ಟೀಕಾಕಾರರು ಸಚಿನ್‌ರನ್ನೇ ಬಿಟ್ಟಿಲ್ಲ,ಇನ್ನು ಕೊಹ್ಲಿನ ಬಿಡ್ತಾರಾ?


Team Udayavani, Jul 29, 2017, 12:50 PM IST

7.jpg

ಎಂ.ಎಸ್‌.ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿ, ಕೊಹ್ಲಿ ಜವಾಬ್ದಾರಿ ವಹಿಸಿಕೊಂಡಾಗ ತಂಡದ ಸ್ಥಿತಿ ಉತ್ತಮವಾಗಿಯೇ ಇತ್ತು. ಯಾವುದೇ ಎದುರಾಳಿಗಳನ್ನು ಬಗ್ಗುಬಡಿಯುವ ಸಾಮರ್ಥ್ಯ ಹೊಂದಿತ್ತು. ಇದೇ ಸಂದರ್ಭದಲ್ಲಿ ಭಾರತ ಬಹುಪಾಲು ಪಂದ್ಯಗಳನ್ನು ತವರಿನಲ್ಲಿಯೇ ಆಡಿತ್ತು. ವಿದೇಶ ಪ್ರವಾಸಕ್ಕೆ ತೆರಳಿದರೂ ಆಸೀಸ್‌, ಆಫ್ರಿಕಾ, ಇಂಗ್ಲೆಂಡ್‌….ನಂಥ ಬಲಿಷ್ಠ ಎದುರಾಳಿಗಳು ಇರಲಿಲ್ಲ. ಅಂದರೆ, ಪರಿಸ್ಥಿತಿ ಕೊಹ್ಲಿಗೆ ಅನುಕೂಲಕರವಾಗಿಯೇ ಇತ್ತು. ಆದರೆ ಭಾರತ ಇನ್ನು ಮುಂದೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌…ವಿದೇಶ ಪ್ರವಾಸ ಮಾಡಬೇಕಾಗಿದೆ. ಹೀಗಾಗಿ ಕೊಹ್ಲಿ ನಾಯಕತ್ವಕ್ಕೆ ನಿಜವಾದ ಅಗ್ನಿ ಪರೀಕ್ಷೆ ಇನ್ಮೆàಲೆ ಆರಂಭ!

ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಸೋಲನ್ನು ಇನ್ನೂ ಮರೆತಿಲ್ಲ. ಆ ನಂತರ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿಯೂ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದರ ನಡುವೆಯೇ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದು, ಟೆಸ್ಟ್‌ ಸರಣಿಯನ್ನು ಆರಂಭಿಸಿದೆ. ಲಂಕಾ ತಂಡ ಭಾರತಕ್ಕೆ ಸುಲಭ ಎದುರಾಳಿಯಂತೂ ಅಲ್ಲ. ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯಗಳಲ್ಲಿ ಲಂಕಾ ಕಳಪೆ ಪ್ರದರ್ಶನ ನೀಡಿರಬಹುದು. ಆದರೆ ಅದು ಯಾವ ಸಂದರ್ಭದಲ್ಲಿ ಎದುರಾಳಿಗಳಿಗೆ ಹೇಗೆ ತಿರುಗೇಟು ನೀಡುತ್ತದೆ ಅನ್ನುವುದನ್ನು ಊಹಿಸಲಾಗದು. ಉತ್ತಮ ಬ್ಯಾಟಿಂಗ್‌, ಬೌಲಿಂಗ್‌ ಪಡೆಯನ್ನು ಹೊಂದಿರುವ ಲಂಕಾ ಸಮತೋಲಿತವಾಗಿದೆ. ಹೀಗಾಗಿ ಭಾರತಕ್ಕೆ ಅಷ್ಟು ಸುಲಭದಲ್ಲಿ ತುತ್ತಾಗದು.

ಈ ಹಿಂದಿನ ಪ್ರದರ್ಶನ, ತಂಡದ ಪ್ರಸ್ತುತ ಬಲಾಬಲದ ದೃಷ್ಟಿಯಲ್ಲಿ ಲಂಕಾ ತಂಡಕ್ಕೆ ಹೋಲಿಸಿದರೆ ಮೇಲ್ನೋಟಕ್ಕೆ ಭಾರತವೇ ಪ್ರಬಲವಾಗಿ ಕಾಣಿಸುತ್ತದೆ. ಆದರೆ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಆಟಗಾರರ ಮೇಲೆ ಒತ್ತಡವಿದೆ. 

ಇದಕ್ಕೆ ಇತ್ತೀಚೆಗೆ ನಡೆದ ಕೋಚ್‌ ವಿವಾದವೂ ಒಂದು ಕಾರಣವಾಗಿದೆ. ಲಂಕಾ ವಿಶ್ವಶ್ರೇಷ್ಠ ಬೌಲಿಂಗ್‌ ಪಡೆಯನ್ನು ಹೊಂದಿರುವುದರಿಂದ ಅದನ್ನು ಎದುರಿಸುವುದು ಸುಲಭದ ಮಾತಲ್ಲ. ಒಟ್ಟಿನಲ್ಲಿ ಇದು ಕೊಹ್ಲಿ ನಾಯಕತ್ವಕ್ಕೆ ಒಂದು ಸವಾಲಾಗಿದೆ.

ಸೋತರೆ ನಾಯಕತ್ವಕ್ಕೆ ಕುತ್ತು
ಚಾಂಪಿಯನ್ಸ್‌ ಟ್ರೋಫಿಯ ನಂತರ ಕೋಚ್‌ ಸ್ಥಾನಕ್ಕೆ ಅನಿಲ್‌ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೊಹ್ಲಿ ಜತೆಗಿನ ಸಂಬಂಧ ಸರಿ ಇಲ್ಲದಿರುವುದು. ಕೋಚ್‌ ಆಯ್ಕೆಯ ಸಂದರ್ಭದಲ್ಲಿಯೂ ಅಷ್ಟೇ ರವಿಶಾಸ್ತ್ರಿ ಯೇ ಬೇಕು ಅಂತ ಕೊಹ್ಲಿ ಹಟಮಾರಿ ದೋರಣೆಯನ್ನು ಪ್ರದರ್ಶಿಸಿದ್ದಾರೆ. ಇದು 
ಹಲವು ಮಾಜಿ ಆಟಗಾರರಲ್ಲಿ ಅಸಮಾಧಾನ ಹುಟ್ಟಿಸಿದೆ. 

ಎಂ.ಎಸ್‌.ಕೆ.ಪ್ರಸಾದ್‌, ಸುನಿಲ್‌ ಗಾವಸ್ಕರ್‌ ಸೇರಿದಂತೆ ಹಲವರು ಬಹಿರಂಗವಾಗಿಯೇ ಕೊಹ್ಲಿ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ಸರಣಿಗಳನ್ನು ಭಾರತ ಗೆಲ್ಲುತ್ತಾ ಸಾಗಿದರೆ ಎಲ್ಲವೂ ಸಲೀಸು. ಒಮ್ಮೆ ಸೋಲುತ್ತಾ ಸಾಗಿದರೆ ಕೊಹ್ಲಿ ನಾಯಕತ್ವಕ್ಕೆ ಕುತ್ತು ಖಚಿತ. ಸೋತಾಗ ಆಳಿಗೊಂದು ಕಲ್ಲು ಬೀಳುವುದು ಪಕ್ಕಾ, ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಅವರನ್ನೇ ಟೀಕಾಕಾರರು ಬಿಟ್ಟಿಲ್ಲ. ಇನ್ನು ಕೊಹ್ಲಿಯನ್ನು ಬಿಡು¤ತಾರ? ಒಮ್ಮೆ ಸೋಲಿನ ಸರಣಿ ಆರಂಭವಾದರೆ ನಾಯಕತ್ವದ ಬದಲಾವಣೆಯ ಕೂಗು ಏಳಲಿದೆ. ಅಂತಹ ಸಂದರ್ಭ ಎದುರಾದರೆ ನಾಯಕತ್ವದ ಜವಾಬ್ದಾರಿ ರೋಹಿತ್‌ ಶರ್ಮಾಗೆ ಹೋಗುವ ಸಾಧ್ಯತೆ. ಇಲ್ಲವೇ ಉಪನಾಯಕನಾಗಿರುವ ಅಜಿಂಕ್ಯ ರಹಾನೆಗೂ ಹೋಗಬಹುದು. ಹೀಗಾಗಿ ಕೊಹ್ಲಿ ವೈಯಕ್ತಿಕ ಪ್ರದರ್ಶನದ ಜೊತೆಗೆ ತಂಡದ ಪ್ರದರ್ಶನ ಕೂಡ ಅದ್ಭುತವಾಗಿ ಇರುವಂತೆ ನೋಡಿಕೊಳ್ಳಬೇಕು.

ರವಿಶಾಸ್ತ್ರಿಗೂ ಸವಾಲು
ಅನಿಲ್‌ ಕುಂಬ್ಳೆ ರಾಜೀನಾಮೆಯ ನಂತರ ಕೋಚ್‌ ಸ್ಥಾನಕ್ಕೆ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ರವಿಶಾಸ್ತ್ರಿಯ ಆಯ್ಕೆ ಉನ್ನತ ಸಲಹಾ ಸಮಿತಿಯಲ್ಲಿದ್ದ ಸೌರವ್‌ ಗಂಗೂಲಿ, ಸಚಿನ್‌ ತೆಂಡುಲ್ಕರ್‌, ವಿ.ವಿ.ಎಸ್‌.ಲಕ್ಷ್ಮಣ್‌ ಅವರದು. ಗಂಗೂಲಿಗೆ ರವಿಶಾಸ್ತ್ರಿಯ ಆಯ್ಕೆಗೆ ಮನಸ್ಸು ಇರಲಿಲ್ಲ. ಆದರೆ ಸಚಿನ್‌ ತೆಂಡುಲ್ಕರ್‌ ಒತ್ತಡದ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದಾರೆ ಎನ್ನಲಾಗಿದೆ. ರವಿಶಾಸ್ತ್ರಿ ಗೆ ಸೌರವ್‌ ಗಂಗೂಲಿ ಸೇರಿದಂತೆ ಹಲವು ಮಾಜಿ ಆಟಗಾರರ ವಿರೋಧಿಯ ದಂಡೇ ಇದೆ. ಬೌಲಿಂಗ್‌ ಕೋಚ್‌ ಮತ್ತು ಬ್ಯಾಟಿಂಗ್‌ ಸಲಹೆಗಾರರ ಆಯ್ಕೆಯಲ್ಲಿ ರವಿಶಾಸ್ತ್ರಿ ಯೇ ಬಿಸಿಸಿಐ ಮೇಲೆ ಒತ್ತಡ ತಂದು ಮೇಲುಗೈ ಸಾಧಿಸಿದ್ದಾರೆ. ಇದು ಉನ್ನತ ಸಲಹಾ ಸಮಿತಿಯ ಸದಸ್ಯರ ಕಣ್ಣನ್ನು ಕೆಂಪಗಾಗಿಸಿದೆ. ಹೀಗಾಗಿ ರವಿಶಾಸ್ತ್ರಿ ಗೆ ವಿರೋಧಿಗಳ ಪಡೆಯೂ ಹುಟ್ಟಿಕೊಂಡಿದೆ. ಒಮ್ಮೆ ತಂಡ ಸೋಲುತ್ತಾ ಹೋದರೆ ಅದು ಕೋಚ್‌ ಸ್ಥಾನದ ಮೇಲೂ ಪರಿಣಾಮ ಬೀರಲಿದೆ.

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.