ಐಪಿಎಲ್‌ನಲ್ಲಿ ಕನ್ನಡಿಗರದ್ದೇ ಹವಾ
Team Udayavani, Feb 3, 2018, 3:20 AM IST
ಶ್ರಮ ಹಾಗೂ ಅದೃಷ್ಟ ಜೊತೆಗಿದ್ದರೆ ಏನುಬೇಕಾದರೂ ಆಗಬಹುದು ಎಂಬ ಮಾತಿದೆ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ಮಾತು. ಈಗೇಕೆ ಈ ಮಾತು ಅಂದರೆ, ಬೆಂಗಳೂರಿನಲ್ಲಿ ನಡೆದ 2018ನೇ ಸಾಲಿನ ವಿಶ್ವದ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಐಪಿಎಲ್ ಹರಾಜಿನಲ್ಲಿ ಇದು ಸಾಬೀತಾಗಿದೆ.
ಒಂದೂ ಅಂತಾರಾಷ್ಟ್ರೀಯ ಪಂದ್ಯ ಆಡದವರು ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿರುವುದು ಎಲ್ಲರನ್ನು ಬೆರಗುಗೊಳಿಸಿದರೆ, ತಾರಾ ಆಟಗಾರರೇ ಕಡಿಮೆ ಮೊತ್ತಕ್ಕೆ ಮಾರಾಟವಾಗಿರುವುದು ಹಲವರಿಗೆ ಬೇಸರ ತರಿಸಿದೆ. ಆದರೆ, ಈ ಎಲ್ಲದರ ನಡುವೆ ನಮ್ಮ ಕರ್ನಾಟಕ ವೀರರು ಕೋಟಿ ಕೋಟಿ ಮೊತ್ತಕ್ಕೆ ಬಿಕರಿಯಾಗಿರುವುದು ರಾಜ್ಯ ಕ್ರಿಕೆಟ್ ಅಂಗಳದಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಕನ್ನಡಿಗರಿಗೆ ಸುಗ್ಗಿ
ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಪ್ರತಿವರ್ಷವೂ ಕೇಳಿಬರುತ್ತಿದ್ದವು. ಅದಕ್ಕೆ ತಾಜಾ ಉದಾಹರಣೆ ಸ್ವತಃ ತವರಿನ ರಾಯಲ್ ಚಾಲೆಂಜರ್ ಬೆಂಗಳೂರು(ಆರ್‌ಸಿಪಿ) ತಂಡದಲ್ಲಿಯೇ ಕರ್ನಾಟಕದ ಒಬ್ಬರು ಅಥವಾ ಇಬ್ಬರು ಆಟಗಾರರಿಗೆ ಸ್ಥಾನ ಸಿಗುತ್ತಿತ್ತು. ಒಂದೊಂದೇ ಆವೃತ್ತಿಗಳು ಉರುಳಿದಂತೆ ಕನ್ನಡಿಗರಿಗೆ ಬೇಡಿಕೆ ಹೆಚ್ಚಾಯಿತು.
ಆರ್‌ಸಿಬಿಯಲ್ಲಿ ಅವಕಾಶ ಸಿಗದಿದ್ದರೂ, ಯಾವ ತಂಡದಲ್ಲಿ ಛಾನ್ಸ್ ಸಿಕ್ಕರೂ ಅದನ್ನು ಕರ್ನಾಟಕದ ಆಟಗಾರರು ಸಮರ್ಥವಾಗಿ ಬಳಸಿಕೊಂಡರು. ಪರಿಣಾಮ ಎಲ್ಲ ತಂಡಗಳ ಕೋಚ್‌ಗಳು ಕರ್ನಾಟಕದ ಆಟಗಾರರ ಕಡೆ ನೋಡುವಂತಾಯಿತು. ಮೊನ್ನೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕರುನಾಡ ಹುಡುಗರು ಒಳ್ಳೆಯ ಮೊತ್ತಕ್ಕೆ “ಸೇಲ್’ ಆಗಿದ್ದಾರೆ.
ಕಳೆದ 10 ವರ್ಷಗಳ ಐಪಿಎಲ್ ಲೀಗ್‌ಗಳಿಗಿಂತ ಈ ಐಪಿಎಲ್‌ನಲ್ಲಿ ಕನ್ನಡಿಗರು ಭರ್ಜರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹಿಂದಿನ ಐಪಿಎಲ್ ಲೀಗ್‌ನಲ್ಲಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದು, ರಾಬಿನ್ ಉತ್ತಪ್ಪ. ಇದು ರಾಜ್ಯದ ಆಟಗಾರನೊಬ್ಬ ಬಿಕರಿಯಾಗಿದ್ದ ಅಧಿಕ ಮೊತ್ತವಾಗಿತ್ತು. ಅವರನ್ನು ಹೊರತು ಪಡಿಸಿ ಯಾರು ಅಷ್ಟೊಂದು ಮೊತ್ತಕ್ಕೆ ಬಿಕರಿಯಾಗಿರಲಿಲ್ಲ. ಕರಣ್ ನಾಯರ್, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್, ಕೆ.ಎಲ್.ರಾಹುಲ್, ಮಾಯಂಕ್ ಅಗರ್ವಾಲ್, ಅಭಿಮಾನ್ಯು ಮಿಥುನ್, ಕೆ.ಸಿ.ಕಾರ್ಯಪ್ಪ… ಅಲ್ಪ ಮೊತ್ತಕ್ಕೆ ಮಾರಾಟವಾಗಿದ್ದರು. ಆದರೆ, 2018ನೇ ಐಪಿಎಲ್ ಲೀಗ್ ಹರಾಜಿನಲ್ಲಿ ಕನ್ನಡಿಗರು ಹರಾಜಾಗಿರುವ ಮೊತ್ತ ಇತರರು ಹುಬ್ಬೇರಿಸುವಂತೆ ಮಾಡಿದೆ.
ಕಿಂಗ್ಸ್‌ಗೆ ಕರುಣ್ ನಾಯರ್
ಟೆಸ್ಟ್ ಕ್ರಿಕೆಟ್‌ನ ತ್ರಿಶತಕ ವೀರ ಕರುಣ್ ನಾಯರ್. ಇತ್ತೀಚಿಗೆ ನಡೆದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಕೂಟದಲ್ಲಿ ನೀಡಿದ ಅಮೋಘ ಪ್ರದರ್ಶನ ನಾಯರ್ ಕೈ ಹಿಡಿದಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 4 ಕೋಟಿ ರೂ. ಹರಾಜಾಗಿದ್ದರು. ಈ ಬಾರಿ 5.60 ಕೋಟಿ ರೂ. ನೀಡಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿಸಿದೆ.
ರಾಜಸ್ಥಾನಕ್ಕೆ ಕೆ.ಗೌತಮ್ ರಾಜ ರಣಜಿ ಟೂರ್ನಿಯಲ್ಲಿ ಉತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ಕೆ.ಗೌತಮ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇವರು ರಾಜಸ್ತಾನ ರಾಯಲ್ಸ್ ತಂಡಕ್ಕೆ 6.20 ಕೋಟಿ ರೂ.ಗೆ ಖರೀದಿಯಾಗಿದ್ದಾರೆ.
ಉಳಿದಂತೆ ಕರ್ನಾಟಕದ ರಣಜಿ ತಂಡದ ನಾಯಕ ವಿನಯ್ ಕುಮಾರ್ 1 ಕೋಟಿ ರೂ.ಗೆ ಕೆಕೆಆರ್, ಮಾಯಂಕ್ ಅಗರವಾಲ್ 1 ಕೋಟಿ ರೂ. ಪಂಜಾಬ್, ಸ್ಟುವರ್ಟ್ ಬಿನ್ನಿ ರಾಜಸ್ಥಾನಕ್ಕೆ 50 ಲಕ್ಷ ರೂ.ಗೆ, ಶ್ರೇಯಸ್ ಗೋಪಾಲ್ ರಾಜಸ್ಥಾನಕ್ಕೆ, ಅನಿರುದ್ಧ ಜೋಶಿ, ಪವನ್ ದೇಶಪಾಂಡೆ ತಲಾ 20 ಲಕ್ಷ ರೂ.ಗೆ ಬೆಂಗಳೂರು ತಂಡದ ಪಾಲಾಗಿದ್ದಾರೆ. ಒಟ್ಟು 11 ಮಂದಿ ಕರ್ನಾಟಕದ ಆಟಗಾರರು ಹರಾಜಿನಲ್ಲಿ ವಿವಿಧ ತಂಡಗಳಿಗೆ 43.30 ಕೋಟಿ ರೂ. ಮೊತ್ತಕ್ಕೆ ಖರೀದಿಯಾಗಿದ್ದಾರೆ.
ಉತ್ತಪ್ಪ ಕೋಲ್ಕತಾಗೆ
ರಾಜ್ಯದ ಸ್ಫೋಟಕ ಬ್ಯಾಟ್ಸಮನ್ ರಾಬಿನ್ ಉತ್ತಪ್ಪ. ಇದುವರೆಗೂ ನಾಲ್ಕು ಐಪಿಎಲ್ ತಂಡಗಳನ್ನು ಪ್ರತಿನಿಧಿಸಿರುವ ಆಟಗಾರ. ಕಳೆದ ಬಾರಿ 5 ಕೋಟಿ ರೂ.ಗೆ ಕೋಲ್ಕತ್ತ ತಂಡದ ಪಾಲಾಗಿದ್ದ ಉತ್ತಪ್ಪ ಈ ಬಾರಿ ಅದೇ ತಂಡಕ್ಕೆ 6.40 ಕೋಟಿ ರೂ.ಗೆ ಹರಾಜಾಗಿದ್ದಾರೆ.
ಹೈದರಾಬಾದ್‌ಗೆ ಪಾಂಡೆ
ಐಪಿಎಲ್ ಇತಿಹಾಸದಲ್ಲಿ ಮೊಟ್ಟ ಮೊದಲ ಶತಕ ಬಾರಿಸಿದ ದೇಶದ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಾತ್ರರಾದವರು ಕನ್ನಡಿಗ ಮನೀಷ್ ಪಾಂಡೆ. ಕಳೆದ 10 ವರ್ಷದಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್, ಕೋಲ್ಕತ ನೈಟ್ ರೈಡರ್ ಪರ ಆಡಿದ್ದಾರೆ. ಆದರೆ ಇಷ್ಟು ವರ್ಷ ಪಾಂಡೆಗೆ ಸಿಕ್ಕಿದ್ದು, ಅಲ್ಪ ಮೊತ್ತ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಬರೋಬ್ಬರಿ 11 ಕೋಟಿ ರೂ.ಗೆ ಹೈದರಾಬಾದ್ ತಂಡಕ್ಕೆ ಹರಾಜಾಗಿದ್ದಾರೆ.
ಪಂಜಾಬ್‌ಗ ರಾಹುಲ್ ಕಿಂಗ್
ಕೆ.ಎಲ್.ರಾಹುಲ್ ರಾಜ್ಯ ಕಂಡ ಉದಯನ್ಮೋಖ ಆಟಗಾರ. ಕಳೆದ ಸಾಲಿನಲ್ಲಿ ಬೆಂಗಳೂರು ತಂಡದಲ್ಲಿ ಆಡುತ್ತಿದ್ದ ಇವರು ಖರೀದಿಯಾಗಿದ್ದು ಮಾತ್ರ 1 ಕೋಟಿ ರೂ.ಗೆ. ಆದರೆ, ಒಂದು ವರ್ಷದಲ್ಲಿ ರಾಹುಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು, ಜತೆಗೆ ತಾತ್ಕಾಲಿಕ ಕೀಪರ್ ಕೂಡ ಆಗಿರುವುದರಿಂದ ಪ್ರೀತಿ ಜಿಂಟಾ ಮಾಲಿಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಣ್ಣು ಹಾಕಿತ್ತು. ಇದೀಗ ಭರ್ಜರಿ 11 ಕೋಟಿ ರೂ. ಗೆ ರಾಹುಲ್ ಅವರನ್ನು ಖರೀದಿಸಿ ಅಚ್ಚರಿ ನೀಡಿದೆ.
ದೇವಲಾಪುರ ಮಹದೇವ ಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.