ಮತ್ತೆ ಭಾರತ ತಂಡದ ಕದ ಬಡಿಯುತ್ತಿರುವ ಕೆ.ಎಲ್.ರಾಹುಲ್
Team Udayavani, Oct 5, 2019, 3:02 AM IST
ಕೆ.ಎಲ್.ರಾಹುಲ್ ಕೆಲವು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಾಗ ಅವರು ಇಷ್ಟೆಲ್ಲ ಎತ್ತರಕ್ಕೆ ಬೆಳೆಯುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆರಂಭದಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಖಾಯಂ ಆರಂಭಿಕರಾಗಿ ಬೆಳೆದ ಅವರು ಅದ್ಭುತ ಬ್ಯಾಟಿಂಗನ್ನೂ ಮಾಡಿದ್ದರು. ಮುಂದೆ ಐಪಿಎಲ್‌ನಲ್ಲಿ ಆಡಿ ಟಿ20, ಏಕದಿನ ತಂಡಕ್ಕೂ ಸರಿಯಾದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ತಂಡದಲ್ಲಿ ಅವರ ಸ್ಥಾನ ಅತ್ಯಂತ ಬಲವಾಗಿತ್ತು.
ಅಷ್ಟರಲ್ಲಿ ಎಡವಟ್ಟಾಯಿತು. ಈ ವರ್ಷ ಮಧ್ಯಭಾಗದಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಹಾರ್ದಿಕ್ ಪಾಂಡ್ಯ ನೀಡಿದ ಕೆಲವು ಹೇಳಿಕೆಗಳು ರಾಹುಲ್‌ರಿಗೆ ಪಜೀತಿ ತಂದೊಡ್ಡಿ ಕೆಲವು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೊಳಗಾದರು. ಅಂತೂ ಇಂತೂ ಹೊರಬರುವಾಗ ಅವರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕಡೆಗೆ ಏಕದಿನ ವಿಶ್ವಕಪ್‌ಗೆ ಸ್ಥಾನ ಪಡೆದರು. ಅಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮಿಂಚಿದ್ದೂ ಮಾತ್ರವಲ್ಲ, ಹಳೆಯ ನೋವಿನಿಂದ ಹೊರಬಂದರು.
ದುರಾದೃಷ್ಟ, ಮುಂದೆ ಅವರು ವಿಂಡೀಸ್ ಪ್ರವಾಸದಲ್ಲಿ ಮಿಂಚಲೇ ಇಲ್ಲ. ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಕಡೆಗೆ ರಾಜ್ಯ ವಿಜಯ್ ಹಜಾರೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಲ್ಲಿ ಮಿಂಚುವುದು ಅವರಿಗೆ ಅನಿವಾರ್ಯ. ಅದನ್ನು ಆಡಿದ ಎರಡನೆ ಪಂದ್ಯದಲ್ಲಿ ಸಾಬೀತುಮಾಡಿದ್ದಾರೆ. 122 ಎಸೆತದಲ್ಲಿ 131 ರನ್ ಚಚ್ಚಿದ್ದಾರೆ. ಅಲ್ಲಿಗೆ ಅವರು ಮತ್ತೆ ರಾಷ್ಟ್ರೀಯ ತಂಡದ ಕದ ಬಡಿಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.