ಡಾನ್ ಬ್ರಾಡ್ಮನ್ ದಾಖಲೆಯನ್ನು ಕೊಹ್ಲಿಯೂ ಮುರಿಯಲಾರ!
Team Udayavani, Jan 12, 2019, 12:20 AM IST
ಕ್ರಿಕೆಟ್ ಜಗತ್ತಿನ “ಡಾನ್’, ದಂತಕಥೆ ಆಸ್ಟ್ರೇಲಿಯದ ಮಾಜಿ ನಾಯಕ ಬ್ರಾಡ್ಮನ್. ಈ ಹೆಸರನ್ನು ಯಾವುದೇ ಕ್ರಿಕೆಟ್ ಪ್ರೇಮಿ ಕೇಳದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್. ಯಾವುದೇ ಬ್ಯಾಟ್ಸ್‌ಮನ್ ಟೆಸ್ಟ್‌ನಲ್ಲಿ ದಾಖಲೆ ಮಾಡಿದನೆಂದರೆ, ಅದರಲ್ಲಿ ಬ್ರಾಡ್ಮನ್ ಹೆಸರು ಕೇಳಿ ಬರುತ್ತದೆ. ಇಲ್ಲ, ಬ್ರಾಡ್ಮನ್‌ರ ದಾಖಲೆಯನ್ನೇ ಆ ಆಟಗಾರ ಮುರಿದಿರುತ್ತಾನೆ. ಅಷ್ಟರ ಮಟ್ಟಿಗೆ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೇರು ಸಾಧನೆ ಮಾಡಿದ್ದಾರೆ.
ಬ್ರಾಡ್ಮನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬ್ಯಾಟ್ ಬೀಸಿದ್ದರೂ ಅವರು ಹೆಚ್ಚು ಸಾಧನೆ ಮಾಡಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ. ಈವರೆಗೆ ಯಾರೂ ಮುರಿಯಲಾಗದ ದಾಖಲೆಗಳನ್ನು ನಿರ್ಮಿಸಿ ಏಕಚಕ್ರಾಧಿಪತಿಯಾಗಿದ್ದಾರೆ. ಬ್ರಾಡ್ಮನ್‌ಗೂ ಮೊದಲೇ ಖ್ಯಾತ ಬ್ಯಾಟ್‌ಮನ್‌ಗಳು ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಆದರೆ, ಅವರ್ಯಾರು ಮಾಡದ ಕೆಲವು ದಾಖಲೆಗಳನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದ್ದು ಬ್ರಾಡ್ಮನ್. ವಿಶೇಷ ಅಂದರೆ ಸಚಿನ್, ದ್ರಾವಿಡ್, ಲಾರಾ, ಕೊಹ್ಲಿ ಸೇರಿದಂತೆ ಖ್ಯಾತ ಬ್ಯಾಟ್ಸ್‌ಮನ್‌ಗಳೂ ಬ್ರಾಡ್ಮನ್‌ರ ಕೆಲವು ದಾಖಲೆ ಮುರಿಯಲು ಆಗಿಲ್ಲ. ಅಷ್ಟರ ಮಟ್ಟಿಗೆ ಕ್ರಿಕೆಟ್ ಜಗತ್ತಿನಲ್ಲಿ ಛಾಪನ್ನು ಮೂಡಿಸಿದ್ದಾರೆ.
ಕ್ರಿಕೆಟಿನ ಬ್ಯಾಟಿಂಗ್ ಸರಾಸರಿ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯದ ಸರ್ ಡೊನಾಲ್ಡ್ ಬ್ರಾಡ್ಮನ್ ಬಹಳ ಎತ್ತರದಲ್ಲಿ ಕಾಣಿಸಿಕೊಳ್ಳುತ್ತಾರೆ. ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ಎರಡರಲ್ಲೂ ಡಾನ್ ಸರ್ವಾಧಿಕ ಸರಾಸರಿ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಾಡ್ಮನ್ ಹೊಂದಿರುವ 99.94 ಸರಾಸರಿಯನ್ನು ಇದುವರೆಗೂ ಯಾರೂ ಹಿಂದಿಕ್ಕಿಲ್ಲ. ಆದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿರುವ ಒಟ್ಟು 234 ಪಂದ್ಯಗಳಿಂದ 28,067 ರನ್ ಪೇರಿಸಿರುವ ಡಾನ್, 95.14 ಸರಾಸರಿ ದಾಖಲಿಸಿ¨ªಾರೆ. ಈ ದಾಖಲೆಯನ್ನು ಇತ್ತೀಚೆಗೆ ಆಫ್ಘಾನಿಸ್ತಾನದ ಯುವ ಕ್ರಿಕೆಟಿಗ, 18ರ ಹರೆಯದ ಬಹೀರ್ ಷಾ ಮುರಿದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈತನ ಸರಾಸರಿ ತೆಗೆದುಕೊಂಡರೆ 121.77 ಆಗಿದೆ. ಇದು ಕನಿಷ್ಠ ಸಾವಿರ ರನ್ ಗಳಿಸಿದವರ ಬ್ಯಾಟಿಂಗ್ ಸರಾಸರಿ ಗಣನೆಗೆ ತೆಗೆದುಕೊಂಡಾಗ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದನ್ನು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಂಡಿದೆ.
ಬ್ರಾಡ್ಮನ್ ಬ್ಯಾಟಿಂಗ್ ಸರಾಸರಿ: ಬ್ರಾಡ್ಮನ್ ಬ್ಯಾಟಿಂಗ್ ಸರಾಸರಿಯಾದ 99.94 ಕ್ರಿಕೆಟ್ ಜಗತ್ತಿನ ಒಂದು ವಿಶಿಷ್ಟ ಸಂಖ್ಯೆಯಾಗಿದೆ. ಆಸ್ಟ್ರೇಲಿಯದಲ್ಲಿ ಈ ಸಂಖ್ಯೆಯನ್ನು ಯಾವ ರೀತಿಯಿಂದ ಆದರಿಸುತ್ತಾರೆಂದರೆ, ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿಯ ಎಲ್ಲ ಸ್ಥಳಗಳ ಅಂಚೆ ಪೆಟ್ಟಿಗೆ ಸಂಖ್ಯೆ 9994. 20ಕ್ಕೂ ಹೆಚ್ಚು ಟೆಸ್ಟ್ ಇನಿಂಗ್‌ಗಳನ್ನಾಡಿರುವ ಯಾವ ಬ್ಯಾಟ್ಸಮನ್ನನೂ ಕೂಡ 61ರ ಸರಾಸರಿಗಿಂತ ಮೇಲೆ ಹೋಗಿಲ್ಲ, ಈ ಹಿನ್ನೆಲೆಯಲ್ಲಿ 99.94ರ ಸರಾಸರಿ ಇನ್ನೂ ಮಹಾನ್ ಸಾಧನೆಯಾಗಿ ಕಾಣುತ್ತದೆ. ಟೆಸ್ಟ್ ಪಂದ್ಯಗಳನ್ನಾಡಿದ ಯಾವ ದಾಂಡಿಗನೂ ಬ್ರಾಡ್ಮನ್ ಗಳಿಸಿದ ರೀತಿಯಲ್ಲಿ ಶತಕಗಳನ್ನು ಬಾರಿಸಲಾಗಿಲ್ಲ, ಅವರು ಸರಾಸರಿ ತಮ್ಮ ಪ್ರತಿ ಮೂರನೆಯ ಇನಿಂಗ್ಸ್‌ನಲ್ಲಿ ಶತಕವೊಂದನ್ನು ಬಾರಿಸುತ್ತಿದ್ದರು. ಅವರು ಒಟ್ಟು 29 ಶತಕಗಳನ್ನು ಬಾರಿಸಿ¨ªಾರೆ.
ಬ್ರಾಡ್ಮನ್ ದಾಖಲೆ ಮುರಿದ ಕೊಹ್ಲಿ
ಹೈದ್ರಾಬಾದ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನಿಂಗÕ…ನಲ್ಲಿ ವಿರಾಟ್ 204 ರನ್ ಸಿಡಿಸಿದರು. ಸತತ ನಾಲ್ಕು ಸರಣಿಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಮತ್ತು ರಾಹುಲ್ ದ್ರಾವಿಡ್ ಅವರ ವಿಶ್ವದಾಖಲೆ ಮುರಿದಿ¨ªಾರೆ. ಸತತ ನಾಲ್ಕನೇ ಸರಣಿಯಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಇನ್ನು ಡಾನ್ ಬ್ರಾಡ್ಮನ್ ಹಾಗೂ ರಾಹುಲ್ ದ್ರಾವಿಡ್ ಕ್ರಮವಾಗಿ ಸತತ 3 ಸರಣಿಗಳಲ್ಲಿ ದ್ವಿಶತಕ ಸಾಧನೆಗೈದಿದ್ದರು. ಕೊಹ್ಲಿಯ ಈ ನಾಲ್ಕು ದ್ವಿಶತಕ ಸಾಧನೆ ಕೇವಲ 7 ತಿಂಗಳ ಅವಧಿಯಲ್ಲಿ ದಾಖಲಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು.
ಬ್ರಾಡ್ಮನ್ ಮಾಡಿರದ ಸಾಧನೆ ಮಾಡಿದ ಮಾಯಾಂಕ್
ಸಚಿನ್ ತೆಂಡೂಲ್ಕರ್ ಮತ್ತು ಸರ್ ಡೊನಾಲ್ಡ್ ಬ್ರಾಡ್ಮನ್ ಮಾಡಿರದ ಸಾಧನೆಯನ್ನು ಕನ್ನಡಿಗ ಮಾಯಾಂಕ್ ಅಗರ್ವಾಲ್ ರಣಜಿಯಲ್ಲಿ ಮಾಡಿದ್ದಾರೆ. ಸುಮಾರು 90 ವರ್ಷ ಹಿಂದಿನ ವಿಶ್ವದಾಖಲೆಯನ್ನು ಅವರು ಸರಿಗಟ್ಟಿ¨ªಾರೆ. ಅಗರ್ವಾಲ… ಒಂದೇ ತಿಂಗಳಲ್ಲಿ ಒಂದು ಸಾವಿರ ರನ್ ಪೂರೈಸಿದ ದಾಖಲೆ ಮಾಡಿ¨ªಾರೆ. ಇಂತಹ ದಾಖಲೆಯನ್ನು ಬ್ರಾಡ್ಮನ್ ಕೂಡ ಮಾಡಿಲ್ಲ. ಆದರೆ, 1927ರಲ್ಲಿ ಡಿಸೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯದ ಬಿಲ… ಪಾ®Õ… ಫೋರ್ಡನ್ 1146 ರನ್ ಗಳಿಸಿದ್ದರು. ಅವರನ್ನು ಬಿಟ್ಟರೆ ಮಾಯಾಂಕ್, 2017ರ ನವೆಂಬರ್‌ನಲ್ಲಿ ಐದು ಶತಕದೊಂದಿಗೆ 1033 ರನ್ ಬಾರಿಸಿದ್ದಾರೆ, ಇದರಲ್ಲಿ ಒಂದು ತ್ರಿಶತಕವು ಸೇರಿಸಿದೆ.
ಗೇಲ್‌ಗಿಂತ ಮೊದಲೇ ಅತಿವೇಗದ ಶತಕ
ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ವಿಂಡೀಸ್ ಆಟಗಾರ ಕ್ರಿಸ್ ಗೇಲ್, ಆರ್‌ಸಿಬಿ ತಂಡದ ಪರ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದು ಕ್ರಿಕೆಟ್ ಪ್ರಿಯರಿಗೆ ಮೆಚ್ಚಿನ ವಿಷಯ. ಆದರೆ, ಗೇಲ್‌ಗಿಂತಲೂ ಕಡಿಮೆ ಎಸೆತಗಳಲ್ಲಿ ಡಾನ್ ಬ್ರಾಡ್ಮನ್ ಶತಕ ಬಾರಿಸಿದ್ದರು. ವಿಶ್ವ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್, 1932ರ ನವೆಂಬರ್ 2ರಂದು ನಡೆದಿದ್ದ ವಿಲೇಜ್ ಕೌಂಟಿ ಪಂದ್ಯವೊಂದರಲ್ಲಿ ಕೇವಲ 22 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ, ಅದು ಕೌಂಟಿ ಪಂದ್ಯವಾಗಿದ್ದರಿಂದ ವಿಶ್ವ ದಾಖಲೆಗಳ ಪಟ್ಟಿಯಲ್ಲಿ ದಾಖಲಾಗಿಲ್ಲ.
ವರ್ಷದಲ್ಲಿ 3 ದ್ವಿಶತಕ
ಒಂದು ವರ್ಷದಲ್ಲಿ ಗರಿಷ್ಠ ದ್ವಿಶತಕ ಗಳಿಸಿದ ಆಸ್ಟ್ರೇಲಿಯದ ಮೊದಲ ದಾಂಡಿಗ ಬ್ರಾಡ್ಮನ್. ನಂತರ ಕ್ಲಾರ್ಕ್ ಅವರು 4 ದ್ವಿಶತಕ ಬಾರಿಸಿ ಡಾನ್ ಬ್ರಾಡ್ಮನ್ (1930ರಲ್ಲಿ 3) ಹಾಗೂ ರಿಕಿ ಪಾಂಟಿಂಗ್‌ರನ್ನು (2003ರಲ್ಲಿ 3) ಹಿಂದೆ ಹಾಕಿ¨ªಾರೆ.
ಕ್ರಿಕೆಟ್ ಜಗತ್ತಿನ ಬೆಳ್ಳಿ ಚುಕ್ಕೆಯ ಹಿನ್ನೆಲೆಯೇನು?
ಕ್ರಿಕೆಟ್ ಜಗತ್ತಿನ ಧೃವತಾರೆ, ಆಸ್ಟ್ರೇಲಿಯ ತಂಡದ ಮಾಜಿ ನಾಯಕ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್, ನ್ಯೂ ಸೌತ್ ವೇಲ್ಸ್‌ನಲ್ಲಿ ಆಗಸ್ಟ್ 27, 1908ರಲ್ಲಿ ಹುಟ್ಟಿದ್ದರು. 20ನೇ ಶತಮಾನದ 30 ಹಾಗೂ 40ರ ದಶಕದಲ್ಲಿ ತಮ್ಮ ಕ್ರಿಕೆಟ್ ಕೌಶಲ್ಯ ಮೆರೆದ ಬ್ರಾಡ್ಮನ್ ಮಾಡಿದ ಸಾಧನೆ, ಮುರಿದ ದಾಖಲೆ ನೂರಾರು. ಬ್ರಾಡ್ಮನ್ ಅವರಿಗೆ ಒಬ್ಬ ಪುತ್ರ, ಓರ್ವ ಪುತ್ರಿ ಇದ್ದು, 1997ರಲ್ಲಿ ಬ್ರಾಡ್ಮನ್‌ರ ಪತ್ನಿ ಜೆಸ್ಸಿ ನಿಧನರಾಗಿದ್ದರು. ಪತ್ನಿ ನಿಧನದ ನಂತರ ಬ್ರಾಡ್ಮನ್ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅಂತಿಮವಾಗಿ ಅಡಿಲೇಡ್‌ನ ತಮ್ಮ ಸ್ವಗೃಹದಲ್ಲಿ ಫೆ.25, 2001ರಲ್ಲಿ ನಿಧನರಾದರು. ಬ್ರಾಡ್ಮನ್ ಅವರಿಗೆ ಆಗ 92 ವರ್ಷ ವಯಸ್ಸಾಗಿತ್ತು. 30 ಹಾಗೂ 40ರ ದಶಕದಲ್ಲಿ ಕಿಕೆಟ್ ವಿಶ್ವದಲ್ಲಿ ಬೆಳ್ಳಿ ಚುಕ್ಕಿಯಂತೆ ಮಿನುಗಿದ ಬ್ರಾಡ್ಮನ್, 1948ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 52 ಟೆಸ್ಟ್‌ಗಳಲ್ಲಿ 99.94 ಸರಾಸರಿಯ 6,996 ರನ್‌ಗಳನ್ನು ಗಳಿಸಿ ಸ್ಥಾಪಿಸಿರುವ ವಿಶ್ವದಾಖಲೆಯನ್ನು ಯಾವ ವೀರರು ಇನ್ನೂ ಅಳಿಸಲಾಗಿಲ್ಲ. ನಿರೀಕ್ಷಿಸುವುದೂ ಕಷ್ಟ ಸಾಧ್ಯವೇ. ಅಜಾತಶತ್ರು ಬ್ರಾಡ್ಮನ್ ಅವರ ಸಾಧನೆಯನ್ನು ಮೆಚ್ಚದ, ಹೊಗಳದ ಹಾಗೂ ಬ್ರಾಡ್ಮನ್‌ರ ಬಗ್ಗೆ ಅರಿಯದ ಕ್ರಿಕೆಟ್ ಪ್ರೇಮಿಯೇ ಇಲ್ಲ ಎನ್ನಬಹುದು. ಇತ್ತೀಚೆಗೆ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡುವಾಗ ಆಸ್ಟ್ರೇಲಿಯ ಕ್ರಿಕೆಟ್‌ನ ಮಾಜಿ ನಾಯಕ ಸ್ಟೀವಾ ಕೂಡ ಬ್ರಾಡ್ಮನ್‌ರ ಟೆಸ್ಟ್ ಬ್ಯಾಟಿಂಗ್ ಸರಾಸರಿಯನ್ನು ಕೊಹ್ಲಿ ಕೂಡ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಸಾಧನೆ ಮಾಡಿರುವ ಬ್ರಾಡ್ಮನ್ ಅವರನ್ನು ತಮ್ಮ ತಂಡದ ಇತರೆ ಆಟಗಾರರು ದಿ ಡಾನ್, ದಿ ಬಾಯ್ ಫÅಮ್ ಬೌರಲ್, ಬ್ರಾಡ್ಲೆಸ್, ವೈಟ್ ಹೆಡ್ಲಿ ಎಂದೆಲ್ಲ ನಿಕ್ ನೇಮ್‌ನಿಂದ ಕರೆಯುತ್ತಿದ್ದರು.
ಬ್ರಾಡ್ಮನ್ ಬ್ಯಾಟ್‌ನಿಂದ ಸಿಡಿದ ದಾಖಲೆಗಳು
ಬ್ಯಾಟಿಂಗ್‌ನಲ್ಲಿ ಗರಿಷ್ಠ ಸರಾಸರಿ 99.94
ಕನಿಷ್ಠ ನಾಲ್ಕು ಟೆಸ್ಟ್‌ಗಳಿರುವ ಸರಣಿಯೊಂದರಲ್ಲಿ ಗರಿಷ್ಠ ಸರಾಸರಿ-201.50
5ನೇ ವಿಕೆಟ್‌ಗೆ ನಡೆಸಿದ ಗರಿಷ್ಠ ಜೊತೆಯಾಟ: 405 ರನ್
7ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಗರಿಷ್ಠ ರನ್ (1936 -37): 270
ಒಂದು ಎದುರಾಳಿ ತಂಡದ (ಇಂಗ್ಲೆಡ್) ವಿರುದ್ಧ ಅತಿಹೆಚ್ಚು ರನ್: 5028
ಒಂದು ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿದ್ದು: 974
ಒಂದೇ ಸೆಷನ್‌ನಲ್ಲಿ ಬಾರಿಸಿದ ಶತಕಗಳ ಸಂಖ್ಯೆ: 6
ಪಂದ್ಯವೊಂದರ ಒಂದೇ ದಿನದಲ್ಲಿ ಬಾರಿಸಿದ ಗರಿಷ್ಠ ರನ್: 309
ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಲ್ಪಟ್ಟ ಅತಿಹೆಚ್ಚು ದ್ವಿಶತಕ: 12
ಒಂದು ಸರಣಿಯಲ್ಲಿ ಅತಿಹೆಚ್ಚು ದ್ವಿಶತಕ: 3
ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ಅತಿಹೆಚ್ಚು ತ್ರಿಶತಕ: 2
ಟೆಸ್ಟ್‌ನಲ್ಲಿ ಸತತವಾಗಿ ಬಾರಿಸಿದ ಗರಿಷ್ಠ ಶತಕಗಳ ಸಂಖ್ಯೆ: 6
ಬ್ರಾಡ್ಮನ್ ಸ್ವಾರಸ್ಯಗಳು
2-ಟೆಸ್ಟ್ ಇತಿಹಾಸದಲ್ಲಿ 2 ತ್ರಿಶತಕ ಸಿಡಿಸಿದ ಮೊದಲ ದಾಂಡಿಗ
299-ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಅಜೇಯ 299 ರನ್ ಬಾರಿಸಿದ ಮೊದಲ ಮತ್ತು ಏಕೈಕ ದಾಂಡಿಗ
304-ಟೆಸ್ಟ್‌ನಲ್ಲಿ 5ನೇ ಕ್ರಮಾಂಕದಲ್ಲಿ ತ್ರಿಶತಕ (304 ರನ್) ಸಿಡಿಸಿದ ಮೊದಲ ದಾಂಡಿಗ.
ಭೋಗೇಶ ಆರ್. ಮೇಲುಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.