ಬಣ್ಣದ ಗೌಜಿಗನ ಹಕ್ಕಿ

ಹಕ್ಕಿ ಸಾಲು : ಹಾರುವ ಹಕ್ಕಿಗೆ ಇಲ್ಲಿ ಮನೆ...

Team Udayavani, Apr 27, 2019, 6:00 AM IST

Bahu-Hakki-726

ಕುರುಚಲು ಕಾಡು, ಭತ್ತದ ಗದ್ದೆ ಅಥವಾ ನವಣೆ ಬೆಳೆಯಿರುವ ಜಾಗದಲ್ಲಿ ಈ ಹಕ್ಕಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೋಡಿದ ತಕ್ಷಣ, ಊರ ಕೋಳಿಯಂತೆ ಕಾಣುವ ಇದು, ವಿಶಿಷ್ಟ ಕೂಗಿನ ಮೂಲಕವೇ ಸಂಗಾತಿಯನ್ನು ಹುಡುಕಿಕೊಳ್ಳುತ್ತದೆ.

ಈ ಹಕ್ಕಿಯ ಸ್ವಭಾವ, ಬಣ್ಣ ಆಧರಿಸಿಯೇ ಬಣ್ಣದ ಕಿರುಕೋಳಿ, ಕಾಡು ಕಿರುಕೋಳಿ ಅಂತೆಲ್ಲ ಕರೆಯುವುದು. ಜಗತ್ತಿನಲ್ಲಿ ಇಂಥದೇ ಆಕಾರ, ಬಣ್ಣ , ಮೈಮೇಲಿನ ಚಿತ್ತಾರವನ್ನು ಹೋಲುವ ಸುಮಾರು 42 ಭಿನ್ನ ಹಕ್ಕಿಗಳನ್ನು ಗುರುತಿಸಲಾಗಿದೆ. ಇದು ಉಷ್ಣ ಪ್ರದೇಶದ ಹಕ್ಕಿ ಅಥವಾ ಕೋಳಿ.

ಈ ಗೌಜಿಗನ ಹಕ್ಕಿಯ ಕಾಲಿನ ಹಿಂಭಾಗದ ಉಗುರು ಆಹಾರ ಹುಡುಕಲು ನೆಲವನ್ನು ಕೆದಕುವುದಕ್ಕೆ ಸಹಾಯಕವಾಗುತ್ತದೆ. ಅಲ್ಲಿರುವ ಚಿಕ್ಕ ಕ್ರಿಮಿ, ಅವುಗಳ ಮೊಟ್ಟೆ, ಹುಲ್ಲು, ಬಿದಿರು ಅಕ್ಕಿ, ಭತ್ತದ ಕಾಳು, ಭತ್ತದ ಗದ್ದೆಯಲ್ಲಿ ಬಿದ್ದಿರುವ ಕಾಳನ್ನು ಆರಿಸಿ ತಿನ್ನುತ್ತದೆ. ಇದು ಗಾಬರಿ ಸ್ವಭಾವದ ಹಕ್ಕಿ. ತುಂಬಾ ಗಾಬರಿಯಾದಾಗ ಮಾತ್ರ ಕಷ್ಟಪಟ್ಟು ಹಾರುತ್ತದೆ. ಗುಡ್ಡ, ಕಲ್ಲು ಬಂಡೆಗಳ ತುದಿ, ಚಿಕ್ಕ ಮತ್ತು ದೊಡ್ಡ ಮರದ ಮೇಲೆ ಕುಳಿತು ಮುಂಜಾನೆ, ಮಧ್ಯಾಹ್ನ, ಸಾಯಂಕಾಲ- ಏರು ದನಿಯಲ್ಲಿ ಕೂಗುತ್ತದೆ.

ಇಂಗ್ಲಿಷ್‌ನಲ್ಲಿ ಪೇಂಟೆಡ್‌ ಫ್ರಂಕಲಿನ್‌ ಅಂತ ಕರೆಯುವ ಈ ಹಕ್ಕಿಯನ್ನು ಕನ್ನಡದಲ್ಲಿ ಗೌಜಿಗನ ಹಕ್ಕಿ, ಚಿಟ್ಟು ಕೋಳಿ, ಬಟೀರ ಎಂದೂ ಕರೆಯುವರು. ಮೋಟು ಬಾಲ, ಚಿಕ್ಕ ಕಾಲು ಇರುವುದರಿಂದ ಕೋಳಿಮರಿಯ ಹೋಲಿಕೆ ಸಿಗುತ್ತದೆ. ಇದರ ರೆಕ್ಕೆಯ ಮೇಲೆ ಬಣ್ಣದ ಚಿತ್ತಾರವನ್ನು ಸ್ಪಷ್ಟವಾಗಿ ಬರೆದಂತೆ ಇರುವುದು. ಈ ಹಕ್ಕಿ ದೊಡ್ಡ ಕಾಡಿನಲ್ಲಿ ವಾಸಿಸುವುದು ಕಡಿಮೆ. ಚಿಕ್ಕ ಕಾಡು ಹೆಚ್ಚು ಪ್ರಿಯ. ಕುರುಚಲು ಕಾಡು, ಬಿದಿರು ಮೆಳೆ, ಇಲ್ಲವೇ ಭತ್ತ, ನವಣೆಯಂಥ ಬೆಳೆ ಬೆಳೆಯುವ ಸುತ್ತಮುತ್ತಲ ಗಿಡ ಗಂಟಿಯ ಮಧ್ಯೆ ಇದನ್ನು ಹೇರಳವಾಗಿ ಕಾಣಬಹುದು. ಊರ ಕೋಳಿಯ ಹೋಲಿಕೆ ಇರುವ ಈ ಹಕ್ಕಿಯನ್ನು ಮಾಂಸಕ್ಕಾಗಿ ಬಳಸುತ್ತಾರೆ.

ಗಂಡು ಹಕ್ಕಿಯ ಬಣ್ಣ ಕಡುಗಪ್ಪು. ಹೆಣ್ಣು ಹಕ್ಕಿ ತಿಳಿ ಕಂದು ಮತ್ತು ಅಚ್ಚ ಕಂದು ಬಣ್ಣದ ಚಿತ್ತಾರದಿಂದ ಕೂಡಿರುತ್ತದೆ. ನೆತ್ತಿಯಲ್ಲಿ ಕಪ್ಪು ಕೂದಲಿಂದ ಕೂಡಿರುತ್ತದೆ. ಕಣ್ಣಿನ ಸುತ್ತ ಗರಿಗಳಿಲ್ಲದೇ ಬೋಳಾದ ಚರ್ಮ ಉಬ್ಬಿದಂತೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಕಣ್ಣಿನ ಸುತ್ತ ಇರುವ ಬಿಳಿ ಛಾಯೆಯ ಕೆನೆಬಣ್ಣದ ಚರ್ಮ ಸ್ಪಷ್ಟವಾಗಿ ಕಾಣುವುದು.

ಮಳೆಗಾಲ ಆರಂಭದ ಸಮಯದಲ್ಲಿ ಇದರ ಪ್ರಣಯ ಶುರುವಾಗುತ್ತದೆ. ಕೂಗಿನ ಮೂಲಕವೇ ಸಂಗಾತಿಯನ್ನು ಆರಿಸಿಕೊಳ್ಳುವುದು ಈ ಹಕ್ಕಿಯ ವಿಶೇಷ. ಚಿಕ್‌-ಚಿಕ್‌-ಕೀಕ್‌-ಕ್ರಿಕ್‌ ಎಂದು ಕ್ಕೆಕ್ಕಿಕ್ಕಿಕ್ಕೀ ನಾಲ್ಕು ಸಲ ಕೂಗುತ್ತದೆ.

ಜೂನ್‌ನಿಂದ ಸೆಪ್ಟೆಂಬರ್‌, ಇದು ಮರಿಮಾಡುವ ಸಮಯ. ಇದರ ಗೂಡು ಕಪ್ಪು ಗೌಜಿಗ ಹಕ್ಕಿಯ ಗೂಡು ಮತ್ತು ಕೂಗನ್ನು ತುಂಬಾ ಹೋಲುತ್ತದೆ. ಭತ್ತದ ಗದ್ದೆಯ ಸಮೀಪದ ಪೊದೆ, ಇಲ್ಲವೆ ಹುಲ್ಲು ಹಾಗೂ ಕಲ್ಲು ಸಂಧಿಗಳನ್ನು ಹುಡುಕಿ ಅಲ್ಲೇ ಗೂಡು ಕಟ್ಟುತ್ತದೆ. ರೈತರ ಬೆಳೆಗೆ ಹಾನಿ ಮೂಡುವ ಕೀಟಗಳನ್ನು ತಿನ್ನುವುದರಿಂದ ಬೆಳೆಯ ರೋಗ ಬಾಧೆಯಿಂದ ಮುಕ್ತ ಗೊಳಿಸುವಲ್ಲಿ ಈ ಪಕ್ಷಿಯ ಪಾತ್ರ ಬಹಳ ದೊಡ್ಡದು.

ಹಾವು, ನರಿ, ನಾಯಿ ಇದರ ಮೊಟ್ಟೆಯನ್ನು ಕಬಳಿಸುವುದಿದೆ. ಹಾಗಾಗಿ, ಇಂಥ ಮೊಟ್ಟೆಗಳ ರಕ್ಷಣೆ ಸಹ ಅನಿವಾರ್ಯ. ಈ ದಿಸೆಯಲ್ಲೂ ಅವುಗಳನ್ನು ಉಳಿಸುವ ಕೆಲಸ ಆಗಬೇಕಿದೆ. ಇಲ್ಲವಾ¨ರೆ ಮುಂದಿನ ತಲೆಮಾರಿಗೆ ಈ ಹಕ್ಕಿ ನೋಡುವ ಭಾಗ್ಯ ಸಹ ಇಲ್ಲದೇ ಹೋಗಬಹುದು.

— ಪಿ. ವಿ. ಭಟ್‌ ಮೂರೂರು

ಟಾಪ್ ನ್ಯೂಸ್

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.