ತಿರುಪತಿ ಹಾದಿಯಲ್ಲೊಬ್ಬ ಕೆಂಗಲ್ ಹನುಮ
(ಪ್ರದಕ್ಷಿಣೆ- ಕೆಂಗಲ್ ಆಂಜನೇಯ)
Team Udayavani, Jul 6, 2019, 12:58 PM IST
ಆಂಜನೇಯನ ಕತೆ ಕೇಳುವುದೇ, ಒಂದು ರೋಮಾಂಚನ. ಇದೂ ಒಬ್ಬ ವಿಶೇಷ ಆಂಜ ನೇ ಯನ ದೇಗುಲ. ಕೆಂಪು ಕಲ್ಲಿನ ಮೇಲೆ ಉದ್ಭ ವ ವಾದ ಆಂಜನೇಯ ಇಲ್ಲಿದ್ದಾನೆ. ಆದ ಕಾರಣ, “ಕೆಂಗಲ್ಲು ಆಂಜ ನೇಯ’ ಅಂತಲೇ ಕರೆಯಲ್ಪಟ್ಟ. ಈತನಿಗೊಂದು ಪುರಾಣ ಕತೆಯೂ ಇದೆ. ಹಿಂದೆ ವ್ಯಾಸ ಮಹ ರ್ಷಿಗಳು ಈ ಕಡೆ ಸಂಚರಿಸುತ್ತಿದ್ದಾಗ, ಕೆಂಪು ಕಲ್ಲಿನ ಬಂಡೆಯನ್ನು ಕಂಡು ವಿಸ್ಮಿತರಾದರಂತೆ. ಬಂಡೆಯ ಮೇಲೆ ಆಂಜನೇಯನ ಆಕಾರವನ್ನು ಊಹಿಸಿದ್ದೇ, ಆಂಜನೇಯ ಬಂಡೆಯ ಮೇಲೆ ಮೂಡಿ ಬಂದು ವ್ಯಾಸರ ಬಯಕೆಯನ್ನು ತೀರಿಸಿದ ಎಂಬ ಪ್ರತೀತಿ ಇದೆ. ಹೊಯ್ಸಳರ ಆಳ್ವಿಕೆಯಲ್ಲಿ ಇಲ್ಲಿ ಸಣ್ಣ ಗುಡಿಯನ್ನು ಕಟ್ಟಿಸಲಾ ಗಿ ತ್ತು.
ನಿಷ್ಠೆಯಿಂದ ಸಲ್ಲಿಸುವ ಪ್ರಾರ್ಥನೆಗೆ ರಾಮನ ಭಂಟ ಒಲೆಯುತ್ತಾನೆ ಎಂಬ ನಂಬಿಕೆ ಇಲ್ಲಿ ನ ಸುತ್ತಮುತ್ತಲ ಜನ ರಲ್ಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ರಾಮನಗರ ಜಿಲ್ಲೆಯ ಕೆಲ ಗ್ರಾಮಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಂತರ ಮನೆಗೆ ತೆರಳುವ ಮುನ್ನ ಕೆಂಗಲ್‌ಗೆ ಆಗಮಿಸಿ, ಅಲ್ಲೇ ಸ್ನಾನಾದಿಗಳನ್ನೆಲ್ಲ ಪೂರೈಸಿ, ಲಡ್ಡು ಪ್ರಸಾದವನ್ನು ನೈವೇದ್ಯಕ್ಕಿಟ್ಟು ಆಂಜನೇಯನನ್ನು ಆರಾಧಿಸುವುದು ವಾಡಿಕೆ. ಇಲ್ಲಿ ನಿತ್ಯವೂ ನೂರಾರು ತಿಮ್ಮಪ್ಪನ ಭಕ್ತರು ಕಾಣಸಿಗುತ್ತಾರೆ. ಕೆಲ ಕುಟುಂಬಗಳು ತಿರುಪತಿ ಯಾತ್ರೆಗೆ ಮುನ್ನ ಇಲ್ಲಿಗೆ ಭೇಟಿ ಕೊಟ್ಟು ನಿವೇದಿಸಿಕೊಂಡ ನಂತರವಷ್ಟೇ ಪ್ರಯಾಣ ಬೆಳೆಸುವುದೂ ವಾಡಿಕೆ.
ಅಲ್ಲದೆ, ಮದುವೆಯಂಥ ಶುಭ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ನೆರೆವೇರಿಸಿದರೆ ದಂಪತಿಗಳು ಪುಣ್ಯವಂತರಾಗುತ್ತಾರೆ ಎಂಬ ನಂಬಿಕೆಯೂ ಇದೆ. ವಾರ್ಷಿಕ ನಡೆಯುವ ಇಲ್ಲಿನ ಜಾತ್ರೆ ಯಲ್ಲಿ ನೂರಾರು ರಾಸು ಗಳ ಪ್ರದರ್ಶನ ಗಮನ ಸೆಳೆಯುವಂಥದ್ದು.
ದರುಶನಕೆ ದಾರಿ…
ಕೆಂಗಲ್ ಆಂಜನೇಯ ಸ್ವಾಮಿ ದೇಗುಲವು, ರಾಮನಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಿಗು ತ್ತದೆ.
ಹನುಮಂತಯ್ಯ ಅವರ ಭಕ್ತಿ
ಚನ್ನಪಟ್ಟಣ ತಾಲೂಕಿನ ಸಂಜಾತರಾದ, ವಿಧಾನ ಸೌಧ ನಿರ್ಮಾ ತೃ ಹನುಮಂತಯ್ಯ ಅವರ ಮನೆಯ ದೇವರು ಕೂಡ ಕೆಂಗಲ್ ಆಂಜನೇಯ. ಹನುಮಂತಯ್ಯ ಅವರ ತಂದೆಯವರ ಆರಾಧ್ಯ ದೈವ ಈ ಆಂಜನೇಯ. ಹೀಗಾಗಿಯೇ ಅವರು ತಮ್ಮ ಮಗನಿಗೆ ಕೆಂಗಲ್ ಹನುಮಂತಯ್ಯ ಎಂದೇ ನಾಮಕರಣ ಮಾಡಿದರು ಎಂಬು ದನ್ನು ಇಲ್ಲಿ ಸ್ಮರಿಸಬಹುದು.
ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.