ಗುಡ್ಡದ ನೀರು


Team Udayavani, Jun 3, 2017, 1:39 PM IST

15.jpg

ಸುಡು ಬೇಸಿಗೆಯಲ್ಲಿ ಹನಿ ನೀರು ಬೇಕೆಂದರೂ ನೂರಾರು ಅಡಿ ಆಳದಲ್ಲಿ ಕೊಳೆವೆಬಾವಿ ಕೊರೆಯಬೇಕು.ಇಲ್ಲವೇ ಕನಿಷ್ಠ 5-6 ಕಿಮೀ ದೂರದಿಂದ ಪೈಪ್‌ಲೈನ ಮೂಲಕ ನೀರು ತರುವ ಭಗೀರಥ ಪ್ರಯತ್ನ ಮಾಡಬೇಕು. ಈ ಎರಡು ಸಾಧ್ಯತೆಗಳು ಇಲ್ಲದೇ ಹೋದರೆ ಟ್ಯಾಂಕರ್‌ನ ನೀರೇ ಗತಿ.

ಹನಿ ನೀರು ಬೇಕೆಂದರೂ ಕೆಳಗಿನ ಪೈಪ್‌ಲೈನ್‌ ಮೂಲಕ ಮೇಲಕ್ಕೆ ನೀರು ಎತ್ತಿಸಬೇಕಾದ ಅನಿವಾರ್ಯವಿರುವ ಮುಂಡರಗಿಯ ಕಪ್ಪತ್ತಗುಡ್ಡದ ಗ್ವಾಲಗೇರಿಮಠದಲ್ಲಿ ಈಗ ಸಮೃದ್ಧ ನೀರು. ಗುಡ್ಡದ ಮೇಲೆ ಮಳೆಕೊಯ್ಲು ಮಾಡಿದ್ದರಿಂದ ವರ್ಷಪೂರ್ತಿ ಕುಡಿಯಲು ನೀರು ಸಿಗುತ್ತಿದೆ.  ಇದಕ್ಕಾಗಿ ಹೊಂಡವನ್ನು ಕಟ್ಟಲಾಗಿದೆ. 

 ಮೊದಲು ಎಲ್ಲಿ ಬೇಕೆಂದರೂ ಕಪ್ಪತ್ತಗುಡ್ಡದಲ್ಲಿ ನೀರು ಸಿಗುವ ಝರಿ,ಹಳ್ಳಗಳು,ಹೊಂಡಗಳು ಇದ್ದವು. ಗುಡ್ಡಕ್ಕೆ ಬರುವ ಭಕ್ತರಿಗೆ ನೀರು ಒದಗಿಸಿ ದಾಹವನ್ನು ತಣಿಸುತ್ತಿದ್ದವು. ಆದರೆ ಮಳೆಗಾಲವು ಕಡಿಮೆಯಾಗಿ ಬರಗಾಲದ ಛಾಯೆಯೂ ಹೆಚ್ಚಾದಂತೆ ನೀರಿಗೆ ಪರದಾಡುವ ಸ್ಥಿತಿ  ಕಪ್ಪತ್ತಗುಡ್ಡದಲ್ಲಿ ಕಾಣಿಸತೊಡಗಿತು. ನೀರಿನ ಕೊರತೆ ನೀಗಿಸಲು ಗ್ವಾಲಗೇರಿಮಠದ ಸಿದ್ದಲಿಂಗಯ್ಯನವರು ಕಪ್ಪತ್ತಗುಡ್ಡದ ಮೇಲಿಂದ ಹರಿದು ಬರುವ ನೀರನ್ನು ಸಂಗ್ರಸಲು ಕೊರಕಲಿಗೆ ಅಡ್ಡಲಾಗಿ ಗೋಡೆ ಕಟ್ಟಿ ಹೊಂಡವನ್ನು ನಿರ್ಮಿಸಿದರು.

 ಮಳೆಗಾಲದಲ್ಲಿ ಕಪ್ಪತ್ತಗುಡ್ಡದ ಮೇಲಿಂದ ಹರಿದು ಬರುವ ನೀರು ಕೊರಕಲಿನಲ್ಲಿ ಹರಿದು ಹೋಗಿ ಕೆಳಗಿನ ಸಣ್ಣ ಹಳ್ಳಕ್ಕೆ ಸೇರುತ್ತಿತ್ತು. ಆದರೆ ಬೇಸಿಗೆ ಕಾಲದಲ್ಲಿ ನೀರು ಬೇಕೆಂದರೆ ಗುಡ್ಡದ ಕೆಳಗಿನ ಕೊಳವೆ ಬಾವಿಯಿಂದ ನೀರು ತರುವ ಅನಿವಾರ್ಯತೆ.

ಈ ಹೊಂಡವು ಇಪ್ಪತ್ತು ಅಡಿ ಆಳದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾದರೆ ವರ್ಷವೆಲ್ಲಾ ನೀರು ಸಿಗುತ್ತದೆ. ಗ್ವಾಲಗೇರಿಮಠದಲ್ಲಿ ಮೂವತ್ತು ಜನ ಸದಸ್ಯರಿರುವ ಕುಟುಂಬವಿದೆ. ಇವರಿಗೆ ವರ್ಷ ಪೂರ್ತಿ ನೀರು ಸಿಗುತ್ತದೆ.  ಅಗತ್ಯ ಬಿದ್ದರೆ ಗುಡ್ಡದ ಕೆಳಗೆ ಕೊಳವೆ ಬಾವಿ ಇದೆ.  ಇದರಿಂದ ವರ್ಷ ಪೂರ್ತಿ ಯೋಗ್ಯವಾದ, ಶುದ್ದ ನೀರು ಕುಡಿಯಲು ಸಿಗುತ್ತದೆ.ನೀರಿಗಾಗಿ ಸರಕಾರದ ಕಡೆಗೆ ಹೊರಳಿ ನೋಡುವುದು ತಪ್ಪಲಿದೆ.

ಹು.ಬಾ.ವಡ್ಡಟ್ಟಿ.

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.