ಕೊಹ್ಲಿಗೆ ಜೈ ಅನ್ನಲು ಸಂಕೋಚ!


Team Udayavani, Aug 12, 2017, 11:59 AM IST

8.jpg

ಭಾರತ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಇವತ್ತೇ ಆರಂಭವಾಗುತ್ತಿದೆ. ಒಂದು ವೇಳೆ ಈ ಪಂದ್ಯವನ್ನು ಭಾರತ ಕಳೆದುಕೊಂಡರೂ ಸರಣಿಯ ಮೇಲಿನ ಹಿಡಿತ ಕಸಿಯಲಾಗದಂತದ್ದು. ಈಗಾಗಲೇ ಎರಡು ಪಂದ್ಯ ಗೆದ್ದಿರುವ ಹಿನ್ನೆಲೆಯಲ್ಲಿ ಭಾರತದ ನಾಯಕ ವಿರಾಟ್‌ ಕೊಹ್ಲಿ ಪಡೆ ಸತತ ಎಂಟನೇ ಸರಣಿಯನ್ನು ಗೆದ್ದಿರುವುದನ್ನು ಕೊನೆಯ ಟೆಸ್ಟ್‌ ನಂತರ ಅಧಿಕೃತವಾಗಿ ಘೋಷಿಸಲಾಗುತ್ತದೆ.

ನೆನಪಿಸಿಕೊಳ್ಳಬೇಕು, ಭಾರತ ಎರಡು ವರ್ಷಗಳ ಹಿಂದೆ ಶ್ರೀಲಂಕಾ ಪ್ರವಾಸಗೈದಾಗ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿತ್ತು. ನಂತರದ ಎರಡು ಟೆಸ್ಟ್‌ನ ಗೆಲುವು ಭಾರತದ ಜಯಭೇರಿಯ ಅಭಿಯಾನಕ್ಕೆ ಶ್ರೀಕಾರ ಹಾಕಿತ್ತು. ಈ ಅವಧಿಯಲ್ಲಿ ಒಟ್ಟಾರೆ ಆಡಿದ 26ರಲ್ಲಿ 19 ಗೆಲುವು, ಎರಡು ಸೋಲು, ಉಳಿದವು ಡ್ರಾ. ಕೊಹ್ಲಿಗೆ ಉಘೇ ಎನ್ನಬೇಕಲ್ಲವೇ?

ಟೆಸ್ಟ್‌ ಗೆಲುವಿನ ಸುರಕ್ಷಿತ ಅಭಿಯಾನ?
 ಮತ್ತೆ ಹಿಂದಿನ ನೆನಪು, 2015ರಲ್ಲಿ ಶ್ರೀಲಂಕಾ ಎದುರು ಸಿಂಹಳ ನಾಡಿನಲ್ಲಿ 2-1ರ ಗೆಲುವು, ಅದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ 3-0, ಭಾರತದ ನೆಲದಲ್ಲಿ. 2016ರ ಆರಂಭವನ್ನು ಭಾರತ ವಿಂಡೀಸ್‌ ನೆಲದಲ್ಲಿ 4 ಟೆಸ್ಟ್‌ ಆಡುವ ಮೂಲಕ ಆರಂಭಿಸುತ್ತದೆ. 2-0 ಗೆಲುವು, ಅದಾದ ಮೇಲೆ ಭಾರತದ ಪಿಚ್‌ನಲ್ಲಿ ಗೆಲುವಿನ ನರ್ತನ, ನ್ಯೂಜಿಲೆಂಡ್‌ ಎದುರು 3-0, ಇಂಗ್ಲೆಂಡ್‌ ವಿರುದ್ಧ 4-0, ಬಾಂಗ್ಲಾಗೆ 0-1, ಕೊನೆಗೆ ಆಸ್ಟ್ರೇಲಿಯಾಗೂ 2-1ರ ಮುಖಭಂಗ. ಈ ವಿವರಗಳಲ್ಲಿ ಕೆಲವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ತೀರಾ ದುರ್ಬಲವಾಗಿರುವ ಶ್ರೀಲಂಕಾ, ವೆಸ್ಟ್‌ಇಂಡೀಸ್‌ ಎದುರು ವಿದೇಶದಲ್ಲಿ ಆಡಿರುವುದು ಬಿಟ್ಟರೆ ಉಳಿದೆಲ್ಲ ಟೆಸ್ಟ್‌ ಸರಣಿ ನಡೆದಿರುವುದು ಭಾರತದ ಪಿಚ್‌ಗಳಲ್ಲಿ. ಹಿಂದಿನಿಂದಲೂ ಭಾರತ ಸ್ವದೇಶಿ ಪಿಚ್‌ ಹೀರೋ. ಮೊಹಮದ್‌ ಅಜರುದ್ದೀನ್‌- ಅಜಿತ್‌ ವಾಡೇಕರ್‌ ನಾಯಕ ಕೋಚ್‌ ಸಮನ್ವಯದಲ್ಲೂ ಭಾರತ ನಮ್ಮೂರ ಸ್ಪಿನ್‌ ಪಿಚ್‌ನಲ್ಲಿ ಅಸೀಮ ತಂಡ. ಮೊನ್ನೆ ಸೌರವ್‌ ಗಂಗೂಲಿ ಕೂಡ ಹೇಳುತ್ತಿದ್ದರು, ಕೊಹ್ಲಿ ಈವರೆಗೆ ಅಗ್ನಿಪರೀಕ್ಷೆಗಳನ್ನೇ ಎದುರಿಸಿಲ್ಲ! 2014-15ರಲ್ಲಿ ಕಾಂಗರೂ ನಾಡಿನಲ್ಲಿ 2-0ಯಿಂದ ಆಘಾತ ಅನುಭವಿಸಿದ ನಂತರ ಭಾರತ “ಟೆಸ್ಟ್‌ ಕಂಫ‌ರ್ಟ್‌ ಝೊàನ್‌ನಲ್ಲಿದೆ.

 ಅದಿರಲಿ, ಭಾರತದ ಮುಂದೊಂದು ದಾಖಲೆಯಿದೆ. ಆಸ್ಟ್ರೇಲಿಯಾ ತಂಡ 2005ರಿಂದ 2008ರವರೆಗಿನ ಅವಧಿಯಲ್ಲಿ ಸತತ 9 ಟೆಸ್ಟ್‌ ಸರಣಿ ಗೆದ್ದ ವಿಶ್ವದಾಖಲೆಯನ್ನು ಹೊಂದಿದೆ. ಈ ಆಸೀಸ್‌ ಪಡೆ ಕೂಡ 9ರ ಸರದಿಯನ್ನು ಆರಂಭಿಸಿದ್ದು ಸ್ಯಾಂಡ್‌ವಿಚ್‌ ವಿಶ್ವದ ಇತರರ ತಂಡದ ವಿರುದ್ಧದ ಏಕೈಕ ಟೆಸ್ಟ್‌ ಸರಣಿಯೊಂದಿಗೆ. ಆಗಲೂ ತೀರಾ ದುರ್ಬಲ ವೆಸ್ಟ್‌ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾವನ್ನು ಆಸೀಸ್‌ ತಂಡದವರು ಮಣಿಸಿದ್ದರು. ದಾಖಲೆಗಳು ದಾಖಲೆಗಳೇ. ಅದರ ಮೌಲ್ಯವನ್ನು ಕುಸಿಯಬೇಕಾದ ಅಗತ್ಯವಿಲ್ಲ. ಅಷ್ಟಕ್ಕೂ ಭಾರತ ದಾಖಲೆ ಮಾಡಲೆಂಬಂತೆ ಟೆಸ್ಟ್‌ ಸರಣಿಗಳನ್ನು ಆಯೋಜಿಸುವುದಿಲ್ಲ. ಟೆಸ್ಟ್‌ ರಂಗಕ್ಕೆ ಬಂದು 17 ವರ್ಷ ಕಳೆದ ನಂತರ ಬಾಂಗ್ಲಾ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್‌ ಆಡಿದೆ. ದಾಖಲೆಗಾಗಿದ್ದರೆ ವರ್ಷಕ್ಕೆ ಮೂರು ಸರಣಿ ಮಾಡಿ ಕರೆದಿದ್ದರೂ ಬಾಂಗ್ಲಾದವರು ಬರುತ್ತಿದ್ದರು, ಖುಷಿಯಿಂದ!

 ದುರ್ಬಲರಿದ್ದರಷ್ಟೇ ಪ್ರಬಲರ ದರ್ಶನ!
 ಉಳಿದ ತಂಡಗಳು ದುರ್ಬಲಗೊಳ್ಳುವ ಪ್ರಕ್ರಿಯೆ ನಡೆದಿರುವಾಗಲೇ ದಾಖಲೆಗಳು ಸೃಷ್ಟಿಯಾಗುವುದು. ಕಾಂಗರೂ ಪಡೆಯ ದಾಖಲೆಗೂ ಎದುರಾಗಿ ಸೋತ 9 ತಂಡಗಳ ಕಾಣಿಕೆ ಇದೆಯಲ್ಲವೇ? ಐಸಿಸಿ ಕಾರ್ಯಕ್ರಮ ಪಟ್ಟಿಯ ಪ್ರಕಾರ ಭಾರತ ಈ ವರ್ಷದ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿ ಮೂರು ಟೆಸ್ಟ್‌ ಆಡಲಿದೆ. ಇದರ ನಂತರ ಮಾರ್ಚ್‌ 2018ರಲ್ಲಿ ಮತ್ತೆ ಶ್ರೀಲಂಕಾ ತಂಡ ಭಾರತಕ್ಕೆ ಬಂದು 3 ಟೆಸ್ಟ್‌ ಆಡಲಿದೆ. ಜೂನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅಲ್ಲಿ 5 ಟೆಸ್ಟ್‌, ಅಕ್ಟೋಬರ್‌ನಲ್ಲಿ ವಿಂಡೀಸ್‌ ತಂಡ ಭಾರತದಲ್ಲಿ 2 ಟೆಸ್ಟ್‌, 2019ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ನ‌ಲ್ಲಿ ನಾವು 3 ಟೆಸ್ಟ್‌ ಆಡಲಿದೆ. ಅಂದರೆ ಮುಂದಿನ ದಿನಗಳಲ್ಲಿ ಭಾರತ ಪ್ರಬಲ ಸವಾಲು ಎದುರಿಸುವುದಂತೂ ನಿಜ. 

 ಸಾಮಾನ್ಯ ನಾಯಕನಾಗಿ ಪರಿವರ್ತನೆ!
 ಜುಲೈ 2011, ವಿಶ್ವದ ಟಾಪ್‌ 1 ತಂಡವಾಗಿ ಎಂ.ಎಸ್‌.ಧೋನಿ ಪಡೆ ಇಂಗ್ಲೆಂಡ್‌ಗೆ ಟೆಸ್ಟ್‌ ಸರಣಿಗಾಗಿ ತೆರಳುತ್ತದೆ. ಆ ಹಂತದಲ್ಲಿ ಧೋನಿ 27 ಟೆಸ್ಟ್‌ಗಳಲ್ಲಿ 15 ಜಯ, 3 ಸೋಲುಗಳನ್ನಷ್ಟೇ ಅನುಭವಿಸಿತ್ತು. ಅಷ್ಟೇಕೆ, ಗಟ್ಟಿ ದಕ್ಷಿಣ ಆಫ್ರಿಕಾ ಎದುರು ಸರಣಿ ಡ್ರಾ ಮಾಡಿಕೊಂಡ ಗರಿಮೆ ಕೂಡ ಸೇರ್ಪಡೆಯಾಗಿರುವಂತ ತಂಡ. ಮುಂದಿನ ಆರು ತಿಂಗಳಲ್ಲಿ ಭಾರತ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾಗಳೆದುರು ಸತತ 8 ಟೆಸ್ಟ್‌ ಸೋಲುತ್ತದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ಗೂ ಶಿಕಾರಿಯಾಗುತ್ತದೆ. ಹೋಗಲಿ, ಅಲಿಸ್ಟರ್‌ ಕುಕ್‌ರ ಇಂಗ್ಲೆಂಡ್‌ ತಂಡದ ಎದುರು ಭಾರತದ ನೆಲದಲ್ಲೂ ಸೋಲು ಕಾಣಬೇಕೆ? ಯಾವ ನಾಯಕನನ್ನು ನಾವು ಯಶಸ್ವಿ ನಾಯಕರಾದ ಸ್ಟೀವ್‌ ವಾ, ಮೈಕ್‌ ಬಿಯರ್ಲಿ ಅವರಿಗಿಂತ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿದ್ದಾರೆ ಎಂದು ಸ್ತುತಿಸಿದ್ದೆವೋ ಆತ 60 ಟೆಸ್ಟ್‌ ನಾಯಕತ್ವದ ನಂತರ 27 ಗೆಲುವು, 18 ಸೋಲು, 15 ಡ್ರಾಗಳನ್ನು ಕಂಡ ಈ ಅಂತಿಮ ಪಟ್ಟಿ ಅವರನ್ನು ಸಾಮಾನ್ಯ ನಾಯಕನಾಗಿ ಪರಿವರ್ತಿಸಿಬಿಟ್ಟಿತು.  ಕೊಹ್ಲಿ ಇದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು!

 ಭಾರತ ಈ ಹಿಂದೆ ಇಂಗ್ಲೆಂಡ್‌ ಪ್ರವಾಸಕ್ಕೆ ಹೋದಾಗ 4-0, 3-1ರ ಪರಾಭವ ಎದುರಾಗಿತ್ತು. ಕೊಹ್ಲಿ ಪಡೆ 2018ರಲ್ಲಿ ಐದು ಟೆಸ್ಟ್‌ಗಳ ಪೂರ್ಣ ಪ್ರಮಾಣದ ಸರಣಿಯನ್ನು ಅವರ ನೆಲದಲ್ಲಿ ಆಡಲಿದೆ. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ತೆರಳಲಿರುವ ಭಾರತ ಅಲ್ಲಿ ಸರಣಿ ಗೆದ್ದರೆ ಎರಡು ಐತಿಹಾಸಿಕ ಹೆಜ್ಜೆ ಇರಿಸಿದಂತಾಗುತ್ತದೆ. ಸತತ 9 ಸರಣಿಗಳ ದಾಖಲೆ ಒಂದೆಡೆಯಾದರೆ ಆಫ್ರಿಕಾ ನೆಲದಲ್ಲಿ ಈವರೆಗೆ ಒಂದೇ ಒಂದು ಟೆಸ್ಟ್‌ ಸರಣಿ ಗೆಲ್ಲದ ಅಪಖ್ಯಾತಿಗೂ ಮಂಗಳ ಹಾಡಿದಂತಾಗುತ್ತದೆ!

 ಭಾರತ ನೆಲದ ಗೆಲುವಿಗೆ ಕೀಳರಿಮೆ ಸೋಂಕು!
 ತಂಡದ ಕೋಚ್‌ ರವಿ ಶಾಸ್ತ್ರಿಯವರ ಪ್ರತಿಪಾದನೆಯೇ ಬೇರೆ. ಭಾರತದಲ್ಲಿ ಈಗ ಸಮತೋಲಿತ ಪಿಚ್‌ಗಳು ತಯಾರಾಗುತ್ತಿವೆಯೇ ವಿನಃ ಮನೋಜ್‌ ಪ್ರಭಾಕರ್‌ ತರದ ವೇಗಿಗಳು ಆಫ್ಸ್ಪಿನ್‌ಗೆ ಪ್ರಯತ್ನಿಸುವ ಸ್ಪಿನ್‌ ಪಿಚ್‌ಗಳಿಲ್ಲ. ಶಮಿಯಂಥ ಭಾರತದ ವೇಗಿಗಳು ಕೂಡ ಭಾರತೀಯ ಪಿಚ್‌ನಲ್ಲಿ ವಿಜೃಂಭಿಸುತ್ತಿದ್ದಾರೆ ಎಂದರೆ ವಿದೇಶಿ ತಂಡದ ವೇಗಿಗಳಿಗೂ ಇಲ್ಲಿ ಅವಕಾಶ ಇತ್ತು ಎಂತಲೇ ಅರ್ಥ. ಈ ಹಿನ್ನೆಲೆಯಲ್ಲಿ ಭಾರತೀಯ ನೆಲದಲ್ಲಿನ ಭಾರತದ ಗೆಲುವಿಗೆ ತಾತ್ಸಾರ ಬೇಡ. ಆಸ್ಟ್ರೇಲಿಯಾ, ಇಂಗ್ಲೆಂಡ್‌ ತರಹದ ಎಲ್ಲ ತಂಡಗಳನ್ನು ಎದುರಿಸಿಯೇ ನಾವು ಗೆಲುವು ಪಡೆದಿದ್ದು. ಹೌದಲ್ಲವೇ?

 ಟೆಸ್ಟ್‌ ಕ್ರಿಕೆಟ್‌ ಎಂಬುದು ಕೇವಲ ಶತಕ, ಐದು ವಿಕೆಟ್‌ಗಳ ಸಾಧನೆಗಳ ಸಂಗಮವಲ್ಲ. ಏಕದಿನ ಅಥವಾ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ನ ಅಬ್ಬರದ ಬ್ಯಾಟಿಂಗ್‌, ಒಂದು ಕನಸಿನಂಥ ಬೌಲಿಂಗ್‌ ಸ್ಪೆಲ್‌ ಪಂದ್ಯ ಗೆಲ್ಲಿಸಿಬಿಡಬಹುದು. ಟೆಸ್ಟ್‌ ಹಾಗಲ್ಲ. ಇಲ್ಲಿ ಅವಕಾಶಕ್ಕಾಗಿ ಕಾಯುವುದು
 ಕೂಡ ಒಂದು ಆಟದ ಅವಸ್ಥೆ. ಅವತ್ತು ಭಾರತ ಇಂಗ್ಲೆಂಡ್‌ ವಿರುದ್ಧ ಮುಂಬೈ ಹಾಗೂ ಚೆನ್ನೈನಲ್ಲಿ ಈ ಕಾಯುವ ಆಟವನ್ನು “ಆಟದ ಅವಧಿಯಲ್ಲಿ ತೋರಿದ್ದರಿಂದಲೇ ಪ್ರಾಬಲ್ಯ ಎದ್ದುಕಂಡಿತ್ತು. ಅದೇಕೋ ಗೊತ್ತಿಲ್ಲ, ಕ್ರಿಕೆಟ್‌ ಅಭಿಮಾನಿಗಳು ಕೂಡ ಭಾರತ ವಿದೇಶಿ ನೆಲದಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯಾಗಳನ್ನು ಮಣಿಸುವುದನ್ನು ಕಾಯುತ್ತಾರೆ. ಈ ಬಾರಿ ಕೊಹ್ಲಿ ಪಡೆ ನಮ್ಮನ್ನು ನಿರಾಶೆಗೊಳಿಸದಿರಲಿ!

 ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.