ಯಕ್ಷ ಕಾವ್ಯ ಹಾಡಿತು…ಆಜೇರು ಹುಡುಗಿಯು ಅಜೇಯ ಭಾಗವತಿಕೆ


Team Udayavani, May 20, 2017, 2:10 PM IST

555.jpg

ಸೌಮ್ಯ ಸ್ವಭಾವದ ಕಾವ್ಯಶ್ರೀ, ರಂಗಸ್ಥಳದ ವೇದಿಕೆ ಏರಿದಳೆಂದರೆ ಕಥಾಹಂದರದಲ್ಲಿ ಲೀನಳಾಗಿಬಿಡುತ್ತಾಳೆ. 400ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಕಾವ್ಯಶ್ರೀ ಹಾಡುಗಾರಿಕೆ ಮಾಡಿದ್ದಾಳೆ…

ಯಕ್ಷಗಾನದಲ್ಲಿ ಭಾಗವತಿಕೆ ಪ್ರಮುಖ ಭಾಗ. ಇಲ್ಲಿ ಸುಶ್ರಾವ್ಯವಾಗಿ ಹಾಡುವಿಕೆಯ ಮೇಲೆ ಯಕ್ಷಗಾನ, ಪ್ರಸಂಗದ ಯಶಸ್ಸು ನಿಂತಿರುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಅಂದರೆ ಅದರಲ್ಲಿ ಬಹುತೇಕ ಪುರುಷರೇ ಎನ್ನಬಹುದು. ಇಲ್ಲೊಬ್ಬಳು ಹುಡುಗಿ ಇದ್ದಾಳೆ, ಕಾವ್ಯಶ್ರೀ ನಾಯಕ್‌ ಆಜೇರು. ಈಕೆಯ ಭಾಗವತಿಕೆಯನ್ನು ನೀವೂ ಒಮ್ಮೆ ಕೇಳಬೇಕು…

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆಜೇರು ಎಂಬ ಕುಗ್ರಾಮದ ಸಾಮಾನ್ಯ ಕೃಷಿಕ ಕುಟುಂಬದ ಶ್ರೀಪತಿ ನಾಯಕ್‌ ಮತ್ತು ಉಮಾ ನಾಯಕ್‌ ದಂಪತಿಯ ಜೇಷ್ಠ ಪುತ್ರಿ ಈಕೆ. ತಂದೆಯವರು ಮಾಂಬಾಡಿ ಸುಬ್ರಮಣ್ಯ ಭಟ್‌ ಅವರಲ್ಲಿ ಭಾಗವತಿಕೆ ಕಲಿಯುತ್ತಿದ್ದಾಗ ಪುಟಾಣಿ ಕಾವ್ಯಶ್ರೀ ಕುತೂಹಲಕ್ಕಾಗಿ ಅವರೊಂದಿಗೆ ಹೋಗುತ್ತಿದ್ದಳು. ಭಾಗವತಿಗೆ ಕಲಿಕೆಗಾಗಿ ಬಹಳಷ್ಟು ಮಕ್ಕಳು ಮಾಂಬಾಡಿಯವರಲ್ಲಿಗೆ ಬಂದರೂ ಈಕೆ ಮನೆಯ ಹೊರಗಡೆಯೇ ಕುಳಿತು ಹಾಡುಗಳನ್ನು ಕೇಳಿಸಿಕೊಳ್ಳುತ್ತಾ ತನ್ನಷ್ಟಕ್ಕೆ ತಾನೇ ಅವುಗಳನ್ನು ಗುನುಗುತ್ತಿದ್ದಳು. ಇದನ್ನು ಗಮನಿಸಿದ ಮಾಂಬಾಡಿಯವರು “ನೀನೇಕೆ ಒಮ್ಮೆ ಹಾಡಬಾರದು?’ ಎಂದು ತಮಾಷೆಗೆ ಹೇಳಿದ್ದೇ, ಈಕೆ 5ನೇ ತರಗತಿಗೇ ಭಾಗವತಿಗೆ ಕಲಿಯಲು ಪ್ರೇರಣೆಯಾಯಿತು.

ಯಕ್ಷಗಾನದಲ್ಲಿ ಪ್ರೇಕ್ಷಕರು ಪಾತ್ರಧಾರಿಯನ್ನು ಹೇಗೆ ಗಮನಿಸುತ್ತಾರೋ ಅದೇ ರೀತಿ ಚಂಡೆ, ಮದ್ದಲೆ ವಾದಕರನ್ನು ಮತ್ತು ಭಾಗವತರನ್ನು ವಿಶೇಷವಾಗಿ ಗಮನಿಸುತ್ತಿರುತ್ತಾರೆ. ಭಾಗವತರು ಪ್ರತೀಕ್ಷಣವೂ ಅರ್ಥಗಾರರ ಅಥವಾ ಪಾತ್ರಧಾರಿಗಳ ಸಂಭಾಷಣೆಯೆಡೆಗೆ ಗಮನ ನೀಡುತ್ತಲೇ ಇರಬೇಕು. ಇಲ್ಲವಾದಲ್ಲಿ ಅರ್ಥಗಾರಿಕೆ ಹಾಗೂ ಹಾಡು ಒಂದಕ್ಕೊಂದು ಸಂಬಂಧವಿಲ್ಲವಾಗಿ ಇಡೀ ಪ್ರಸಂಗವೇ ನೀರಸವಾಗಬಹುದು. ಅಂಥ ಹಾದಿಯಲ್ಲಿ ಕಾವ್ಯಶ್ರೀ ದಿಟ್ಟವಾಗಿ ಸಾಗುತ್ತಿದ್ದಾಳೆ.

400ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಕಾವ್ಯಶ್ರೀ ಹಾಡುಗಾರಿಕೆ ಮಾಡಿದ್ದಾಳೆ. ಭಾಗವತಿಗೆಯ ಕ್ಷೇತ್ರವನ್ನು ಆಯ್ದುಕೊಂಡು ಯಕ್ಷಗಾನದಲ್ಲಿ ಹೆಸರು ಮಾಡಿದವರು ಕೆಲವೇ ಕೆಲವರು. ನವರಸಗಳಿಗೆ ಜೀವತುಂಬಿ ಹಾಡುವವರಷ್ಟೇ ಇಲ್ಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಲು ಸಾಧ್ಯ. 

ಸೌಮ್ಯ ಸ್ವಭಾವದ ಕಾವ್ಯಶ್ರೀ, ರಂಗಸ್ಥಳದ ವೇದಿಕೆ ಏರಿದಳೆಂದರೆ ಕಥಾಹಂದರದಲ್ಲಿ ಲೀನಳಾಗಿಬಿಡುತ್ತಾಳೆ. ರೌದ್ರ, ಭೀಭತ್ಸ, ಶಾಂತ, ಶೃಂಗಾರ, ಹಾಸ್ಯ, ಕರುಣ, ವೀರ, ಭಯಾನಕ, ಅದ್ಭುತ ರಸಗಳನ್ನು ಸಂದರ್ಭಕನುಗುಣವಾಗಿ, ಆಕರ್ಷಕವಾಗಿ ಪ್ರಸ್ತುತಪಡಿಸುತ್ತಾಳೆ. ಹಗಲು ಶಾಲೆಯಲ್ಲಿ ಕಲಿಕೆ, ರಾತ್ರಿ ಯಕ್ಷಗಾನ ಕಲಾ ಸೇವೆಯನ್ನು ಮಾಡಿಕೊಂಡು ಬಂದಿರುವ ಈಕೆ ಸ್ನಾತಕೋತ್ತರ ಪದವಿಯನ್ನು ಪಡೆದಾಕೆ. ಉಪನ್ಯಾಸಕಿಯಾಗಿ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗದಲ್ಲಿ ತೊಡಗುವ ಬದಲು, ಕಲೆಯನ್ನು ಅಪ್ಪಿಕೊಂಡು ಯಶಸ್ಸು ಕಂಡಿದ್ದಾಳೆ. ತೆಂಕು ತಿಟ್ಟಿನಲ್ಲಿ ಈಕೆ ಪ್ರವೀಣೆ.

ರಾತ್ರಿ ಇಡೀ ನಿದ್ದೆ ಬಿಟ್ಟು ಯಕ್ಷಗಾನದಲ್ಲಿ ತೊಡಗುವುದು, ಹಗಲಲ್ಲಿ ಸ್ವಲ್ಪ ನಿದ್ದೆ, ಮತ್ತೆ ತಾಳಮದ್ದಲೆ, ಮತ್ತೆ ಪುನಃ ರಾತ್ರಿಯ ಪ್ರದರ್ಶನಕ್ಕೆ ತಯಾರಾಗುವ ಈಕೆಯ ಛಾತಿ ಅಭಿನಂದನಾರ್ಹ. ಅಂದಹಾಗೆ, ಈಕೆ ಭಾಷಾ ಶುದ್ಧತೆಯಿಂದಲೂ ಸೆಳೆಯವ ಹುಡುಗಿ. ಮೂಲ್ಕಿಯ ಭವ್ಯಶ್ರೀ ಮಕ್ಕಳ ಮೇಳ, ಸುಳ್ಯದ ಮಕ್ಕಳ ಮೇಳ, ವಿಟ್ಲದ ಮಾಣಿಲ ಮೇಳದಲ್ಲಿ ಪ್ರದರ್ಶನ ಕೊಟ್ಟಿರುವ ಕಾವ್ಯಶ್ರೀ, ಕಟೀಲು, ಸುಂಕದಕಟ್ಟೆ, ಪೆರ್ಡೂರು ಮತ್ತು ಬಾಚುಕೆರೆ ಮೇಳಗಳಲ್ಲೂ ಭಾಗವತಿಕೆಯಲ್ಲಿ ಪಾಲ್ಗೊಂಡಿದ್ದಾಳೆ.
 
ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.