರಬಹುದು? ಈ ಪಾತ್ರಗಳಿಗೂ ಮಾತಾಡುವ ಅವಕಾಶ ಸಿಕ್ಕರೆ, ಅವು ಏನೆಲ್ಲ ಸಂಗತಿಯನ್ನು, ಸಂಭ್ರಮ- ಸಂಕಟಗಳನ್ನು ತೆರೆದಿಡಬಹುದು ಎಂಬ ಕುತೂಹಲಕ್ಕೆ ಉತ್ತರವೆಂಬಂತೆ, “ಅಂತರಂಗ’ ಸಂಕಲನವಿದೆ. ಮೇಲೆ ಹೆಸರಿಸಿದ ಪಾತ್ರಗಳಲ್ಲದೆ, ದೇವಯಾನಿ, ಶಂತನು, ಶರ್ಮಿಷ್ಠೆಯೂ ಸೇರಿದಂತೆ, ಹಲವು ಪಾತ್ರಗಳ ಅಂತರಂಗದ ಪಿಸುಮಾತು ಇಲ್ಲಿ ದಾಖಲಾಗಿದೆ. ಇಲ್ಲಿನ ಕಥನಶೈಲಿ ಅದೆಷ್ಟು ಸಶಕ್ತವಾಗಿದೆಯೆಂದರೆ, ಒಂದೊಂದು ಅಧ್ಯಾಯ ಓದುವಾಗಲೂ, ಆ ಪಾತ್ರವೇ ಕಣ್ಮುಂದೆ ನಿಂತು ಕಥೆ ಹೇಳಿಕೊಂಡಂತೆ ಭಾಸವಾಗುತ್ತದೆ.
ಅಂತರಂಗ, ಲೇ: ಸುರೇಖಾ ಭೀಮಗುಳಿ, ಪ್ರ: ಮಡಿಲು ಪ್ರಕಾಶನ, ಮೈಸೂರು

ಟಾಪ್ ನ್ಯೂಸ್

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.